ಅಭಿಪ್ರಾಯ / ಸಲಹೆಗಳು

 

ಅಪಘಾತ ಪ್ರಕರಣ: 6

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪುರುಷೋತ್ತಮ ಬಿ ಪ್ರಾಯ: 44 ವರ್ಷ ತಂದೆ: ದಿ|| ಬಿ ವಾಸು ಪೂಜಾರಿ ವಾಸ: ಲೆಕ್ಕೆಸಿರಿ ಪಾದೆ, ಹೊಸಮನೆ, ಬೈಪಾಸ್ ರೋಡ್ , ಬಂಟ್ವಾಳ ಕಸಬಾ ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಫಿರ್ಯಾದಿದಾರರು ದಿನಾಂಕ 12.03.2023 ರಂದು ಸಿದ್ದಕಟ್ಟೆಯಲ್ಲಿ   ದೈವದ ಕಾರ್ಯಕ್ರಮ  ಮುಗಿಸಿ ವಾಪಾಸು  ಬಂಟ್ವಾಳ ಕಡೆಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಲ್ಲಿ ಬರುತ್ತಾ  ಸಮಯ ಸುಮಾರು ರಾತ್ರಿ 11:45 ಗಂಟೆಗೆ ಬಂಟ್ವಾಳ ತಾಲೂಕು ರಾಯಿ ಗ್ರಾಮದ ರಾಯಿ  ಎಂಬಲ್ಲಿಗೆ ತಲುಪುತ್ತಿದ್ದಂತೆ ಫಿರ್ಯಾದಿದಾರರ ಹಿಂದಿನಿಂದ  ಅಂದರೆ ಸಿದ್ದಕಟ್ಟೆ  ಕಡೆಯಿಂದ KA-34-N-2789 ನೇ ಇನೋವಾ ಕಾರ್‌ ನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಫಿರ್ಯಾದಿದಾರರ ಮೋಟಾರ್‌ ಸೈಕಲನ್ನು ಓವರ್‌ ಟೇಕ್‌ ಮಾಡಿಕೊಂಡು ಹೋಗಿ ಫಿರ್ಯಾದಿದಾರರ ಎದುರು ಫಿರ್ಯಾದಿದಾರರ ಅಣ್ಣ ಚಂದ್ರಶೇಖರ್‌  ಬಿ ಸಹ ಸವಾರನಾಗಿ ಕುಳಿತುಕೊಂಡು ಹೋಗುತ್ತಿದ್ದ KA-19-EQ-6215 ನೇ ಸ್ಕೂಟರಿಗೆ ಹಿಂದಿನಿಂದ ರಭಸವಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಸ್ಕೂಟರ್ ಸವಾರ  ಹಾಗೂ ಸಹ ಸವಾರ  ಸ್ಕೂಟರ್‌  ಸಮೇತ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಚಂದ್ರಶೇಖರ್‌  ಬಿ ರವರೀಗೆ ಎರಡೂ ಕಾಲುಗಳಿಗೆ ಹಾಗೂ ಹೊಟ್ಟೆಯ ಭಾಗಕ್ಕೆ  ಗುದ್ದಿದ  ಗಾಯವಾಗಿದ್ದು ಮೋಟಾರ್ ಸೈಕಲ್ ಸವಾರ ಯೋಗೀಶ್‌ ರವರಿಗೆ  ಮುಖಕ್ಕೆ ಕೈಗಳಿಗೆ ಹಾಗೂ ತಲೆಗೆ  ಗಾಯಗಳಾಗಿದ್ದು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಚಂದ್ರಶೇಖರ್‌  ಬಿ ರವರು ಈ ದಿನ ದಿನಾಂಕ 13.03.2023 ರಂದು ಬೆಳಿಗ್ಗೆ 01.06 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಹಾಗೂ ಯೋಗೀಶ್‌ ರವರನ್ನು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಬಗ್ಗೆ ಮಂಗಳೂರಿಗೆ ಕಳುಹಿಸಿಕೊಟ್ಟಿರುತ್ತಾರೆ..ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 38/2023 ಕಲಂ: 279, 337, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಶೋಕ್ ಪ್ರಾಯ: 46 ವರ್ಷ ತಂದೆ: ವಿಠಲ ಪೂಜಾರಿ ವಾಸ: ದರಿಬಾಗಿಲು ಮನೆ, ಕಳ್ಳಿಗೆ ಗ್ರಾಮ ಮತ್ತು ಅಂಚೆ, ಬಂಟ್ವಾಳ ಎಂಬವರ ದೂರಿನಂತೆ ಫಿರ್ಯಾದಿದಾರರು ದಿನಾಂಕ  13.03.2023 ರಂದು ಮೋಟಾರ್ ಸೈಕಲ್ ನಲ್ಲಿ ಬಿ.