ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 5

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನಿಶಾಂತ್ ಪ್ರಾಯ:26 ವರ್ಷ ತಂದೆ: ಶಿವರಾಮ ಶೆಟ್ಟಿ ವಾಸ : ಮಡ್ಯಾರ್ ಗುತ್ತು ಮನೆ, ಬಿ ಕಸಬಾ ಗ್ರಾಮ, ಅಗ್ರಾರ್ ಅಂಚೆ ಬಂಟ್ವಾಳ ತಾಲೂಕು  ಎಂಬವರ ದೂರಿನಂತೆ ದಿನಾಂಕ 12-02-2023 ರಂದು ಪಿರ್ಯಾದಿದಾರರು ತನ್ನ ಬಾಬ್ತು KA-19-HK-4944 ನೇ ಮೋಟಾರ್ ಸೈಕಲ್ ನಲ್ಲಿ ಸವಾರನಾಗಿ, ಕೌಸಲ್ಯ ರವರು ಸಹಸವಾರಿಣಿಯಾಗಿ ಕುಳಿತುಕೊಂಡು ಬಿ.ಸಿ.ರೋಡ್ ನಲ್ಲಿ ಕೆಲಸ ಮುಗಿಸಿ ವಾಪಾಸು ಮನೆ ಕಡೆಗೆ ಹೋಗುತ್ತಾ ಸಮಯ ಸುಮಾರು ಮಧ್ಯಾಹ್ನ 12:15 ಗಂಟೆಗೆ ಬಂಟ್ವಾಳ ತಾಲೂಕು ಬಿ-ಮೂಡ ಗ್ರಾಮದ, ಜೋಡು ಮಾರ್ಗ ಪಾರ್ಕ ಬಳಿ ತಲುಪುತ್ತಿದ್ದಂತೆ ಜಕ್ರಿಬೆಟ್ಟು ಕಡೆಯಿಂದ  KA-70-M-0350 ನೇ ಕಾರನ್ನು ಅದರ ಚಾಲಕ  ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಮುಂಬದಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ  ಪಿರ್ಯಾದಿದಾರರು ಹಾಗೂ ಸಹಸವಾರಿಣಿ  ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಗಲ್ಲಕ್ಕೆ, ಬಲ ಕೈ ಗೆ, ಎರಡು ಕೋಲು ಕಾಲಿಗೆ ಗುದ್ದಿದ ಮತ್ತು ತರಚಿದ ಗಾಯವಾಗಿದ್ದು,  ಸಹಸವಾರಿಣಿ ಕೌಸಲ್ಯ ರವರಿಗೆ  ಬಲಕಾಲು ಹಿಮ್ಮಡಿಗೆ, ಕೋಲು ಕಾಲಿಗೆ ಗುದ್ದಿದ ಮತ್ತು ತರಚಿದ ಗಾಯಗೊಂಡವರು ಚಿಕಿತ್ಸೆಯ ಬಗ್ಗೆ ಬಿ.ಸಿ ರೋಡು ಸೋಮಾಯಾಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 28/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸಾದೀಕ್  ಪ್ರಾಯ 32 ವರ್ಷ, ತಂದೆ: ಕೆಎಸ್ ಮಹಮ್ಮದ್, ವಾಸ: ಇರ್ವತ್ತೂರು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 12-02-2023 ರಂದು ಮದ್ಯಾಹ್ನ  ಕಾರ್ಯಕ್ರಮಕ್ಕೆ ಹೋಗುವರೇ ತನ್ನ ಬಾಬ್ತು ಕಾರಿನಲ್ಲಿ ಮನೆಯಿಂದ ಹೊರಟು  ಮೂರ್ಜೆ – ಕುದ್ಕೋಳಿ ರಸ್ತೆಯಲ್ಲಿ ಬರುತ್ತಾ ಬಂಟ್ವಾಳ ತಾಲೂಕು ಇರ್ವತ್ತೂರು ಗ್ರಾಮದ ಕಲಾಬಾಗಿಲು ಬಸ್‌ನಿಲ್ದಾಣದ ಹತ್ತಿರ ಬರುತ್ತಿದ್ದಂತೆ ಸಮಯ ಸುಮಾರು 12:45 ಗಂಟೆಗೆ  ಮೂರ್ಜೆ ಕಡೆಯಿಂದ ಕುದ್ಕೋಳಿ ಕಡೆಗೆ KA70-H 1167  ನೇದರ ಸವಾರ ರಮಾನಂದ ಎಂಬವರು ತನ್ನ ಸ್ಕೂಟರ್‌ ನ್ನು ಅಜಾರುಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಚಾಲಾಯಿಸಿ ಡಾಮಾರು ರಸ್ತೆಯ ಬದಿಯಲ್ಲಿರುವ ಮಣ್ಣುರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಜೀಝ್‌ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಅಜೀಝ್‌ ಹಾಗೂ ರಮಾನಂದರವರು ಸ್ಕೂಟರ್‌ ಸಮೇತ  ಕಚ್ಚಾಮಣ್ಣು ರಸ್ತೆಗೆ ಬಿದ್ದಾಗ ಪಿರ್ಯಾದಿದಾರರು ತನ್ನ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ಗಾಯಗೊಂಡ ಅಜೀಝ್‌ ಎಂಬವರನ್ನು ಎತ್ತಿ ಆರೈಕೆ ಮಾಡಿ ಬಳಿಕ  ಅಲ್ಲಿಗೆ ಬಂದ ಗಾಯಾಳು ಅಜೀಝ್‌ ನ ಅಣ್ಣ ಚಿಕಿತ್ಸೆ ಬಗ್ಗೆ ವಾಹನವೊಂದರಲ್ಲಿ  ಮಂಗಳೂರು ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದುಸ್ಕೂಟರ್‌ ಸವಾರ ರಮಾನಂದ ರವರಿಗೂ ತರಚಿದ ಗಾಯಾವಾಗಿರುತ್ತದೆ.ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 12/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಾಮಕೃಷ್ಣ, ಪ್ರಾಯ 40 ವರ್ಷ, ತಂದೆ: ದಿ|| ಅಣ್ಣು ನಾಯ್ಕ, ವಾಸ: ಪಟ್ಟೋರಿ ಮನೆ, ಅಸೈಗೋಳಿ ಅಂಚೆ, ಕೊಣಾಜೆ ಗ್ರಾಮ, ಮಂಗಳೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 12-02-2023 ರಂದು 08-45 ಗಂಟೆಗೆ ಆರೋಪಿ ಸ್ಕೂಟರ್‌ ಸವಾರ ಮಹಮ್ಮದ್‌ ಹುಸೈನ್‌ ಎಂಬವರು ಕೆಎ-21-ಇಸಿ-7819  ನೇ ನೋಂದಣಿ ನಂಬ್ರದ ಸ್ಕೂಟರನ್ನು ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಸತ್ತಿಕಲ್ಲು ಜಂಕ್ಷನ್‌ ಬಳಿ ಹೆದ್ದಾರಿಯ ಎಡಭಾಗದಲ್ಲಿದ್ದ ಹೊಟೇಲೊಂದರ ಬಳಿಯಿಂದ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೆದ್ದಾರಿಯಲ್ಲಿ ಹೋಗುವ  ವಾಹನಗಳನ್ನು ಗಮನಿಸದೇ ಏಕಾಏಕಿಯಾಗಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ರಾಮಕೃಷ್ಣ ರವರು ಸವಾರರರಾಗಿ ಕಶೆಕೋಡಿ  ಕಡೆಯಿಂದ ಪೆರ್ನೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಕೆಎ-21-ಕ್ಯೂ-7577 