ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 • ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಯೋಗೀಶ್‌  ಆಚಾರ್ಯ, ಪ್ರಾಯ 48ವರ್ಷ, ತಂದೆ: ಕೆ.ವಿ ಲಕ್ಷ್ಮಣ್‌ ಆಚಾರ್ಯ ವಾಸ: ಮಠ ರಸ್ತೆ ಮನೆ. ಇರ್ವತ್ತೂರು ಗ್ರಾಮ & ಅಂಚೆ ,  ಬಂಟ್ವಾಳ  ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 13-10-2022 ರಂದು ಬೆಳಗ್ಗೆ 7.30 ಗಂಟೆಗೆ ಅವರ  ಹೆಂಡತಿ ವೇದಾವತಿಯನ್ನು ಕರೆದುಕೊಂಡು ಭಾರತ್‌ ಫೈನಾನ್ಸ್‌ ಕಂಪೆನಿಯ ಸಾಲದ ಕಂತಿನ ಹಣ ಕಟ್ಟುವ ಸಲುವಾಗಿ ಪಾಂಗಾಲ್ಪಾಡಿಗೆ ತೆರಳಿ ಹಣ ಕಟ್ಟಿ ಮರಳಿ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಬರುವಾಗ ಪಾಂಗಾಲ್ಪಾಡಿ ವಿಷ್ಣುಮೂರ್ತಿ ದೇವಸ್ಥಾದ ತಿರುವಿನ ಬಳಿ ಬರುತ್ತಿರುವಾಗ ಪಿರ್ಯಾದಿದಾರರ  ಹೆಂಡತಿ ಪಿರ್ಯಾದಿದಾರರಿಂದ  ಸುಮಾರು 50 ಮೀಟರ್‌  ದೂರದಲ್ಲಿ ನಡೆದುಕೊಂಡು ಹೋಗುತ್ತಿದ್ದು, ಪಿರ್ಯಾದಿದಾರರು  ಹಿಂದಿನಿಂದ ಹೋಗುತ್ತಿದ್ದು, . ಅ ಸಮಯ ವಾಮದಪದವು ಕಡೆಯಿಂದ ಟಿಪ್ಪರ್‌ ಲಾರಿ ಒಂದನ್ನು ಅದರ ಚಾಲಕ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ತೀರಾ ಎಡ ಭಾಗದಲ್ಲಿ ನಡೆದುಕೊಂಡು  ಹೋಗುತ್ತಿದ್ದ ಪಿರ್ಯಾದಿದಾರರ  ಹೆಂಡತಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಪಿರ್ಯಾದಿದಾರರ ಹೆಂಡತಿ ರಸ್ತೆ ಅಂಚಿಗೆ ರಟ್ಟಿ ಬಿದ್ದಿದ್ದು, . ಟಿಪ್ಪರ್‌ ಲಾರಿ ಚಾಲಕನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿ ಚಾಲಕನು ಇಳಿದು ಬಂದು ಪಿರ್ಯಾದಿದಾರರು  ಮತ್ತು ಲಾರಿಯ ಚಾಲಕ ಸೇರಿ  ವೇದಾವತಿಯವರನ್ನು  ಎತ್ತಿ ಉಪಚರಿಸಿದಾಗ ಆಕೆಯ ಬಲ ಕಾಲಿಗೆ ಗುದ್ದಿದ ರಕ್ತ  ಗಾಯ ಹಾಗೂ ತಲೆಗೆ ರಕ್ತ ಗಾಯವಾಗಿರುತ್ತದೆ. ವಾಹನ ನಂಬರ್‌ ನೋಡಲಾಗಿ KA19AD1217  ನೇ ಟಿಪ್ಪರ್‌ ಲಾರಿ  ಆಗಿರುತ್ತದೆ. ನಂತರ ಅದೇ ರಸ್ತೆಯಾಗಿ ಬಂದ ಪಿರ್ಯಾದಿದಾರರ ಪರಿಚಯದ ಉಮೇಶ್‌ ಎಂಬುವವರ ಆಟೋ ರಿಕ್ಷಾದಲ್ಲಿ ಟಿಪ್ಪರ್‌ ಲಾರಿ ಚಾಲಕ ಹಾಗೂ ಪಿರ್ಯಾದಿದಾರರು   ಹೆಂಡತಿ ವೇದಾವತಿಯನ್ನು ಕುಳ್ಳಿರಿಸಿಕೊಂಡು ವಾಮದಪದವು ಸರಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದಲ್ಲಿ ವೈದ್ಯೆರು