ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಿಠಲ ಶೆಟ್ಟಿ, ಪ್ರಾಯ: 68 ವ‍ರ್ಷ ತಂದೆ: ದಿ|| ರಾಮಣ್ಣ ಶೆಟ್ಟಿ, , ವಾಸ: ನಡುಕೆಂಜಿಲ ಮನೆ, ಇರಾ ಅಂಚೆ ಮತ್ತು   ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ: 11-09-2022 ರಂದು ಪಿರ್ಯಾದಿದಾರರು ತನ್ನ ಪತ್ನಿ ಪ್ರೇಮರವರೊಂದಿಗೆ KA-70-3001 ನೇ ಆಟೋರಿಕ್ಷಾವನ್ನು ಬಾಡಿಗೆಗೆ ಗೊತ್ತುಪಡಿಸಿ ಬಂಟ್ವಾಳ ತಾಲೂಕು ಇರಾ ಗ್ರಾಮದ ಕೆಂಜಿಲದಿಂದ ಕಂಚಿನಡ್ಕ ಪದವಿಗೆ ಹೋಗುತ್ತಾ ಸಮಯ ಸುಮಾರು ಮಧ್ಯಾಹ್ನ 12:00 ಗಂಟೆಗೆ ಕಂಚಿನಡ್ಕಪದವು ತಲುಪುತ್ತಿದ್ದಂತೆ ಆಟೋರಿಕ್ಷಾ ಚಾಲಕ ಮೊಹಮ್ಮದ್ ಸಾದಿಕ್ ರವರು ಆಟೋರಿಕ್ಷಾವನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಆಟೋರಿಕ್ಷಾ ನಿಯಂತ್ರಣ ತಪ್ಪಿ ರಸ್ತೆಯ ಬಲ ಮಗ್ಗುಲಾಗಿ ಮಗುಚಿ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡಕೈಯ ಮಣಿಗಂಟಿಗೆ, ಬಲಕೈಯ ಮೊಣಗಂಟಿಗೆ, ಕಾಲುಗಳಿಗೆ ಗುದ್ದಿದ ಗಾಯ ನೋವಾಗಿದ್ದು, ಪಿರ್ಯಾದಿದಾರರ ಪತ್ನಿ ಪ್ರೇಮರವರ ಬಲಬದಿ ತಲೆಗೆ ಗುದ್ದಿದ ಗಾಯ, ಬಲ ಹೊಟ್ಟೆಗೆ ರಕ್ತಗಾಯ ಹಾಗೂ ಬಲ ಕಾಲಿನ ಮಣಿಗಂಟಿಗೆ ಗುದ್ದಿದ ಗಾಯ ನೋವಾದವರನ್ನು ಚಿಕಿತ್ಸೆಯ ಬಗ್ಗೆ ಬಿ.ಸಿ.ರೋಡ್ ಸೋಮಯಾಜಿ ಆಸ್ಪತ್ರೆಯಲ್ಲಿ ಪಿರ್ಯಾದಿದಾರರು ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಪಿರ್ಯಾದಿದಾರರ ಪತ್ನಿ ಪ್ರೇಮರವರು ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 106/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪಿ ಮಹಮ್ಮದ್‌ ರಫಿಕ್‌ ಪ್ರಾಯ:39 ತಂದೆ:ಪಿ ಎಸ್‌ ಅಬ್ದುಲ್‌ ರಹಿಮಾನ ವಾಸ:ಕುಂಟಿನೊಪಿನಡ್ಕ ಮನೆ ಒಳಮೊಗ್ರು ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರಾದ  ಪಿ ಮಹಮ್ಮದ್ ರಫೀಕ್‌ (39) ಎಂಬವರು ಸನ್‌ ಫ್ಲವರ್‌ ಆಯಿಲ್‌ ಸೇಲ್ಸ್‌ ಮ್ಯಾನ್‌ ಕೆಲಸ ಮಾಡಿಕೊಂಡಿದ್ದು ದಿನಾಂಕ;11.09.2022 ರಂದು ತನ್ನ  ಬಾಬ್ತು ಪಿಕಪ್‌ ವಾಹನದಲ್ಲಿ  ತನ್ನ ವ್ಯಾಪಾರ ಮಾಡುವ ಸನ್‌ ಫ್ಲವರ್‌ ಆಯಿಲ್‌ ವ್ಯಾಪಾರಕ್ಕೆಂದು ಕಡಬ ಪೇಟೆಗೆ ಬಂದು ಕಡಬದ ಅಂಗಡಿಗಳಿಗೆ ಮತ್ತು ಸುತ್ತಮುತ್ತ ಹಳ್ಳಿಗಳಲ್ಲಿರುವ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿಕೊಂಡು ನಂತರ ತನ್ನ ಮನೆಯಾದ ಒಳಮೊಗ್ರು ಎಂಬಲ್ಲಿಗೆ ಹೋಗುವರೇ ಪಿಕಪ್‌ ವಾಹನದಲ್ಲಿ ಅಲಂಕಾರು-ಕುದ್ಮಾರು