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿಗೆ ಸ್ಕೂಟರ್‌ ಅಪಘಾತವಾಗಿ, ಪಿರ್ಯಾದುದಾರರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಎಡಪಾದ, ಎಡ ಮೊಣಕಾಲು, ಎಡ ತೊಡೆ, ಬಲಕೈ ಹಾಗೂ ಬಲಮೊಣಕೈಗೆ   ಗಾಯಗೊಂಡವರನ್ನು  ಚಿಕಿತ್ಸೆ ಬಗ್ಗೆ ಪುತ್ತೂರು ಹಿತ ಆಸ್ಪತ್ರೆಗೆ ದಾಖಲಿಸಲಾಗಿದೆ..ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 27/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕುಲದೀಪ್‌ ಎಂ ಎನ್‌, ಪ್ರಾಯ 33 ವರ್ಷ, ತಂದೆ: ನಾರಾಯಣ ನಾಯ್ಕ, ವಾಸ: ಮೈಂದೂರುಕಾನ ಮನೆ, ಲೆಟ್ಟಿ ಅಂಚೆ & ಗ್ರಾಮ  ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ 12-02-2023 ರಂದು 14-45 ಗಂಟೆಗೆ ಆರೋಪಿ ಪಿಕಪ್‌ ವಾಹನ ಚಾಲಕ ಸುಂದರ ಗೌಡ ಎನ್‌ ಎಂಬವರು ಕೆಎ-19-ಎಎ-5155 ನೇ ನೋಂದಣಿ ನಂಬ್ರದ ಪಿಕಪ್‌ ವಾಹನವನ್ನು  ಮಾಣಿ-ಮೈಸೂರು  ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯ ಕಡೆಯಿಂದ ಮಾಣಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಉರ್ಲಾಂಡಿ ಜಂಕ್ಷನ್‌ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಕುಲದೀಪ್‌ ಎಂ ಎನ್‌ ರವರ ಮುಂದಿನಿಂದ ವಿಠಲ ಆಳ್ವರವರು  ಸುಳ್ಯ ಕಡೆಯಿಂದ ಮಾಣಿ ಕಡೆಗೆ ಕೆಎ-04-ಎಂಹೆಚ್‌-7404 ನೇ ನೋಂದಣಿ ನಂಬ್ರದ ಕಾರನ್ನು ಚಲಾಯಿಸಿಕೊಂಡು ಹೋಗಿ ನಿಧಾನವಾಗಿ ನಿಲ್ಲಿಸಿದಾಗ,  ಪಿರ್ಯಾದುದಾರರು ಚಾಲಕರಾಗಿ, ರಕ್ಷಿತ್‌ ಹೆಚ್‌ ಎಂ, ಶಶಿಧರ್‌ ಎಂಬವರನ್ನು ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಸುಳ್ಯ ಕಡೆಯಿಂದ ನೆಹರೂನಗರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಕೆಎ-19-ಎಂಎ-2617 ನೇ ನೋಂದಣಿ ನಂಬ್ರದ ಕಾರನ್ನು  ನಿಲ್ಲಿಸಿದಾಗ, ಪಿರ್ಯಾದುದಾರರ ಹಿಂದಿನಿಂದ ಬಂದ ಆರೋಪಿ  ಪಿಕಪ್‌ ವಾಹನ ಪಿರ್ಯಾದುದಾರರ ಕಾರಿಗೆ ಹಿಂದಿನಿಂದ  ಅಪಘಾತವಾಗಿ, ಪಿರ್ಯಾದುದಾರರ ಕಾರು ಮುಂದಕ್ಕೆ ಹೋಗಿ ಕೆಎ-04-ಎಂಹೆಚ್‌-7404  ನೇ ನಂಬ್ರದ ಕಾರಿನ ಹಿಂಭಾಗಕ್ಕೆ ಅಪಘಾತವಾಗಿರುತ್ತದೆ. ಈ ಅಪಘಾತದಿಂದ ಮೂರೂ ವಾಹನಗಳು