ಹೆಚ್ಚಿನ ಚಿಕಿತ್ಸೆ ಬಗ್ಗೆ ಬಂಟ್ವಾಳದ  ತುಂಬೆ ಫಾದರ್‌ ಮುಲ್ಲರ್ಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದಂತೆ  ಅಂಬುಲೆನ್ಸ್‌ ಒಂದರಲ್ಲಿ  ತುಂಬೆ ಫಾದರ್‌ ಮುಲ್ಲರ್ಸ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದಲ್ಲಿ ವೈದ್ಯರು ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 78/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪುಷ್ಪಾ ಎನ್‌,  ಪ್ರಾಯ 44 ವರ್ಷ, ಗಂಡ: ಚಂದ್ರಶೇಖರ ಭಂಡಾರಿ, ವಾಸ: ಮುರ ಮನೆ, ಕಬಕ   ಗ್ರಾಮ, ನೆಹರೂನಗರ  ಅಂಚೆ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 12-10-2022 ರಂದು 19:00 ಗಂಟೆಗೆ ಆರೋಪಿ ಸ್ಕೂಟರ್‌ ಸವಾರೆ ಲೊಲಿಟಾ ಪ್ಲಾವಿ ಡಿʼಸೋಜಾ ಎಂಬವರು  KA-21-V-9976 ನೇ ನೋಂದಣಿ ನಂಬ್ರದ ಸ್ಕೂಟರನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ,  ಪುತ್ತೂರು ತಾಲೂಕು ಕಬಕ ಗ್ರಾಮದ ಮುರ ಜಂಕ್ಷನ್‌ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರೊಂದಿಗೆ ರಸ್ತೆ ದಾಟಲು ಹೆದ್ದಾರಿಯ ಅಂಚಿನಲ್ಲಿ ನಿಂತುಕೊಂಡಿದ್ದ ಅವರ ಮಗ ಹೇಮಂತ (08 ವರ್ಷ)  ಎಂಬವರಿಗೆ ಅಪಘಾತವಾಗಿ, ಹೇಮಂತ ರಸ್ತೆಗೆ ಬಿದ್ದು, ಅವನಿಗೆ ಬಲಕಾಲಿನ ಕೋಲು ಕಾಲಿಗೆ ಗುದ್ದಿದ ರಕ್ತಗಾಯ, ಬಲಕೈ ಭುಜಕ್ಕೆ ಗುದ್ದಿದ ಗಾಯ ಮತ್ತು  ತಲೆಗೆ ಗುದ್ದಿದ ಗಾಯವಾಗಿ,  ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಸವಾರೆಗೂ ಗಾಯಗಳಾಗಿ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಹೋಗಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 155/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

 • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕೆ. ಗಣೇಶ ನಾಯ್ಕ ಪ್ರಾಯ 64 ವರ್ಷ ತಂದೆ: ಕೆ.ರಾಧಾಕೃಷ್ಣ ನಾಯಕ್ ವಾಸ: ಲಕ್ಷ್ಮೀ ಸ್ಟೋ ಪಿ .ಬಿ ಕಾಂಪ್ಲೆಕ್ಷ್‌ ಉಪ್ಪಿನಂಗಡಿ  ಎಂಬವರ ದೂರಿನಂತೆ ಫಿರ್ಯಾದಿದಾರರು ಉಪ್ಪಿನಂಗಡಿ ರಥಬೀದಿಯಲ್ಲಿರುವ ಪಿ.