ಸಿ. ರೋಡ್‌ ಗೆ ಹೋಗಿ ವಾಪಾಸ್ಸು ಮನೆ  ಕಡೆಗೆ  ಬರುತ್ತಾ ಸಮಯ ಸುಮಾರು ಬೆಳಿಗ್ಗೆ 11:00 ಗಂಟೆಗೆ ಬಂಟ್ವಾಳ ತಾಲೂಕು ಬಿ -ಮೂಡ ಗ್ರಾಮದ ಪೊನ್ನೋಡಿ  ಎಂಬಲ್ಲಿಗೆ ತಲುಪುತ್ತಿದ್ದಂತೆ ಮಂಗಳೂರು ಕಡೆಯಿಂದ  KA-21-A-1655 ನೇ ಪಿಕ್‌ ಅಪ್‌ ನ್ನು  ದ್ವಿಪಥ ರಸ್ತೆಯಲ್ಲಿ ಮಂಗಳೂರು ಕಡೆಯಿಂದ ಬಿ,ಸಿ ರೋಡ್‌ ಕಡೆಗೆ ಏಕ ಮುಖವಾಗಿ  ರಾಂಗ್‌ ಸೈಡಿನಿಂದ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ಫಿರ್ಯಾದಿದಾರರ ಮುಂದಿನಿಂದ  ಅಂದರೆ ಬಿಸಿರೋಡ್‌ ಕಡೆಯಿಂದ ಮಂಗಳೂರು ಕಡೆಗೆ  ಹೋಗುತ್ತಿದ್ದ  KA-20-P-4455 ನೇ  ಒಮ್ನಿ ಕಾರಿನ ಮುಂಭಾಗಕ್ಕೆ  ಡಿಕ್ಕಿ ಹೊಡೆಸಿದ್ದು ಪರಿಣಾಮ  ಕಾರು ರಸ್ತೆ ಬದಿಗೆ ಎಸೆಯಲ್ಪಟ್ಟು  ಜಖಂಗೊಂಡಿದ್ದು ಕಾರು ಚಾಲಕ ರಾಜೇಶ್ ಶೆಟ್ಟಿ ರವರಿಗೆ  ಬಲಕಾಲಿಗೆ, ಹೊಟ್ಟೆಗೆ ಗುದ್ದಿದ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಯುನಿಟಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ  ಮಧ್ಯಾಹ್ನ 13:10 ಗಂಟೆಗೆ ಮೃತರಾಗಿರುತ್ತಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 40/2023 ಕಲಂ: 279, 337, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನವೀನ್ ಚಂದ್ರ ಪ್ರಾಯ: 27 ವರ್ಷ ತಂದೆ: ಕೃಷ್ಣಪ್ಪ ನಾಯ್ಕ್ ವಾಸ: ಕುದ್ರೆಬೆಟ್ಟು ಬಿ ಆರ್ ನಗರ ಬಾಳ್ತಿಲ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರು ದಿನಾಂಕ 13.03.2023 ರಂದು ತನ್ನ ಬಾಬ್ತುKA19 EL 5861 ನೇ ಸ್ಕೂಟರ್ ನಲ್ಲಿ ಸವಾರನಾಗಿ ಅತ್ತಿಗೆ ಶೋಭಾ ರವರು ಸಹಸವಾರಿಣಿಯಾಗಿ ಕುದ್ರೆಬೆಟ್ಟು ವಿನಿಂದ ಬಾಳ್ತಿಲ ಕಡೆಗೆ ಹೋಗುತ್ತಾ ಸಮಯ ಸುಮಾರು  ಬೆಳಿಗ್ಗೆ 10:00 ಗಂಟೆಗೆ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ದಾಸಕೋಡಿ ಎಂಬಲ್ಲಿ ಗೆ ತಲುಪುತ್ತಿದ್ದಂತೆ ಮಾಣಿ ಕಡೆಯಿಂದ KA 21 Z 7109 ನೇ ಸಿಫ್ಟ್ ಕಾರನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಸ್ಕೂಟರ್ ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಪರಿಣಾಮ  ಸ್ಕೂಟರ್ ಸವಾರ ಹಾಗೂ ಸಹಸವಾರಿಣಿ ಸ್ಕೂಟರ್ ಸಮೇತ ಎಸೆಯಲ್ಪಟ್ಟು  ರಸ್ತೆಗೆ ಬಿದ್ದು  ಫಿರ್ಯಾದಿದಾರರಿಗೆ ಬಲಭುಜಕ್ಕೆ, ಬಲಕಾಲುತೊಡೆಗೆ ಗುದ್ದಿದ ಹಾಗೂ ರಕ್ತಗಾಯವಾಗಿದ್ದು ,ಶೋಭಾ ರವರಿಗೆ ಬಲಸೊಂಟದ ಕೆಳಗೆ ಹಾಗೂ ಬಲಕಾಲು ಮಣಿಗಂಟಿಗೆ ಗುದ್ದಿದ ಹಾಗೂ ರಕ್ತಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಕಲ್ಲಡ್ಕ ಪುಷ್ಪರಾಜ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 39/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಹವೀನ್ ಪಿ ಎಂ (29) ತಂದೆ: ಕುಸುಮಾಧರ ಗೌಡ ವಾಸ: ಮಡಿವಾಳ ಮೂಲೆ ಮನೆ, ಮಂಡೆಕೋಲು ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 12.03.2023 ರಂದು ತನ್ನ ಸ್ನೇಹಿತನ ಮನೆಯ ಗೃಹ ಪ್ರವೇಶಕ್ಕೆಂದು ಕಲ್ಲುಗುಂಡಿಗೆ ತಮ್ಮ ಬಾಬ್ತು ಮೋಟಾರ್ ಸೈಕಲ್ ನಂ: ಕೆಎ 21 ಡಬ್ಲ್ಯೂ 5841 ನೇದರಲ್ಲಿ ಸಹ ಸವಾರ ಪ್ರಶಾಂತ್ ಎಂಬಾತನನ್ನು ಕುಳಿರಿಸಿಕೊಂಡು ಕಲ್ಲುಗುಂಡಿಗೆ ಹೋಗಿದ್ದು, ವಾಪಾಸ್ ಸುಳ್ಯ ಕ್ಕೆ ಬರುತ್ತಿರುವರೇ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಅರಂಬೂರು ಸರಳಿಕುಂಜ ಎಂಬಲ್ಲಿ ಶ್ರೀ ದುರ್ಗಾ ಹೊಟೇಲ್ ಬಳಿ ತಲುಪುತ್ತಿದಂತೆ (ಮಾಣಿ- ಮೈಸೂರು ಹೆದ್ದಾರಿ) ಸುಳ್ಯ ಕಡೆಯಿಂದ ಬಂದ ಕೆಎ 21 ಸಿ 2636 ನೇದರ ಆಟೋ ರಿಕ್ಷಾ ಚಾಲಕ ಮನೋಹರ ಎಂಬಾತನು ಆಟೋ ರಿಕ್ಷಾವನ್ನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೆ ತನ್ನ ಬಲಬದಿಗೆ ಒಮ್ಮೆಲೇ ರಿಕ್ಷಾವನ್ನು ತಿರುಗಿಸಿದ ಪರಿಣಾಮ ಪಿರ್ಯಾದುದಾರರ ಮೋಟಾರ್ ಸೈಕಲ್ ಗೆ ಡಿಕ್ಕಿವುಂಟಾಗಿ ಪಿರ್ಯಾದುದಾರರು ಮತ್ತು ಸಹ ಸವಾರ ರಸ್ತೆಗೆ ಎಸೆಯಲ್ಪಟ್ಟು ಪಿರ್ಯಾದುದಾರರಿಗೆ ಎಡಕೈ ಗೆ ಗುದ್ದಿದ ಗಾಯವಾಗಿದ್ದು, ಘಟನಾ ಸ್ಥಳದಲ್ಲಿ ಸೇರಿದ ಸ್ಥಳಿಯರು ಪಿರ್ಯಾದುದಾರರನ್ನು ಉಪಚರಿಸಿ ಸುಳ್ಯ ಕೆ,ವಿ,ಜಿ ಆಸ್ಪತ್ರೆ  ಗೆ  ಕರೆದುಕೊಂಡು ಬಂದಿರುತ್ತಾರೆ. ಈ ಅಪಘಾತದಲ್ಲಿ ಎರಡು ವಾಹನಗಳು ಜಖಂ ಆಗಿದ್ದು, ಮೋಟಾರ್ ಸೈಕಲ್ ನ ಸಹಸವಾರ ಪ್ರಶಾಂತ್ ಗೆ ಯಾವುದೇ ಗಾಯವಾಗಿರುವುದಿಲ್ಲ, .ಈ ಬಗ್ಗೆ ಸುಳ್ಯ ಪೊಲೀಸ್‌    ಠಾಣಾ ಅ,ಕ್ರ   ನಂ: 25/2023 ಕಲಂ: 279,337    IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಭಾರತಿ ಪ್ರಾಯ: 50 ವರ್ಷ ಗಂಡ: ರುಕ್ಮಯ್ಯ ಗೌಡ ವಾಸ: ಕಡ್ತಿಮಾರು ಮನೆ ಬಲ್ಯ ಗ್ರಾಮ ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರು ಗಂಡ ರುಕ್ಮಯ್ಯ ಗೌಡ ರವರು ದಿನಾಂಕ:04.03.2023 ರಂದು ಪಿರ್ಯಾದುದಾರರ KA-21 Q-2103 ನೇ ಸ್ಕೂಟರ್‌ ಸ್ಕೂಟರ್‌ ವಾಹನದಲ್ಲಿ ಉಪ್ಪಿನಂಗಡಿಗೆ ಹೋಗಿ ಬರುವರೇ ಉಪ್ಪಿನಂಗಡಿ ಕಡೆಗೆ ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಕಡಬ ತಾಲೂಕು ಅಲಂಕಾರು ಗ್ರಾಮದ ನೆಕ್ಕೆರೆ ಪೆಟ್ರೋಲ್‌ ಪಂಪ್‌ ಎದುರು ಸಮಯ ಸಂಜೆ 04.30 ಗಂಟೆಗೆ ತಲುಪಿದಾಗ ಅದೇ ರಸ್ತೆಯಲ್ಲಿ ಎದುರಿನಿಂದ ಆರೋಪಿತನು KA-21 Y-9061 ನೇ ಮೊಟಾರ್‌ ಬೈಕ್ ನ್ನು ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಗಂಡ ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್‌ಗೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಪಿರ್ಯಾದುದಾರರ ಗಂಡ ರುಕ್ಮಯ್ಯಗೌಡ ಎಂಬಾತನಿಗೆ ಕೈ ಕಾಲುಗಳ ಬೆರಳುಗಳಿಗೆ ರಕ್ತ ಗಾಯವಾಗಿರುತ್ತದೆ. ಗಾಯಗೊಂಡ  ರುಕ್ಮಯ್ಯಗೌಡರವರನ್ನು ಅಲ್ಲಿಯೇ ಬರುತ್ತಿದ್ದ ಸಾರ್ವಜನಿಕರು ಉಪಚರಿಸಿರುತ್ತಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪಿರ್ಯಾದುದಾರರು  ತನ್ನ ಗಂಡನನ್ನು ಉಪಚರಿಸಿದ್ದು  ಬಳಿಕ ಆರೋಪಿತನು  ಅಪಘಾತವಾದ ಬಗ್ಗೆ ಯಾವುದೇ ದೂರು ನೀಡುವುದು ಬೇಡ ಚಿಕಿತ್ಸಾ ಹಾಗೂ ವಾಹನದ ರಿಪೇರಿ ವೆಚ್ಚವನ್ನು ಭರಿಸುವುದಾಗಿ ತಿಳಿಸಿರುತ್ತಾನೆ. ಅದರಂತೆ ಪಿರ್ಯಾದುದಾರರು ತನ್ನ  ಗಂಡನನ್ನು ಚಿಕಿತ್ಸೆ ಬಗ್ಗೆ ಉಜಿರೆ SDM ಆಸ್ಪತ್ರೆಗೆ ಖಾಸಾಗಿ ವಾಹನದಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿದ್ದು ರುಕ್ಮಯ್ಯಗೌಡರವರು ಚಿಕಿತ್ಸೆಯಲ್ಲಿರುವುದಾಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 25/2023 ಕಲಂ:279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರಶಾಂತ ಪಾಟೀಲ್[36] ತಂದೆ: ರವೀಂದ್ರನಾಥ ಪಾಟೀಲ್ ವಾಸ: ಡೋರ್ ನಂ.4/10,ಕೀಳಂಜ ಮನೆ,ಹಾವಂಜೆ ಅಂಚೆ ಮತ್ತು ಗ್ರಾಮ ಉಡುಪಿ ಎಂಬವರ ದೂರಿನಂತೆ ದಿನಾಂಕ:12.03.2023 ರಂದು  ಸಂಜೆ 6:10  ಗಂಟೆಗೆ ಬೆಳ್ತಂಗಡಿ  ತಾಲೂಕು  ಹೊಸಂಗಡಿ ಗ್ರಾಮದ ಪಡ್ಯಾರಬೆಟ್ಟು ಎಂಬಲ್ಲಿ     ವೇಣೂರು – ಮೂಡಬಿದ್ರೆ  ಸಾರ್ವಜನಿಕ  ರಸ್ತೆಯಲ್ಲಿ  ಮೂಡಬಿದ್ರೆ  ಕಡೆಯಿಂದ  ಆಟೋ  ರಿಕ್ಷಾ  ನಂಬ್ರ : ಕೆ ಎ 70 4327 ನೇ  ದನ್ನು   ಅದರ  ಚಾಲಕ ದುಡುಕುತನ  ಹಾಗೂ ನಿರ್ಲಕ್ಷತನದಿಂದ  ಒಮ್ಮೆಲೇ ರಸ್ತೆಯ  ರಾಂಗ್‌  ಸೈಡ್ ಗೆ ಚಲಾಯಿಸಿ ವೇಣೂರು  ಕಡೆಯಿಂದ  ಹೋಗುತ್ತಿದ್ದ ಪಿರ್ಯಾದಿದಾರರ ಬಾಬ್ತು   ಕಾರು   ನಂಬ್ರ  ಕೆಎ 20  ಎಂ ಸಿ 7059  ನೇ  ದಕ್ಕೆ  ರಭಸದಿಂದ ಡಿಕ್ಕಿ ಹೊಡೆದ ಹೊಡೆದ ಪರಿಣಾಮ ವಾಹನಗಳೆರಡೂ ಜಖಂಗೊಂಡು ಕಾರಿನಲ್ಲಿ ಪ್ರಯಾಣಿಕರಾಗಿದ್ದ ಶ್ರೀ ಲತಾರವರಿಗೆ  ಎಡಕಾಲಿಗೆ ರಕ್ತಗಾಯ ಮತ್ತು ಆರೋಪಿ ರಿಕ್ಷಾ ಚಾಲಕ ರಾಜೇಶ್‌ ರವರಿಗೆ  ತಲೆಗೆ, ಕೈಕಾಲುಗಳಿಗೆ ತರಚಿದ ಗಾಯಗಳಾಗಿ ಮೂಡಬಿದ್ರೆ   ಆಳ್ವಾಸ್‌ ಆಸ್ಪತ್ರೆಗೆ ಚಿಕಿತ್ಸೆಗೆ  ದಾಖಲಾಗಿರುವುದಾಗಿದೆ .