ಅಭಿಪ್ರಾಯ / ಸಲಹೆಗಳು

 ಅಪಘಾತ ಪ್ರಕರಣ: 01

  • ಪುಂಜಾಲಕಟ್ಟೆ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಸೀತಾರಾಮ , ಪ್ರಾಯ 42ವರ್ಷ, ತಂದೆ: ಪೂವಪ್ಪ ಪೂಜಾರಿ   ವಾಸ: ಜನತಾ ಕಾಲನಿ ಕುದ್ರಡ್ಕ  ಮನೆ, ತಣ್ಣೀರುಪಂಥ ಗ್ರಾಮ,  ಬೆಳ್ತಂಗಡಿ ತಾಲೂಕು,ಎಂಬವರ ದೂರಿನಂತೆ ಫಿರ್ಯಾದಿದಾರ ತಮ್ಮ ರಮೇಶ್‌ ಎಂಬವರು ದಿನಾಂಕ: 11.12.2022 ರಂದು ಎಂದಿನಂತೆ ಬೆಳಿಗ್ಗೆ ತನ್ನ ಬಾಬ್ತು ದ್ವಿಚಕ್ರ ವಾಹನ ವಾಹನ KA21 X9017 ನೇದರಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದವರು ವಾಪಾಸು ಮನೆ ಕಡೆಗೆ ಬರುತ್ತಿರುವಾಗ ಸಂಜೆ 7:00 ಗಂಟೆಗೆ ಬೆಳ್ತಂಗಡಿ ತಾಲೂಕು, ತಣ್ಣೀರುಪಂಥ ಗ್ರಾಮದ ಅಳಕೆ ಮಸೀದಿ ಮುಂಭಾಗ ತಲುಪಿದಾಗ ಎದುರಿನಿಂದ ಮಡಂತ್ಯಾರು ಕಡೆಯಿಂದ ಮಾರುತಿ ಓಮ್ನಿ ಕಾರು KA19MA1714 ನೇದನ್ನು ಅದರ ಚಾಲಕ ಫೈಸಲ್‌ ಎಂಬಾತನು ಕಾರನ್ನು ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಮೇಶ್‌  ಎಂಬವರು  ರಸ್ತೆಯ ತೀರಾ ಎಡಭಾಗದಲ್ಲಿ  ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಮೇಶ್‌ ರವರ ಬಲಕಾಲಿಗೆ ಮೂಳೆ ಮುರಿತದ ಗಾಯ ಹಾಗೂ  ಮುಖದ ದವಡೆಗೆ ರಕ್ತಗಾಯ ಹಾಗೂ ದೇಹದ ಇತರ ಭಾಗಗಳಿಗೆ ತರಚಿದ ಗಾಯವಾಗಿದ್ದು, ಗಾಯಾಳು ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 96/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜೀವಂದರ್, ಪ್ರಾಯ 45 ವರ್ಷ,ತಂದೆ: ಅಚ್ಚಪ್ಪ ಪೂಜಾರಿ,ವಾಸ: ಖಂಡಿಗ ಹೊಸ ಮನೆ,ಕಾಶಿಪಟ್ನ ಗ್ರಾಮ, ಬೆಳ್ತಂಗಡಿ ಗ್ರಾಮ ಎಂಬವರ ದೂರಿನಂತೆ ದಿನಾಂಕ 13.12.2022 ರಂದು ಸಂಜೆ 4.30 ರ ಸಮಯಕ್ಕೆ ತನ್ನ ಚಿಕ್ಕಪ್ಪನ ಮನೆಯಾದ ಖಂಡಿಗ ಹೊಸಮನೆ ಶೇಖರ ಪೂಜಾರಿಯವರ ಮನೆಗೆ ಬಂದು ಅವರ ಮನೆಯ ಅಂಗಳದಲ್ಲಿ ನಿಂತು ಫೋನಿನಲ್ಲಿ ಮಾತನಾಡುತ್ತಿದ್ದ ಸಮಯ ಸಂಜೆ 4.45 ಗಂಟೆಗೆ ಬೆಳ್ತಂಗಡಿ ತಾಲೂಕು ಕಾಶಿಪಟ್ನ ಗ್ರಾಮದ ಪೇರಂದಡ್ಕ-ಮಿತ್ತೊಟ್ಟು ಎಂಬಲ್ಲಿ ಶಿರ್ತಾಡಿ-ಕೊಕ್ರಾಡಿ ರಸ್ತೆಯಲ್ಲಿ ಪೆರಾಡಿ ಕಡೆಯಿಂದ KA 70 4264 ನೇ ಅಟೋರಿಕ್ಷಾವನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸುತ್ತಾ ರಸ್ತೆಯ ಬಲಬದಿಗೆ ಬಂದು