ಬಿ ಕಾಂಪ್ಲಕ್ಷ್‌ ನಲ್ಲಿ ಹಾರ್ಡ್‌ ವೇರ್ ಅಂಗಡಿಯನ್ನು ನಡೆಸುತ್ತಿದ್ದು, ದಿನಾಂಕ 12-10-2022 ರಂದು ರಾತ್ರಿ ಸುಮಾರು 7.00 ಗಂಟೆಗೆ ಅಂಗಡಿಯ ಶೆಟರ್ ನ ಬೀಗ ಹಾಕಿ ಮನೆಗೆ ಹೋಗಿದ್ದು, ದಿನಾಂಕ 13-10-2022 ರಂದು ಬೆಳಿಗ್ಗೆ ಸುಮಾರು 05.40 ಗಂಟೆಗೆ ವಿನಾಯಕ ಸ್ಟೋರ್ ನ ಹರೀಶ ಪೈ ಎಂಬವರು ಕರೆ ಮಾಡಿ ಅಂಗಡಿಯ ಶೆಟರ್ ತೆರೆದಿದೆ ಎಂದು ಹೇಳಿದಾಗ ಫಿರ್ಯಾದಿದಾರರು ಅಂಗಡಿಗೆ ಬಂದು ನೋಡಿದಾಗ ಅಂಗಡಿಯ ಶೆಟರ್ ಗೆ ಹಾಕಿದ ಬೀಗವನ್ನು ಮುರಿದು  ಡ್ರಾಯರ್ ನ್ನು ತೆರೆದು ರೂ 50,000/- ನಗದನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂತು.  ಈ ಕಳ್ಳತನವನ್ನು ಯಾರೋ ಕಳ್ಳರು ದಿನಾಂಕ 12-10-2022 ರಂದು ರಾತ್ರಿ ಸುಮಾರು 7.00 ಗಂಟೆಯಿಂದ ದಿನಾಂಕ 13-10-2022 ರಂದು ಬೆಳಿಗ್ಗೆ ಸುಮಾರು 04:45 ಗಂಟೆಯ ಮಧ್ಯೆ  ಕಳವು ಮಾಡಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ   ಅ.ಕ್ರ 110/2022 ಕಲಂ:457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 2

 • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಲಕ್ಷ್ಮಣ ಪ್ರಾಯ: 37 ವರ್ಷ ತಂದೆ: ದಿ. ಅಣ್ಣು ವಾಸ: ನೆಲಪಾಲು ಮನೆ ಪಡ್ನೂರು ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಲಕ್ಷ್ಮಣ ಪ್ರಾಯ: 37 ವರ್ಷ ಎಂಬವರು ಪುತ್ತೂರು ತಾಲೂಕು ಕಸಬಾ ಗ್ರಾಮದಲ್ಲಿರುವ ಉದಯಗಿರಿ ಬಾರ್‌ & ರೆಸ್ಟೋರೆಂಟ್‌ ನ ಎದುರು  ಪಾನ್‌ ಬೀಡಾ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತಾರೆ. ದಿನಾಂಕ: 12-10-2022 ರಂದು  ರಾತ್ರಿ 10.45 ಗಂಟೆಯ ವೇಳೆಗೆ ಪಿರ್ಯಾದಿದಾರರು ಅವರ ಅಂಗಡಿಯಲ್ಲಿರುವ ಸಮಯ ರೂಪರಾಜ್‌ ಹಾಗೂ ಮನೋಜ್‌ ರವರು ಪಾನ್‌ ಅಂಗಡಿಗೆ ಬಂದಿದ್ದು ಆ ವೇಳೆಗೆ ಪಿರ್ಯಾದಿದಾರರು ಈ ಮೊದಲು ಪಾನ್‌ ಖರೀದಿ ಮಾಡಿದ ಬಾಬ್ತು ರೂ.60/- ಹಣವನ್ನು ರೂಪರಾಜ್‌ ನಲ್ಲಿ ಪಾವತಿ ಮಾಡುವಂತೆ ತಿಳಿಸಿದ್ದು. ಆಗ ಆತನು ತಾನು ಗೂಗಲ್‌ ಪೇನಲ್ಲಿ ಹಣವನ್ನು ಪಾವತಿ ಮಾಡಿರುತ್ತೇನೆ ಎಂಬುದಾಗಿ ತಿಳಿಸಿರುತ್ತಾನೆ. ಆಗ ಪಿರ್ಯಾದಿದಾರರು ತನಗೆ ಹಣ ಬಂದಿರುವುದಿಲ್ಲ ಗೂಗಲ್‌ ಪೇ ನಲ್ಲಿ ಹಣ ಹಾಕಿದ ಬಗ್ಗೆ ನಿನ್ನ ಫೋನನ್‌ ನಲ್ಲಿ ತೋರಿಸು ಎಂಬುದಾಗಿ ಹೇಳಿದಾಗ ರೂಪರಾಜ್‌ ನು ಏಕಾಏಕಿಯಾಗಿ ಕೋಪಗೊಂಡು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಅವರ ಶರ್ಟ್‌ ನ ಕಾಲರ್‌ ಪಟ್ಟಿಯನ್ನು ಹಿಡಿದು ಎಡಕೆನ್ನೆಗೆ ಕೈಯಿಂದ ಹೊಡೆದನು. ಜೊತೆಯಲ್ಲಿದ್ದ ಮನೋಜ ನು ಕೈಯಿಂದ ಹಾಗೂ ಕಾಲಿನಿಂದ ಪಿರ್ಯಾದಿದಾರರರಿಗೆ ಹಲ್ಲೆ ನಡೆಸಿ ಅಲ್ಲಿಂದ ತೆರಳಿರುತ್ತಾರೆ. ಬಳಿಕ ರಾತ್ರಿ ಸುಮಾರು 11.10 ಗಂಟೆಯ ವೇಳೆಗೆ ಪುನಃ ರೂಪರಾಜ್‌,ಮನೋಜ್‌,ವಿಖ್ಯಾತ್‌ ದೇವಾಡಿಗ ಹಾಗೂ ಸನತ್‌ ರವರು ಪಿರ್ಯಾದಿದಾರರ ಅಂಗಡಿಗೆ ಬಳಿ ಕಾರಿನಲ್ಲಿ ಬಂದು ಮನೋಜ್‌ ಎಂಬಾತನು ಪಿರ್ಯಾದಿಯನ್ನು ಉದ್ದೇಶಿಸಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅಲ್ಲೇ ಇದ್ದ ಸೋಡಾ ಬಾಟ್ಲಿಯ ಟ್ರೇಯಿಂದ ಪಿರ್ಯಾದಿದಾರರ ಬಲ ಕೆನ್ನೆಗೆ ಹಲ್ಲೆ ನಡೆಸಿದ್ದು ಸನತ್‌ ಹಾಗೂ ವಿಖ್ಯಾತ್‌ ದೇವಾಡಿಗ ಕೈಯಿಂದ ಹೊಡೆದು ಕಾಲಿನಿಂದ ತುಳಿಯುತ್ತಿರುವಾಗ ಪಿರ್ಯಾದಿದಾರರು ಬೊಬ್ಬೆ ಹಾಕಿದ್ದು ಆ ವೇಳೆಗೆ ಬಾರ್‌ ನ  ಸಿಬ್ಬಂದಿ ಅಲ್ಲಿಗೆ ಬರುವುದನ್ನು ಕಂಡ ಆರೋಪಿಗಳು ಅಲ್ಲಿಂದ ತೆರಳಿರುತ್ತಾರೆ ಗಾಯಗೊಂಡ ಫಿರ್ಯಾದಿದಾರರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ   ಅ.ಕ್ರ: 85/2022 ಕಲಂ: 504,323, 324, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬಂಟ್ವಾಳ  ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನವೀನ(26) ವರ್ಷ ತಂದೆ ವಿಠಲ ಪೂಜಾರಿ, ನಾನಿಲ್ದಡಿ ಮನೆ, ಗರ್ಡಾಡಿ ಗ್ರಾಮ,ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರ ಕಾರು ಚಾಲಕರಾಗಿದ್ದು, ದಿನಾಂಕ 12-10-2022 ರಂದು  ರಾತ್ರಿ 10.45 ಗಂಟೆಗೆ ಮಂಗಳೂರು ಸರ್ಕೂಟ್ ಹೌಸ್ ನಿಂದ ಪಿರ್ಯಾದಿದಾರರು ಶಾಸಕರ ಕಾರಿನಲ್ಲಿ ಒಬ್ಬನೇ ಚಲಾಯಿಸಿಕೊಂಡು,  ಶಾಸಕರು ಅವರ ಸಂಬಂದಿಕರಾದ ಪ್ರಶಾಂತ್  ಮತ್ತು  ಕುಶಿತ್ ರವರ ಕಾರಿನಲ್ಲಿ  ಮಂಗಳೂರು ಸರ್ಕೂಟ್ ಹೌಸ್ ನಿಂದ ಹೊರಟು   ಪಿರ್ಯಾದಿದಾರರ ಎದುರಿನಿಂದ  ಶಾಸಕರು ಕಾರು ಹೋಗುತ್ತಿದ್ದು ನಂತೂರು,ಪಡೀಲ್  ಮಾರ್ಗವಾಗಿ ಬರುತ್ತಾ  ನಾಗುರಿ ರೈಲ್ವೇ ಓವರ್ ಬ್ರಿಡ್ಜ್  ತಲಭಾಗದಲ್ಲಿ ಒಂದು ಸ್ಕಾರ್ಪಿಯೋ ಕಾರು ಪಿರ್ಯಾದಿದಾರರು ಚಲಾಯಿಸಿಕೊಂಡು ಬರುತ್ತಿದ್ದ  ಕಾರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದು  ಪಿರ್ಯಾದಿದಾರರು  ಈ ಬಗ್ಗೆ ಶಾಸಕರಿಗೆ ಮೊಬೈಲ್ ಮೂಲಕ ತಿಳಿಸಿದ್ದು,ಮುಂದಿನ ಕಾರಿನಲ್ಲಿ ಶಾಸಕರು ಪಿರ್ಯಾದಿದಾರನ್ನು  ಕಾರನ್ನು  ಹಿಂಭಾಲಿಸಿಕೊಂಡು ಬರುವಂತೆ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ಶಾಸಕರಿದ್ದ ಕಾರನ್ನು ಹಿಂಬಾಲಿಸಿಕೊಂಡು ಹೋಗುತ್ತಾ ಕಾರಿನ ಗ್ಲಾಸನ್ನು ಕೆಳಗೆ ಸರಿಸಿದಾಗ ಸ್ಕಾರ್ಪಿಯೋ ಕಾರಿನ ಚಾಲಕನು ಪಿರ್ಯಾದಿದಾರರಿದ್ದ ಕಾರನ್ನು ಬಿಟ್ಟು  ಎದುರಿನಿಂದ ಹೋಗುತ್ತಿದ್ದ  ಶಾಸಕರ ಕಾರನ್ನು ಫರಂಗಿಪೇಟೆ ಮೀನು ಮಾರ್ಕೆಟ್ ನ ಸ್ವಲ್ಪ ಮುಂದಕ್ಕೆ  ತಲುಪುತ್ತಿದ್ದಂತೆ ರಾತ್ರಿ 11.15 ಗಂಟೆಗೆ  ಸ್ಕಾರ್ಪಿಯೋ ಕಾರಿನ ಚಾಲಕನು ಶಾಸಕರ ಕಾರಿಗೆ ಅಡ್ಡಲಾಗಿ ಬಂದು ಕಾರಿನ ಚಾಲಕ ಕುಶಿತ್ ರವರನ್ನು ಉದ್ದೇಶಿಸಿ  ಅವ್ಯಾಚವಾಗಿ ಬೈದು  ತನ್ನ ಕೈಯಲ್ಲಿದ್ದ ಆಯುಧವನ್ನು ತೋರಿಸಿ ಬೆದರಿಕೆ ಒಡ್ಡಿರುತ್ತಾನೆ ಕೂಡಲೇ ಪಿರ್ಯಾದಿದಾರರು ಫರಂಗಿಪೇಟೆ ಹೊರಠಾಣೆಯ ಬಳಿ ನಿಲ್ಲಿಸಿದ ಸಮಯ ಸ್ಕಾರ್ಪಿಯೋ ಕಾರನ್ನು ರಭಸವಾಗಿ ಬಿ.ಸಿ.ರೋಡು ಕಡೆಗೆ  ಚಲಾಯಿಸಿಕೊಂಡು ಹೋಗಿರುತ್ತಾನೆ ಸ್ಕಾರ್ಪಿಯೋ ಕಾರು ಬಿಳಿ ಬಣ್ಣದ್ದಾಗಿದ್ದು. ಈ ಬಗ್ಗೆ ಬಂಟ್ವಾಳ  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ:-341,504,506  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

 • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸೋಮು ಪ್ರಾಯ:50 ವರ್ಷ ಗಂಡ:ಬಾಬು ಮುಗೇರ   ವಾಸ: ಕುರುಂಜ ಮನೆ ಶಿಬಾಜೆ  ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡ ಮೃತ ಬಾಬು ಮುಗೇರ , ಪ್ರಾಯ: 55 ವರ್ಷ ಎಂಬವರು ಈ ದಿನ ದಿನಾಂಕ: 13.10.2022 ರಂದು ಸಮಯ ಸುಮಾರು 13.00 ಗಂಟೆಗೆ ತನ್ನ ಮನೆಯಾದ ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮದ ಶಿಬಾಜೆ ಕುರುಂಜ ಮನೆ ಎಂಬಲ್ಲಿ ತೋಟಕ್ಕೆ ಸೊಪ್ಪು ಹಾಕಲೆಂದು ಮರಕ್ಕೆ ಹತ್ತಿ ಮರದ ಗೆಲ್ಲುಗಳನ್ನು ಕಡಿಯುತ್ತಿರುವ ಸಮಯ ಆಕಸ್ಮಿಕವಾಗಿ ಕಾಲುಜಾರಿ ಆಯತಪ್ಪಿ ಕೆಳಗೆ ಬಿದ್ದವರನ್ನು ಆರೈಕೆ ಮಾಡಿ ಚಿಕಿತ್ಸೆ ಬಗ್ಗೆ ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆತಂದಲ್ಲಿ ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದಂತೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಪಿರ್ಯಾದಿದಾರರ ಗಂಡ ಬಾಬು ಮುಗೇರ ರವರು ದಾರಿ ಮದ್ಯೆ  ಮೃತಪಟ್ಟಿರುವುದಾಗಿ ತಿಳಿಸಿರುವುದು.