ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸಂತೋಷ ಪೂಜಾರಿ (33)ವರ್ಷ ತಂದೆ:ಗೋಪಾಲ ಪೂಜಾರಿ  ವಾಸ:ಮುನ್ನಲಾಯಿ ಹೊಸಲಚ್ಚಿಲು ಮನೆ, ಅಲ್ಲಿಪಾದೆ ಅಂಚೆ, ಸರಪಾಡಿ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 12.01.2023 ರಂದು ಪಿರ್ಯಾದಿದಾರರು ತನ್ನ ಬಾಬ್ತು KA 19 EM-8552 ನೇ ಸ್ಕೂಟರನಲ್ಲಿ  ಅವರ ತಾಯಿಯಾದ ರಾಜೀವಿ ರವರೊಂದಿಗೆ ಅಗತ್ಯ ಕೆಲಸದ ನಿಮಿತ್ತ ಬಿ ಸಿ ರೋಡಿಗೆ ಬಂದಿದ್ದು, ಕೆಲಸ ಮುಗಿಸಿದ ಬಳಿಕ ವಾಪಸ್ಸು ಮನೆ ಕಡೆಗೆ ಹೋಗುತ್ತಾ ಸಮಯ ಸುಮಾರು 15:10 ಗಂಟೆಗೆ ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ಚಂಡ್ತಿಮಾರು ಎಂಬಲ್ಲಿ ತಲುಪುತ್ತಿದ್ದಂತೆ  ಹಿಂದಿನಿಂದ ಅಂದರೆ ಬಿ ಸಿ ರೋಡು ಕಡೆಯಿಂದ KA-70 M-2905 ನೇ ಕಾಂಕ್ರೀಟ್ ಮಿಕ್ಸಿಂಗ್ ಮಾಡುವ ಲಾರಿಯನ್ನು ಅದರ ಚಾಲಕ ಕಾರ್ತಿಕ್ ರವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟರ್ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುವುದಾಗಿದೆ, ಅಪಘಾತದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ತಾಯಿಯವರಿಗೆ ಗಾಯ ನೋವುಗಳಾಗಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 04/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನಾಗಭೂಷಣ ಎನ್‌, ಪ್ರಾಯ 30 ವರ್ಷ, ತಂದೆ: ಜನಾರ್ಧನ ಗೌಡ, ವಾಸ: ನಾಕಾಲು ಮನೆ, ಉರುವಾಲು ಅಂಚೆ & ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 11-01-2023 ರಂದು 19:15 ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ಪ್ರವೀಣ್‌ ಟಿ ಎಂಬವರು KA-21-H-5119 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿನಲ್ಲಿ ಪವನ್‌ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು, ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಮಾಣಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಕಲ್ಲೇಗ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ನಾಗಭೂಷಣ ಎನ್‌ ರವರು KA-21-W-2503 ನೋಂದಣಿ ನಂಬ್ರದ ಬುಲೆಟ್‌ ಮೋಟಾರ್‌ ಸೈಕಲನ್ನು ಮಂಜಲ್ಪಡ್ಪು ಕಡೆಯಿಂದ ನೆಹರೂನಗರ ಕಡೆಗೆ ಚಲಾಯಿಸಿಕೊಂಡು ಹೋಗಿ, ಬಲಬದಿಯ ಇಂಡಿಕೇಟರ್‌ ಹಾಕಿ ಹೆದ್ದಾರಿಯ ಬಲಬದಿಯಲ್ಲಿರುವ ಗ್ಯಾರೇಜಿಗೆ ಹೋಗಲು ನಿಧಾನವಾಗಿ ಚಲಾಯಿಸಿದಾಗ, ಆರೋಪಿ ಮೋಟಾರ್‌ ಸೈಕಲ್‌ ಪಿರ್ಯಾದುದಾರರ ಬುಲೆಟ್‌ ಮೋಟಾರ್‌ ಸೈಕಲಿಗೆ ಹಿಂದಿನಿಂದ ಅಪಘಾತವಾಗಿ ಎರಡೂ ವಾಹನಗಳ ಸವಾರರು & ಸಹಸವಾರ, ವಾಹನ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲಕೈ ಮೊಣಗಂಟಿಗೆ, ಬಲಕಾಲಿನ ಕೋಲು ಕಾಲಿಗೆ ಗುದ್ದಿದ ಹಾಗೂ ರಕ್ತಗಾಯವಾಗಿ ಅಲ್ಲೇ ಹತ್ತಿರದ ಕ್ಚಿನಿಕ್‌ನಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.  