ಅದರ ಎದುರು ಬದಿಯಿಂದ ಅಂದರೆ ಕಾಶಿಪಟ್ನ ಕಡೆಯಿಂದ ಬರುತ್ತಿದ್ದ KA 19 ET 7592 ನೇ ಆಕ್ಟಿವಾ ದ್ವಿಚಕ್ರ ವಾಹನಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದ್ದು ಇದರ ಪರಿಣಾಮ ದ್ವಿಚಕ್ರ ವಾಹನ ಸವಾರ ರಸ್ತೆಗೆ ಎಸೆಯಲ್ಪಟ್ಟು ಎಸೆಯಲ್ಪಟ್ಟ ರಭಸಕ್ಕೆ ಮುಖ ಡಾಮಾರು ರಸ್ತೆಗೆ ಜಜ್ಜಿ ಹೋಗಿ ಕಿವಿ, ಮೂಗುಗಳಿಂದ, ಬಾಯಿಯಿಂದ ತೀವೃ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮೃತಪಟ್ಟ ಸವಾರನ ಹೆಸರು ನಿತ್ಯಾನಂದ ಆಗಿರುತ್ತದೆ. ಅಪಘಾತಪಡಿಸಿದ ರಿಕ್ಷಾ ನೊಂದಣಿ ಸಂಖ್ಯೆ KA 70 4264 ಇದರ ಚಾಲಕನ ಹೆಸರು ಪ್ರದೀಪ್‌ ಆಗಿರುತ್ತದೆ. ಈ ಅಪಘಾತದಿಂದ ಎರಡು ವಾಹನಗಳು ಕೂಡಾ ಜಖಂಗೊಂಡಿರುತ್ತದೆ. ಈ ಬಗ್ಗೆ ವೇಣೂರು ಪೊಲೀಸ್  ಠಾಣಾ ಅ.ಕ್ರ: 79/2022 ಕಲಂ: 279, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು  ಪ್ರಕರಣ: 02

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅಬುಬಕ್ಕರ್  ಪ್ರಾಯ 58 ವರ್ಷ  ತಂದೆ: ಫಕ್ರು ಬ್ಯಾರಿವಾಸ: ಕೊಳಕೆ ಮನೆ ನಗ್ರಿ ಅಂಚೆ ಸಜಿಪ ಮೂಡ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ.  ಫಿರ್ಯಾದಿದಾರರು ದಿನಾಂಕ 12-12-2022 ರಂದು ಸಂಜೆ ಅಂಗಡಿಯಿಂದ ಮನೆಗೆ ಬಂದು ನಂತರ ರಾತ್ರಿ 7.30 ಗಂಟೆಗೆ ಮನೆಯ ಮುಂದಿನ ಬಾಗಿಲ್ ನ್ನು ಒಳಗಿನಿಂದ ಭದ್ರಪಡಿಸಿ, ಹಿಂದಿನ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿ ಭದ್ರಪಡಿಸಿ ಹೆಂಡತಿಯ ತವರು ಮನೆಯಾದ ಬೋಳಿಯಾರಿಗೆ ಹೋಗಿರುತ್ತಾರೆ. ದಿನಾಂಕ 13-12-2022 ರಂದು ಫಿರ್ಯಾದಿದಾರರ ಹೆಂಡತಿ ಬೋಳಿಯಾರಿನಿಂದ  ಕೊಳಕೆ ಮನೆಗೆ ಮಧ್ಯಾಹ್ನ 3.30 ಗಂಟೆ ಬಂದಾಗ ಮನೆಯ ಹಿಂಬದಿಯ ಬಾಗಿಲಿನ ಬೀಗವನ್ನು ಒಡೆದ ವಿಚಾರವನ್ನು ಪೋನ ಮಾಡಿ ಫಿರ್ಯಾದಿದಾರರಿಗೆ ತಿಳಿಸಿದ್ದು, ಅದರಂತೆ ಫಿರ್ಯಾಧಿದಾರರು ಬಂದು ನೋಡಲಾಗಿ ಹಿಂಬದಿಯ ಬಾಗಿಲಿನ ಬೀಗವು ನೀತಾಡುತ್ತಿದ್ದು ಒಳಗೆ ಹೋಗಿ ನೋಡಲಾಗಿ ಮನೆಯ ಮಾಸ್ಟರ್ ಬೆಡ್ ರೊಮಿನಿ ಗಾಡ್ರೇಜ್ ನ ಡೋರಗಳು ತೆರದಿದ್ದು ಅದರಲ್ಲಿದ್ದ ಮಕ್ಕಳ ಚಿನ್ನಾಭರಣ ಇಡುವ ಬಾಕ್ಸ್ ತೆರೆದಿದ್ದು, ಯಾರೋ ಕಳ್ಳರು ದಿನಾಂಕ 12-12-2022 ರಂದು ಸಂಜೆ 7.30 ಗಂಟೆಯಿಂದ ದಿನಾಂಕ 13-12-2022 ರಂದು ಮಧ್ಯಾಹ್ನ 3.30 ಗಂಟೆಯ ಮದ್ಯಾವಧಿಯಲ್ಲಿ ಮನೆಯ ಹಿಂಬದಿಯ ಬಾಗಿಲಿನ ಲಾಕ್ ನ್ನು ಮುರಿದು ಮನೆಯೊಳಗೆ ಪ್ರವೇಶಿಸಿ ಗಾಡ್ರೇಜ್ ನಲ್ಲಿ ಇರಿಸಿದ ಸುಮಾರು 168 ಗ್ರಾಂ ತೂಕದ ಚಿನ್ನಾಭರಣಗಳು ಸುಮಾರು 7,56,000/- ರೂ ಮತ್ತು 7000/- ರೂ ನಗದು ಹಣ ಹಾಗೂ 5000/- ರೂ ಮೌಲ್ಯದ ಬೆಳ್ಳಿಯ ಗೆಜ್ಜೆ ಯಾರೋ ಕಳ್ಳರು ಕಳವು ಮಾಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆ ಅ.ಕ್ರ 115/2022  ಕಲಂ:  454, 457, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಇರ್ಷಾದ್ ಬಿ (32) ತಂದೆ: ಅಬೂಬಕ್ಕರ್ ವಾಸ: ಒಕ್ಕೆತ್ತೂರು ಮನೆ ವಿಟ್ಲ ಕಸಬಾ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 08.12.2022 ರಂದು ಕೆಲಸ ಮುಗಿಸಿ ಸಂಜೆ 5.00 ಗಂಟೆ ಸಮಯಕ್ಕೆ ಗಾರ್ಬಲ್ ನ ಶಟರ್ ಮುಚ್ಚಿ ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ 13.12.2022 ರಂದು  ಬೆಳಗ್ಗೆ 09.00 ಗಂಟೆಗೆ ಗಾರ್ಬಲ್ ನ   ಬೀಗ ತೆರೆದು ನೋಡಿದಾಗ ಅಡಿಕೆ ಚೀಲಗಳು ಚೆಲ್ಲಾ ಪಿಲ್ಲಿಯಾಗಿದ್ದು ಹಿಂಬದಿ ಕಿಟಿಕಿ ಸರಳುಗಳನ್ನು ಮುರಿದು ಪುನಃ ಜೋಡಿಸಿರುವುದು ಕಂಡು ಬಂದಿರುತ್ತದೆ.  ಗಾರ್ಬಲ್ ನೊಳಗೆ ಇರಿಸಿದ್ದ ಅಡಿಕೆ ತುಂಬಿದ ಚೀಲಗಳನ್ನು  ಪರಿಶೀಲಿಸಿದಾಗ 15 ಗೋಣಿ ಚೀಲದಲ್ಲಿದ್ದ 975 ಕೆಜಿ ತೂಕದ ಸುಮಾರು 3 ಲಕ್ಷ ಬೆಲೆ ಬಾಳುವ ಸುಲಿದ ಅಡಿಕೆ ಕಳವಾಗಿರುವುದು ಕಂಡು ಬಂದಿರುತ್ತದೆ.  ದಿನಾಂಕ 08.12.2022 ರಂದು ಸಂಜೆ 5.00 ಗಂಟೆಯಿಂದ ದಿನಾಂಕ:13.12.2022 ರಂದು ಬೆಳಗ್ಗೆ 09.00 ಗಂಟೆ   ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಗಾರ್ಬಲ್ ನ ಹಿಂಬದಿಯ ಕಿಟಕಿಯ ಸರಳುಗಳನ್ನು ಮುರಿದು ಕಿಟಕಿಯಿಂದ ಒಳ ಪ್ರವೇಶಿಸಿ ಅಡಿಕೆಯನ್ನು ಕಳ್ಳತನ ಮಾಡಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 196/2022  ಕಲಂ: 454,457,380 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಸುಲಿಗೆ ಪ್ರಕರಣ: 01