ಜಖಂಗೊಂಡಿರುತ್ತವೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 28/2023 ಕಲಂ: 279 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಎ ಲಿಂಗಪ್ಪ ನಾಯ್ಕ, ಪ್ರಾಯ 75 ವರ್ಷ, ತಂದೆ: ದಿ|| ಪುತ್ತು ನಾಯ್ಕ, ವಾಸ: ಅಡ್ಕಹಿತ್ಲು ಮನೆ, ಪೆರ್ನೆ ಅಂಚೆ & ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 12-02-2023 ರಂದು 17-10 ಗಂಟೆಗೆ ಆರೋಪಿ ಮೋಟಾರು ಸೈಕಲ್‌ ಸವಾರ ಲೋಕೇಶ  ಎಂಬವರು ಕೆಎ-21-ಕೆ-3596 ನೇ ನೋಂದಣಿ ನಂಬ್ರದ ಮೋಟಾರು ಸೈಕಲನ್ನು ಪುತ್ತೂರು-ಉಪ್ಪಿನಂಗಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪುತ್ತೂರು ಕಡೆಯಿಂದ ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನೀರ್ಪಾಜೆ ಕ್ರಾಸ್‌ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ಬದಿಗೆ ಚಲಾಯಿಸಿದ ಪರಿಣಾಮ, ರಸ್ತೆಯ ಬದಿಯಲ್ಲಿ ನಿಂತಿದ್ದ ಪಾದಾಚಾರಿ ಪಿರ್ಯಾದಿ ಎ ಲಿಂಗಪ್ಪ ನಾಯ್ಕರವರಿಗೆ ಮೋಟಾರು ಸೈಕಲ್‌ ಅಪಘಾತವಾಗಿ ಪಿರ್ಯಾದುದಾರರಿಗೆ ಮುಖದ ಬಲಭಾಗ ರಕ್ತಗಾಯ ಹಾಗೂ ಗುದ್ದಿದ ಗಾಯ, ಎಡಭುಜಕ್ಕೆ ಎಡ ಕೋಲುಕಾಲಿಗೆ ಗುದ್ದಿದ ಒಳನೋವಿರುವ ಗಾಯ, ಎಡಮೊಣಕೈ ಬಳಿ ರಕ್ತಗಾಯವಾಗಿದ್ದು ಆರೋಪಿ ಸವಾರ ಲೋಕೇಶರವರಿಗೆ ಮುಖದ ಬಲಭಾಗ ಗುದ್ದಿದ ಗಾಯ, ಬಲಮೊಣಕೈ ಬಳಿ, ಹೊಟ್ಟೆಗೆ, ಎಡಮೊಣಕೈ ಬಳಿ ಹಾಗೂ ಮೂಗಿಗೆ ಗಾಯಗಳಾಗಿದ್ದು ಅಲ್ಲಿ ಸೇರಿದವರು ಕಾರಿನಲ್ಲಿ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 29/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ 12.02.2023ರಂದು ಸಮಯ ಸುಮಾರು ಸಂಜೆ  5.45 ಗಂಟೆಗೆ ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ನೆಲ್ಲಿತ್ತಿಮಾರ್ ಎಂಬಲ್ಲಿ ಅಶೋಕ್‌ ಲೇಲ್ಯಾಂಡ್‌ ಮಿನಿ ಗೂಡ್ಸ್‌ ವಾಹನವೊಂದರಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದಾಗ ಶ್ರೀನಾಥ ರೆಡ್ಡಿ, ಪೊಲೀಸ್ ಉಪನಿರೀಕ್ಷಕರು,ಪುತ್ತೂರು ಗ್ರಾಮಾಂತರ ಠಾಣೆ ಹಾಗೂ ಸಿಬ್ಬಂದಿಗಳು ತಡೆದು ಪರಿಶೀಲಿಸಲಾಗಿ ಜಾನುವಾರು ಸಾಗಾಟಕ್ಕೆ ಯಾವುದೇ ಪರವಾನಿಗೆ ಅಥವಾ ಪಶು ವೈದ್ಯಾಧಿಕಾರಿಯವರ ಪ್ರಮಾಣಪತ್ರ ಇಲ್ಲದೇ ಒಂದು ಹಸು ಮತ್ತು ಒಂದು ಗಂಡು ಕರುವನ್ನು ಸಾಗಿಸುತ್ತಿರುವುದು ಕಂಡುಬಂದಿದ್ದು, ಈ ಬಗ್ಗೆ ಕೃತ್ಯದಲ್ಲಿ ತೊಡಗಿದ್ದ ವಿಲ್ಲಿ ಲೂಯಿಸ್ ಡಿ ಸೋಜಾ,  ಸಂತೋಷ್ ಡಿ ಸೋಜಾ, ಸಿಲ್ವೆಸ್ಟರ್ ಡಿ ಸೋಜಾ ಎಂಬವರುಗಳನ್ನು ದಸ್ತಗಿರಿ ಮಾಡಿ, ಸದ್ರಿ ವಾಹನ ಹಾಗೂ ಜಾನುವಾರುಗಳನ್ನು  ವಶಕ್ಕೆ ಪಡೆದು, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 013-2023 ಕಲಂ:- 5, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ಯಂತೆ ಪ್ರಕರಣ ದಾಖಲಿಸಲಾಗಿದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜನಾರ್ಧನ ಪ್ರಾಯ 62 ವರ್ಷ ತಂದೆ: ದಿ. ಗೋವಿಂದ ಪೂಜಾರಿ ವಾಸ: ಅಮೃತ ನಗರ 2 ನೇ ಬ್ಲಾಕ್ ತಿರುವೈಲು ಗ್ರಾಮ ವಾಮಂಜೂರು ಮಂಗಳೂರು ಎಂಬವರ ದೂರಿನಂತೆ ಪಿರ್ಯಾದಿದಾರರು ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಬೋರು ಗುಡ್ಡೆ ಎಂಬಲ್ಲಿ ಸ್ವಂತ ಮನೆಯನ್ನು ಹೊಂದಿದ್ದು, ಅದರ ರಿಪೇರಿ ಕೆಲಸ ನಡೆಯುತ್ತಿರುವುದರಿಂದ ಮಗಳ ಮನೆಯಾದ ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ಅಗ್ರಹಾರ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವುದಾಗಿದೆ. ತಿಂಗಳ ಸಂಕ್ರಮಣ ದಿನದಂದು ಫಿರ್ಯಾದಿದಾರರು ಹಾಗೂ ಫಿರ್ಯಾಧಿದಾರರ ಪತ್ನಿಯಾದ ಶೇಷಮ್ಮ ಪ್ರಾಯ 61 ವರ್ಷ, ದೈವದೇವರಿಗೆ ಪೂಜೆ ಸಲುವಾಗಿ ಬೋರುಗುಡ್ಡೆಯ ಮನೆಗೆ ಬಂದು ಹೋಗುತ್ತಿದ್ದರು. ದಿನಾಂಕ 12-02-2023 ರಂದು ಬೆಳಿಗ್ಗೆ 10.00 ಗಂಟೆಗೆ ಫಿರ್ಯಾದಿದಾರರ ಪತ್ನಿ ಶೇಷಮ್ಮ ಮಗಳೊಂದಿಗೆ ಮಗಳ ಮನೆಯಿಂದ ಹೊರಟು ಬೋರುಗುಡ್ಡೆಯ ಮನೆಗೆ ಬಂದಿರುತ್ತಾರೆ. ಬಳಿಕ ಫಿರ್ಯಾಧಿದಾರರ ಪತ್ನಿಯು ನಾಳೆ ಸಂಕ್ರಮಣದ ಪೂಜೆ ಮುಗಿಸಿ ಬಳಿಕ ಮನೆಗೆ ಬರುವುದಾಗಿ ಮಗಳ ಹತ್ತಿರ ಹೇಳಿರುತ್ತಾಳೆ, ನಂತರ ಮಗಳು ತಾಯಿ ಶೇಷಮ್ಮಳನ್ನು ಅಲ್ಲಿಯೇ ಬಿಟ್ಟು ಬಂದಿರುತ್ತಾಳೆ. ಮಧ್ಯಾಹ್ನ 3.30 ಗಂಟೆಯ ಸಮಯಕ್ಕೆ ಫಿರ್ಯಾಧಿದಾರರು ಬೋರುಗುಡ್ಡೆಯ ಮನೆಗೆ ಬಂದಾಗ ಮನೆಯ ಮುಂದಿನ ಬಾಗಿಲು ಅರೆತೆರೆದಿದ್ದು, ದೂಡಿ ನೋಡಲಾಗಿ -- ನೈಲಾನ ಸೀರೆಯನ್ನು