ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: ೦2

 

ಪುಂಜಾಲಕಟ್ಟೆ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಸೀತಾರಾಮ , ಪ್ರಾಯ 42ವರ್ಷ, ತಂದೆ: ಪೂವಪ್ಪ ಪೂಜಾರಿ   ವಾಸ: ಜನತಾ ಕಾಲನಿ ಕುದ್ರಡ್ಕ  ಮನೆ, ತಣ್ಣೀರುಪಂಥ ಗ್ರಾಮ,  ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 11.12.2022 ರಂದು ಎಂದಿನಂತೆ ಬೆಳಿಗ್ಗೆ ತನ್ನ ಬಾಬ್ತು ದ್ವಿಚಕ್ರ ವಾಹನ ವಾಹನ KA21X9017 ನೇದರಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದವರು ವಾಪಾಸು ಮನೆ ಕಡೆಗೆ ಬರುತ್ತಿರುವಾಗ ಸಂಜೆ 7:00 ಗಂಟೆಗೆ ಬೆಳ್ತಂಗಡಿ ತಾಲೂಕು, ತಣ್ಣೀರುಪಂಥ ಗ್ರಾಮದ ಅಳಕೆ ಮಸೀದಿ ಮುಂಭಾಗ ತಲುಪಿದಾಗ ಎದುರಿನಿಂದ ಅಂದರೆ ಮಡಂತ್ಯಾರು ಕಡೆಯಿಂದ ಮಾರುತಿ ಓಮ್ನಿ ಕಾರು KA19MA1714 ನೇದನ್ನು ಅದರ ಚಾಲಕ ಫೈಸಲ್‌ ಎಂಬಾತನು ಕಾರನ್ನು ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಮೇಶ್‌  ಎಂಬವರು  ರಸ್ತೆಯ ತೀರಾ ಎಡಭಾಗದಲ್ಲಿ  ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಮೇಶ್‌ ರವರ ಬಲಕಾಲಿಗೆ ಮೂಳೆ ಮುರಿತದ ಗಾಯ ಹಾಗೂ  ಮುಖದ ದವಡೆಗೆ ರಕ್ತಗಾಯ ಹಾಗೂ ದೇಹದ ಇತರ ಭಾಗಗಳಿಗೆ ತರಚಿದ ಗಾಯವಾಗಿದ್ದು, ಗಾಯಾಳು ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 96/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಮನೋಜ್ಎ ಜೆ  (38)  ತಂದೆ ;  ಎ. ಡಿ . ಯೋಹನ್ನನ್ ವಾಸ:ಕಾರಗುಡ್ಡೆ ಮನೆ, ಅರಸಿನಮಕ್ಕಿ ,ಹತ್ಯಡ್ಕ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ  ದಿನಾಂಕ 11-12-2022  ರಂದು ಸಂಜೆ ಸುಮಾರು 5:30  ಗಂಟೆಗೆ ಬೆಳ್ತಂಗಡಿ ತಾಲೂಕು ಕುತ್ಲೂರು   ಗ್ರಾಮದ  ಕುತ್ಲೂರು ಚರ್ಚ್  ಬಳಿ   ಕಾರ್ಕಳ – ಗುರುವಾಯನಕೆರೆ  ರಾಜ್ಯ  ಹೆದ್ದಾರಿಯಲ್ಲಿ  GAMA ವಾಹನದ  ನಂಬ್ರ  KA 21  A 8713  ನೇದನ್ನು ಅದರ ಚಾಲಕ  ಶಮಿತ್  ಚಂದ್ರ ಎಂಬವರು  ನಾರಾವಿ  ಕಡೆಯಿಂದ   ಗುರುವಾಯನಕೆರೆ  ಕಡೆಗೆ  ಅಜಾಗರುಕತೆ ಮತ್ತು ನಿರ್ಲಕ್ಷತನದಿಂದ  ಚಲಾಯಿಸಿಕೊಂಡು  ಬಂದು ಮುಂದುಗಡೆ  ಹೋಗುತ್ತಿದ್ದ  ಪಿರ್ಯಾದಿದಾರರ  ಬಾಬ್ತು  ಕೆ ಎ 21 ಎನ್ 4723 ನೇ  ಕಾರಿಗೆ  ಡಿಕ್ಕಿ ಹೊಡೆಸಿದ   ಪರಿಣಾಮ ಪಿರ್ಯಾದಿದಾರರ  ಕಾರು  ಕಣಿವೆಗೆ  ಬಿದ್ದು  ಸದ್ರಿ  ಕಾರಿನ  ಹಿಂಭಾಗ  ಮತ್ತು  ಮುಂಭಾಗ  ಸಂಪೂರ್ಣ ಜಖಂಗೊಂಡಿರುತ್ತದೆ. ಅಲ್ಲದೇ  ಅಪಘಾತ ಉಂಟುಮಾಡಿದ   ಕೆ ಎ  21 ಎ 8713 ನೆ   ವಾಹನದ  ಮುಂಭಾಗ  ಕೂಡ  ಜಖಂ ಉಂಟಾಗಿರುತ್ತದೆ. ಈ ಬಗ್ಗೆ ವೇಣೂರು ಪೊಲೀಸ್  ಠಾಣಾ ಅ.ಕ್ರ: 77/2022 ಕಲಂ: 279 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು  ಪ್ರಕರಣ: ೦2

 

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕೆ ಜಮಾಲುದ್ದೀನ್ (34)ತಂದೆ:ಉಸ್ಮಾನ್ ಬ್ಯಾರಿ ವಾಸ:ಕುದುರು ಮನೆ ತಣ್ಣೀರುಪಂತ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ, ದಿನನಿತ್ಯದ ಓಡಾಟಕ್ಕೆಂದು ಅವರ ಭಾವ ಯೂಸುಫ್ ಮಹಮ್ಮದ್ ಅನೀಸ್ ಎಂಬವರ ಮಾಲೀಕತ್ವದ KA-19-HK-5793 ನೇ ನೊಂದಣಿ ಸಂಖ್ಯೆಯ SUZUKI ACCESS 125 ಸ್ಕೂಟರನ್ನು ಉಪಯೋಗಿಸುತ್ತಿದ್ದು ದಿನಾಂಕ:09.12.2022 ರಂದು ಮಧ್ಯಾಹ್ನ 13-30 ಗಂಟೆಗೆ ಸದ್ರಿ ಸ್ಕೂಟರನ್ನು ಫಿರ್ಯಾಧಿದಾರರ ಅಂಗಡಿ ಇರುವ ಪೃಥ್ವಿ ಕಾಂಪ್ಲೆಕ್ಸ್ ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಅಂಗಡಿಗೆ ಹೋಗಿ 20-30 ಗಂಟೆಗೆ ಅಂಗಡಿ ಬಂದ್ ಮಾಡಿ ಸ್ಕೂಟರ್ ನಿಲ್ಲಿಸಿದಲ್ಲಿಗೆ ಬಂದು ನೋಡಿದಾಗ ಸ್ಕೂಟರ್ ಸ್ಥಳದಲ್ಲಿಲ್ಲದೇ ಕಾಣೆಯಾಗಿ ಈವರೆಗೆ ಪತ್ತೆಗೆ ಪ್ರಯತ್ನಿಸಿದಲ್ಲಿ ಪತ್ತೆಯಾಗಿರುವುದಿಲ್ಲ. ದಿನಾಂಕ:09.12.2022 ರಂದು 13-30 ಗಂಟೆಯಿಂದ 20-30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳುವಾದ ಸ್ಕೂಟರಿನ ಅಂದಾಜು ಮೌಲ್ಯ ರೂ 85,000/- ಆಗಬಹುದು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ   ಅ.ಕ್ರ 128/2022 ಕಲಂ:379  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಹ್ಮಣ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಗೋಪಾಲಕೃಷ್ಣ ಕೆ, ಪ್ರಾಯ: 53 ವರ್ಷ, ತಂದೆ: ತಿಮ್ಮಪ್ಪ ಗೌಡ, ವಾಸ: ಕಾರ್ಯದರ್ಶಿ, ಕಲ್ಮಡ್ಕ ಗ್ರಾಮ ಪಂಚಾಯತ್, ಕಕ್ವೆಮನೆ, ಅಲಂಕಾರು ಗ್ರಾಮ, ಕಡಬ ತಾಲೂಕು   ಎಂಬವರ ದೂರಿನಂತೆ, ಕಲ್ಮಡ್ಕ ಗ್ರಾಮ ಪಂಚಾಯತ್ ನ ಕಾರ್ಯದರ್ಶಿ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಸದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಳ್ಯ ತಾಲೂಕು ಪಂಬೆತ್ತಾಡಿ ಗ್ರಾಮದ ಮಂಚಿಕಟ್ಟೆ ಕಾಲೋನಿಯ ಗೋಳಿಕಟ್ಟೆ-ಪಂಜ ದೇವಸ್ಥಾನಕ್ಕೆ ಹೋಗುವ ರಸ್ತೆ ಬದಿಯಲ್ಲಿ ಅಂಗಾರು ಇವರ ಮನೆ ಸಮೀಪದಲ್ಲಿ ಅಳವಡಿಸಲಾಗಿದ್ದ ಸೋಲಾರ್ ದಾರಿದೀಪದ ಬ್ಯಾಟರಿಯು ದಿನಾಂಕ: 10-12-2022 ರಂದು ರಾತ್ರಿ ಉರಿಯದ ಕಾರಣ ದಿನಾಂಕ: 11-12-2022 ರಂದು ಪರಿಶೀಲಿಸಿದಾಗ ಬ್ಯಾಟರಿ ಕಳುವಾಗಿರುವುದು ಕಂಡು ಬಂದಿದ್ದು, ಈ ಸೋಲಾರ್ ದಾರಿದೀಪವು ಸೆಲ್ಕೋ ಕಂಪನಿಯವರು ಅಳವಡಿಸಿದ್ದು, ಅದರ ಮೌಲ್ಯವು 9800/- ಆಗಿರುತ್ತದೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣಾ ಅ.ಕ್ರ ನಂಬ್ರ  : 111/2022 ಕಲಂ   , 379 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಕೊಲೆ ಪ್ರಕರಣ: ೦1

