ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 01

  • ಉಪ್ಪಿನಂಗಡಿ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಆದಿತ್ಯ ಹೆಚ್‌ ಆರ್ ಪ್ರಾಯ 21 ವರ್ಷ ತಂದೆ ರಾಜೇಗೌಡ ಹೆಚ್‌ ಎಂ , ವಾಸ ಹೂವಿನ ಹಳ್ಳಿ, ಕುಪ್ಪ ಹಳ್ಳಿ ಅಂಚೆ ಹಾಸನ ಕಸಬ ಹೋಬಳಿ, ಹಾಸನ ತಾಲೂಕು ಹಾಸನ ಜಿಲ್ಲೆಎಂಬವರ ದೂರಿನಂತೆ ದಿನಾಂಕ:10.12.2022ರಂದು ಮನೆಯಿಂದ ತನ್ನ ಬಾಬ್ತು ಕಾರು ನಂಬ್ರ ಕೆಎ.13.ಝಡ್.5096ನೇದರಲ್ಲಿ ತನ್ನ ಮನೆಯಿಂದ ತಾಯಿ ಪದ್ಮಾವತಿ ಮತ್ತು ಅಣ್ಣ ದೇವಾನಂದ ರವರೊಂದಿಗೆ ಧರ್ಮಸ್ಥಳ ದೇವರ ದರ್ಶನಕ್ಕೆಂದು ಬೆಳಗ್ಗಿನ ಜಾವ 04.30 ಗಂಟೆಗೆ ಹೊರಟು ಧರ್ಮಸ್ಥಳಕ್ಕೆ ಬೆಳಿಗ್ಗೆ 09.00 ಗಂಟೆಗೆ ತಲುಪಿ ದೇವರ ದರ್ಶನ ಮುಗಿಸಿ ಸಂಜೆ 4.00 ಗಂಟೆಗೆ ವೇಳೆಗೆ ವಾಪಸ್ಸು ಧರ್ಮಸ್ಥಳದಿಂದ ಮನೆ ಕಡೆ ಹೋಗಲು ಕಾರನ್ನು ಪಿರ್ಯಾದಿದಾರರು ಚಲಾಯಿಸಿಕೊಂಡು ರಾ.ಹೆ 75 ಮಂಗಳೂರು-ಬೆಂಗಳೂರು ರಸ್ತೆಯ ಹಾಸನ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಂಜೆ 5.00 ಗಂಟೆಯ ವೇಳೆಗೆ ಕಡಬ ತಾಲೂಕು ಶಿರಾಡಿ ಗ್ರಾಮದ ಉದನೆ ಬಳಿಗೆ ಬರುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ  ಮೋಟಾರ್ ಸೈಕಲ್ ನಂಬ್ರ ಕೆಎ.03.ಕೆಜೆ.6625 ನೇದರ ಸವಾರ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿಯಾಗಿ ಮೋಟಾರ್ ಸೈಕಲ್ ಸಮೇತ ಸವಾರ ಮತ್ತು ಹಿಂಬದಿ ಸವಾರ ರಸ್ತೆಗೆ ಬಿದ್ದಿದ್ದು, ಅಪಘಾತದಿಂದ ಪಿರ್ಯಾದಿದಾರರ ಕಾರು ಮತ್ತು ಮೋಟಾರ್ ಸೈಕಲ್ ಜಖಂಗೊಂಡಿರುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ   ಅ.ಕ್ರ 127/2022 ಕಲಂ:279 ಐಪಿಸಿ ಮತ್ತು ಕಲಂ 270(ಎ) ಜೊತೆಗೆ 177 ಐ.ಎಂ.ವಿ ಆಕ್ಟ್‌ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೇದರಿಕೆ ಪ್ರಕರಣ: 01

