ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

  • ಕಡಬ ಪೊಲೀಸ್ ಠಾಣೆ: ದಿನಾಂಕ:13.02.2023 ರಂದು ಸಮಯ ಸುಮಾರು 12.30 ಗಂಟೆಗೆ ಕಡಬ ತಾಲೂಕು ಐತ್ತೂರು ಗ್ರಾಮದ ಬ್ರಾಂತಿಕಟ್ಟೆ ಎಂಬಲ್ಲಿ ಮರ್ಧಾಳದ ಕಡೆಯಿಂದ  KA-54 M 3453ನೇ KIA ಕಾರು ವಾಹನದ ಚಾಲಕನಾದ ಆರೋಪಿತನು ವಾಹನವೊಂದನ್ನು ಓವರ್‌ ಟೇಕ್‌ ಮಾಡಿಕೊಂಡು ರಸ್ತೆಯ ತೀರಾ ಬಲಬದಿಗೆ ತೀರಾ ಅಜಾಗರೂಕತೆ ಮತ್ತು ತೀರ್ವನಿರ್ಲಕ್ಷ್ಯತನದಿಂದ ಕಾರನ್ನು ಚಲಾಯಿಸಿಕೊಂಡು ಬಂದು KA-19 F-3158ನೇ ಕೆ.ಎಸ್.ಆರ್‌.ಟಿ.ಸಿ ಬಸ್ಸಿಗೆ ಡಿಕ್ಕಿ ಯಾದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಅಪಘಾತವಾದ ಕಾರಿನಲ್ಲಿ 3 ಜನ ಮಹಿಳೆಯರು ಮತ್ತು 3 ಜನ ಗಂಡಸರು ಹಾಗೂ 1 ಚಿಕ್ಕ ಹುಡುಗ ಇದ್ದು ಎಲ್ಲರಿಗೂ ರಕ್ತಗಾಯವಾಗಿದ್ದು ಎಲ್ಲಾ ಗಾಯಾಳುಗಳನ್ನು 108 ಅಂಬ್ಯುಲೆನ್ಸ್ ವಾಹನದಲ್ಲಿ ಕಡಬ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿರುತ್ತದೆ, ಹಾಗೂ ಬಸ್ ಚಾಲಕ ಮತ್ತು ಬಸ್ ನಲ್ಲಿದ್ದ 1 ಗಂಡಸು ಮತ್ತು 2 ಜನ ಹೆಂಗಸರಿಗೆ ಸಣ್ಣಪುಟ್ಟ ಗಾಯವಾದುದರಿಂದ ಅವರುಗಳನ್ನು ಸಹ 108 ಅಂಬ್ಯುಲೆನ್ಸ್ ವಾಹನದಲ್ಲಿ ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ. ಬಳಿಕ ಕಾರಿನಲ್ಲಿದ್ದ ಎಲ್ಲಾ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಡಬ ಆಸ್ಪತ್ರೆಯಿಂದ ಪುತ್ತೂರು ಸರ್ಕಾರಿ ಆಸ್ಪತ್ರೆಗೆ 108 ಅಂಬ್ಯುಲೆನ್ಸ್ ವಾಹನದಲ್ಲಿ ಕರೆದುಕೊಂಡು ಹೋಗಿರುತ್ತಾರೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಕಾರಿನಲ್ಲಿದ್ದ ಚಿಕ್ಕ ಹುಡುಗ ಪೃಥ್ವಿ (12) ಎಂಬಾತನು ಮೃತಪಟ್ಟಿರುವುದಾಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸು ಠಾಣೆಯಲ್ಲಿ ಅ.ಕ್ರ:11/2023.ಕಲಂ:279.337.338.304(A) ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿದೆ.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಎಂ ಹನೀಫ್ ಪ್ರಾಯ: 45 ವರ್ಷ ತಂದೆ: ಅಹಮ್ಮದ್ ಕುಂಞ        ವಾಸ: ಪೆರಾಬೆ ಮನೆ ಪೆರಾಬೆ ಗ್ರಾಮ ಕಡಬ ಎಂಬವರ ದೂರಿನಂತೆ ದಿನಾಂಕ 13-02-2023 ರಂದು ಪಿರ್ಯಾದುದಾರರ ಮಗ ಮುಹಮ್ಮದ್ ಅಜ್ಮಾಲ್ ಎಂಬಾತನು ಆತನು ಕೆಲಸ ಮಾಡುತ್ತಿರುವ ಕಡಬದ ಕಳಾರ ಎಂಬಲ್ಲಿರುವ ಸರ್ವಿಸ್ ಸ್ಟೇಷನ್ ಗೆ ಕೆಲಸಕ್ಕಾಗಿ ಆತನ ಬಾಬ್ತು KA 21 X 8786 ನೇ ಬುಲೇಟ್ ಮೋಟಾರು ಸೈಕಲ್ ನಲ್ಲಿ ಬೆಳಿಗ್ಗೆ 8-15 ಗಂಟೆ ಸಮಯಕ್ಕೆ ಮನೆಯಿಂದ ಹೋಗಿರುತ್ತಾನೆ ಬಳಿಕ ಬೆಳಗ್ಗೆ 8.30 ಗಂಟೆ ಸಮಯಕ್ಕೆ ಪಿರ್ಯಾದುದಾರರಿಗೆ ಸಿದ್ದಿಕ್ ಎಂಬಾತನು ದೂರವಾಣಿ ಕರೆಮಾಡಿ ಪಿರ್ಯಾದುದಾರರ ಮಗನಿಗೆ ಕಡಬ ತಾಲೂಕು ಕುಂತೂರು ಗ್ರಾಮದ ಅಣ್ಣಡ್ಕ ಎಂಬಲ್ಲಿ ಅಪಘಾತವಾದ ಬಗ್ಗೆ ಮಾಹಿತಿ ತಿಳಿಸಿದ್ದು  ಕೂಡಲೇ ಪಿರ್ಯಾದುದಾರರು  ಅಪಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ ಮುಹಮ್ಮದ್‌ ಅಜ್ಮಾಲ್‌ ಎಂಬಾತನಿಗೆ ತಲೆ, ಕೈ ಮತ್ತು ಕಾಲುಗಳಿಗೆ ರಕ್ತಗಾಯವಾಗಿರುತ್ತದೆ. ಸ್ಥಳದಲ್ಲಿ ಪರಿಚಯದ ಇಸ್ಮಾಯಿಲ್ ಮತ್ತು ಮಹಮ್ಮದ್ ಸತ್ತಾರ್ ಎಂಬವರು ಉಪಚರಿಸಿರುತ್ತಾರೆ, ನಂತರ ಅಪಘಾತವನ್ನುಂಟು ಮಾಡಿದ ವಾಹನವನ್ನು ನೋಡಲಾಗಿ ಆಲಂಕಾರು ಭಾರತಿ ಖಾಸಾಗಿ ಶಾಲೆಯ KA 21 C 2128 ನೇ ಬಸ್ಸು ಆಗಿರುತ್ತದೆ. ಅಪಘಾತವನ್ನುಂಟು ಮಾಡಿದ ಬಸ್ಸಿನ ಚಾಲಕ ಸ್ಥಳದಲ್ಲಿದ್ದು ನಾನು ಆತನ ಹೆಸರು ಶಿವಪ್ಪಗೌಡ ಎಂಬುದಾಗಿ ತಿಳಿದಿರುತ್ತದೆ ಬಳಿಕ ಪಿರ್ಯಾದುದಾರರು  ಮತ್ತು ಅಲ್ಲಿ ಸೇರಿದವರು ಒಂದು ಖಾಸಾಗಿ ಕಾರಿನಲ್ಲಿ ಗಾಯಗೊಂಡ ನನ್ನ ಮಗನನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ನನ್ನ ಮಗನನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಬಳಿಕ ಪಿರ್ಯಾದುದಾರರು  ಅಪಘಾತದ ಬಗ್ಗೆ ಮುಹಮ್ಮದ್ ಅಜ್ಮಾಲ್ ಎಂಬಾತನಲ್ಲಿ ಕುಲಂಕಷವಾಗಿ ವಿಚಾರಿಸಿಕೊಂಡಲ್ಲಿ ಪೆರಾಬೆ ಕಡೆಯಿಂದ ಮೋಟಾರು ಸೈಕಲ್‌ನಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ ಅಂದರೆ ಕಡಬ ಕಡೆಯಿಂದ ಬರುತ್ತಿದ್ದ ಶಾಲಾ ವಾಹನದ ಬಸ್ಸಿನ ಚಾಲಕನಾದ ಆರೋಪಿತನು ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಬಸ್ಸನ್ನು ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಓಮ್ಮೆಲೇ ಬಸ್ಸನ್ನು ಬಲ ಬದಿಗೆ ತಿರುಗಿಸಿದ ಕಾರಣ ಪಿರ್ಯಾದುದಾರರ ಮಗ ಚಲಾಯಿಸಿಕೊಂಡು ಹೋಗುತ್ತಿದ್ದ  ಮೋಟಾರ್‌ ಸೈಕಲ್‌ಗೆ  ಡಿಕ್ಕಿಯಾಗಿ ಅಪಘಾತವಾಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 12/2023 ಕಲಂ: ಕಲಂ:279.337.ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸಾಧಿಕ್ ಪ್ರಾಯ:50 ವರ್ಷತಂದೆ: ದಿ|| ಅಬ್ದುಲ್ ಖಾದರ್ವಾಸ : ಬಡಕಟ್ಟೆ ಮನೆ, ಬಿ ಕಸಬಾ ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 12-02-2023 ರಂದು ಸಮಯ ಸುಮಾರು ಬೆಳಿಗ್ಗೆ 10:45 ಗಂಟೆಗೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಪೊನ್ನೋಡಿ ಎಂಬಲ್ಲಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರು ಕಡೆಯಿಂದ ಬಿ ಸಿ ರೋಡು ಕಡೆಗೆ KA-25-AB-5721 ನೇ ಟಾಟಾ ಇಂಟ್ರ ವಾಹನವೊಂದನ್ನು ಅದರ ಚಾಲಕ ದೂರದಿಂದ ನೋಡಿದರು ನಿದಾನಿಸದೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಪಾದಚಾರಿ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಗಾಯ ನೋವುಗಳಾದವನ್ನು ಪಿರ್ಯಾಧಿದಾರರು ಮತ್ತು ಅಪಘಾತಪಡಿಸಿದ ವಾಹನ ಚಾಲಕ ಅಪಘಾತಪಡಿಸಿದ ವಾಹನದಲ್ಲೇ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಆಂಬುಲೆನ್ಸ್ ಒಂದರಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 29/2023 ಕಲಂ: 279, 337 ಐಪಿಸಿ , ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ  ಸಂಚಾರ  ಪೊಲೀಸ್ ಠಾಣೆ: ದಿನಾಂಕ 12.02.2023 ರಂದು ಸಮಯ ಸುಮಾರು 12.15 ಗಂಟೆಗೆ ಕೆಎ 21 EC 3466 ನೇ ಮೋಟಾರು ಸೈಕಲನ್ನು ಅದರ ಸವಾರ ಹಿತೇಶ ಎಂಬವರು ಸಹಸವಾರಳು ಶಾಂತಲಾ ರವರನ್ನು ಕುಳ್ಳಿರಿಸಿಕೊಂಡು ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಬೈಪಾಡಿ ಬಳಿ ಇರುವ ಬೋಲೊಡಿ ಖಂಡಿಗ ಸೇತುವೆ ಬಳಿ ತಲುಪುತ್ತಿದ್ದಂತೆ ಮೋಟಾರ ಸೈಕಲ್ ಸವಾರನ ನಿಯಂತ್ರಣ ತಪ್ಪಿ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿರುತ್ತಾರೆ. ಪರಿಣಾಮ ಶಾಂತಲಾ ರವರಿಗೆ ಎಡಹಲ್ಲಿಗೆ ರಕ್ತ ಗಾಯ, ಎರಡು ಕೈಗಳಿಗೆ ತರಚಿದ ಗಾಯ ಹಾಗೂ ಬಲ ಕಣ್ಣಿನ ಮೇಲ್ಬಾಗಕ್ಕೆ ಗುದ್ದಿದ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಮಂಗಳೂರಿನ ಫಾದರ್ ಮುಲ್ಲಾರ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ  ಸಂಚಾರ  ಪೊಲೀಸ್ ಠಾಣೆಯಲ್ಲಿ ಅ.ಕ್ರ:13/2023 ಕಲಂ 279, 337,ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 3

