Feedback / Suggestions

ಅಪಘಾತ ಪ್ರಕರಣ: 1

ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹಮ್ಮದ್ ಸಹದ್ (22) ತಂದೆ ಅಬ್ದುಲ್ ಅಜೀಜ್ ವಾಸ ಅಡ್ಕಾರು ಭಜನಾ ಮಂದಿರದ ಬಳಿ ಮನೆ ಜಾಲ್ಸೂರು ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ 14.06.2021 ರಂದು ಸಮಯ ಸುಮಾರು 16:30 ಗಂಟೆಗೆ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಅಡ್ಕಾರು ಗೇರು ಜೀಜ ಫ್ಯಾಕ್ಟರಿ ಬಳಿಯಲ್ಲಿ ನಿಂತುಕೊಂಡಿರುವಾಗ, ಮಂಗಳೂರು ಕಡೆಯಿಂದ ಸುಳ್ಯ ಕಡೆಗೆ ಕೆಎ 12 ಬಿ 1320 ನೇದರ ಕಾರು ಚಾಲಕ ದೀಪಕ್ ಎಂಬಾತನು ಅಜಾಗೂರುಕತೆ ಮತ್ತು ನಿರ್ಲಕ್ಷತನದಿಂದ ಕಾರನು ಚಲಾಯಿಸಿಕೊಂಡು ಬಂದು ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಕೆಎ 21 ಬಿ 6741 ನೇ ಆಟೋ ರಿಕ್ಷಾಗೆ ಡಿಕ್ಕಿ ಉಂಟು ಮಾಡಿದ ಪರಿಣಾಮ ಆಟೋ ರಿಕ್ಷಾ ಚಾಲಕ ಜಬ್ರುದ್ದೀನ್ ಎಂಬಾತನಿಗೆ ತಲೆಯ ಬಲಬದಿಗೆ, ಬಲಕಾಲಿನ ಕೋಲುಕಾಲಿಗೆ ಹಾಗೂ ಎಡಕಾಲಿನ ಮೊಣಗಂಡಿಗೆ ರಕ್ತಗಾಯವಾಗಿದ್ದವರನ್ನು ಪಿರ್ಯಾದುದಾರರು ಮತ್ತು ಅಲೇ ಇದ್ದ ಇತರರು ಉಪಚರಿಸಿ ಚಿಕಿತ್ಸೆಯ ಬಗ್ಗೆ  108 ಆಂಬ್ಯುಲೇನ್ಸ್ ಮೂಲಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರಿಕ್ಷೀಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಕಳುಹಿಸಿರುವುದಾಗಿದೆ .ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ,ಕ್ರ 41/2021 ಕಲಂ: 279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 3