ರಸ್ತೆಯಲ್ಲಿ ಹೋಗುತಿದ್ದಾಗ ಸಂಜೆ ಸುಮಾರು 07.00 ಗಂಟೆಗೆ ಅಲಂಕಾರು ಗ್ರಾಮದ ಶರವೂರು ಶಾಂತಿಮೊಗೇರು ಎಂಬಲ್ಲಿಗೆ ತಲುಪಿದಾಗ ಅಲಂಕಾರು ಕಡೆಯಿಂದ ಅದೇ ಸಮಯಕ್ಕೆ ಪಿರ್ಯಾದುದಾರರ ಎದುರು KA-21 X-0549 ನೇ ಸ್ಕೂಟರ್ ವಾಹನದಲ್ಲಿ ಸವಾರನೊಬ್ಬನು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದವನಿಗೆ ಕುದ್ಮಾರು ಕಡೆಯಿಂದ ಆಲಂಕಾರು ಕಡೆಗೆ ಬರುತ್ತಿದ್ದ KA-09 Z-0657ನೇ ರಿಡ್ಜ್ ಕಾರು ಚಾಲಕನಾದ ಆರೋಪಿತನು ಕಾರನ್ನು  ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್‌ ಸವಾರನಿಗೆ  ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಸ್ಕೂಟರ್‌ ಸವಾರನು ರಸ್ತೆಗೆ ಬಿದ್ದ ಪರಿಣಾಮ ಸ್ಕೂಟರ್‌ ಸವಾರನಾದ  ತೌಫಿಕ್‌ ಖಲಂದರ್‌ ಎಂಬಾತನಿಗೆ ಬಲಕಾಲಿಗೆ ಮತು ಎಡಕಾಲಿಗೆ ರಕ್ತಗಾಯ ಮತ್ತು ಮೂಗಿಗೆ ಮತ್ತು ತಲೆಗೆ ಹಾಗೂ ಇತರ ಕಡೆಗಳಲ್ಲಿ ಸಣ್ಣಪುಟ್ಟ ಗಾಯವಾಗಿರುತ್ತದೆ. ನಂತರ ಗಾಯಗೊಂಡ ತೌಫಿಕ್‌ ಖಲಂದರ್‌ ಎಂಬಾತನನ್ನು  108 ಅಂಬ್ಯಲೆನ್ಸ್‌ ವಾಹನದಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ವೈದ್ಯರು ತಿಳಿಸಿದಂತೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಲಾಗಿದೆ . ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 76/2022 ಕಲಂ: ಕಲಂ: 279.337  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ:  ದಿನಾಂಕ 12.09.2022 ರಂದು ಸಮಯ.16:40 ಗಂಟೆಗೆ ಸುಳ್ಯ ಕಸಬಾ ಗ್ರಾಮ ಕೆ,ವಿ,ಜಿ ಕಾಲೇಜ್ ಕಡೆಯಿಂದ ವಿವೇಕಾನಂದ ಸರ್ಕಲ್ ಕಡೆಗೆ ಆರೋಪಿಯು ನೊಂದಾಣಿ ಸಂಖ್ಯೆ ಫಲಕ ಇಲ್ಲದ ಬಜಾಜ್ ಕಂಪನಿಯ ಕಪ್ಪು  ಬಣ್ಣದ ಮೋಟಾರ್ ಸೈಕಲ್ ನಲ್ಲಿ ಸುಳ್ಯ ತಾಲೂಕು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವುಂಟಾಗುವ ರೀತಿಯಲ್ಲಿ ಮೋಟಾರ್ ಸೈಕಲ್ ನ್ನು ವೀಲಿಂಗ್ ಮಾಡಿಕೊಂಡು ಬರುತ್ತಿರುವುದನ್ನು ಸುಳ್ಯ ಪೊಲೀಸ್‌ ಠಾಣಾ ಸಿಬ್ಬಂದಿ ಸುನಿಲ್‌ ಎಂಬವರು ಮೋಟಾರ್ ಸೈಕಲ್ ನ್ನು ನಿಲ್ಲಿಸಿ ವಿಚಾರಿಸಲಾಗಿ ಆರೋಪಿಯ ಹೆಸರು ಕೇಳಲಾಗಿ ನವೀನ್ (22) ತಂದೆ: ಆನಂದ ವಾಸ: ಚಂಬು ಮನೆ ಮತ್ತು ಗ್ರಾಮ ಮಡಿಕೇರಿ ತಾಲೂಕು ಕೊಡಗು ಜಿಲ್ಲೆ ಎಂಬುದಾಗಿ ತಿಳಿಸಿದ್ದು ನಂತರ ಮೋಟಾರ್ ಸೈಕಲ್ ನ್ನು ಪರೀಶಿಲಿಸಲಾಗಿ ಮೋಟಾರ್ ಸೈಕಲ್ ಗೆ ಸಂಬಂಧಿಸಿದಂತೆ ಯಾವುದೇ ದಾಖಲಾತಿಗಳು ಇರುವುದಿಲ್ಲ ಮತ್ತು ನೊಂದಾಣಿ ಸಂಖ್ಯೆ ಫಲಕದ ಬಗ್ಗೆ ಕೇಳಲಾಗಿ ನೆನಪಿಲವೆಂದು ತಿಳಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ: 101/2022 ಕಲಂ: 279.336 ಐಪಿಸಿ & 189 ಐಎಂವಿ ಆ್ಯಕ್ಟ , 230 ಕೆವಿ ರೂಲ್ಸ1988(1) ಸಿಎಂವಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: 1

