ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರಸಾದ್, ಪ್ರಾಯ: 34ವ‍ರ್ಷ ತಂದೆ: ವಾಸು ಸಫಲ್ಯ , ವಾಸ: ಕರ್ಬೆಟ್ಟು ಮನೆ, ನರಿಕೊಂಬು   ಗ್ರಾಮ, ಬಂಟ್ವಾಳ ತಾಲೂಕು. ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 12-09-2022 ರಂದು ತನ್ನ ಮೋಟಾರ್ ಸೈಕಲಿನಲ್ಲಿ ಮಡಂತ್ಯಾರಿಗೆ ಹೋಗಿ ವಾಪಾಸು ಬರುತ್ತಾ ಸಮಯ ಸುಮಾರು 18:00 ಗಂಟೆಗೆ ಬಂಟ್ವಾಳ ತಾಲೂಕು ನಾವೂರು ಗ್ರಾಮದ ಮಣಿಹಳ್ಳ ಹಳೆಗೇಟು ಎಂಬಲ್ಲಿಗೆ ತಲುಪಿದಾಗ ಎದುರಿನಿಂದ ಅಂದರೆ ಬಿ.ಸಿ.ರೋಡ್ ಕಡೆಯಿಂದ KA-04-MK-6105 ನೇ ಓಮ್ನಿ ಕಾರು ಚಾಲಕ ಕ್ಲೇಮೆಂಟ್ ಬೆನ್ನಿಸ್ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಅದೇ ಮಾರ್ಗವಾಗಿ ಓಮ್ನಿ ಕಾರಿನ ಮುಂದಿನಿಂದ ಹೋಗುತ್ತಿದ್ದ  KA-19-HH-4716ನೇ ಮೋಟಾರ್ ಸೈಕಲಿಗೆ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಸ್ಕೂಟರ್ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಸ್ಕೂಟರ್ ಸವಾರ ಹೇಮಂತ್ ಹೆಗ್ಡೆ ರವರಿಗೆ ಬಲ ಮತ್ತು ಎಡಭುಜಕ್ಕೆ , ಬಲ ಮತ್ತು ಎಡ ಮೊಣಕಾಲಿಗೆ ಗುದ್ದಿದ ರಕ್ತ ಗಾಯ ಹಾಗೂ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ಗಾಯಗೊಂಡ ಹೇಮಂತ್ ಹೆಗ್ಡೆ ರವರನ್ನು ಸೋಮಯಾಜಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 107/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ದಿನಾಂಕ: 10-09-2022 ರಂದು ಮೋಟಾರು ಸೈಕಲ್‌ ನಂಬ್ರ ಕೆಎ 21 X 7543 ನೇ ದ್ದನ್ನು  ಅದರ ಸವಾರ ಮೋಹನ್‌ ಗೌಡ ರವರು ಕೊಕ್ಕಡ ಕಡೆಯಿಂದ ಪಟ್ರಮೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಸಂಜೆ 5.00 ಗಂಟೆಗೆ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಕೊಕ್ಕಡ ಸಂಮ್ಯಕ್‌ ಕಾಂಪ್ಲೇಕ್ಸ್‌  ನ ಎದುರು ದುಡುಕುತನದಿಂದ ರಸ್ತೆಯ ಎಡಬದಿಯ ಅಂಚಿಗೆ ಸವಾರಿ ಮಾಡಿ ಸವಾರನ  ಚಾಲನಾ ಹತೋಟಿ ತಪ್ಪಿ ಮೋಟಾರು ಸೈಕಲ್‌ ಸವಾರ ಮೋಹನ್‌ ಗೌಡ ರವರು ಮೋಟಾರು ಸೈಕಲ್‌ ನೊಂದಿಗೆ ರಸ್ತೆಗೆ ಬಿದ್ದು ಎಡ ಕಣ್ಣಿಗೆ, ಹಾಗೂ ಎಡ ಭಾಗದ ತಲೆಗೆ ತೀವ್ರ ಗುದ್ದಿದ ರಕ್ತಗಾಯ, ಗಲ್ಲ, ಎಡ ಭುಜ, ಎಡ ಮೊಣಕೈಗೆ ತರಚಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ಸುರತ್ಕಲ್‌ ಶ್ರೀನಿವಾಸ ಆಸ್ಪತ್ರೆಯಲ್ಲಿ ದಾಖಲಾಗಿದ್ದು. