ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಗಿರೀಶ ಕೆ, ಪ್ರಾಯ 37 ವರ್ಷ, ತಂದೆ: ಬೆಳಿಯಪ್ಪ ಗೌಡ, ವಾಸ: 2-27, ನಂದನ ಮನೆ, ಕೊಡಿಪ್ಪಾಡಿ  ಅಂಚೆ & ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 13-06-2022 ರಂದು 08-30 ಗಂಟೆಗೆ ಆರೋಪಿ ಅಟೋರಿಕ್ಷಾ ಚಾಲಕ ಹಸೈನಾರ್‌ ಎಂಬವರು KA-21-C-0576 ನೇ ನೋಂದಣಿ ನಂಬ್ರದ ಅಟೋರಿಕ್ಷಾವನ್ನು ಮಂಜಲ್ಪಡ್ಪು-ಕೊಡಿಪ್ಪಾಡಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ  ಪುತ್ತೂರು ಕಡೆಯಿಂದ ಕೊಡಿಪ್ಪಾಡಿ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಪಂಬತ್ತಮಜಲು ಎಂಬಲ್ಲಿ ಏರು ರಸ್ತೆಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಗಿರೀಶ ಕೆ ರವರು ಚಾಲಕರಾಗಿ ಕೊಡಿಪ್ಪಾಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ  KA-21-B-5639 ನೋಂದಣಿ ನಂಬ್ರದ ಮಹೀಂದ್ರ ಜೀತೋ ಮಿನಿ ಗೂಡ್ಸ್‌ ವಾಹನಕ್ಕೆ ಅಪಘಾತವಾಗಿ, ಅಟೋರಿಕ್ಷಾ ರಸ್ತೆ ಬದಿಯ ಗುಂಡಿಗೆ ಬಿದ್ದ ಪರಿಣಾಮ, ಆರೋಪಿ ಅಟೋರಿಕ್ಷಾ  ಚಾಲಕ ಮತ್ತು ಅದರಲ್ಲಿದ್ದ ಪ್ರಯಾಣಿಕ ಪಕೀರಪ್ಪ ರವರಿಗೆ ಗಾಯಗಳಾಗಿ, ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಪ್ರಯಾಣಿಕ ಹನುಮಂತಪ್ಪ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿ, ಚಿಕಿತ್ಸೆಗೆ ದಾಖಲಾಗಿರುವುದಿಲ್ಲ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  107/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಹೆಮಂತ್‌ ಕುಮಾರ್‌ ಪ್ರಾಯ 21 ವರ್ಷ, ತಂದೆ: ಪರಮೇಶ್ವರ ಗೌಡ, ವಾಸ: ಎತಡ್ಕ ಮನೆ, ಅಲಂಗಾರು  ಅಂಚೆ & ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ 13-06-2022 ರಂದು 09-50 ಗಂಟೆಗೆ ಆರೋಪಿ ಟ್ಯಾಂಕರ್‌ ಚಾಲಕ ನವೀನ್‌ ಎಂಬವರು KA-01-AF-0405 ನೇ ನೋಂದಣಿ ನಂಬ್ರದ ಟ್ಯಾಂಕರನ್ನು ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಕೂಟೇಲು ಸೇತುವೆ ಬಳಿ,  ರಸ್ತೆಯ ಎಡ ಬದಿ ಹೈವೇ ಹೊಟೇಲ್‌ ಬಳಿ ನಿಲ್ಲಿಸಿದ್ದನ್ನು ಹೆದ್ದಾರಿಯಲ್ಲಿ ಹೋಗುವ ವಾಹನಗಳನ್ನು ಗಮನಿಸದೇ ಒಮ್ಮೆಲೇ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಚಲಾಯಿಸಿದ ಪರಿಣಾಮ, ಹೆದ್ದಾರಿಯಲ್ಲಿ ಪಿರ್ಯಾದುದಾರರಾದ ಹೇಮಂತ್‌ ಕುಮಾರ್‌ ರವರು ಸವಾರರಾಗಿ, ಮೋಹನ್‌ ಕುಮಾರ್‌ ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಅಲಂಗಾರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ  KA-21-EA-3728ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿಗೆ ಟ್ಯಾಂಕರ್‌ ಅಪಘಾತವಾಗಿ, ಪಿರ್ಯಾದುದಾರರು ಹಾಗೂ ಸಹಸವಾರ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಎಡಕೈಯ ಭುಜಕ್ಕೆ, ಎಡಕೈಯ ಬೆರಳುಗಳಿಗೆ ಗುದ್ದಿದ ರಕ್ತಗಾಯ, ಸಹಸವಾರ ಮೋಹನ್‌ ಕುಮಾರ್‌ ರವರಿಗೆ ಎಡ ಕೈಯ ಕೋಲು ಕೈಗೆ, ಎಡ ಕಾಲಿನ ಮೊಣಗಂಟಿಗೆ, ಎಡಕಾಲಿನ ತೊಡೆಗೆ ಗುದ್ದಿದ ರಕ್ತಗಾಯವಾಗಿ, ಚಿಕಿತ್ಸೆ ಬಗ್ಗೆ ಪುತ್ತೂರು ಹಿತ ಆಸ್ಪತ್ರೆಗೆ ದಾಖಲಾಗಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  108/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಇಮ್ರಾನ್ ಪ್ರಾಯ: 35 ವರ್ಷ ತಂದೆ: ಅಬ್ದುಲ್ ಲತೀಫ್ ವಾಸ: 6-42/5 ಮಾರಿಪಳ್ಳ ಮನೆ ಪುದು  ಗ್ರಾಮ ಮತ್ತು ಅಂಚೆ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 13-06-2022 ರಂದು ಬಂಟ್ವಾಳ ತಾಲೂಕು ಪುದು ಗ್ರಾಮದ ಮಾರಿಪಳ್ಳ ಜಂಕ್ಷನ್ ನಲ್ಲಿ ಇದ್ದ ಸಮಯ ಸುಮಾರು 09-00 ಗಂಟೆಗೆ ಮಾರಿಪಳ್ಳ ಬಸ್ಸು ನಿಲ್ದಾಣದಲ್ಲಿ ಇದ್ದವರು ಪಿರ್ಯಾದಿದಾರವನ್ನು ನೋಡಿ ಮಾತನಾಡಿಸಲು ರಸ್ತೆ ದಾಟುತ್ತಿದ್ದಾಗ ಮಸೀದಿ ಕಡೆಯಿಂದ KA-19-EW-5754 ನೇ ಮೋಟಾರ್ ಸೈಕಲ್ ನ್ನು ಅದರ ಸವಾರ ಸಹ ಸವಾರನನ್ನು ಕುಳ್ಳಿರಿಸಿಕೊಂಡು ದುಡುಕುತನ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಪಿರ್ಯಾದಿದಾರರ ಅಣ್ಣ ಇಮ್ತಿಯಾಜ್ ಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಮತ್ತು ಸಹ ಸವಾರ ರಸ್ತೆಗೆ ಬಿದ್ದರು ಪಿರ್ಯಾದಿದಾರರ ಅಣ್ಣ ಇಮ್ತಿಯಾಜ್ ಗೆ ತಲೆಗೆ ಕಾಲಿಗೆ ಸೊಂಟಕ್ಕೆ ರಕ್ತ ಗಾಯವಾಗಿದ್ದು ಮಂಗಳೂರಿನ ಐಲ್ಯಾಂಡ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದು ಸವಾರ ಮಹಮ್ಮದ್ ಕೈಗೆ ಗುದ್ದಿದ ಗಾಯ ಮತ್ತು ಸಹ ಸವಾರ ಮೊಹಮ್ಮದ್ ಅಫ್ರೀದ್ ರವರಿಗೆ ತಲೆಗೆ ಮುಖಕ್ಕೆ ರಕ್ತ ಗಾಯ ಕೈ ಕಾಲಿಗೆ ತರಚಿದ ಗಾಯವಾಗಿದ್ದು ಸವಾರ ಮತ್ತು ಸಹಸವಾರರು ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 70/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರೂಪೇಶ್ ಪ್ರಾಯ 30 ವರ್ಷ ತಂದೆ ದಿ.ಚಂದ್ರಶೇಖರ್ ವಾಸ.ಕುದ್ರೋಳಿ ಮನೆ ನೆಟ್ಟಣಿಗೆ ಮುಡ್ನೂರು ಗ್ರಾಮ ಪುತ್ತೂರು ತಾಲೂಕ ಎಂಬವರ ದೂರಿನಂತೆ  ಪಿರ್ಯಾದಿರವರು ದಿನಾಂಕ 12-06-2022 ರಂದು ಈಶ್ವರಮಂಗಲದಿಂದ ಪಂಚೋಡಿ ಕಡೆಗಿನ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಕೆಎ.21.ಎಲ್.2652 ನೇ ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ರಾತ್ರಿ ಸಮಯ ಸುಮಾರು 8.00 ಗಂಟೆಗೆ ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ಬೆಳ್ಳಿಚೆಡಾವು ಎಂಬಲ್ಲಿಗೆ ತಲುಪಿದಾಗ, ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಪಂಚೋಡಿ ಕಡೆಯಿಂದ ಈಶ್ವರಮಂಗಲ ಕಡೆಗೆ ಕೆಎ.21.ಝಡ್.2474 ನೇ ಕಾರನ್ನು ಅದರ ಚಾಲಕನು ನಿರ್ಲಕ್ಷ್ಯತನದಿಂದ ಹಾಗೂ ಅಜಾಗರೂಕತೆಯಿಂದ ತೀರ ಬಲ ಬದಿಗೆ ಚಲಾಯಿಸಿಕೊಂಡು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಎದುರಿನಿಂದ ಡಿಕ್ಕಿ ಹೋಡೆದಿದ್ದು,ಡಿಕ್ಕಿ ಹೋಡೆದ ಪರಿಣಾಮ ಪಿರ್ಯಾದಿದಾರರು ಹತೋಟಿ ತಪ್ಪಿ ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದಿದ್ದು,ಅದೇ ವೇಳೆಗೆ ಹಿಂದಿನಿಂದ ಬರುತ್ತಿದ್ದ ಪಿರ್ಯಾದಿದಾರರಿಗೆ ಪರಿಚಯದ  ಪ್ರವೀಶ್ ಮತ್ತು ಸಾರ್ವಜನಿಕರು ಎಬ್ಬಿಸಿ ,ಕುಳ್ಳಿರಿಸಿ ಉಪಚರಿಸಿದ್ದು, ಈ  ಅಪಘಾತದಿಂದ ಬಲ ಕಾಲಿನ ಪಾದಕ್ಕೆ ಹಾಗೂ ಬಲ ತಲೆಗೆ ಗುದ್ದಿದ ಹಾಗೂ ರಕ್ತಗಾಯವಾಗಿರುತ್ತದೆ ನಂತರ ಪ್ರವೀಶ್ ಎಂಬುವರು ಒಂದು ಅಂಬುಲೆನ್ಸ್ ನಲ್ಲಿ ಪುತ್ತೂರಿನ ಆದರ್ಶ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು,ಅಲ್ಲಿನ ವೈಧ್ಯರು ಪಿರ್ಯಾದಿದಾರರನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿ ಒಳರೋಗಿಯನ್ನಾಗಿ ದಾಖಲು ಮಾಡಿದ್ದು,.ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಅ.ಕ್ರ: 69/2022  ಕಲo: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚಂದ್ರಶೇಖರ ಸಾಲ್ಯಾನ್‌  ಪ್ರಾಯ:58 ವರ್ಷ ತಂದೆ:ಉಗ್ಗಪ್ಪ ಬಂಗೇರ ವಾಸ:ಶ್ರೀಮಂಗಳ,ಉರ್ಬನ ಕಂಪೌಂಡ್‌ ಸಿದ್ದಕಟ್ಟೆ ಅಂಚೆ,ಸಂಗಬೆಟ್ಟು ಗ್ರಾಮ, ಬಂಟ್ವಾಳ  ಎಂಬವರ ದೂರಿನಂತೆ ಪಿರ್ಯಾದುದಾರರು ಮೂಡಬಿದ್ರೆಯ ರೆಸ್ಟೋರೆಂಟ್ ನಲ್ಲಿ  ಕೆಲಸದಲ್ಲಿದ್ದು ದಿನಾಂಕ 10.06.2022 ರಂದು ಪಿರ್ಯಾದುದಾರರ ಪತ್ನಿಗೆ ಜ್ವರ ವಿದ್ದುದರಿಂದ ಪಿರ್ಯಾದುದಾರರ ಪತ್ನಿಯು ಮಗಳೊಂದಿಗೆ  ಮೂಡಬಿದ್ರೆಯ ರಿಂಗ್ ರೋಡ್ ನಲ್ಲಿರುವ ಅವಳ ತಾಯಿ ಮನೆಗೆ ಹೋಗಿರುತ್ತಾರೆ .ಪಿರ್ಯಾದುದಾರರು ಕೂಡ ಕೆಲಸ ಮುಗಿಸಿ ರಾತ್ರಿ ಸಮಯ ಆತ್ತೆ ಮನೆಗೆ ಹೋಗಿರುತ್ತಾರೆ. ದಿನಾಂಕ 13.06.2022 ರಂದು ಪಿರ್ಯಾದುದಾರರು ಸಾಯಂಕಾಲ 4.30 ಗಂಟೆಗೆ ಮನೆಗೆ ಬಂದು  ನೋಡಿದಾಗ ಮನೆಯ ಮುಂಬಾಗಿಲು ತೆರೆದಿದ್ದು ಗಾಬರಿಗೊಂಡು ಒಳಗೆ ಹೋಗಿ ನೋಡಿದಾಗ ಡೈನಿಂಗ್ ಹಾಲ್ ನ  ಎಡಬದಿಯಲ್ಲಿರುವ ಶೋಕೇಸ್ ಡ್ರಾವರ್ ಗಳನ್ನು ಎಳೆದು ಚೆಲ್ಲಾಪಿಲ್ಲಿ  ಮಾಡಿದ್ದು ಕಂಡು ಬಂದಿದ್ದು, ಕೊಣೆಯಲ್ಲಿ ಕಪಾಟನ್ನು ಮುರಿದು ಅದರೊಳಗಿರುವ ಸುಮಾರು 20,000 ಬೆಲೆಯ ರಾಡ್ಯೋ ವಾಚ್ ನ್ನು ಕಳವು ಮಾಡಿದ್ದು ಅಲ್ಲದೇ ಒಟ್ಟು ಅಂದಾಜು ಮೌಲ್ಯರೂ 1,56,000/-ರೂ ಗಳ ಚಿನ್ನಾಭರಣಗಳನ್ನು  ಯಾರೋ ಕಳ್ಳರು ದಿನಾಂಕ 11.06.2022 ರ ಸಂಜೆ 6.00 ಗಂಟೆಯಿಂದ  ದಿನಾಂಕ 13.06.2022 ರ ಸಂಜೆ 4.30 ಗಂಟೆಯ ಮದ್ಯೆ ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಯ ಮುಂಬಾಗಿಲನ್ನು ಯಾವೂದೋ ಸಾಧನದಿಂದ ಮೀಟಿ ಮನೆಯ ಒಳಪ್ರವೇಶಿಸಿ  ಕಳ್ಳತನ ಮಾಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ   41/2022 ಕಲಂ 454,457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಾರ್ಜ್ ಪ್ರಸನ್ನ ಡಿ’ಸೋಜ, ಪ್ರಾಯ: 