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪ್ರಕರಣದ ದೂರುದಾರರಾದ  ತಾರನಾಥ ಸಾಲಿಯಾನ್ ಪಿ ರವರು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಾರ್ಯ ನಿರ್ವಹಿಸುತ್ತಿದ್ದು, ನಿರ್ವಹಣಾ ಅನುದಾನದಡಿ ಬಂಟ್ವಾಳ ತಾಲೂಕು ಸರಪಾಡಿ ಗ್ರಾಮದ ಪೆರಿಯಪಾದೆ ಅರಸೋಳಿಗೆ ಪ .ಪಂಗಡ ಕಾಲೋನಿ ರಸ್ತೆ ದುರಸ್ಥಿ ಕಾರ್ಯದಲ್ಲಿ ಈ ಕಾಮಗಾರಿ ಗುತ್ತಿಗೆಯನ್ನು ಪಡೆದಿದ್ದ ಗುತ್ತಿಗೆದಾರರು 07.02.2023 ರಂದು ಪ್ಯಾಚ್ ವರ್ಕ್  ಮಾಡಿ ಡಾಂಬರಿಕರಣ ನಿಲ್ಲಿಸಿದ್ದು, ದಿನಾಂಕ 09.02.2023 ರಂದು ಸಂಜೆ 05.00 ಸುಮಾರಿಗೆ ಆರೋಪಿ ಪದ್ಮನಾಭ ಸಾಮಂತ್ ಎಂಬುವವರು ಸದ್ರಿ ಕಾಮಕಾರಿಯು ಕಳೆಪೆ ಗುಣಮಟ್ಟದಾಗಿದೆ ಎಂದು ಇಲಾಖೆಯ ಗಮನಕ್ಕೆ ತರದೇ ಏಕಾಏಕಿ  ಅಕ್ರಮವಾಗಿ ಕೈ ಯಿಂದ ಅಗೆದು ವಿಡಿಯೋ ಚಿತ್ರಿಕರಣ ಮಾಡಿ ಸಾಮಾಜಿಕ ಜಾಲತಾಣಾದಲ್ಲಿ ಹರಡಿರುವುದಲ್ಲದೇ ಡಾಮರನ್ನು ಕೈಯಿಂದ ಅಗೆದು  ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಉಂಟುಮಾಡಿರುವುದಾಗಿ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 10/2023 ಕಲಂ :431,427 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ; 13-02-2023 ರಂದು ಸಮಯ 16.00 ಗಂಟೆಗೆ ಬಂಟ್ವಾಳ ಕುರಿಯಾಳ  ಗ್ರಾಮದ ದುರ್ಗಾನಗರ ಎಂಬಲ್ಲಿ ಸಾರ್ವಜನಿಕ ಬಸು ತಂಗುದಾಣದ ಬಳಿ ಯಾವುದೇ ಪರವಾನಿಗೆ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ 1] ನೋಣಯ್ಯ ಪೂಜಾರಿ 2] ಸುರೇಂದ್ರ 3] ಬಾಬು ಪೂಜಾರಿ ಎಂಬವರುಗಳನ್ನು ಮಧ್ಯದ ಬಾಟಲಿ ಹಾಗೂ ಇತರೆ ವಸ್ತುಗಳೊಂದಿಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪಿ,ಎಸ್,ಐ [ಕಾ.ಸು]  ಉದಯ ರವಿ ಎಂ.ವೈ ಹಾಗೂ ಸಿಬ್ಬಂದಿಗಳು ವಶಕ್ಕೆ ಪಡೆದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 11/2023 ಕಲಂ :KARNATAKA EXCISE ACT 1965 ಕಲಂ 15(ಎ),32(3) ಯಂತೆ ಪ್ರಕರಣ ದಾಖಲಿಸಿರುತ್ತಾರೆ.