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ರಮಾ ಪ್ರಾಯ 53 ವರ್ಷ ಗಂಡ:ದಿ||ಅಶೋಕ್‌ ಪೂಜಾರಿ ವಾಸ:ಕಾಪಿಕಾಡು ಮನೆ, ಜನತಾ  ಕಾಲೋನಿ ಮಾಣಿ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ.  ಪಿರ್ಯಾಧಿದಾರರು ಮಗಳು ಬೆಂಗಳೂರಿಗೆ ಪೂರ್ವ ಕಂಪೆನಿಯಲ್ಲಿ ಕೆಲಸಕ್ಕೆ ಹೋಗಲು ಟಿಕೆಟ್‌ ಬುಕ್‌ ಮಾಡುವ ಸಲುವಾಗಿ ದಿನಾಂಕ:10-12-2022 ರಂದು ಸಂಜೆ 4.00 ಗಂಟೆಯ ಸಮಯಕ್ಕೆ ಪಿರ್ಯಾಧಿ ಮಗಳೊಂದಿಗೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಕಾಪಿಕಾಡು ಎಂಬಲ್ಲಿರುವ ತಮ್ಮ ಮನೆಯಿಂದ ಸಾರ್ವಜನಿಕ ಕಾಲು ದಾರಿಯ ಮುಖೆನ ಮಾಣಿ ಕಡೆಗೆ ಹೋಗುವಾಗ ಚಂದ್ರಶೇಖರವರ ಪತ್ನಿ ಆಪಾದಿತೆ ಮಿನಿ@ಕಾವ್ಯರವರು ತಮ್ಮ ಮನೆಯ ಬಳಿ ಪಿರ್ಯಾಧಿದಾರರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾಧಿಯ ಕೈ ಹಿಡಿದು ಮಿನಿ@ಕಾವ್ಯಳು ತನ್ನ ಮನೆಗೆ ಎಳೆದುಕೊಂಡು ಹೋಗಿ ಕೂಡಿ ಹಾಕಿ , ಪಿರ್ಯಾಧಿದಾರರ ಕೈ ಹಿಡಿದು ತಿರುಗಿಸಿ ದೂಡಿ ಹಾಕಿ ನೋವುಂಟು ಮಾಡಿರುತ್ತಾರೆ. ಪಿರ್ಯಾಧಿದಾರರು ತನಗಾದ ಗಾಯದ ಬಗ್ಗೆ ಚಿಕಿತ್ಸೆಯ ಬಗ್ಗೆ ತನ್ನ ಮಗಳೊಂದಿಗೆ ವಿಟ್ಲ ಸರಕಾರಿ ಆಸ್ಪತ್ರೆಗೆ ಬಂದಾಗ ಅಲ್ಲಿನ ವೈದ್ಯರು ಪರಿಕ್ಷೀಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋಗಲು ತಿಳಿಸಿದಂತೆ ಪಿರ್ಯಾಧಿದಾರರು ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋದಾಗ ಅಲ್ಲಿನ ವೈದ್ಯರು ಹೊರರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 195/2022  ಕಲಂ: 504,341,342,323 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 01

  • ಸುಬ್ರಹ್ಮಣ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಸಾವಿತ್ರಿ, ಪ್ರಾಯ: 50 ವರ್ಷ, ,  ಗಂಡ:ಗಿರಿಯಪ್ಪ ಗೌಡ ,  ವಾಸ: ಕೊಪ್ಪಡ್ಕ ಮುಳುಬಾಗಿಲು ಮನೆ, ಕೊಲ್ಲಮೊಗ್ರು ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ. ದಿನಾಂಕ:03-12-2022 ರಂದು ಮಗ ಸುಬ್ರಹ್ಮಣ್ಯ ನೊಂದಿಗೆ  ಸುಳ್ಯ ತಾಲೂಕು ಕೂತ್ಕುಂಜ ಗ್ರಾಮದ ಪಂಜದ ಚಿದ್ಗಲ್ಲು ಎಂಬಲ್ಲಿರುವ ತವರು ಮನೆಗೆ ಹೋಗಿದ್ದು, ಪಿರ್ಯಾದಿದಾರರು ತವರು ಮನೆಯಲ್ಲಿ ಇರುವಾಗ ದಿನಾಂಕ:10-12-2022 ರಂದು ಸಮಯ ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿದಾರರ ಗಂಡ ಬಂದು “ನಾನು ವಿಷ ಪದಾರ್ಥ ಸೇವಿಸಿರುತ್ತೇನೆ” .ಎಂದು ಹೇಳಿ ಅಲ್ಲೇ ವಾಂತಿ ಮಾಡಿ ಬಿದ್ದುಕೊಂಡರು. ಕೂಡಲೇ ಅವರನ್ನು ಜೀಪಿನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ, ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ಅದರಂತೆ 108 ಆ್ಯಂಬುಲೆನ್ಸ್ ನಲ್ಲಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿದ್ದು, ದಿನಾಂಕ: 11-12-2022 ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಯುಡಿಆರ್    ನಂಬ್ರ  : 24/2022 ಕಲಂ  174 ಸಿಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 12-12-2022 11:50 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080