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚಿದಾನಂದ ಪ್ರಾಯ:45ವರ್ಷ ತಂದೆ:ದೇವಪ್ಪ ಪೂಜಾರಿ ವಾಸ: ಬೆಳಾಲು ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ತಂದೆ ದೇವಪ್ಪ ಪೂಜಾರಿ, ಪ್ರಾಯ: 74 ವರ್ಷ ಎಂಬವರು: ದಿನಾಂಕ: 10.09.2022 ರಂದು ಬೆಳಿಗ್ಗೆ ಎದ್ದು  ತನ್ನ ಮನೆಯಾದ ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಮುಂಡ್ರೊಟ್ಟು ಎಂಬಲ್ಲಿ ಮನೆಯ ಜಗಲಿಯಲ್ಲಿ ಕುಳಿತುಕೊಂಡಿದ್ದವರು ಬೆಳಿಗ್ಗೆ 6.30 ಗಂಟೆಯ ಹೊತ್ತಿಗೆ ಮನೆಯ ಹತ್ತಿರ ಇರುವ ತೋಟಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಸಮಯ ಸುಮಾರು 8.00 ಗಂಟೆಯವರೆಗೂ ಮನೆಗೆ ಬಾರದೇ ಇದ್ದು,  ಪಿರ್ಯಾದಿದಾರರು ಮತ್ತು ಮನೆಯವರು ತೋಟಕ್ಕೆಂದು ಹೋದ ದೇವಪ್ಪ ಪೂಜಾರಿಯವರನ್ನು ಹುಡುಕಿಕೊಂಡು ತೋಟಕ್ಕೆ ಹೋದಾಗ ತೋಟದಲ್ಲಿ ಕಾಣದೇ ಇದ್ದು, ಬಳಿಕ ನೆರೆಕರೆಯಲ್ಲಿ ಹುಡುಕಲಾಗಿ ಪತ್ತೆಯಾಗಿರದೇ ಇದ್ದು, ಕಾಣೆಯಾದ ದೇವಪ್ಪ ಪೂಜಾರಿಯವರು ಪ್ರಾಯಸ್ಥರಾಗಿರುವುದರಿಂದ ಅವರಿಗೆ ಪ್ರಸ್ತುತ ಸ್ವಲ್ಪ ಮರೆವು ಶಕ್ತಿ ಜಾಸ್ತಿ ಆಗಿದ್ದು, ದಾರಿ ತಪ್ಪಿ ಅವರು ಎಲ್ಲಿಗಾದರೂ ಹೋಗಿರಬಹುದೆಂದು ಭಾವಿಸಿ ನೆರೆಕರೆಯಲ್ಲಿ ಸಂಬಂದಿಕರ ಮನೆಗೆ ಹೋಗಿ ವಾಪಾಸು ಬರಬಹುದೆಂದು ಭಾವಿಸಿ ದೂರು ನೀಡದೇ ಇದ್ದು, ಆದರೆ ಪಿರ್ಯಾದಿದಾರರ  ತಂದೆಯವರು ನೆರೆಕೆರೆಯ ಮನೆಗೂ ಹೋಗದೇ ಸಂಬಂದಿಕರ ಮನೆಗೂ ಹೋಗದೇ ಈ ವರೆಗೆ ಮನೆಗೆ ಮರಳಿ ಬಾರದೇ ಇದ್ದದುದರಿಂದ ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 63/2022 ಕಲಂ:ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ವೇಣೂರು ಪೊಲೀಸ್ ಠಾಣೆ : ದಿನಾಂಕ: 12.09.2022 ರಂದು ವೇಣೂರು ಪೊಲೀಸ್  ಠಾಣೆಯಲ್ಲಿ ಅ.ಕ್ರ: 54/2022 ಕಲಂ: 376,506   ಐಪಿಸಿ  ಮತ್ತು :4,6 ಪೋಕ್ಸೋ ಕಾಯಿದೆ 2012 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 13-09-2022 10:31 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080