 

  • ಪುಂಜಾಲಕಟ್ಟೆ ಪೊಲೀಸ್ ಠಾಣೆ : ದಿನಾಂಕ:13-02-2023 ರಂದು 11.00 ಗಂಟೆಗೆ ಬೆಳ್ತಂಗಡಿ ತಾಲೂಕು ಪುತ್ತಿಲ ಗ್ರಾಮದ ಹೇರಾಜೆ ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಕೆ. ಪಿ. ಖಲಂದರ್, ಪ್ರಾಯ 40 ವರ್ಷ ಎಂಬವನು ಮಾದಕ ವಸ್ತುವಾದ ಗಾಂಜಾವನ್ನು ಸೇವನೆ ಮಾಡಿದ್ದನ್ನು ಪತ್ತೆ ಹಚ್ಚಿದ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಆಂಜನೇಯ ರೆಡ್ಡಿ ಜಿ.ವಿ ರವರು  ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು  ವೈದ್ಯಾಧಿಕಾರಿಯವರಿಂದ ತಪಾಸಣೆ ನಡೆಸಲಾಗಿ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಸೇವನೆ ಮಾಡಿರುವುದು ದೃಢಪಟ್ಟ  ಹಿನ್ನೆಲೆಯಲ್ಲಿ ಆತನ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ 13/2023 ಕಲಂ:27 (ಬಿ) ಎನ್.ಡಿ.ಪಿ.ಎಸ್ ಆ್ಯಕ್ಟ್-1985 ಯಂತೆ ಪ್ರಕರಣ ದಾಖಲಿಸಲಾಗಿದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಿಶ್ವನಾಥ್ ಶೆಟ್ಟಿ ಪ್ರಾಯ 56 ವರ್ಷ ತಂದೆ: ರಾಮಣ್ಣ ಶೆಟ್ಟಿ ವಾಸ: ಮಿತ್ತಡ್ಕ ಮನೆ, ಆಲೆಟ್ಟಿ ಗ್ರಾಮ ಸುಳ್ಯ ಎಂಬವರ ದೂರಿನಂತೆ ಪಿರ್ಯಾದಿದಾರರಾದ ವಿಶ್ವಾನಾಥ್ ಶೆಟ್ಟಿ ರವರ  ಅಕ್ಕನ ಮಗನಾದ ಹರಿಪ್ರಸಾದ್ ರೈ (44 ವರ್ಷ) ಎಂಬಾತನಿಗೆ ಮದುವೆಯಾಗದೇ ಇದ್ದು, ಅವರಿಗೆ ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು, ದಿನಾಂಕ 13.02.2023 ರಂದು ಬೆಳಗ್ಗೆ 06.30 ಗಂಟೆಗೆ ಎಲ್ಲಿಂದಲೋ ಮನೆಗೆ ಬಂದು ನೀರು ಕುಡಿದು ಮನೆಯಲ್ಲಿ ಹೇಳದೇ ಅವನಷ್ಟಕ್ಕೆ ಎಲ್ಲಿಗೋ  ಹೋಗಿದ್ದು, ಮಧ್ಯಾಹ್ನ ಸುಮಾರು 12.30 ಗಂಟೆಗೆ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಮೇದಿನಡ್ಕ ಕಾದಿಟ್ಟ ಆರಣ್ಯದ ಫಾರೆಸ್ಟ್ ಗಾರ್ಡ್‌ ಪಿರ್ಯಾದಿದಾರರ ಪರಿಚಯದ ಲಿಖಿತ್ರವರು ಪಿರ್ಯಾದಿದಾರರಿಗೆ ಫೋನ್ ಮಾಡಿ ಹರಿಪ್ರಸಾದ್ ಕಾದಿಟ್ಟ ಅರಣ್ಯದ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಬಂದು ನೋಡಲಾಗಿ ಹರಿಪ್ರಸಾದ್‌ನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದು. ಈ ಬಗ್ಗೆ ಸುಳ್ಯ ಪೊಲೀಸು ಠಾಣಾ ಯುಡಿಆರ್ ನಂಬ್ರ 14/2023 ಕಲಂ 174 ಸಿಆರ್‌‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-02-2023 01:04 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080