 

ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಚಂದ್ರಹಾಸ, ಪ್ರಾಯ: 40 ವರ್ಷ,  ವಾಸ: ಸೊರಕೆ ಮನೆ, ಕನ್ಯಾಡಿ-1 ಗ್ರಾಮ,  ಬೆಳ್ತಂಗಡಿ ತಾಲೂಕು ರವರು ದಿನಾಂಕ: 12-12-2022 ರಂದು 17-00 ಗಂಟೆಗೆ ತನ್ನ ಬಾಬ್ತು ರಬ್ಬರ್ ತೋಟದಲ್ಲಿ  ಮೇಯಲು ಕಟ್ಟಿದ್ದ ದನಗಳನ್ನು ತರಲೆಂದು ಹೋದಾಗ ಕೊಳೆತ ವಾಸನೆಯು ಬಂದಿದ್ದು, ಹುಡುಕಾಡಲಾಗಿ ಅವರ ಬಾಬ್ತು ಜಾಗದ ಅಗಳಿನ ಕಣಿಯಲ್ಲಿ ಕಾಟು ಮರದ  ಕಟ್ಟಿಗೆಯಲ್ಲಿ  ನೊಣಗಳು ಹಾರಾಡುತ್ತಿದ್ದು, ನೋಡಲಾಗಿ  ಮನುಷ್ಯನ ಮೃತ ದೇಹವು ಕೊಳೆತ ಸ್ಥಿತಿಯಲ್ಲಿದ್ದು, ಗಮನಿಸಿದಾಗ ಮನುಷ್ಯನ ಮೃತದೇಹವನ್ನು ಗುರುತು ಸಿಗದಂತೆ  ಸುಟ್ಟು  ಬಳಿಕ ಕಣಿಗೆ ಹಾಕಿ ಸ್ವಲ್ಪ ಮಣ್ಣನ್ನು ಮುಚ್ಚಿ ಅದರ  ಮೇಲೆ ಕಾಟು ಮರದ ಕಟ್ಟಿಗೆಯನ್ನು ಮುಚ್ಚಿರುವುದು ಕಂಡು ಬಂದಿದ್ದು, ಇದೇ ಜಾಗಕ್ಕೆ  ದಿನಾಂಕ:04-12-2022 ರಂದು ಪಿರ್ಯಾದಿದಾರರು ಬಂದಿದ್ದು, ಆಗ ಸದ್ರಿ ಜಾಗದಲ್ಲಿ ಏನನ್ನೂ ನೋಡದೇ ಇದ್ದು, ಯಾರೋ ಅಪರಿಚಿತರು, ಯಾರನ್ನೋ ಕೊಲೆ ಮಾಡಿ ಮೃತ ದೇಹವನ್ನು ಸ್ವಲ್ಪ ಸುಟ್ಟು ಬಳಿಕ ದಿನಾಂಕ:04-12-2022 ರಿಂದ ದಿನಾಂಕ: 12-12-2022ರಂದು 17-00  ಗಂಟೆಯ ಮದ್ಯದ ಅವಧಿಯಲ್ಲಿ ಪಿರ್ಯಾದಿದಾರರ ರಬ್ಬರ್ ತೋಟದ ಅಗಲಿನ ಕಣಿಗೆ ಹಾಕಿ ಸ್ವಲ್ಪ ಮಣ್ಣನ್ನು ಮುಚ್ಚಿ ಅದರ ಮೇಲೆ ಕಾಟು ಮರದ  ಕಟ್ಟಿಗೆಯನ್ನು ಮುಚ್ಚಿರುವುದಾಗಿದೆ.  ಕೊಲೆ ಮಾಡಿದ  ವ್ಯಕ್ತಿ ಹಾಗೂ ಮೃತದೇಹವು ಯಾರದ್ದೆಂದು ತಿಳಿದು ಬಂದಿರುವುದಿಲ್ಲ, ಕೊಳೆತ ಮೃತ ದೇಹದ  ಬಳಿ ಹೆಂಗಸರ  ಕಾಲುಂಗುರ ಬಿದ್ದುಕೊಂಡಿರುವುದರಿಂದ  ಹೆಂಗಸರ ಮೃತ ದೇಹವೆಂದು ಅನುಮಾನ ವಿದ್ದು, ಕೊಲೆ ಮಾಡಿದ ನಂತರ ಕೊಲೆಯಾದ ವ್ಯಕ್ತಿಯ ಗುರುತನ್ನು ಮರೆ ಮಾಚುವಂತೆ ಸುಟ್ಟ ವ್ಯಕ್ತಿಗಳ  ಮೇಲೆ ಕಾನೂನು  ಕ್ರಮ ಕೈಗೊಳ್ಳುವಂತೆ  ದೂರು ನೀಡಿದ್ದು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ: 73/2022 ಕಲಂ: 302,201 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 13-12-2022 12:59 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080