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಉದಯ ಕುಮಾರ ಪ್ರಾಯ 37 ವರ್ಷ ತಂದೆ: ದಿ. ಡೀಕಯ್ಯ ನಾಯ್ಕ್ ವಾಸ: ಅಶ್ವತ್ ಪಲ್ಕೆ ಮನೆ ತೆಂಕಕಾರಂದೂರು ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾಧಿದಾರರು ಅಣ್ಣನಾದ ಹರೀಶ ನಾಯ್ಕ್  ದಿನಾಂಕ 14-06-2021 ರಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆಂದು ಬಿ ಸಿ ರೋಡಿಗೆ ಬಂದಿದ್ದು ಸಮಯ 10.00 ಗಂಟೆಗೆ ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ಬೈಪಾಸ್ ರಸ್ತೆಯ ಗುರುಕೃಪಾ ಗ್ಯಾರೇಜ್ ಎಂಬಲ್ಲಿ ಚಹಾ ಕುಡಿದು ನಡೆದು ಕೊಂಡು ಹೋಗುತ್ತಿರುವ ಸಮಯ ಕುಸಿದು ಬಿದ್ದ ಅಣ್ಣ ನನ್ನು ಸ್ಥಳೀಯವರು ಚಿಕಿತ್ಸೆಗಾಗಿ ಬಂಟ್ವಾಳ ಸರಕಾರಿ ಆಸ್ವತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದೆ, ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 23-2021 ಕಲಂ  174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಉಮೇಶ್ ಪ್ರಾಯ 42 ವರ್ಷ  ಕೊರಗಪ್ಪ ಪೂಜಾರಿ ಚೌಕದ ಪಾಲು ಮನೆ ಮಂಚಿ ಗ್ರಾಮ  ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 08.06.2021 ರಂದು  ಬೆಳಿಗ್ಗೆ 08.00 ಗೆ ಪಿರ್ಯಾದುದಾರರ ತಮ್ಮ ರಾಜೇಶ್ ನು ನೆರೆಯ ಕುಕ್ಕಾಜೆ ಬೈಲು  ಕೃಷ್ಣಪ್ಪ  ಮಡಿವಾಳ ರವರ  ಮನೆ ಕೆಲಸಕ್ಕೆ  ಹೋಗಿದ್ದವರು  ಸಮಯ 11.30  ಗಂಟೆಗೆ ರಾಜೇಶನು ಆರ್ ಸಿಸಿ ಮೇಲಿನಂದ ಹೋಲೋಬ್ಲಾಕ್ ಕಟ್ಟುತ್ತಿರುವಾಗ  ಆಕಸ್ಮಿಕವಾಗಿ ಅಂಗಳಕ್ಕೆ ಬಿದ್ದಿದ್ದವನನ್ನು  ಕೂಡಲೇ ಪಿರ್ಯಾದುದಾರರು ,ರಾಜೇಶನ ಜೊತೆ ಕೆಲಸ ಮಾಡುತ್ತಿದ್ದವರಲ್ಲಿ  ಉಮೇಶ್ ಮತ್ತು ಇತರರು ಸೇರಿ   ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದು ಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಂಗಳೂರು ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಅದರಂತೆ ಕೆಎಂ ಸಿ ಆಸ್ಪತ್ರೆ ಗೆ ಕರೆದುಕೊಂಡು ಬಂದು ದಾಖಲಿಸಿದ್ದು ಚಿಕಿತ್ಸೆಯಲ್ಲಿದ್ದವರು ನಿನ್ನೆ ದಿನ ದಿನಾಂಕ 13.06.2021 ರ  ರಾತ್ರಿ 10.40 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿರುವುದಾಗಿದೆ.ಮೃತ ರಾಜೇಶನು ಕೃಷ್ಣಪ್ಪ  ಮಡಿವಾಳ ರವರ ಆರ್ ಸಿಸಿ ಮನೆಯಲ್ಲಿ ಹೋಲೋ ಬ್ಲಾಕ್ ಕಟ್ಟುತ್ತಿರುವ ಸಮಯ ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ಬಲ ಭುಜಕ್ಕೆ  ಸೊಂಟದ ಭಾಗಕ್ಕೆ  ಆದ ತೀವ್ರ ಒಳಗಾಯದಿಂದಾಗಿ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ನಂ 20/2021 ಕಲಂ 174   ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಲಕ್ಷ್ಮೀಶ್. ಕೆ 18 ವರ್ಷ ತಂದೆ: ಕೊರಗಪ್ಪ ನಲಿಕೆ ವಾಸ: ಕುಕ್ಕುಪುಣಿ ಮನೆ ನಿಡ್ಪಳ್ಳಿ ಗ್ರಾಮ ಪುತ್ತೂರು ತಾಲುಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಲಕ್ಷ್ಮೀಶ್. ಕೆ 18 ವರ್ಷ ತಂದೆ: ಕೊರಗಪ್ಪ ನಲಿಕೆ ವಾಸ: ಕುಕ್ಕುಪುಣಿ ಮನೆ ನಿಡ್ಪಳ್ಳಿ ಗ್ರಾಮ ಪುತ್ತೂರು ತಾಲುಕು ರವರ ತಂದೆ ಕೊರಗಪ್ಪ ನಲಿಕೆ ರವರು ಈ ದಿನ ದಿನಾಂಕ 14.06.2021 ರಂದು ಮಧ್ಯಾಹ್ನ 12.15 ಗಂಟೆಗೆ ಮನೆಯಲ್ಲಿ ಊಟ ಮಾಡುತ್ತಿದ್ದ ಸಮಯ ತಿಂದ ಆಹಾರವು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡು ಉಸಿರಾಡಲು ಕಷ್ಟವಾಗಿ ಅಸ್ವಸ್ಥಗೊಂಡವರನ್ನು ಪಿರ್ಯಾದಿದಾರರು ಕೂಡಲೇ ಒಂದು ಆಟೋರಿಕ್ಷಾದಲ್ಲಿ ಮುಡಿಪಿನಡ್ಕ ಕಶ್ಯಪ ಕ್ಲಿನಿಕ್‌ಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಪುತ್ತೂರಿಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಮಧ್ಯಾಹ್ನ 2.10 ಗಂಟೆಗೆ ಕರೆತಂದಿದ್ದು, ವೈದ್ಯರು ಪಿರ್ಯಾದಿದಾರರ ತಂದೆ ಕೊರಗಪ್ಪರವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು,.ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆ ಯುಡಿಅರ್ ನಂಬ್ರ 21/21  ಕಲo: 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Last Updated: 15-06-2021 10:27 AM Updated By: Dakshina Kannada District Police


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : DAKSHINA KANNADA DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080