ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 

ಸುಳ್ಯ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಶರೀಪ್ (29) ತಂದೆ:ಳ ಮುಸ್ತಾಫ ವಾಸ: ದೊಡ್ಡತೋಟ ಮನೆ, ಅಮರಮೂಡ್ನೂರು ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ 11.03.2022 ರಂದು 23:30 ಗಂಟೆಗೆ ಆತನ ಬಾಬ್ತು ಅಂಗಡಿಯಾದ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಪ್ರಭು ಬುಕ್ ಹೌಸ್ ಎದುರು ಇರುವ ತರಕಾರಿ ಅಂಗಡಿಯ ಹತ್ತಿರ ನಿಂತುಕೊಂಡಿರುವ ಸಮಯ ಶ್ರೀರಾಮ್ ಪೇಟೆ ಕಡೆಯಿಂದ ಸುಳ್ಯ ಬಸ್ ಸ್ಟಾಂಡ್ ಕಡೆಗೆ ಕೆಎ 21 ಸಿ 0508 ನೇದರ ಅಫೆ ರಿಕ್ಷಾ ಚಾಲಕ ಹಮೀದ್ ಎಂಬಾತನು ರಿಕ್ಷಾವನ್ನು ಚಾಲನೆ ಮಾಡಿಕೊಂಡು ಬರುತ್ತಿರುವ ಸಮಯ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಮೋಟಾರ್ ಸೈಕಲ್ ಕೆಎ 21 ವೈ 1870 ನೇದರ ಸವಾರ ರವಿರಾಜ್ ಎಂಬಾತನು ನಿಯಂತ್ರಣ ತಪ್ಪಿ ಆಟೋ ರಿಕ್ಷಾಗೆ ಡಿಕ್ಕಿವುಂಟು ಮಾಡಿ ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಸೃತಿ ಕಳೆದುಕೊಂಡವನನ್ನು  ಅಲೇ ಇದ್ದ ಪಿರ್ಯಾದುದಾರರು ಮತ್ತು ಇತರರು ಉಪಚರಿಸಿ ರವಿರಾಜ್ ನನ್ನು ಚಿಕಿತ್ಸೆಯ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ಕಳುಹಿಸಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ 29/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಪೂರ್ಣಿಮಾ, (40 ವರ್ಷ), ಗಂಡ: ಚೆನ್ನಪ್ಪ ಗೌಡ,  ವಾಸ: ಕೋಡಿಯಡ್ಕ ಮನೆ, ಉಜ್ರುಪಾದೆ ಅಂಚೆ, ಬಲ್ನಾಡು ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 10-03-2022 ರಂದು 08-25 ಗಂಟೆಗೆ ಆರೋಪಿ ಸ್ಕೂಟರ್‌ ಸವಾರ ಮಹಮ್ಮದ್‌ ಮುರ್ಷಿದ್‌ ಎಂಬವರು KA-21-U-5169ನೇ ನೋಂದಣಿ ನಂಬ್ರದ ಸ್ಕೂಟರಿನಲ್ಲಿ ಮಹಮ್ಮದ್‌ ಶಂಶೀರ್‌ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಬೊಳುವಾರು ಜಂಕ್ಷನ್‌ ನಲ್ಲಿ ಮೋರ್‌ ಅಂಗಡಿಗೆ ಹೋಗಲು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಬೊಳುವಾರು-ಪುತ್ತೂರು