ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಗಿರೀಶ್‌ ಕೆ ಪ್ರಾಯ 36 ವರ್ಷ ತಂದೆ: ಚನನ ಗೌಡ ವಾಸ: ಕೊಡಿಯೇಲು ಮನೆ, ಕೊಯ್ಯೂರು ಗ್ರಾಮ, ಬೆಳ್ತಂಗಡಿ ತಾಲೂಕು  ಎಂಬವರ ದೂರಿನಂತೆ ದಿನಾಂಕ: 13-08-2022 ರಂದು ಸಮಯ ಸುಮಾರು ಸಂಜೆ 3.45 ಗಂಟೆಗೆ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಕಾಶಿಬೆಟ್ಟು ಆಪೋಲೋ ಟಯರ್‌ ಶಾಫ್‌ನ ಬಳಿ ಪಾದಚಾರಿ ಜೈನಾಬ್‌ ರವರು ರಸ್ತೆ ದಾಟುತ್ತಿರುವಾಗ ಉಜಿರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಕೆಎ 19 ಇಪಿ 0679 ನೇ ಮೋಟಾರು ಸೈಕಲ್‌ನ್ನು ಅದರ ಸವಾರ ದೀಪಕ್‌ ರವರು ಸಹಸವಾರನನ್ನಾಗಿ ಕಿರಣ್‌ ಎಂಬವರನ್ನು ಕುಳ್ಳಿರಿಸಿಕೊಂಡು ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಜೈನಾಬ್‌ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಜೈನಾಬ್‌ರವರು ಅಲ್ಲಿಯೇ ರಸ್ತೆಗೆ ಬಿದ್ದುದಲ್ಲದೆ ಮೋಟಾರು ಸೈಕಲ್‌ ಸವಾರ ದೀಪಕ್‌ ಮತ್ತು ಸಹಸವಾರ ಕಿರಣ್‌ರವರು ಮೋಟಾರು ಸೈಕಲ್‌ನೊಂದಿಗೆ ರಸ್ತೆಗೆ ಬಿದ್ದು ಜೈನಾಬ್‌ರವರು ತಲೆಗೆ, ಎಡಕಾಲಿಗೆ ಗುದ್ದಿದ ರಕ್ತ ಗಾಯ, ದೀಪಕ್‌ರವರು ಸೊಂಟಕ್ಕೆ, ಬಲಕಾಲಿಗೆ ಗುದ್ದಿದ ತರಚಿದ ಗಾಯ, ಕಿರಣ್‌ರವರು ಎದೆಗೆ, ಎಡ ಕೈಯ ಬೆರಳುಗಳಿಗೆ ಗುದ್ದಿದ ತರಚಿದ ಗಾಯಗೊಂಡಿರುತ್ತಾರೆ. ಗಾಯಾಳುಗಳ ಪೈಕಿ ಜೈನಾಬ್‌ರವರನ್ನು  ಉಜಿರೆ ಬೆನಕ ಆಸ್ಪತ್ರೆಗೆ ಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕಡೆಯ ಆಸ್ಪತ್ರೆಗೆ ಕೊಂಡು ಹೋಗಿರುತ್ತಾರೆ, ದೀಪಕ್‌ ಮತ್ತು ಕಿರಣ್‌ರವರು ಉಜಿರೆ ಎಸ್‌ಡಿಎಮ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ:  106/2022 ಕಲಂ: 279 337 ಭಾ.ದ.ಸಂ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ದಿವಾಕರ ಆಚಾರ್ಯ, ಪ್ರಾಯ: 60 ವರ್ಷ, ತಂದೆ: ಶೇಷಪ್ಪ ಆಚಾರ್ಯ, ವಾಸ: ಕುಂಟಿಕಾನ ಮನೆ, ಅಮರ ಮುಡ್ನೂರು  ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ದಿವಾಕರ ಆಚಾರ್ಯರವರು ದಿನಾಂಕ: 12.08.2022 ರಂದು ಶ್ರೀರಾಂ ಪೇಟೆಯಲ್ಲಿರುವ ತನ್ನ ಅಂಗಡಿಯಿಂದ  ಹಳೇಗೇಟಿನಲ್ಲಿರುವ ತನ್ನ ಮನೆಗೆಂದು ಅವರ ಬಾಬ್ತು ಮೋಟಾರ್‌ ಸೈಕಲ್‌ ನಂಬ್ರ KA21L0010  ನೇದರಲ್ಲಿ ಹೊರಟು ಮಾಣಿ ಮೈಸೂರು ಹೆದ್ದಾರಿಯಲ್ಲಿ ಹೋಗುತ್ತಾ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಶ್ರಿರಾಮ ಪೇಟೆಯಲ್ಲಿರುವ ಇಂಡೇನ್‌ ಗ್ಯಾಸ್‌ ಏಜೆನ್ಸಿಯ ಎದುರು ಸುಮಾರು 10:00 ಗಂಟೆ ಸಮಯಕ್ಕೆ ತಲುಪುತ್ತಿದ್ದಂತೆ ಇಂಡೇನ್‌ ಗ್ಯಾಸ್‌ ಏಜೆನ್ಸಿ ಅಂಗಡಿಯ ಪ್ರವೇಶ ರಸ್ತೆಯಿಂದ ಸ್ಕೂಟಿ ನಂಬ್ರ KA21Q5889 ನೇದನ್ನು ಅದರ ಸವಾರರು ಯಾವುದೇ ಸೂಚನೆಯನ್ನು ನೀಡದೆ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಮುಖ್ಯ ರಸ್ತೆಗೆ ಒಮ್ಮೆಲೇ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್‌ ಸೈಕಲಿಗೆ ಡಿಕ್ಕಿ ಉಂಟು ಮಾಡಿದ ಪರಿಣಾಮ  ಮೋಟಾರ್‌ ಸೈಕಲ್‌ ಸವಾರರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಎಸೆಯಲ್ಪಟ್ಟು ಅವರ ಎಡಬದಿ ಹಣೆಗೆ ರಕ್ತಗಾಯವಾಗಿದ್ದು, ಅಪಘಾತ ಪಡಿಸಿದ ಸ್ಕೂಟಿ ಸವಾರರು ಕೂಡಾ ಗಾಯಗೊಂಡು ಸ್ಮೃತಿ ತಪ್ಪಿದ್ದು, ಸದ್ರಿಯವರನ್ನು ಸ್ಥಳೀಯರು ಉಪಚರಿಸಿ ರಿಕ್ಷಾವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದು, ಚಿಕಿತ್ಸೆ ಪಡೆದಿರುವುದಾಗಿದೆ . ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ ಅ. ಕ್ರ 91/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಶಾಲಿನಿ ಕೆ. ಪ್ರಾಯ- 33 ವರ್ಷ, ಗಂಡ-ಸುಬ್ರಾಯ ನಾಯ್ಕ, ವಾಸ- ಕಟ್ಟತ್ತಾರು  ಮನೆ,ನಿಡ್ಪಳ್ಳಿ ಗ್ರಾಮ, ಪುತ್ತೂರು ಎಂಬವರ ದೂರಿನಂತೆ ಫಿರ್ಯಾದುದಾರವರ ಗಂಡನಾದ ಸುಬ್ರಾಯ ನಾಯ್ಕರು ದಿನಾಂಕ:-12.08.2022 ರಂದು ರಾತ್ರಿ ಸುಮಾರು 11.15 ಗಂಟೆಗೆ ಫಿರ್ಯಾದುದಾರರು ಮತ್ತು ಫಿರ್ಯಾದುದಾರರ ಮಕ್ಕಳು ತಮ್ಮ ಮನೆಯಲ್ಲಿ ಮಲಗಿದ್ದು, ಆವೇಳೆ ಸುಬ್ರಾಯ ನಾಯ್ಕರು  ಸದ್ರಿ ಮನೆಯಲ್ಲಿ  ಟಿ.ವಿ. ನೋಡಿಕೊಂಡಿದ್ದರು.  ರಾತ್ರಿ ಸುಮಾರು  1.30 ಗಂಟೆಗೆ  ಮನೆಯ ಹಾಲ್‌ನಲ್ಲಿ ಏನೋ ಶಬ್ದ ಕೇಳಿ  ಫಿರ್ಯಾದುದಾರರು ಹಾಲ್ಗೆ ಬಂದು ನೋಡಿದಾಗ ಫಿರ್ಯಾದುದಾರರ ಗಂಡ  ಸುಬ್ರಾಯ ನಾಯ್ಕರು ನೈಲಾನ್ ಹಗ್ಗವನ್ನು ಮನೆಯ ಅಡ್ಡಕ್ಕೆ ಕಟ್ಟಿ ಅದರ ಇನ್ನೊಂದು ತುದಿಯನ್ನು ಕುಣಿಕೆಯನ್ನಾಗಿ ಮಾಡಿ ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿರುವುದು ಕಂಡು ಬಂದಿದ್ದು, ಬಳಿಕ ಫಿರ್ಯಾದುದಾರರು ಮತ್ತು ಮಗಳಾದ ಅನುಶ್ರೀ ಸೇರಿಕೊಂಡು ಸುಬ್ರಾಯ ನಾಯ್ಕರನ್ನು ನೆಲದ ಮೇಲೆ ಮಲಗಿಸಿ, ಬಳಿಕ ನೆರೆಮನೆಯ  ಸತೀಶರೊಂದಿಗೆ ಸೇರಿಕೊಂಡು ಆ್ಯಂಬುಲೆನ್ಸ್ ವೊಂದರಲ್ಲಿ  ಸುಬ್ರಾಯ ನಾಯ್ಕರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ 03.30 ಗಂಟೆಗೆ ಸದ್ರಿ ಆಸ್ಪತ್ರೆಯಲ್ಲಿ ಸುಬ್ರಾಯ ನಾಯ್ಕರನ್ನು ಪರೀಕ್ಷಿಸಿದ ವೈದ್ಯಾಧಿಕಾರಿಯವರು ಸುಬ್ರಾಯ ನಾಯ್ಕರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ :UDR 25/2022  ಕಲo: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶುಭವತಿ (40) ಗಂಡ: ಸದಾನಂದ ಎಮ್ ಕೆ ವಾಸ: ನೇರೋಲ್ ಪಲ್ಕೆ   ಮನೆ , ಕಳಂಜ  ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರಾದ ಗಂಡನಾದ ಸದಾನಂದ ಎಮ್ ಕೆ ಪ್ರಾಯ 47 ವರ್ಷ ರವರು ಕೃಷಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 12-08-2022 ರಂದು ಸುಮಾರು ಸಂಜೆ 6.30 ಗಂಟೆಗೆ ಅಡಿಕೆ ಗಿಡಗಳಿಗೆ ಮೈಲು ತುತ್ತನ್ನು ನೀರಿನಲ್ಲಿ ಹಾಕಿಟ್ಟು ಬರುತ್ತೇನೆ ಎಂದು ಪಿರ್ಯಾದಿದಾರರ ಬಳಿ ಹೇಳಿ ತೋಟಕ್ಕೆ ಹೋದವರು ರಾತ್ರಿ ಸಮಯ ಸುಮಾರು 7.30 ಗಂಟೆಯಾದರು ಮನೆಗೆ ಬಾರದೆ ಇದ್ದು ಪಿರ್ಯಾದಿದಾರರ ಎರಡನೇಯ ಮಗ ನವೀನ್ ಎಂಬಾತನು ತೋಟದ ಕಡೆ ಹೋಗಿ ಹುಡುಕಾಡಿ ವಾಪಸ್ಸು ಮನೆಗೆ ಬಂದು ಪಿರ್ಯಾದಿದಾರರ ಬಳಿ ತಂದೆ ತೋಟದಲ್ಲಿ ಬಿದ್ದಿರುವುದಾಗಿ ತಿಳಿಸಿದ್ದು ಪಿರ್ಯಾದಿದಾರರು ಹಾಗೂ ಮಕ್ಕಳು ಹೋಗಿ ತೋಟದಲ್ಲಿ ಬಿದ್ದಿದ್ದ ಸದಾನಂದ ಎಮ್ ಕೆ ರವರನ್ನು ಎತ್ತಿ ಆರೈಕೆ ಮಾಡಲಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದು ಮಾತಾನಾಡುತ್ತಿರಲಿಲ್ಲ ನಂತರ ಚಿಕಿತ್ಸೆ ಬಗ್ಗೆ ಕಾರ್ಯತ್ತಡ್ಕ ಮಲಬಾರ್ ಕ್ಲಿನಿಕ್ ಕರೆದುಕೊಂಡು ಹೋಗಿದ್ದು ವೈಧ್ಯರು ಪರೀಕ್ಷೀಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿಯ ವೈಧ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಯು ಡಿ ಆರ್ 46/2022 ಕಲಂ: 174 ಸಿಆರ್ ಪಿ ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-08-2022 11:24 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080