ಅಪಘಾತ ಪ್ರಕರಣ: ೦2
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಅಭಿಷೇಕ್ ಪಿ, ಪ್ರಾಯ 27 ರ್ಷ, ತಂದೆ: ದಿ|| ಮೋಹನ ಗೌಡ, ವಾಸ: ತೆಂಕಿಲ ಪಾದೆ ಮನೆ, ಬೈಪಾಸ್ ರಸ್ತೆ, ಪುತ್ತೂರು ಕಸಬಾ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 12-04-2021 ರಂದು 20-00 ಗಂಟೆಗೆ ಆರೋಪಿ ದ್ವಿ-ಚಕ್ರ ವಾಹನ ಸವಾರ ಮೋಹನ ಗೌಡ ಎಂಬವರು KA-19-EV-3948 ನೇ ನೋಂದಣಿ ನಂಬ್ರದ ದ್ವಿ-ಚಕ್ರ ವಾಹನವನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರು ಕಡೆಯಿಂದ ಸುಳ್ಯ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ತೆಂಕಿಲ ಎಂಬಲ್ಲಿ ಅಭಯ ಮಾರ್ಬಲ್ಸ್ ಬಳಿ ಶಿವ ನಗರ ಕಡೆಗೆ ಹೋಗುವ ಒಳರಸ್ತೆಗೆ ಹೋಗಲು ಹೆದ್ದಾರಿಯ ಬಲಭಾಗಕ್ಕೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ತಿರುಗಿಸಿ ಚಲಾಯಿಸಿದ ಪರಿಣಾಮ, ಸಚಿನ್ ಕುಮಾರ್ ಎಂಬವರು ಸವಾರರಾಗಿ, ಮಂಗಳೂರು ಕಡೆಯಿಂದ ಸುಳ್ಯ ಕಡೆಗೆ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದ KA-21-EA-9707 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲ್ಗೆ ಅಪಘಾತವಾಗಿ, ಎರಡೂ ವಾಹನಗಳು ರಸ್ತೆಗೆ ಬಿದ್ದು, ಆರೋಪಿ ಮೋಹನ ಗೌಡರವರಿಗೆ ಬಲ ಹೆಬ್ಬೆರಳಿನ ಬಳಿ, ಬಲಮೊಣಕಾಲು ಗಂಟು, ಬಲಮೊಣಕೈ ಗಂಟಿಗೆ ಗಾಯಗಳಾಗಿದ್ದು, ಸಚಿನ್ ಕುಮಾರ್ ರವರಿಗೆ ಬಲಕೈ, ಬಲಮೊಣಕಾಲು, ಬಲಕಾಲು ಹೆಬ್ಬೆರಳಿಗೆ ತರಚಿದ ಗಾಯ, ಎದೆ ಹಾಗೂ ಹೊಟ್ಟೆಯ ಎಡಭಾಗದಲ್ಲಿ ಗುದ್ದಿದ ಒಳನೋವಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಸಚಿನ್ ಕುಮಾರ್ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 70/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಗಿರೀಶ್, ಪ್ರಾಯ 21 ರ್ಷ, ತಂದೆ: ಅಣ್ಣಯ್ಯ, ವಾಸ: ನೀಡಕಟ್ಟೆ ಮನೆ, ನೀಡಕಟ್ಟೆ ಅಂಚೆ & ಗ್ರಾಮ, ಕಡೂರು ತಾಲೂಕು, ಚಿಕ್ಕಮಗಳೂರು ಜಿಲ್ಲೆ ಎಂಬವರ ದೂರಿನಂತೆ ದಿನಾಂಕ 12-04-2021 ರಂದು 09-45 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ ನಿಖಿಲ್ ಎಂಬವರು ಸುಬ್ರಹ್ಮಣ್ಯ ಭಟ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು KA-21-EA-9890 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಪೇರಮೊಗರು ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್ ಸೈಡ್ಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರು ಕಾಸರಗೋಡು ಕಡೆಯಿಂದ ಚಿಕ್ಕಮಗಳೂರು ಕಡೆಗೆ ಸರೋಜ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಚಲಾಯಿಸಿಕೊಂಡು ಹೋಗುತ್ತಿದ್ದ KA-66-K-1827 ನೇ ನೋಂದಣಿ ನಂಬ್ರದ ಮೋಟಾರ್ ಸೈಕಲ್ಗೆ ಅಪಘಾತವಾಗಿ, ಎರಡೂ ವಾಹನದ ಸವಾರ ಮತ್ತುಸಹಸವಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಬಲಕೈಯ ಮಣಿಗಂಟಿಗೆ, ಎಡಕೈಯ ಗಂಟಿಗೆ ಗುದ್ದಿದ ಗಾಯ, ಬಲಕಾಲಿನ ಕೋಲು ಕಾಲಿಗೆ ಗುದ್ದಿದ ನೋವು ಹಾಗೂ ಸರೋಜರವರಿಗೆ ಗಲ್ಲಕ್ಕೆ, ಎಡಕಿವಿಗೆ, ಹಣೆಯ ಬಲಭಾಗಕ್ಕೆ ಗುದ್ದಿದ ಹಾಗೂ ತರಚಿದ ಗಾಯ ಮತ್ತು ಸೊಂಟದ ಬಲಭಾಗಕ್ಕೆ ಗುದ್ದಿದ ನೋವಾಗಿದ್ದು, ಚಿಕಿತ್ಸೆ ಬಗ್ಗೆ 108 ಅಂಬ್ಯುಲೆನ್ಸ್ ನಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 71/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣ: ೦2
ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕೇಶವ ಭಟ್ ಮಿತ್ತೂರು , ಪ್ರಾಯ: 58 ವರ್ಷ, ತಂದೆ: ದಿ| ಎಂ .ಶಂಕರ್ ಭಟ್, ವಾಸ: ಸ್ವಸ್ತಿಕ ಹೌಸ್ , ಇಡ್ಕಿದು ಅಂಚೆ ಮತ್ತು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ತಮ್ಮ ಕೃಷ್ಣ ಭಟ್ ಎಂ. ( 54 ವರ್ಷ) ಎಂಬವರು ತನ್ನ ತಾಯಿಯ ಜೊತೆ ಪುತ್ತೂರಿನ ದರ್ಬೆಯಲ್ಲಿ ವಾಸವಾಗಿದ್ದು ,ಸದ್ರಿಯವರು ಈಶ್ವರಮಂಗಲದಲ್ಲಿ ಸ್ವಂತ ಮೆಡಿಕಲ್ ಶಾಪ್‌ನ್ನು ಹೊಂದಿದ್ದು, ಅವರು ಸುಮಾರು 4 ವರ್ಷಗಳಿಂದ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು, ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಫಿರ್ಯಾದಿದಾರರ ತಮ್ಮನು ದಿನಾಂಕ 12.04.2021 ರಂದು ರಾತ್ರಿ 10.00 ಗಂಟೆ ಸಮಯಕ್ಕೆ ಊಟ ಮಾಡಿ ಮೆಡಿಕಲ್ ಶಾಪ್‌ಗೆ ಸಂಬಂಧಪಟ್ಟ ಲೆಕ್ಕಪತ್ರವನ್ನು ಮಾಡುತ್ತಾ ಹಾಸಿಗೆಯಲ್ಲಿ ಮಲಗಿದ್ದು, ಫಿರ್ಯಾದಿದಾರರ ತಾಯಿ ಎಬ್ಬಿಸಲು ಪ್ರಯತ್ನಿಸಿದಾಗ ಎಚ್ಚರಗೊಳ್ಳದೇ ಇದ್ದುದರಿಂದ , ಫಿರ್ಯಾದಿದಾರರ ತಾಯಿಯವರು ಫಿರ್ಯಾದಿದಾರರಿಗೆ ದೂರವಾಣಿ ಕರೆ ಮಾಡಿ ತಿಳಿಸಿದಂತೆ, ಫಿರ್ಯಾದಿದಾರರು ಬಂದು 108 ಅಂಬುಲೆನ್ಸ್ ಗೆ ಕರೆ ಮಾಡಿ ಚಿಕಿತ್ಸೆಯ ಬಗ್ಗೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಠಾಣಾ ಯುಡಿಆರ್ ನಂಬ್ರ 14/2021 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ವಿನಿತಾ ರೋಡ್ರಿಗಸ್ ಪ್ರಾಯ 52 ಗಂಡ ವಲೇರಿಯನ್ ರೋಡ್ರಿಗಸ್ ನಾಣ್ಯ ಮನೆ ಪುದು ಗ್ರಾಮ ಎಂಬವರ ಗಂಡ ಈ ಹಿಂದೆ ಲಿವರ್ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಕಂಕನಾಡಿ ಫಾದರ್ ಮುಲ್ಲಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಬಂದಿದ್ದು ನಂತರ ಕಾಯಿಲೆ ಗುಣಮುಖರಾಗದೇ ಇದ್ದವರು ವಿಪರೀತ ಮಧ್ಯಸೇವನೆ ಮಾಡಿಕೊಡಿದ್ದು ಸುಮಾರು 5 ವರ್ಷದ ಹಿಂದೆ ಖಾಯಿಲೆ ಗುಣ ಮುಖರಾಗದೇ ಇದ್ದುದ್ದರಿಂದ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ನಂತರ ಚಿಕಿತ್ಸೆ ಕೊಡಿಸಿ ಮನೆಯಲ್ಲಿದ್ದವರು ಮತ್ತೆ ವಿಪರೀತ ಮಧ್ಯಸೇವನೆ ಮಾಡಲು ಪ್ರಯತ್ನಿಸಿದ್ದು ಮಧ್ಯಸೇವನೆ ಮಾಡುವುದನ್ನು ಬಿಡಿಸುವರೇ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿ 1 ತಿಂಗಳು ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಬಂದು ಸ್ವಲ್ಪ ಸಮಯ ಮಧ್ಯಸೇವನೆ ಮಾಡುವುದನ್ನು ಬಿಟ್ಟವರು ನಂತರ ಖಾಯಿಲೆ ಗುಣಮುಖರಾಗದೆ ಇದ್ದ ಬೇಸರದಿಂದ ವಿಪರೀತ ಮಧ್ಯಸೇವನೆ ಮಾಡಿಕೊಂಡು ದಿನಾಂಕ 12.04.2021 ರಂದು ಸಂಜೆ 5.30 ಗಂಟೆಯಿಂದ ಬೆಳಿಗ್ಗೆ 8.30 ಗಂಟೆ ಮಧ್ಯೆ ಮನೆಯವರೆಲ್ಲರು ಸಂಬಂಧಿಕರ ಮನೆಯಾದ ಉಜಿರೆಗೆ ಪರಮ ಪ್ರಸಾದ ಕಾರ್ಯಕ್ರಮಕ್ಕೆ ಹೋದ ಸಮಯ ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಯ ಹಿಂಬದಿ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ನಂ 17/2021 ಕಲಂ 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.