ಈ ಬಗ್ಗೆ ವೇಣೂರು ಪೊಲೀಸ್  ಠಾಣಾ ಅ.ಕ್ರ: 12/2023 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಕಳವು ಪ್ರಕರಣ: 1

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಯಾನಂದ ಡಿ ಪ್ರಾಯ:42 ವರ್ಷ, ತಂದೆ:   ಡೀಕಯ್ಯ ಪೂಜಾರಿ ವಾಸ: ಡೊಂಬರಮಜಲು  ಮನೆ , ತೋಟತ್ತಾಡಿ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರು ಬೆಳ್ತಂಗಡಿ ತಾಲೂಕು ಚಿಬಿದ್ರೆ ಗ್ರಾಮದಲ್ಲಿ ಜೆ ಕೆ ಎಲೆಕ್ಟ್ರಿಕ್‌ಲ್ಸ್‌ ಮತ್ತು ವೈಂಡರ್ಸ್‌ ಅಂಗಡಿ ಹೊಂದಿದ್ದು,  ದಿನಾಂಕ:11-03-2023 ರಂದು ರಾತ್ರಿ ಸಮಯ  ಸುಮಾರು 11:35 ಗಂಟೆಗೆ ಬೀಗ ಹಾಕಿ ಹೋಗಿದ್ದು ದಿನಾಂಕ:12-03-2023 ರಂದು ಬೆಳಿಗ್ಗೆ 10:30 ಗಂಟೆಗೆ ಅಂಗಡಿಗೆ ಬಂದು ನೋಡಿದಾಗ ಯಾರೋ  ಕಳ್ಳರು ಅಂಗಡಿಗೆ ಹಾಕಿದ್ದ  ಬೀಗವನ್ನು ಮುರಿದು ಒಳಪ್ರವೇಶಿಸಿ ಅಂಗಡಿಯಲ್ಲಿದ್ದ Coper wire(ಸ್ಕ್ರಾಪ್‌ ) 20 ಕೆ ಜಿ ಮತ್ತು ರಿಪೇರಿಗೆ ತಂದಿದ್ದ ಬೋರ್‌ ವೆಲ್‌ ನ ಸಬ್‌ ಮರ್ಸಿಬಲ್‌ ಮೋಟಾರ್‌ ಗಳು (6/5 HP) 11  ಹಾಗೂ ಸಿಂಗಲ್‌ ಪೇಸ್‌ 2HP  ಮರ್ಸಿಬಲ್‌ 2 ಮೋಟಾರ್‌ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸೊತ್ತುಗಳ  ಅಂದಾಜು ಮೌಲ್ಯ ರೂ 94,000/- ಆಗಿರುತ್ತದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆ 15/2023 ಕಲಂ: 457,380 ಐ ಪಿ ಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 3

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ 12-03-2023 ರಂದು ಫರಂಗೀಪೇಟೆ,ಪುದು ಗ್ರಾಮ, ಬಂಟ್ವಾಳ ತಾಲೂಕು  ಎಂಬಲ್ಲಿ ಕಾನೂನು ಬಾಹಿರವಾಗಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದಾಗ ಧಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಂತೋಷ್ ಶೆಟ್ಟಿ ಮತ್ತು ಸಿಬ್ಬಂದಿಗಳ ತಂಡ ಕೃತ್ಯದಲ್ಲಿ ತೊಡಗಿದ್ದ ಮೊಹಮ್ಮದ್ ಇಲ್ಯಾಸ್ ಮತ್ತು ಸುಕುಮಾರ ಎಂಬವರುಗಳನ್ನು ರೂ 14,390/  ನಗದಿನೊಂದಿಗೆ ವಶಕ್ಕೆ ಪಡೆದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ  ಅ.ಕ್ರ 24/2023 ಕಲಂ 78 KP Act ಪ್ರಕರಣ ದಾಖಲಿಸಿರುತ್ತಾರೆ.