ಮುಖ್ಯ ರಸ್ತೆಗೆ ಅಡ್ಡಲಾಗಿ ಚಲಾಯಿಸಿದ ಪರಿಣಾಮ, ಮುಖ್ಯ ರಸ್ತೆಯಲ್ಲಿ ಪಿರ್ಯಾದುದಾರರ ಮಗ ತನುಜ್‌ ರವರು ಪುತ್ತೂರು ಪೇಟೆ ಕಡೆಯಿಂದ ಕೊಡಿಪ್ಪಾಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-X-1729ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿಗೆ ಅಪಘಾತವಾಗಿ, ತನುಜ್‌ ರವರಿಗೆ ಬಲ ಭುಜಕ್ಕೆ ಗುದ್ದಿದ ನೋವು, ಹಣೆಯ ಬಲಭಾಗ, ತುಟಿ ಗಲ್ಲಕ್ಕೆ ರಕ್ತಗಾಯವಾಗಿ, ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ದೇರಳಕಟ್ಟೆಯ ಕೆ.ಎಸ್‌ ಹೆಗ್ಡೆ ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  48/2022 ಕಲಂ: 279,337ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಚಂದ್ರಶೇಖರ  ಪ್ರಾಯ 34 ವರ್ಷ, ತಂದೆ:ಕೃಷ್ಣಪ್ಪ ಕುಲಾಲ್ , ವಾಸ:ಕುರಿಯಲ ಕೊಪ್ಪ ಮನೆ, ನೂಜಿಬಾಳ್ತಿಲ ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ:11.03.2022 ರಂದು  ಪಿರ್ಯಾದುದಾರರು ತನ್ನ ರಿಕ್ಷಾದಲ್ಲಿ ಬಾಡಿಗೆ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ನೂಜಿಬಾಳ್ತಿಲ ಕಡೆಯಿಂದ ಇಚ್ಲಾಂಪಾಡಿ ಕಡೆಗೆ ಅಟೋರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಸಮಯ ಸಂಜೆ 18.30 ಗಂಟೆಗೆ ಇಚ್ಲಾಂಪಾಡಿ ಅಕ್ಷಯ ಹೋಟೆಲ್ ಎದರುಗಡೆಯಿಂದ ಪಾದಚಾರಿಯೊಬ್ಬರು ರಸ್ತೆ ಬದಿಯ ಕಚ್ಚಾ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಸಮಯ ಪಿರ್ಯಾದಿಯ  ಹಿಂದಿನಿಂದ ಬರುತ್ತಿದ್ದ  ಮೋಟಾರ್‌ ಸೈಕಲ್‌ ಸವಾರನು ತನ್ನ ಮೋಟಾರ್ ಸೈಕಲ್ ನ್ನು ಅಜಾಗರುಕತೆ ಹಾಗೂ ನಿರ್ಲಕ್ಷತನದಿಂದ ಚಾಲಯಿಸಿಕೊಂಡು ಪಿರ್ಯಾದಿಯ ಅಟೋರಿಕ್ಷಾವನ್ನು ಓವರ್ ಟೇಕ್ ಮಾಡಿ ಎದುರಿನಿಂದ ಬರುತ್ತಿದ್ದ ಪದಚಾರಿಗೆ ಡಿಕ್ಕಿ ಹೋಡೆದ ಪರಿಣಾಮ  ಪದಚಾರಿಯು ರಸ್ತೆಗೆ ಎಸೆಯಲ್ಪಟ್ಟಿದ್ದು   ಕೂಡಲೇ  ಪಿರ್ಯಾದುದಾರರು ತನ್ನ ಅಟೋ ರಿಕ್ಷಾವನ್ನು ನಿಲ್ಲಿಸಿ ಹತ್ತಿರ ಹೋಗಿ ನೋಡಲಾಗಿ ತನ್ನ ಚಿಕ್ಕಪ್ಪ ಶೀವಪ್ಪ ಕುಂಬಾರವಾಗಿದ್ದು ನಂತರ ನೋಡಲಾಗಿ ತಲೆಯ ಹಿಂಬದಿ ರಕ್ತ ಗಾಯ ಹಾಗೂ ಬಲಕಾಲಿಗೆ ತರಚಿದ ಗಾಯವಾಗಿದ್ದು