40 ವರ್ಷ, ತಂದೆ: ದಿ. ಥೋಮಸ್ ಡಿಸೋಜಾ , ವಾಸ: ಮಲಾರು ಮನೆ ಕುರಿಯ ಗ್ರಾಮ ಮತ್ತು ಅಂಚೆ ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಿದಾರರ ತಂಗಿ ಅಗ್ನೆಸ್ ಪ್ರಮೀಳಾ ಡಿಸೋಜಾ ಪ್ರಾಯ 37 ವರ್ಷ ಎಂಬವರು ಪುತ್ತೂರು ತಾಲೂಕು ಪುತ್ತೂರು ಕಸ್ಬಾ ಗ್ರಾಮದ ಸೈಂಟ್ ವಿಕ್ಟರ್ ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು,  ದಿನಾಂಕ: 30.05.2022  ರಂದು ಮಧ್ಯಾಹ್ನ 12:00 ಗಂಟೆಯ ಸಮಯದಲ್ಲಿ   ವಿಕ್ಟರ್ ಶಾಲೆಯಲ್ಲಿ ಮಕ್ಕಳಿಗೆ ಬಿಸಿ ಊಟದ ಅಡುಗೆಯನ್ನು  ಮಾಡಿಕೊಂಡಿರುವಾಗ,  ಅಡುಗೆ ಮನೆಯ ಬಾಗಿಲು ಬಳಿ ತಯಾರು ಮಾಡಿ ಇಟ್ಟಿದ್ದ ಬಿಸಿ ಸಾಂಬಾರ್ ಪಾತ್ರೆಗೆ ಕಾಲು ಜಾರಿ ಬಿದ್ದ ಪರಿಣಾಮ ಪಾತ್ರೆಯಲ್ಲಿದ್ದ ಸಾಂಬಾರ್ ಪಿರ್ಯಾದಿದಾರರ ತಂಗಿಯ ಮೈ ಮೇಲೆ ಬಿದ್ದು ಸುಟ್ಟ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯರು  ಪರೀಕ್ಷಿಸಿ   ಒಳರೋಗಿಯಾಗಿ ದಾಖಲಿಸಿದ್ದು , ಚಿಕಿತ್ಸೆಯಲ್ಲಿದ್ದ ಪಿರ್ಯಾದಿದಾರರ  ತಂಗಿ  ಅಗ್ನೆಸ್ ಪ್ರಮೀಳಾ ಡಿಸೋಜಾರವರು  ದಿನಾಂಕ:12-06-2022 ರಂದು ಸಂಜೆ 3:19  ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಠಾಣಾ  ಯುಡಿಆರ್‌:  14/2022 ಕಲಂ: 174 ಸಿ.ಆರ್.ಪಿ.ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಜಗದೀಶ್ (32) ತಂದೆ;ಸದಾಶಿವ ನಾಯ್ಕ  ವಾಸ; ದೇವಿನಗರ ಮನೆ ,ಪುಣಚ ಗ್ರಾಮ ಮತ್ತು ಅಂಚೆ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರ ಅಕ್ಕ ಶಶಿಕಲಾ ಪ್ರಾಯ 39 ವರ್ಷ ರವರು ಸುಮಾರು ಒಂದು ವರ್ಷದಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು ದಿನಾಂಕ 12.06.2022 ರಂದು ರಾತ್ರಿ 08.00 ಗಂಟೆಯಿಂದ ದಿನಾಂಕ 13.06.2022 ರಂದು ಬೆಳಗ್ಗೆ 04.00 ಗಂಟೆಯ ಮಧ್ಯದ ಅವದಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 23/2022  ಕಲಂ 174 ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-06-2022 11:55 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080