 

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ: 13-03-2023 ರಂದು ಪುತ್ತೂರು ತಾಲೂಕು  ಬಲ್ನಾಡು  ಗ್ರಾಮದ ಒಳಮೊಗ್ರು ಗ್ರಾಮದ ಕೈಕಾರ ಎಂಬಲ್ಲಿ ಲಾಭ ಗಳಿಸುವ ಉದ್ದೇಶದಿಂದ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯವನ್ನು ತನ್ನ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ  ಮಾಡಿ ಅಬಕಾರಿ ಕಾಯ್ದೆಯಡಿ ಅಪರಾಧವೆಸಗುತ್ತಿದ್ದಾಗ ಧಾಳಿ ನಡೆಸಿದ ಶ್ರೀನಾಥ ರೆಡ್ಡಿ ಪೊಲೀಸ್‌ ಉಪ-ನಿರೀಕ್ಷಕರು, ಪುತ್ತೂರು ಗ್ರಾಮಾಂತರ ಠಾಣೆ ಮತ್ತು ಸಿಬ್ಬಂದಿಗಳ ತಂಡ  ಆರೋಪಿ ಯಜ್ಞಾತ ರೈ ಪ್ರಾಯ- 55 ವರ್ಷ, ವಾಸ- ಕೈಕಾರ ಮನೆ,  ಒಳಮೊಗ್ರು   ಗ್ರಾಮ, ಪುತ್ತೂರು  ತಾಲೂಕು  ಎಂಬಾತನನ್ನು 4.5 ಲೀಟರ್‌ ಅಕ್ರಮ ಮದ್ಯದೊಂದಿಗೆ ವಶಕ್ಕೆ ಪಡೆದು, ಆತನ ವಿರುದ್ದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ Cr.NO 24-2023 ಕಲಂ;-32, 34,ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಿರುತ್ತಾರೆ.

 

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ: 13-03-2023 ರಂದು ಪಾಂಡವರ ಗುಡ್ಡ ಮನೆ, ಕೊಯಿಲಾಗ್ರಾಮ, ಬಂಟ್ವಾಳ ತಾಲೂಕು ಎಂಬಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯವನ್ನು ತನ್ನ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ  ಮಾಡಿ ಅಬಕಾರಿ ಕಾಯ್ದೆಯಡಿ ಅಪರಾಧವೆಸಗುತ್ತಿದ್ದಾಗ ಧಾಳಿ ನಡೆಸಿದ ಜಯಶ್ರೀ ಪ್ರಭಾಕರ ಪೊಲೀಸ್ ಉಪನಿರೀಕ್ಷಕರು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ತಂಡ  ಆರೋಪಿ ಶ್ರೀಧರ ಶೆಟ್ಟಿ  ಎಂಬಾತನನ್ನು 3.5 ಲೀಟರ್‌ ಅಕ್ರಮ ಮದ್ಯದೊಂದಿಗೆ ವಶಕ್ಕೆ ಪಡೆದು, ಆತನ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ  ಅ.ಕ್ರ 25/2023 ಕಲಂ 32,34 KE Act ಯಂತೆ ಪ್ರಕರಣ ದಾಖಲಿಸಿರುತ್ತಾರೆ.