ನಂತರ ಡಿಕ್ಕಿ ಉಂಟು ಮಾಡಿದ ಮೋಟಾರ್ ಸೈಕಲ್ ನ್ನು ನೋಡಲಾಗಿ   KA-21-X-2451 ಆಗಿದ್ದು ಅದರ ಸವಾರನ ಹೆಸರು ಕೆ ಪಿ ಜೋನ್ ಎಂಬುದಾಗಿ ತಿಳಿದಿದ್ದು ಮೋಟಾರ್ ಸೈಕಲ್ ಸವಾರನು ಕೂಡ ರಸ್ತೆಗೆ ಬಿದ್ದಿದ್ದು ತರಚಿದ ಗಾಯವಾಗಿರುತ್ತದೆ ನಂತರ ಅಲ್ಲೇಯೆ  ಇದ್ದ ಇತರ ಸಾರ್ವಜನಿಕರೊಂದಿಗೆ  ಒಂದು ಖಾಸಗಿ ಅಂಬ್ಯುಲೇಸ್ ನಲ್ಲಿ  ನೆಲ್ಯಾಡಿ ಆಶ್ವಿನಿ ಆಸ್ವತ್ರಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಪಡೆದು ನಂತರ  ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೇನ್ಲಾಕ್ ಆಸ್ವತ್ರೆಯಲ್ಲಿ  ಒಳ ರೋಗಿಯಾಗಿ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 23/2022 ಕಲಂ. 279,337  ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸುನೀಲ್ ವಿ ಜೆ     ಪ್ರಾಯ: 44 ವರ್ಷ, ತಂದೆ: ಜೇಕಬ್ ಚಾಕೊ ಚಾಕೊ    ವಾಸ: ಸಮೃದ್ದಿ    ಮನೆ ,ಕೆದಿಲ  ಆಲಂಕಾರು    ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಮೈಸೂರಿನಲ್ಲಿ ಕೆಲಸ  ಮಾಡಿಕೊಂಡಿದ್ದು ದಿನಾಂಕ 11-03-2022 ರಂದು ರಾತ್ರಿ 09-30 ಗಂಟೆಗೆ ತಾಯಿಯವರು ಕರೆಮಾಡಿ ತಂದೆಯವರಾದ ಜೇಕಬ್ ಚಾಕೋ ರವರು  ಯಾವೂದೋ ವಿಷ ಪದರ್ಥ ಸೇವಿಸಿದ ಬಗ್ಗೆ ಸಂಶಯ ಇರುತ್ತದೆ ಎಂಬುದಾಗಿ ತಿಳಿಸಿದ ಬಗ್ಗೆ ಪಿರ್ಯಾದಿದರರನ್ನು ಮನೆಗೆ ಬಂರುವಂತೆ ತಿಳಿಸಿದ ಮೇರೆಗೆ ಪಿರ್ಯಾದುದಾರರು ಮೃತ ಜೇಕಬ್ ಚಾಕೋ ರವರನ್ನು ವೆನ್ಲಾಕ್  ಅಸ್ವತ್ರೆಯಲ್ಲಿ ದಾಖಾಲಿಸಿರುವ ಬಗ್ಗೆ ತಿಳಿದುಕೊಂಡು ಬಂದು ನೋಡಲಾಗಿ ತಂದೆಯವರು ಮೃತ ಪಟ್ಟಿರುವುದಾಗಿ ತಾಯಿಯಿಂದ ತಿಳಿದುಕೊಂಡಿದ್ದು ನಂತರ ಈ ಘಟನೆಯ ಬಗ್ಗೆ ಪಿರ್ಯಾದಿಯ ತಮ್ಮ  ಸುರೇಶರವರಲ್ಲಿ  ವಿಚಾರಿಸಲಾಗಿ ಸುರೇಶ್ ಎಂಬುವರು  ಸಂಜೆ 6-00 ಗಂಟೆಗೆ  ಇಚಿಲಾಂಪಾಡಿ ಚರ್ಚ್ ಗೆ ಹೋಗಿದ್ದು ಮನೆಯಲ್ಲಿ  ತಾಯಿ ಮತ್ತು ತಂದೆಯವರು ಇದ್ದು  ಸದ್ರಿ ದಿನದಂದು  ತಂದೆಯವರು ಆಲಂಕಾರು ಪೇಟೆಗೆ ಹೋದವರು  ರಾತ್ರಿ 09-30 ಗಂಟೆಗೆ ಬಂದು ತಾಯಿಯನ್ನು ಮಾತನಾಡಿಸದೆ ಮನೆಗೆ ಬಂದು ರೂಮಿಗೆ ಹೋಗಿ  ಬಾಗಿಲು ಹಾಕಿ ಇದ್ದು ನಂತರ ಪಿರ್ಯಾದಿಯ ತಾಯಿಯವರು  ಉಟಕ್ಕೆ ಕರೆದಾಗ ಮಾತನಾಡದೆ ಇರುವುದನ್ನು ತಿಳಿದು  ಕಿಟಕಿಯಿಂದ ನೋಡಿದಾಗ ಬಾಯಿಯಲ್ಲಿ  ನೊರೆ ಬರುವುದನ್ನು ನೋಡಿ  ಸುರೇಶ್ ಎಂಬುವರಿಗೆ ತಿಳಿಸಿದಂತೆ  ಕೂಡಲೇ  ಸುರೇಶ್ ಮನೆಗೆ ಬಂದು ರೂಮಿನ ಬಾಗಿಲು ಹೊಡೆದು ಕೂಡಲೇ ಕಾರಿನಲ್ಲಿ ಪುತ್ತೂರು  ಚೇತಾನ ಅಸ್ವತ್ರೆಗೆ ಕೊಂಡು ಹೋದಲ್ಲಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ  ವೆನ್ಲಾಕ್  ಅಸ್ವತ್ರೆಗೆ ಕರೆದುಕೊಂಡು ಹೋದಗ ವೈದ್ಯರು ಪರಿಕ್ಷೀಸಿ ರಾತ್ತಿ 01-00 ಗಂಟೆಗೆ ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಡಬ ಠಾಣಾ ಯು.ಡಿ.ಆರ್ ನಂ;09/2022 ಕಲಂ. 174  ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ದೀಪಾ (37), ಗಂಡ: ಕರಿಯಪ್ಪ, ವಾಸ: ಸುರಣಿಗಿ ಗ್ರಾಮ, ಲಕ್ಷ್ಮೀಶ್ವರ ತಾಲೂಕು, ಗದಗ ಜಿಲ್ಲೆ, ಎಂಬವರ ದೂರಿನಂತೆ ದಿನಾಂಕ 11.03.2022 ರಂದು ರಾತ್ರಿ 11.00 ಗಂಟೆಗೆ  ಎಂದಿನಂತೆ ವಿಪರೀತ ಮಧ್ಯಾಪಾನ ಸೇವಿಸಿ ಬಂದು ಪಿರ್ಯಾದಿದಾರರಿಗೆ ಮಕ್ಕಳನ್ನು  ಯಾಕೆ ಕರೆಸಿಲ್ಲ ಎಂದು ಅವಾಚ್ಯವಾಗಿ ಬೈದು ಮನನೊಂದುಕೊಂಡು ಮಲಗುವ ಕೊಣೆಗೆ ಹೋಗಿ ಒಳ ಚಿಲಕ ಹಾಕಿಕೊಂಡಿದ್ದು, ಮರುದಿನ ದಿನಾಂಕ 12.03.2022 ರಂದು 6.00 ಗಂಟೆಗೆ ಪಿರ್ಯಾದಿದಾರರು ಬಾಗಿಲು ಬಡೆದು ಕರೆದರು ಯಾವುದೇ ಪ್ರತ್ಯೂತ್ತರ ಬಾರದಿದ್ದಾಗ ಅಕ್ಕಪಕ್ಕದವರನ್ನು, ಮನೆಯ ಮಾಲಿಕರನ್ನು ಹಾಗೂ ಪೊಲೀಸ್ ಕರೆಸಿ ಬಾಗಿಲು ಒಡೆದು ತೆಗೆದು ನೋಡಲಾಗಿ ಕರಿಯಪ್ಪ ರವರು ಮನೆಯ ಮೇಲ್ಬಾಗದ ಸ್ಲಾಪಿನ ಕಬ್ಬಿಣದ ಕೊಂಡಿಗೆ ನೈಲಾನ್ ಸೀರೆಯಿಂದ ಕಟ್ಟಿ ಇನ್ನೊಂದು ತುದಿಯನ್ನು ತನ್ನ ಕುತ್ತಿಗೆಗೆ ಕಟ್ಟಿಕೊಂಡು ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿರುತ್ತದೆ. ಕರಿಯಪ್ಪರವರು ವಿಪರೀತ ಮದ್ಯಪಾನ ಸೇವಿಸಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಆತ್ಮಹತ್ಯ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಯು ಡಿ ಆರ್ ನಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-03-2022 12:21 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080