ಪಕ್ಕಾಸಿಗೆ ಗಂಟು ಹಾಕಿಮತ್ತೊಂದು ತುದಿಯನ್ನುಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಯುಡಿಆರ್ ನಂ: 05/2023 ಕಲಂ: 174  ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕೊಟ್ರೇಶ್‌  ಬಸವರಾಜ ನಾವಿ ಪ್ರಾಯ 32 ವರ್ಷ ತಂದೆ ಬಸವ ರಾಜ ವಾಸ: ಬನ್ನಿಕೊಪ್ಪ ಗ್ರಾಮ ಶಿರಹಟ್ಟಿ ತಾಲೂಕು ಗದಗ ಜಿಲ್ಲೆ ಹಾಲಿ ವಾಸ: ಬಿ.ಸಿ ರೋಡ್‌ ಶ್ರೀ ದುರ್ಗಾ ಕ್ರೇನ್‌  ಸರ್ವೀಸ್‌ ಸೆಂಟರ್‌ ಮಾನಸ ಬಿಲ್ಡಿಂಗ್‌ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಕೊಟ್ರೇಶ್‌  ಬಸವರಾಜ ನಾವಿ ಪ್ರಾಯ 32 ವರ್ಷ ತಂದೆ ಬಸವ ರಾಜ ವಾಸ: ಬನ್ನಿಕೊಪ್ಪ ಗ್ರಾಮ ಶಿರಹಟ್ಟಿ ತಾಲೂಕು ಗದಗ ಜಿಲ್ಲೆ ಹಾಲಿ ವಾಸ: ಬಿ.ಸಿ ರೋಡ್‌ ಶ್ರೀ ದುರ್ಗಾ ಕ್ರೈನ್‌ ಸರ್ವೀಸ್‌ ಸೆಂಟರ್‌ ಮಾನಸ ಬಿಲ್ಡಿಂಗ್‌ ಬಂಟ್ವಾಳ ತಾಲೂಕು ಎಂಬವರು ನೀಡಿದ ಫಿರ್ಯಾದಿಯ ಸಾರಾಂಶವೇನೆಂದರೆ, ಫಿರ್ಯಾದಿದಾರರು  ಸುಮಾರು 1 ವರ್ಷದಿಂದ ದ.ಕ ಜಿಲ್ಲೆಯಲ್ಲಿ ಕ್ರೈನ್‌ ಆಪರೇಟರ್‌ ಆಗಿ ಕೆಲಸ ಮಾಡಿಕೊಂಡಿದ್ದು, ಪ್ರಸ್ತುತ ಬಿ.ಸಿ ರೋಡ್‌  ಶ್ರೀ ದುರ್ಗಾ ಕ್ರೇನ್‌  ಸರ್ವೀಸ್‌ ಸೆಂಟರ್‌ ನಲ್ಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಈಗ ಸುಮಾರು 1 ತಿಂಗಳಿನಿಂದ ಕಬಕ-ಪುತ್ತೂರು ರೈಲ್ವೇ ನಿಲ್ದಾಣದ ಸಮೀಪ ರೈಲ್ವೇ ಇಲಾಖೆಗೆ ಸಂಬಂಧಿಸಿದ  ಕೆಲಸ ಮಾಡಿಕೊಂಡಿದ್ದು,  ದಿನಾಂಕ: 12.02.2023 ರಂದು ಸುಮಾರು 11.45 ಗಂಟೆಗೆ ಮೂತ್ರ ವಿಸರ್ಜನೆ ಮಾಡುವರೇ ರೈಲ್ವೇ ಟ್ರ್ಯಾಕ್‌ ಹತ್ತಿರ ಬಂದಾಗ ಅಲ್ಲಿನ ಚರಂಡಿ ಬದಿಯಿಂದ ಯಾವುದೋ ಘಾಟು ವಾಸನೆ ಬರುತ್ತಿರುವುದನ್ನು ನೋಡಿ ಹತ್ತಿರ ಹೋದಾಗ ಸುಮಾರು 35 ರಿಂದ 40 ವರ್ಷ ಪ್ರಾಯದ ಅಪರಿಚಿತ ಹೆಂಗಸಿನ ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುತ್ತದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಯುಡಿಆರ್‌ ನಂ: 04/2023 ಕಲಂ: 174 (3) & (iv) CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-02-2023 11:54 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080