ಆರೋಪಿ ಸವಾರ ಮತ್ತು ಸಹಸವಾರ ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಹೋಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 05/2023 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ದಯಾನಂದ ಪ್ರಾಯ 44 ವರ್ಷ ತಂದೆ: ನಾಗಪ್ಪ ಸುವರ್ಣ ವಾಸ: ಕುಚ್ಚೂರು ಮನೆ ಫರಂಗಿಪೇಟೆ ಅಂಚೆ, ಅರ್ಕುಲ್  ಗ್ರಾಮ ಮಂಗಳೂರು ಎಂಬವರ ದೂರಿನಂತೆ ದಿನಾಂಕ 12-01-2023 ರಂದು ಬೆಳಗ್ಗೆ 5.00 ಗಂಟೆಗೆ ಮನೆಯಲ್ಲಿರುವ ಸಮಯ ದೂರದ ಸಂಬಂಧಿಯಾದ ಧೀರಜ್ ಫಿರ್ಯಾದಿದಾರರಿಗೆ ಕರೆ ಮಾಡಿ ನಿನ್ನ ಹೆಂಡತಿಯ ತಮ್ಮನಾದ ರಾಜೇಶ ಪ್ರಾಯ 38 ವರ್ಷ ತಂದೆ: ನಾಗೇಶ ಪೂಜಾರಿ ವಾಸ: ಸಾನದ ಮನೆ ಸಜಿಪ ನಡು ಗ್ರಾಮ ಬಂಟ್ವಾಳ ತಾಲೂಕು ಇವರ ಸ್ಟೂಟರ್ (ಕೆಎ 70 ಇ 6213) ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಗೂಡಿನಬಳಿ ನೇತ್ರಾವತಿ ಬ್ರಿಜ್ ನ ಎಡಭಾಗದ ಸುರಕ್ಷತಾ ಪಟ್ಟಿಗೆ ಮಗ್ಗಲಾಗಿ ಬಿದ್ದಿರುವ ವಿಚಾರವನ್ನು ತಿಳಿಸಿರುತ್ತಾನೆ. ಅದರಂತೆ ಫಿರ್ಯಾದಿದಾರರು ಸದ್ರಿ ಸ್ಥಳಕ್ಕೆ ಬಂದು ಮಾವನವರಾದ ನಾಗೇಶ ಪೂಜಾರಿ ರವರಿಗೆ ಕರೆ ಮಾಡಿ ವಿಚಾರಿಸಿದಲ್ಲಿ ನಿನ್ನೆ ಬೆಳಿಗ್ಗೆ 08.30 ಗಂಟೆಯ ಸುಮಾರಿಗೆ ಸೆಂಟ್ರಿಂಗ್ ಕೆಲಸದ ನಿಮಿತ್ಯ ಮನೆಯಿಂದ ಹೋಗಿದ್ದು ವಾಪಾಸ್ಸು ಬಂದಿರುವುದಿಲ್ಲವಾಗಿ ತಿಳಿಸಿದರು. ನಂತರ ಫಿರ್ಯಾದಿದಾರರು ಹಾಗೂ ಸ್ಥಳೀಯರು ಸೇರಿಕೊಂಡು ಹುಡುಕಾಡಿದಲ್ಲಿ ರಾಜೇಶನ ಸುಳಿವು ಸಿಗದೇ ಇದ್ದು, ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ನೇತ್ರಾವತಿ ನದಿ ನೀರಿನಲ್ಲಿ ಹುಡುಕಾಡಿದಲ್ಲಿ ಬೆಳಿಗ್ಗೆ 10.45 ಗಂಟೆಗೆ ನೇತ್ರಾವತಿ ನದಿ ನೀರಿನಲ್ಲಿ ರಾಜೇಶನ ಮೃತ ದೇಹ ಪತ್ತೆಯಾಗಿರುತ್ತದೆ. ಮೃತ ರಾಜೇಶನ ಮರಣದಲ್ಲಿ ಸಂಶಯವಿದ್ದು. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 01-2023 ಕಲಂ: 174 (3) & (iv)  ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರಕಾಶ್ (25), ತಂದೆ: ಸುಬ್ಬಣ್ಣ ಪೂಜಾರಿ, ವಾಸ: ಅಂದ್ರದಡ್ಡ ಮನೆ, ಗಾಂಧಿನಗರ, ಕರಿಮಣೇಲು ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಪಿಯಾದಿದಾರರಾದ ಪ್ರಕಾಶ್ ರವರ  ತಂದೆ  ಸುಬ್ಬಣ್ಣ ಪೂಜಾರಿ (58), ತಂದೆ: ಮಾಧವ ಪೂಜಾರಿ ರವರು ವಿಪರೀತ ಮಧ್ಯ ಸೇವಿಸುವ ಚಟವಿದ್ದು, ದಿನಾಂಕ 12.01.2023 ರಂದು ಸಮಯ ಸುಮಾರು ರಾತ್ರಿ 7:15 ಗಂಟೆಗೆ ಫಿರ್ಯಾದಿದಾರರ ತಾಯಿಯವರು ದೂರವಾಣಿ ಕರೆ ಮಾಡಿ ಫಿರ್ಯಾದಿಯ ತಂದೆಯವರು ಮನೆಯ ಒಳಗಿನ ಚಾವಡಿಯಲ್ಲಿ ಕುಸಿದು ಬಿದ್ದು ವಾಂತಿ ಮಾಡಿಕೊಂಡಿರುವುದಾಗಿ ತಿಳಿಸಿದಂತೆ ಫಿರ್ಯಾದಿದಾರರು ಕೂಡಲೇ ಮನೆಗೆ ತೆರಳಿ ನೋಡಲಾಗಿ ತಂದೆಯವರು ಚಾವಡಿಯಲ್ಲಿ ಅಸ್ವಸ್ಥರಾಗಿ ನೆಲದಲ್ಲಿ ಬಿದ್ದುಕೊಂಡು ನರಳಾಡುತ್ತಿದ್ದು, ಕೂಡಲೇ ಅವರನ್ನು ನೆರೆಕರೆಯವರಾದ ಪ್ರಶಾಂತ್, ಸುಧೀರ್, ಗಣೇಶ್‌ರವರ ಸಹಾಯದಿಂದ ಕಾರೊಂದರಲ್ಲಿ ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ  ರಾತ್ರಿ ಸಮಯ ಸುಮಾರು 8:00 ಗಂಟೆಗೆ ವೈಧ್ಯಾಧಿಕಾರಿಯವರು ಪರೀಕ್ಷೆ ನಡೆಸಿ ಸುಬ್ಬಣ್ಣ ಪೂಜಾರಿಯವರು ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 03-2023 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-01-2023 11:06 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080