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 111/2022 ಕಲಂ; 279,338ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಸಂತ ಕೆ (35) ತಂದೆ:ದಿ|| ಧರ್ಣಪ್ಪ ಗೌಡ ವಾಸ:ಕುಡ್ತಾಜೆ ಮನೆ ನೆಲ್ಯಾಡಿ ಗ್ರಾಮ ಮತ್ತು ಅಂಚೆ ಕಡಬ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರಾದ ವಸಂತ ಕೆ ಪ್ರಾಯ 35 ವರ್ಷ ರವರು ದಿನಾಂಕ 12-09-2022 ರಂದು ತನ್ನ ಬಾಬ್ತು ಆಟೋ ರಿಕ್ಷಾ ನಂ ಕೆಎ21 ಸಿ-1996 ನೇದರಲ್ಲಿ ಸುಲಿದ ತೆಂಗಿನ ತೆಂಗಿನ ಕಾಯಿಯನ್ನು ಮಾರಾಟ ಮಾಡಲು ಸಾಂತಪ್ಪ ನಾಯ್ಕರವರ ಜೊತೆ ಆಲಂಕಾರಿಗೆ ಹೋಗಿ ಮಾರಾಟ ಮಾಡಿ ವಾಪಾಸು ತನ್ನ ಮನೆಗೆ ಬರುತ್ತಿರುವ ರಾತ್ರಿ ಸಮಯ ಸುಮಾರು 20:00 ಗಂಟೆಗೆ  ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಜಾರೆಂಗೇಲು ಎಂಬಲ್ಲಿಗೆ ತಲುಪಿದಾಗ  ರಿಕ್ಷಾದ ಹಿಂದಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂ ಕೆಎ21 ಇಎ 8088 ನೇದರ ಚಾಲಕನು ತನ್ನ ಬಾಬ್ತು ಮೋಟಾರ್ ಸೈಕಲ್ ನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ  ರಿಕ್ಷಾದಿಂದ ಇಳಿದು ರಸ್ತೆ ದಾಟುತ್ತಿದ್ದ  ಸಾಂತಪ್ಪ ನಾಯ್ಕ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಸದ್ರಿಯವರ ಬಲ ಕೋಲು ಕಾಲಿಗೆ ಸಾಮಾನ್ಯ ಸ್ವರೂಪದ ಗಾಯಗೊಂಡವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 96/2022 ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶೇಖರ್ ಎಮ್ ಬಿ (43) ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ: 12-09-2022 ರಂದು 6.00 ಗಂಟೆಗೆ ಕಾಲೇಜಿನ ಪರೀಕ್ಷೆ ಮುಗಿಸಿ ಬೀಗ ಹಾಕಿ ಮನೆಗೆ ಹೋಗಿದ್ದು ದಿನಾಂಕ: 13-09-2022 ರಂದು ಬೆಳಿಗ್ಗೆ ಕಾಲೇಜಿನ ಅಟೆಂಡರ್ ಕಾಲೇಜಿನ ಬೀಗ ತೆಗೆಯಲು ಬಂದಾಗ ಕಾಲೇಜಿಗೆ ಒಳ ಪ್ರವೇಶಿಸುವರೇ ಎದುರು ಇದ್ದ ಗೇಟಿನ ಬೀಗವನ್ನು ಮುರಿದಿದ್ದು, 09.00 ಗಂಟೆಯ ಸಮಯಕ್ಕೆ ಪಿರ್ಯಾದುದಾರರಿಗೆ ಅಟೆಂಡರ್ ದೀಪಕ್ ಎಂಬವರು  ಕಾಲೇಜಿನ ಬೀಗವನ್ನು ಯಾರೋ ಕಳ್ಳರು ಬೀಗ ಮುರಿದಿರುವುದಾಗಿ ತಿಳಿಸಿದ್ದು, ಕೂಡಲೇ ಪಿರ್ಯಾದುದಾರರು ಹಾಗೂ ಇತರ ಉಪನ್ಯಾಸಕರು ಕಾಲೇಜಿಗೆ ಬಂದು ನೋಡಿದಾಗ ಕಛೇರಿಯ ಬೀಗ ವಿಜ್ಞಾನ ಪ್ರಯೋಗಾಲಯದ ಬೀಗ , ದೈಹಿಕ ಶಿಕ್ಷಣ ವಿಭಾಗದ ಬೀಗ ವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಬೀಗವನ್ನು ಮುರಿದು ಒಳಪ್ರವೇಶಿಸಿ ಕಛೆರೀಯ ಒಳಗಿದ್ದ ಎರಡು ಕಪಾಟುಗಳ ಬಾಗಿಲು ತೆರೆದಿರುತ್ತಾರೆ. ಕಂಪ್ಯೂಟರ್ ಟೇಬಲಿನ ಡ್ರವರನ್ನು ತೆರೆದು ಚೆಲ್ಲಾಪಿಲ್ಲಿ ಮಾಡಿ ಡ್ರವರ್ ನಲ್ಲಿದ್ದ ಡಿ ಎಸ್ ಸಿ ಕೀ. ಹಾಗೂ ವಿಜ್ಞಾನ ಕೊಠಡಿಯಲ್ಲಿದ್ದ ತಾಮ್ರದ ಎರಡು ದೀಪಗಳು ಕಳವು ಆಗಿರುತ್ತದೆ. ದೈಹಿಕ ಶಿಕ್ಷಣ ಕೊಠಡಿಯಲ್ಲಿದ್ದ ಕಪಾಟಿನ ಬಾಗಿಲು ತೆರೆದು ಹಾಗೂ ಮೇಜಿನ ಡ್ರವರ್ ತೆರದು ಸೊತ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುತ್ತಾರೆ. ಪ್ರಾಧ್ಯಾಪಕರ ಕೊಠಡಿಯ ಎರಡು ಕಪಾಟು ಹಾಗೂ ಕಬೋರ್ಡ್ ನ ಬಾಗಿಲಲು ತೆರದಿರುತ್ತಾರೆ. ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಬೀಗಗಳನ್ನು ಮುರಿದು ಕಳ್ಳತನ ಮಾಡಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ  ಅ.ಕ್ರ 97/2022 ಕಲಂ:454,457,380  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಚಂದ್ರಾವತಿ (40) ಗಂಡ: ಉಮೇಶ್ ಕುಲಾಲ್  ವಾಸ: ಎರ್ಮಳ ಕಂಡದೊಟ್ಟು ಮನೆ, ಅರಳ ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ: 12.09.2022 ರಂದು ಎಂದಿನಂತೆ ಬೆಳಿಗ್ಗೆ 06.00 ಗಂಟೆಗೆ ಮನೆಯಲ್ಲಿ ಚಹಾ ಕುಡಿದು ಕೆಲಸಕ್ಕೆ ಹೋಗುತ್ತೇನೆ ಎಂಬುದಾಗಿ ವಾಹನದಲ್ಲಿ ಹೋಗಿದ್ದು ಬೆಳಿಗ್ಗೆ 10.20 ಗಂಟೆಗೆ ಪಿರ್ಯಾದುದಾರರ ಗಂಡನ ಜೊತೆ ಕೆಲಸ ಮಾಡಿಕೊಂಡಿದ್ದ ಇನ್ಸಾ ರವರು ಪಿರ್ಯಾದುದಾರರ ಮೊಬೈಲ್ ಗೆ ಕರೆ ಮಾಡಿ ಗಂಡ ಉಮೇಶ್ ಯಾಕೆ ಕೆಲಸಕ್ಕೆ ಬಂದಿಲ್ಲ ಕೇಳಿದಾಗ ಪಿರ್ಯಾದುದಾರರು ಗಂಡನ ಮೊಬೈಲ್ ಗೆ ಕರೆ ಸ್ವೀಕರಿಸದೇ ಇದ್ದು ಪಿರ್ಯಾದುದಾರರು ಮತ್ತು  ಭಾವ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ದಿನಾಂಕ ;12.09.2022 ರಂದು ಬೆಳಿಗ್ಗೆ 06.00 ಗಂಟೆಯಿಂದ ಕಾಣೆಯಾಗಿದ್ದು ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ  69-2022 .ಕಲಂ   ಮನುಷ್ಯ ಕಾಣೆ ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ವೇಣೂರು ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ  ಯು.ಹೆಚ್. ಅಯಿಸಾ ಫರ್ಝಾನಾ (41)ಗಂಡ: ಕೆ.ಎ. ಉಸ್ಮಾನ್, ವಾಸ: ಉಳ್ತೂರು ಮನೆ,ಕುಕ್ಕೇಡಿ ಗ್ರಾಮ,ಮತ್ತು ಅಂಚೆ,ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ  ಜಮೀನಿನಲ್ಲಿ   ಆರೋಪಿಗಳು  ರಸ್ತೆ ಮಾಡುವ  ಉದ್ದೇಶದಿಂದ  ಆಗಾಗ   ತಕರಾರು  ಮಾಡುತ್ತಿದ್ದು  ದಿನಾಂಕ: 22-07-2022 ರಂದು   ರಾತ್ರಿ  ಸುಮಾರು  8:30 ಗಂಟೆಗೆ   ಆರೋಪಿಗಳಾದ    ಸಿದ್ದಿಕ್ ,ಶಮೀರ್,ಯಾಸಿರ್, ಅಲಿ ಸಗೀರ್, ಪಿ.ಎ. ಮೊಹಮ್ಮದ್ ಎಂಬವರು  ಒಟ್ಟು  ಸೇರಿ   ತಕ್ಷೀರು  ನಡೆಸುವ ಸಮಾನ  ಉದ್ದೇಶದಿಂದ  ಪಿರ್ಯಾದಿದಾರರ ಮನೆಯಂಗಳಕ್ಕೆ  ಅಕ್ರಮ  ಪ್ರವೇಶ  ಮಾಡಿ    ಪಿರ್ಯಾದಿದಾರರ   ಗಂಡನನ್ನು   ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು  ನೀನು ಈ ಬಗ್ಗೆ ಕೇಸು ಕೊಟ್ಟರೆ ನಿನ್ನನ್ನು ಎಲ್ಲಿ ಹೋದರು ಬಿಡುವುದಿಲ್ಲ ಎಂದು ಬೆದರಿಸಿ ನೀಡಿರುತ್ತಾರೆ. ಈ ಬಗ್ಗೆ ವೇಣೂರು ಪೊಲೀಸ್  ಠಾಣಾ ಅ.ಕ್ರ: 55/2022 ಕಲಂ: 143,147, 447,504,506 ಜೊತೆಗೆ  149  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

  • ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ: 13-09-2022 ರಂದು ಬಂಟ್ವಾಳ ನಗರ ಠಾಣೆಯಲ್ಲಿ ಅ. ಕ್ರ: 86/2022 ಕಲಂ:  354(ಎ), 354(ಡಿ), 506  ಐಪಿಸಿ   ಹಾಗೂ ಕಲಂ: 11, 12 ಫೋಕ್ಸೋ ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಕಡಬ ಪೊಲೀಸ್ ಠಾಣೆ : ದಿನಾಂಕ : 13.09.2022 ರಂದು ಕಡಬ ಪೊಲೀಸ್‌‌ ಠಾಣೆಯಲ್ಲಿ ಅ.ಕ್ರ 77/2022 ಕಲಂ:376(2)(F)(N),506,IPC-1860  ಕಲಂ:5(J)(II),6 POCSO-2012 ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮೋಹನ್‌ ದಾಸ್‌ ರೈ ಪ್ರಾಯ 42 ವರ್ಷ  ತಂದೆ ಕೃಷ್ಣ ರೈ ವಾಸ ಅಗರಿ ಮನೆ,ಕೊಳ್ನಾಡು ಗ್ರಾಮ  ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 13.09.2022 ರಂದು ಮನೆಯಲ್ಲಿರುವಾಗ ಸುಮಾರು ಮಧ್ಯಾಹ್ನ 2:30 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಚಿಕ್ಕಪ್ಪ ಪದ್ಮನಾಭ ರೈ ರವರ  ಮನೆಯಿಂದ ಬೊಬ್ಬೆ ಕೇಳಿ ಮನೆಯ ಬಳಿಗೆ ಹೋಗಿ ನೋಡಲಾಗಿ ಪದ್ಮನಾಭ ರೈ ರವರ ಮಗ ಸುನೀಲ್‌ ರೈ(43) ರವರು ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಪೆರ್ಲದ ಬೈಲು ತನ್ನ ಹೊಸ ಮನೆಯ ಬಳಿ ಮರದ ಕೊಂಬೆಗೆ ನೈಲಾನು ಹಗ್ಗದಿಂದ ನೇಣು ಬಿಗಿದುಕೊಂಡು ನೇತಾಡುವುದನ್ನು ಕಂಡು ಪಿರ್ಯಾದಿದಾರರು ತಕ್ಷಣ ಹಗ್ಗವನ್ನು ತುಂಡರಿಸಿ ಕೆಳಗೆ ಇಳಿಸಿ ಉಸಿರಾಡುತ್ತಿದ್ದ  ಸುನೀಲ್‌ ರೈ ರವರನ್ನು ಚಿಕಿತ್ಸೆಯ ಬಗ್ಗೆ ಅಂಬುಲೆನ್ಸ್‌ ವಾಹನದಲ್ಲಿ ಸುಮಾರು ಸಂಜೆ 4:00 ಗಂಟೆ ಸಮಯಕ್ಕೆ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ, ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 37/2022 ಕಲಂ 174ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಂಜೇವ ರೈ (71)  ತಂದೆ:ದಿಂ.ವೆಂಕಪ್ಪ ರೈ ವಾಸ:ಅಶ್ವಿನಿ ನಿಲಯ ಕಳಾರ ಮನೆ ಕಡಬ ಗ್ರಾಮ ಕಡಬ ತಾಲೂಕು  ಎಂಬವರ ದೂರಿನಂತೆ ಪಿರ್ಯಾದುದಾರರು ತನ್ನ ಪತ್ನಿ ಬೇಬಿ ಹಾಗೂ  ಮಕ್ಕಳೊಂದಿಗೆ ವಾಸವಾಗಿದ್ದು  ಕೃಷಿ ಕೆಲಸ ಮಾಡಿಕೊಂಡಿರುತ್ತಾರೆ  ಪಿರ್ಯಾದುದಾರರ ಪತ್ನಿಗೆ ಸುಮಾರು 10-15 ವರ್ಷಗಳಿಂದ ಅಸ್ತಮ ಹಾಗೂ ಸೊಂಟದ ನೋವು ಕಾಯಿಲೆಯಿದ್ದು ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ  ಗುಣಮುಖವಾಗಿರುವುದಿಲ್ಲ ಕಾಯಿಲೆ ವಿಚಾರವನ್ನು ಬೇಬಿ ರವರು ತನ್ನ ಮಕ್ಕಳೊಂದಿಗೆ ಸಂಬಂಧಿಕರಲ್ಲಿ ಹೇಳಿಕೊಂಡು ಮನನೊಂದಿರುತ್ತಾರೆ ಈಗಿರುವಾಗ ದಿನಾಂಕ:13.09.2022 ರಂದು ಬೆಳಗ್ಗೆ 08.00 ಗಂಟೆಗೆ ಪಿರ್ಯಾದುದಾರರು ಹುಲ್ಲು ತರುವರೇ ತೋಟಕ್ಕೆ ಹೋಗಿದ್ದು  ನಂತರ ಮನೆಗ ಬಂದು ನೋಡಲಾಗಿ ಪತ್ನಿ ಕಾಣದೇ ಇದ್ದು ನಂತರ  ಬೇಬಿ ರವರನ್ನು ಹುಡುಕಿದಾಗ ಮನೆಯ ಕೊಟ್ಟಿಗೆಯ ಒಳಗೆ ಕೊಟ್ಟಿಗೆಯ ಅಡ್ಡಕ್ಕೆ ಪ್ಲಾಸ್ಟೀಕ್‌ ಗೋಣಿಯ ಹಗ್ಗದಿಂದ ನೇಣು ಬಿಗಿದುಕೊಂಡು ನೇತಾಡುವುದನ್ನು ಕಂಡು ಪಿರ್ಯಾದುದಾರರು ಜೋರಾಗಿ ಬೊಬ್ಬೆ ಹೊಡೆದು ಹಗ್ಗವನ್ನು ಬಿಚ್ಚಿ ಅಂಗಳಕ್ಕೆ ಮಲಗಿಸಿ ನೋಡಲಾಗಿ ಪಿರ್ಯಾದುದಾರರ ಪತ್ನಿ ಬೇಬಿರವರು ಮೃತಪಟ್ಟಿರುವುದು ಧೃಡಪಟ್ಟಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಯು ಡಿ ಆರ್‌ 27/2022 ಕಲಂ:174  ಸಿ ಆರ್‌ ಪಿ ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-09-2022 10:54 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080