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಕಲಂ: 174 ಸಿ ಆರ್ ಪಿ ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಆಶಿಕ್ ಪಾಷ ಪ್ರಾಯ (23)  ತಂದೆ ಸಯ್ಯದ್ ಮುಜಾಹಿದ್ , ಗೋಳಿಪಡ್ಪು ಮನೆ, ಸಜಿಪನಡು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ಮೃತ ಕಲಂದರ್ ಬಾಬು ರವರು ಮದ್ಯಾನ್ಹ 2.00 ಗಂಟೆಗೆ ಪತ್ನಿ ಜಮೀಳಾಲೊಂದಿಗೆ  ಮೊಟಾರ್ ಸೈಕಾಲ್ ನಲ್ಲಿ ಜೊತೆಯಾಗಿ  ಮನೆಯಿಂದ ಸಜಿಪನಡು ಕಡೆ ಹೋಗಿದ್ದು ಪಿರ್ಯಾದಿದಾರರಾದ ಮೃತ ಕಲಂದರ್ ಬಾಬು ರವರ ಅಳಿಯ ಅಶೀಕ್ ಪಾಷ ಮನೆಗೆ ಊಟಕ್ಕೆಂದು ಹೋಗಿದ್ದು ಸಂಜೆ 05.30 ಗಂಟೆಗೆ ವಾಪಸ್ಸು ಎಮ್ ಆರ್ ಗೆಟ್  ಆಟದ ಮೈದಾನಕ್ಕೆ ಬಂದು ಆಟದ ಮೈದಾನದಲ್ಲಿ ಆಟವಾಡುತ್ತಿದ್ದ ಸಮಯ ಮೃತ ಕಲಂದರ್ ಬಾಬು ರವರ ಪತ್ನಿ ಜಲೀಲಾ ಸಂಜೆ 06.30 ಗಂಟೆಗೆ ಜೋರಾಗಿ ಬೊಬ್ಬೆ ಹಾಕುವುದನ್ನು ಕೇಳಿ ಓಡಿ ಹೋದಾಗ ಕಲಂದರ್ ಬಾಬು ರವರು  ಮನೆಯ ಓಳಗೆ ಕೋಣೆಯಲ್ಲಿ  ಬಾಗಿಲು ಹಾಕಿ ಕುತ್ತಿಗೆಗೆ  ನೇಣು ಬಿಗಿದು ಕೊಂಡು  ಆತ್ಮ ಹತ್ಯೆಗೆ ಪ್ರಯತ್ನಿಸಿದ್ದು ತಿಳಿದು ಕೋಣೆಯ ಬಾಗಿಲನ್ನು ಒಡೆದು ಓಳಗೆ ಹೋಗಿ ಕುಣಿಕೆಯನ್ನು ಇಳಿಸಿದಾಗ ಉಸಿರಾಟ ಇದ್ದು ಕೂಡಲೇ ಒಂದು ವಾಹನದಲ್ಲಿ ಕರೆದುಕೊಂಡು ಬರುತ್ತಿರುವಾಗ ದಾರಿ ಮದ್ಯೆ ಉಸಿರಾಟ ನಿಂತಿದ್ದು ಕೂಡಲೇ ಬಂಟ್ವಾಳ ಆಸ್ಪತ್ರೆಗೆ ಕರೆದುಕೊಂಡು ಬಂದು ರಾತ್ರಿ 09.05 ಗಂಟೆಗೆ ವೈದ್ಯರು ಪರಿಕ್ಷೀಸಿ ದಾರಿ ಮದ್ಯೆ ಮೃತ ಪಟ್ಟಿರುವುದಾಗಿ ತಿಳಿಸಿದ್ದು ಮೃತ ಕಲಂದರ್ ಬಾಬ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದು.ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್‌ ನಂ 53-2022 ಕಲಂ 174 ಸಿ ಆರ್‌ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-10-2022 12:41 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080