  • ವಿಟ್ಲ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶಾಲಿನಿ ಶೆಟ್ಟಿ ಪ್ರಾಯ 49 ವರ್ಷ ಗಂಡ ಬಾಲಕೃಷ್ಣ ಶೆಟ್ಟಿ ವಾಸ ಶಾಂತಿನಗರ ಮನೆ ಕೊಡಿಂಬಾಡಿ ಗ್ರಾಮ  ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 13.12.2022 ರಂದು ಬೆಳಗ್ಗೆ ಮನೆಯಿಂದ ಪುತ್ತೂರಿಗೆ ಹೋಗಿ ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿ ಬಸ್ಸೊಂದರಲ್ಲಿ ಹತ್ತಿ ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿ ಇಳಿದು ಪಿರ್ಯಾದಿದಾರರು ಹೊಸದಾಗಿ ಕಟ್ಟಿಸುತ್ತಿರುವ ಮನೆಯ ಕಡೆಗೆ ಡಾಮಾರು ರಸ್ತೆಯಲ್ಲಿ ನಡೆದುಕೊಂಡು ಹೋಗುವ ಸಮಯ 1.55 ಗಂಟೆ ಗೆ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ರೈಲ್ವೆ ಬ್ರಿಡ್ಜ್ ಬಳಿ ತಲುಪಿದಾಗ ಪಿರ್ಯಾದಿದಾರರ ಎದುರಿನಿಂದ ಒಂದು ಬಿಳಿ ಬಣ್ಣದ ಆಕ್ಟಿವಾ ಸ್ಕೂಟರ್ ನಲ್ಲಿ ಬಬ್ಬ ಅಪರಿಚಿತ ವ್ಯಕ್ತಿ ಸವಾರಿ ಮಾಡಿಕೊಂಡು ಪಿರ್ಯಾದಿದಾರರ ಬಳಿ ನಿಧಾನವಾಗಿ ಬಂದು ಕುತ್ತಿಗೆಗೆ ಆತನು ಕೈ ಹಾಕಿ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರವನ್ನು ಬಲತ್ಕಾರವಾಗಿ ಎಳೆದುಕೊಂಡು  ಪರಾರಿಯಾಗಿದ್ದು,  ಪಿರ್ಯಾದಿದಾರರು  ಒಬ್ಬರೆ ಇದ್ದ ಕಾರಣ ಎದರಿ ಆತನನ್ನು ನೋಡುವ ಸಮಯ ಆತ ಸ್ಕೂಟರ್ ಸವಾರಿ ಮಾಡಿಕೊಂಡು ಪರಾರಿಯಾಗಿರುತ್ತಾನೆ, ಸದ್ರಿ ವ್ಯಕ್ತಿಯು ಪರಾರಿಯಾಗುವ ಸಮಯ ಕಡುಕೆಂಪು ಬಣ್ಣದ ಶರ್ಟ್,ಕಪ್ಪು ಬಣ್ಣದ ಪ್ಯಾಂಟ್ ದರಿಸಿದ್ದು ಸುಮಾರು 5.4 ರಷ್ಟು  ಎತ್ತರ ಎಣ್ಣೆಗೆಂಪು ಮೈ ಬಣ್ಣ ಸಾದಾರಣ ಮೈ ಕಟ್ಟು ಉಳ್ಳವನಾಗಿರುತ್ತಾನೆ. ಸುಲಿಗೆಯಾದ ಸುಮಾರು 20 ಗ್ರಾಂ ತೂಕದ ಕರಿಮಣಿ ಇದರ ಅಂದಾಜು 80.000/- ಮೌಲ್ಯದ ಒಂದು ಇಂಚು ಕರಿಮಣಿ ಒಂದು ಇಂಚು ಚಿನ್ನ ಇರುವ ಸರ ಆಗಿರುತ್ತದೆ.ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 197/2022  ಕಲಂ: 392 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 02

  • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಿನಯ ಕುಮಾರ್‌ ಪ್ರಾಯ:26 ವರ್ಷ ತಂದೆ: ವೀರಪ್ಪ ವಾಸ:ದರ್ಖಾಸು ಮನೆ, ಎರುಕಡುಪು, ಕೊಯ್ಯೂರು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರ ತಂದೆಯವರು ದಿನಾಂಕ:13.12.2022 ರಂದು ಬೆಳಿಗ್ಗೆ 10.30 ಗಂಟೆಗೆ ತನ್ನ ಮನೆಯ ದನಗಳಿಗೆ ಔಷಧಿ ತರಲೆಂದು ಬೆಳ್ತಂಗಡಿ ತಾಲೂಕು ಪಶು ಆಸ್ಪತ್ರೆಗೆ ಬಂದು ಅಲ್ಲಿ ಕುಳಿತುಕೊಂಡಿದ್ದ ಸಮಯ ಏಕಾಏಕಿ ಅಸ್ವಸ್ಥ ಗೊಂಡವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋದಲ್ಲಿ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ 11.30 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಠಾಣಾ  ಯುಡಿಆರ್‌ ನಂ:56/2022 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುಂಜಾಲಕಟ್ಟೆ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಅನಿಲ್ ಕುಮಾರ್, (54),ತಂದೆ: ಪುರುಷೋತ್ತಮ, ವಾಸ: ಕಡಾಯಿಲ್ ಪುತೇನ್ ವಿಡ್, ಪಳ್ಳಿಮಾನ್ ಪೋಸ್ಟ್, ಕೊಲ್ಲಂ ಕೇರಳ.ಹಾಲಿ ವಾಸ: ಅಭಿ ವೆಲ್ ರಿಂಗ್ ವರ್ಕ್ಸ್ ಮಾಲಾಡಿ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಸುಮಾರು 25 ವರ್ಷಗಳಿಂದ ಅಭಿ ವೆಲ್ ರಿಂಗ್ ನಲ್ಲಿ ಮಾಲಕರಾಗಿ 15 ಜನ ಕೆಲಸಗಾರರ ಜೊತೆ ಕೆಲಸ ಮಾಡಿಕೊಂಡಿದ್ದು ಸುಮಾರು 10 ದಿನಗಳ ಹಿಂದೆ  ತಮಿಳುನಾಡು ರಾಜ್ಯದ ಚೊಂಕಂಪಟ್ಟಿ ತಿರುನೆವಲ್ ನಿವಾಸಿ ಮರಿಯಪ್ಪನ್ (45 ವರ್ಷ) ರವರು ಕೆಲಸಕ್ಕೆ ಬಂದಿದ್ದು , ಮರಿಯಪ್ಪನ್ ರವರು ಎಂದಿನಂತೆ ಕೆಲಸ ಮಾಡುತ್ತಿದ್ದು ಸಮಯ ಸುಮಾರು 09.00 ಗಂಟೆಗೆ  ರೂಮ್ ನಿಂದ ತಂದಿದ್ದ  ಬುತ್ತಿಯನ್ನು ಬಿಸಿಲಿನಿಂದ ನೆರಳಿಗೆ ಇಡಳೆಂದು ಹೋದಾಗ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥಗೊಂಡವರನ್ನು ಪಿರ್ಯಾದಿದಾರರು ಹಾಗೂ ಇತರ ಕೆಲದವರು ಎತ್ತಿ ಆರೈಕೆ ಮಾಡಿ ನೋಡಿದಾಗ ಮರಿಯಪ್ಪನ್ ರವರು ಮಾತನಾಡದೇ ಇದ್ದುದರಿಂದ ಕೂಡಲೇ ಪಿರ್ಯಾದಿದಾರರು ಖಾಸಗಿ ಅಂಬುಲೆನ್ಸ್ ವೊಂದಕ್ಕೆ ಕರೆ ಮಾಡಿ ಅಂಬುಲೆನ್ಸ್ ಮೂಲಕ ಮರಿಯಪ್ಪನ್ ರವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು  ಪರೀಕ್ಷಿಸಿ ಮರಿಯಪ್ಪನ್ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದು.ಈ ಬಗ್ಗೆ ಪುಂಜಾಲಕಟ್ಟೆ ಠಾಣಾ UDR NO: 25/2022 ಕಲಂ: 174  ಸಿಆರ್‌ಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-12-2022 11:59 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080