 

ಅಸ್ವಾಭಾವಿಕ ಮರಣ ಪ್ರಕರಣ: 4

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಪುಷ್ಪಾ ಪ್ರಾಯ: 23 ವರ್ಷ, ತಂದೆ: ನಾರಾಯಣ ಗೌಡ  ವಾಸ: ಸನ್ಯಾಸಿಕಟ್ಟೆ ಮನೆ, ಮುಂಡಾಜೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 12-03-2023 ರಂದು ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ  ಸೊಮಂತ್ತಡ್ಕ ಗಣೇಶ ಎಂಬವರ ಮನೆಗೆ ಕೂಲಿ ಕೆಲಸಕ್ಕೆಂದು ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದು ಅಲ್ಲಿ ಕೆಲಸ ಮಾಡುತ್ತಿರುವ ಸಮಯ ಸಂಜೆ 4.45 ಗಂಟೆಗೆ  ಗಂಟೆಗೆ ಒಮ್ಮೆಲೇ ಕುಸಿದು ಬಿದ್ದು, ಪ್ರಜ್ಞಾ ಹೀನರಾಗಿದ್ದು, ಅವರನ್ನು ಆರೈಕೆ ಮಾಡಿ ಚಿಕಿತ್ಸೆ ಬಗ್ಗೆ ಕಕ್ಕಿಂಜೆ ಕೃಷ್ಣ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೇ ಇರುವ ಬಗ್ಗೆ ತಿಳಿಸಿದ್ದು, ಕೂಡಲೇ ಮೇಲ್ದರ್ಜೆ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದು, ಉಜಿರೆ ಎಸ್.ಡಿ ಎಂ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಕೂಡಾ  ಕೂಡಲೇ  ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಅಲ್ಲಿ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ   ಒಳರೋಗಿಯಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದು ಸಮಯ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆ  UDR NO 22/2023 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಸೌಮ್ಯ (32) ಗಂಡ: ರಾಜ ಕೆ ವಾಸ: ಕಡೆಪಾಲ ಮನೆ, ಕಲ್ಲುಗುಂಡಿ, ಸಂಪಾಜೆ ಅಂಚೆ ಮತ್ತು ಗ್ರಾಮ ಸುಳ್ಯ ತಾಲೂಕು ರವರ ಗಂಡ ರಾಜ ಕೆ (40) ಎಂಬಾತನು ದಿನಾಂಕ: 12.03.2023 ರಂದು ಮದ್ಯಪಾನ ಸೇವನೆ ಮಾಡಿಕೊಂಡು ಬಂದು ಮನೆಯಲ್ಲಿದ್ದವರಿಗೆ ಬೈಯುತ್ತಾ ಮಲಗಿದ್ದವರು ದಿನಾಂಕ: 13.03.2023 ರಂದು ಬೆಳಿಗ್ಗೆ ಎದ್ದಾಗ ರಾಜ ಕೆ ರವರಿಗೆ ಸ್ವಲ್ಪ ಜ್ವರ ಇದ್ದ ಪರಿಣಾಮ ಕೆಲಸಕ್ಕೆ ಹೋಗದೆ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕಲ್ಲುಗುಂಡಿ ಕಡೆಪಾಲ ಎಂಬಲ್ಲಿರುವ ತಮ್ಮ ಮನೆಯಲ್ಲೇ ಇದ್ದರು ಪಿರ್ಯಾದುದಾರರು ಸ್ಥಳಿಯ ನಿವಾಸಿ ಧನರಾಜ್ ಎಂಬವರ ಮನೆಗೆ ಕೆಲಸಕ್ಕೆಂದು ಸಮಯ ಸುಮಾರು ಬೆಳಿಗ್ಗೆ 09:00 ಗಂಟೆಗೆ ಹೋಗಿ ನಂತರ 11:45 ಗಂಟೆಗೆ ಮನೆಗೆ ಬಂದಾಗ ರಾಜ ಕೆ ರವರು ಮನೆಯಲ್ಲಿನ ಅಡ್ಡಕ್ಕೆ ಹಾಗೂ ತನ್ನ ಕುತ್ತಿಗೆಗೆ ಲುಂಗಿಯಿಂದ ನೇಣು ಬಿಗಿದುಕೊಂಡು ಒದಾಡುತ್ತಿರುವುದನ್ನು ಕಂಡ ಪಿರ್ಯಾದುದಾರರು ರಾಜ ರವರನ್ನು ತಬ್ಬಿಕೊಂಡು ಕೂಗಿದಾಗ ಪಿರ್ಯಾದುದಾರರ ಮಾವ ಕೊರಗರವರು ಬಂದು ಕತ್ತಿಯಿಂದ ಕುತ್ತಿಗೆಯಲ್ಲಿರುವ ಲುಂಗಿಯನ್ನು ಕತ್ತರಿಸಿ ಕೂಡಲೇ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ರಾಜ ಕೆ ರವರು ಮೃತಪಟ್ಟಿರುವುದಾಗಿ ದೃಡಪಡಿಸಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ    ಯುಡಿಆರ್    ನಂ: 16/2023 ಕಲಂ: 174 ಸಿಆರ್ ಪಿಸಿ    ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರವೀಂದ್ರ ಶೆಟ್ಟಿ (43) ತಂದೆ: ಜಿನ್ನಪ್ಪ ಶೆಟ್ಟಿ ವಾಸ: ಉರಮಾಲು ಮನೆ ಚಿಕ್ಕಮುಡ್ನೂರು ಗ್ರಾಮ ಪುತ್ತೂರು ತಾಲೂಕು ರವರು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ 8.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಕಳೆದ 3 ತಿಂಗಳಿನಿಂದ ಹೋಂ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಫಿರ್ಯಾದಿದಾರರು ಎಂದಿನಂತೆ ದಿನಾಂಕ; 13.03.2023 ರಂದು ಬೆಳಿಗ್ಗೆ 9.30 ಗಂಟೆ ಸಮಯಕ್ಕೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕರ್ತವ್ಯದಲ್ಲಿರುವಾಗ ಸುಮಾರು 65 ವರ್ಷ ಪ್ರಾಯದ ಯಾರೋ ಓರ್ವ ಅಪರಿಚಿತ ವ್ಯಕ್ತಿ ತೀವ್ರ ಅಸ್ವಸ್ಥಗೊಂಡವನಂತೆ ಬಸ್ ನಿಲ್ದಾಣದ ಒಳಗಡೆ ಓಡಾಡಿಕೊಂಡವನಂತೆ ಕಂಡು ಬಂದಿದ್ದು, ನಂತರ ಸ್ವಲ್ಪ ಸಮಯದ ಬಳಿಕ ಸದ್ರಿ ಅಪರಿಚಿತ ವ್ಯಕ್ತಿ ಕುಸಿದು ಬಿದ್ದದ್ದನ್ನು ಕಂಡು ಕೂಡಲೇ ಫಿರ್ಯಾದಿದಾರರು ಮತ್ತು ಇತರರು ಸೇರಿ ಒಂದು ಅಟೋ ರಿಕ್ಷಾದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಪರಿಚಿತ ವ್ಯಕ್ತಿಯನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಯುಡಿಆರ್‌ ನಂ: 09/2023 ಕಲಂ: 174 (3) & (4)  CRPC ಯಂತೆ ಪ್ರಕರಣ ದಾಖಲಾಗಿರುತ್ತದೆ

 

  • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರಾಘವ ಆಚಾರ್ಯ  ಪ್ರಾಯ:52 ವರ್ಷ ತಂದೆ; ನಾರಾಯಣ ಆಚಾರ್ಯ ವಾಸ; ನೇತ್ರಾವತಿ ಮನೆ ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ತಾಲೂಕು ರವರ ತಂದೆ ನಾರಾಯಣ ಆಚಾರ್ಯ (80) ಎಂಬವರು ದಿನಾಂಕ:12-03-2023 ರಂದು ಉಜಿರೆಗೆ ಹೋಗಿ ಬರುತ್ತೇನೆಂದು  ಹೋದವರು ರಾತ್ರಿಯಾದರೂ ಮನೆಗೆ ಬಾರದೇ ಇದ್ದು ದಿನಾಂಕ;13-03-2023 ರಂದು  ಪರಿಚಯದವರು ಪಿರ್ಯಾದುದಾರರಿಗೆ ದೂರವಾಣಿ ಕರೆಮಾಡಿ  ನಿಮ್ಮ ತಂದೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಬಸ್ಸು ನಿಲ್ದಾಣದ ಬಳಿ ಕುಸಿದು ಬಿದ್ದು ಮೃತಪಟ್ಟಿರುತ್ತಾರೆ ಎಂಬುದಾಗಿ ತಿಳಿಸಿದಂತೆ ಪಿರ್ಯಾದುದಾರರು  ಹಾಗೂ ಪಿರ್ಯಾದುದಾರರ ತಂಗಿ ಇಂದಿರಾ ಎಂಬವರು ಸ್ಥಳಕ್ಕೆ ಬಂದು ನೋಡಿದಾಗ ಮಲಗಿದ ಸ್ಥಿತಿಯಲ್ಲಿ  ಇದ್ದು ಚಿಕಿತ್ಸೆಯ ಬಗ್ಗೆ  ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ  ಬೆಳಿಗ್ಗೆ 9.30 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ *ಯುಡಿಆರ್ ಸಂ* 10/2023 ಕಲಂ:174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-03-2023 12:34 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080