ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪುನೀತ್‌ ಕುಮಾರ್‌ ಪ್ರಯ 33 ವರ್ಷ, ತಂದೆ ಗಂಗಯ್ಯ ಪೂಜಾರಿ ವಾಸ:  ಮಡಂತ್ಯಾರು ಮನೆ,  ಮಾಲಾಡಿ ಗ್ರಾಮ  ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ; 11-08-2022ರಂದು 18-00 ಗಂಟೆಗೆ  ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ  ಮೋಟಾರು ಸೈಕಲ್‌ ಕೆಎ:70ಜೆ0282 ನೇದನ್ನು ಅದರ ಸವಾರ ದೀಕ್ಷಿತ್‌ ರವರು ಬೆಳ್ತಂಗಡಿ ಕಡೆಯಿಂದ ಮಡಂತ್ಯಾರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಮಡಂತ್ಯಾರು ಕಡೆಯಿಂದ  ಬೆಳ್ತಂಗಡಿ ಕಡೆಗೆ  ಗೂಡ್ಸ್‌ ರಿಕ್ಷಾ ಕೆಎ70-0351ನೇದನ್ನು ಅದರ ಚಾಲಕ  ದುಡುಕುತನದಿಂದ ಚಲಾಯಿಸಿಕೊಂಡು ಬಂದು ದೀಕ್ಷಿತ್‌ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್‌ ಕೆಎ:70ಜೆ0282ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್‌ ಸವಾರ ದೀಕ್ಷಿತ್‌ ರವರು  ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ರಕ್ತಗಾಯಗೊಂಡು  ಚಿಕಿತ್ಸೆಯ ಬಗ್ಗೆ ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ  ದಾಖಲಾಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ:  105/2022 ಕಲಂ: 279 338 ಭಾ.ದ.ಸಂ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

 • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಡಾ|| ಸಂತೋಷ್.ಎಂ, ಪ್ರಾಯ: 50 ವರ್ಷ ತಂದೆ;  ದಿ| ಸುಂದರ ರಾವ್.ಎಂ ವಾಸ; ಮುಗೆರೋಡಿ ಮನೆ, ಕಣಿಯೂರು ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದುದಾರರು ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ಸುಮಾರು 29 ವರ್ಷದಿಂದ ಸಿಂಧೂರ ಮೆಡಿಕಲ್ ಹಾಗೂ ಕ್ಲಿನಿಕ್  ಮಾಡಿಕೊಂಡಿರುವುದಾಗಿದೆ. ಪಿರ್ಯಾದುದಾರರು ದಿನಾಂಕ: 11-08-2022 ರಂದು ರಾತ್ರಿ 9.30 ಗಂಟೆ ಸುಮಾರಿಗೆ ಹಿಂಭಾಗದ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿ  ಮುಂಭಾಗದ ರೋಲಿಂಗ್ ಶೆಟರಿಗೆ ಬೀಗ ಹಾಕಿ ಫಿರ್ಯಾಧಿದಾರರು ಮನೆಗೆ ಹೋಗಿದ್ದು ದಿನಾಂಕ:12-08-2022 ರಂದು ಬೆಳಿಗ್ಗೆ 08.00 ಗಂಟೆಗೆ ಪಿರ್ಯಾದುದಾರರು  ಮೆಡಿಕಲ್ ಶಾಪಿಗೆ ಬಂದು ನೋಡಿದಾಗ ಮುಂಭಾಗದ ರೋಲಿಂಗ್ ಶೆಟರನ್ನು ಯಾವುದೋ ಆಯುಧದಿಂದ ಮೀಟಿ ಬೆಂಡ್ ಮಾಡಿರುವುದು ಕಂಡು ಬಂದಿದ್ದು, ಶೆಟರ್ ಬಾಗಿಲನ್ನು ತೆರೆದು ಒಳಗೆ ಹೋಗಿ ನೋಡಲಾಗಿ ಹಿಂಭಾಗದ ಕಿಟಕಿಯ ರಾಡನ್ನು ಬೆಂಡ್ ಮಾಡಿ ಒಳಪ್ರವೇಶಿಸಿ ಕ್ಲಿನಿಕ್ ನ ಡ್ರವರ್ ನಲ್ಲಿದ್ದ ರೂ. 4,000/- ಹಾಗೂ ಮೆಡಿಕಲ್ ನ ಡ್ರವರ್ ನಲ್ಲಿದ್ದ ರೂ. 2,500/- ನಗದು ಹಣವನ್ನು ಕಳ್ಳತನ ಮಾಡಿದ್ದು, ಅಲ್ಲದೆ ಕ್ಲಿನಿಕ್ ನಲ್ಲಿದ್ದ ಜೌಷದಿಗಳನ್ನು ಚೆಲ್ಲಾ ಪಿಲ್ಲಿ ಮಾಡಿರುತ್ತಾರೆ. ಮೆಡಿಕಲ್ ಶಾಪ್ ಹಾಗೂ ಕ್ಲಿನಿಕ್ ನಿಂದ ಕಳವಾದ ಒಟ್ಟು ಅಂದಾಜು ಮೌಲ್ಯ ರೂ. 6,500/- ಆಗಬಹುದು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 87/2022 ಕಲಂ:457 380 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

 • ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ: 09-08-2022 ರಂದು ಪ್ರಕರಣದ ನೊಂದ ಬಾಲಕಿಯು ಆಕೆಯ ಮನೆಯಲ್ಲಿ ಒಂಟಿಯಾಗಿದ್ದಾಗ ಆಕೆಯ ದೂರದ ಸಂಬಂದಿಯಾದ ಆರೋಪಿಯು ಬೆಳಿಗ್ಗೆ 10-00 ಗಂಟೆಗೆ ಮನೆಗೆ  ಬಂದು ಬಾಲಕಿಯ ಇಚ್ಚೆಗೆ ವಿರುದ್ದವಾಗಿ ಬಲತ್ಕಾರವಾಗಿ ಅತ್ಯಾಚಾರ ನಡೆಸಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 376 ಐ.ಪಿ,ಸಿ ಮತ್ತು 3 & 4 ಪೋಕ್ಸೋ ಕಾಯ್ದೆ 2012ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ; 11-08-2022 ರಂದು  ರಾತ್ರಿ ಕೊಯಿಲಾ ಬಸ್ ತಂಗುದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು  ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂಬುವುದಾಗಿ ದೂರು ಬಂದ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಮಹಿಳಾ ಪೊಲೀಸು ಉಪ-ನಿರೀಕ್ಷಕಿ  ಭಾರತಿರವರು ಸಿಬ್ಬಂದಿಗಳೊಂದಿಗೆ  ಸದರಿ ಸ್ಥಳಕ್ಕೆ ತೆರಳಿ ವಿಚಾರಿಸಲಾಗಿ ಓರ್ವ ತನ್ನ ಹೆಸರು ಮಹಮ್ಮದ್ ನವಾಜ್ ಮತ್ತು ಮಹಮ್ಮದ್ ಹನೀಸ್  ಎಂಬುದಾಗಿ ತಿಳಿಸಿದ್ದು, ಮತ್ತೆ ವಿಚಾರಿಸಲಾಗಿ ನಿಷೇದಿತ ಮಾಧಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು. ಅವರುಗಳನ್ನು ವಶಕ್ಕೆ ಪಡೆದು ದಿನಾಂಕ 12-08-2022 ರಂದು ಬೆಳಿಗ್ಗೆ ವೈದ್ಯಾಧಿಕಾರಿಯವರ ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿ ಸದ್ರಿಯವರುಗಳನ್ನು ಮಾಧಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ವೈದ್ಯರ  ದೃಢಪಡಿಸಿರುತ್ತಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 60-2022 ಕಲಂ 27(B) NDPS Act ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 1

 • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಾಸು ನಾಯ್ಕ್‌ ಪ್ರಾಯ 52 ವರ್ಷ ತಂದೆ:ದಿ||ಕೃಷ್ಣ ನಾಯ್ಕ್‌ ವಾಸ:ಉಕ್ಕುಡ ದರ್ಬೆ ಮನೆ, ವಿಟ್ಲ ಕಸಬ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರ ಅಣ್ಣ ನಾರಾಯಣ ನಾಯ್ಕ ಪ್ರಾಯ 55 ವರ್ಷ ರವರು ಬಂಟ್ವಾಳ ತಾಲೂಕು ವಿಟ್ಲ, ಅಳಿಕೆ, ಮತ್ತು ಕೇಪು  ಗ್ರಾಮದ ಸುತ್ತುಮುತ್ತಲಿನ ಊರಿನಲ್ಲಿ  ಅಡಿಕೆ ಮತ್ತು  ತೆಂಗಿನ ಕಾಯಿ ಕೀಳುವ ಕೆಲಸ ಮಾಡುತ್ತಿದ್ದ ಬಗ್ಗೆ ಪಿರ್ಯಾಧಿಗೆ ತಿಳಿದಿರುತ್ತದೆ. ಈ ದಿನ ದಿನಾಂಕ:12.08.2022 ರಂದು ಸಮಯ 15.30 ಗಂಟೆಗೆ ಪಿರ್ಯಾಧಿಯ  ಹೆಂಡತಿ ಶ್ರೀಮತಿ  ಕಾವೇರಿಯು  ದೂರವಾಣಿ ಮೂಲಕ ಭಾವ ನಾರಾಯಣ ನಾಯ್ಕವರು  ವಿಟ್ಲ ಕಸಬ ಗ್ರಾಮದ ರೂಪರಾಜರವರ ತೋಟದಲ್ಲಿ ತೆಂಗಿನ ಮರಕ್ಕೆ  ಹತ್ತಿ  ತೆಂಗಿನ ಕಾಯಿ ಕೀಳುವ  ಸಮಯ 15.00 ಗಂಟೆಗೆ ಆಕಸ್ಮಿಕವಾಗಿ ಕೈಕಾಲು ಜ್ಯಾರಿ ಆಯತಪ್ಪಿ 35 ಅಡಿ ಕೆಳಗೆ ಬಿದ್ದವರನ್ನು ರೂಪರಾಜ್‌ರವರು  ಚಿಕಿತ್ಸೆಯ ಬಗ್ಗೆ ಒಂದು ವಾಹನದಲ್ಲಿ ವಿಟ್ಲ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷೀಸಿದ   ವೈದ್ಯಾಧಿಕಾರಿಗಳು ಮೃತಪಟ್ಟಿರುತ್ತಾರೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 36/2022  ಕಲಂ 174 (3) (iv)  ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 13-08-2022 11:11 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080