ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹಮ್ಮದ್ ಸಹದ್ (22) ತಂದೆ ಅಬ್ದುಲ್ ಅಜೀಜ್ ವಾಸ ಅಡ್ಕಾರು ಭಜನಾ ಮಂದಿರದ ಬಳಿ ಮನೆ ಜಾಲ್ಸೂರು ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ 14.06.2021 ರಂದು ಸಮಯ ಸುಮಾರು 16:30 ಗಂಟೆಗೆ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಅಡ್ಕಾರು ಗೇರು ಜೀಜ ಫ್ಯಾಕ್ಟರಿ ಬಳಿಯಲ್ಲಿ ನಿಂತುಕೊಂಡಿರುವಾಗ, ಮಂಗಳೂರು ಕಡೆಯಿಂದ ಸುಳ್ಯ ಕಡೆಗೆ ಕೆಎ 12 ಬಿ 1320 ನೇದರ ಕಾರು ಚಾಲಕ ದೀಪಕ್ ಎಂಬಾತನು ಅಜಾಗೂರುಕತೆ ಮತ್ತು ನಿರ್ಲಕ್ಷತನದಿಂದ ಕಾರನು ಚಲಾಯಿಸಿಕೊಂಡು ಬಂದು ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಕೆಎ 21 ಬಿ 6741 ನೇ ಆಟೋ ರಿಕ್ಷಾಗೆ ಡಿಕ್ಕಿ ಉಂಟು ಮಾಡಿದ ಪರಿಣಾಮ ಆಟೋ ರಿಕ್ಷಾ ಚಾಲಕ ಜಬ್ರುದ್ದೀನ್ ಎಂಬಾತನಿಗೆ ತಲೆಯ ಬಲಬದಿಗೆ, ಬಲಕಾಲಿನ ಕೋಲುಕಾಲಿಗೆ ಹಾಗೂ ಎಡಕಾಲಿನ ಮೊಣಗಂಡಿಗೆ ರಕ್ತಗಾಯವಾಗಿದ್ದವರನ್ನು ಪಿರ್ಯಾದುದಾರರು ಮತ್ತು ಅಲೇ ಇದ್ದ ಇತರರು ಉಪಚರಿಸಿ ಚಿಕಿತ್ಸೆಯ ಬಗ್ಗೆ  108 ಆಂಬ್ಯುಲೇನ್ಸ್ ಮೂಲಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರಿಕ್ಷೀಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಕಳುಹಿಸಿರುವುದಾಗಿದೆ .ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ,ಕ್ರ 41/2021 ಕಲಂ: 279.337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 3

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಉದಯ ಕುಮಾರ ಪ್ರಾಯ 37 ವರ್ಷ ತಂದೆ: ದಿ. ಡೀಕಯ್ಯ ನಾಯ್ಕ್ ವಾಸ: ಅಶ್ವತ್ ಪಲ್ಕೆ ಮನೆ ತೆಂಕಕಾರಂದೂರು ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾಧಿದಾರರು ಅಣ್ಣನಾದ ಹರೀಶ ನಾಯ್ಕ್  ದಿನಾಂಕ 14-06-2021 ರಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆಂದು ಬಿ ಸಿ ರೋಡಿಗೆ ಬಂದಿದ್ದು ಸಮಯ 10.00 ಗಂಟೆಗೆ ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ಬೈಪಾಸ್ ರಸ್ತೆಯ ಗುರುಕೃಪಾ ಗ್ಯಾರೇಜ್ ಎಂಬಲ್ಲಿ ಚಹಾ ಕುಡಿದು ನಡೆದು ಕೊಂಡು ಹೋಗುತ್ತಿರುವ ಸಮಯ ಕುಸಿದು ಬಿದ್ದ ಅಣ್ಣ ನನ್ನು ಸ್ಥಳೀಯವರು ಚಿಕಿತ್ಸೆಗಾಗಿ ಬಂಟ್ವಾಳ ಸರಕಾರಿ ಆಸ್ವತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದೆ, ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 23-2021 ಕಲಂ  174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಉಮೇಶ್ ಪ್ರಾಯ 42 ವರ್ಷ  ಕೊರಗಪ್ಪ ಪೂಜಾರಿ ಚೌಕದ ಪಾಲು ಮನೆ ಮಂಚಿ ಗ್ರಾಮ  ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 08.06.2021 ರಂದು  ಬೆಳಿಗ್ಗೆ 08.00 ಗೆ ಪಿರ್ಯಾದುದಾರರ ತಮ್ಮ ರಾಜೇಶ್ ನು ನೆರೆಯ ಕುಕ್ಕಾಜೆ ಬೈಲು  ಕೃಷ್ಣಪ್ಪ  ಮಡಿವಾಳ ರವರ  ಮನೆ ಕೆಲಸಕ್ಕೆ  ಹೋಗಿದ್ದವರು  ಸಮಯ 11.30  ಗಂಟೆಗೆ ರಾಜೇಶನು ಆರ್ ಸಿಸಿ ಮೇಲಿನಂದ ಹೋಲೋಬ್ಲಾಕ್ ಕಟ್ಟುತ್ತಿರುವಾಗ  ಆಕಸ್ಮಿಕವಾಗಿ ಅಂಗಳಕ್ಕೆ ಬಿದ್ದಿದ್ದವನನ್ನು  ಕೂಡಲೇ ಪಿರ್ಯಾದುದಾರರು ,ರಾಜೇಶನ ಜೊತೆ ಕೆಲಸ ಮಾಡುತ್ತಿದ್ದವರಲ್ಲಿ  ಉಮೇಶ್ ಮತ್ತು ಇತರರು ಸೇರಿ   ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದು ಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಂಗಳೂರು ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಅದರಂತೆ ಕೆಎಂ ಸಿ ಆಸ್ಪತ್ರೆ ಗೆ ಕರೆದುಕೊಂಡು ಬಂದು ದಾಖಲಿಸಿದ್ದು ಚಿಕಿತ್ಸೆಯಲ್ಲಿದ್ದವರು ನಿನ್ನೆ ದಿನ ದಿನಾಂಕ 13.06.2021 ರ  ರಾತ್ರಿ 10.40 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿರುವುದಾಗಿದೆ.ಮೃತ ರಾಜೇಶನು ಕೃಷ್ಣಪ್ಪ  ಮಡಿವಾಳ ರವರ ಆರ್ ಸಿಸಿ ಮನೆಯಲ್ಲಿ ಹೋಲೋ ಬ್ಲಾಕ್ ಕಟ್ಟುತ್ತಿರುವ ಸಮಯ ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ಬಲ ಭುಜಕ್ಕೆ  ಸೊಂಟದ ಭಾಗಕ್ಕೆ  ಆದ ತೀವ್ರ ಒಳಗಾಯದಿಂದಾಗಿ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯುಡಿಆರ್ ನಂ 20/2021 ಕಲಂ 174   ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಲಕ್ಷ್ಮೀಶ್. ಕೆ 18 ವರ್ಷ ತಂದೆ: ಕೊರಗಪ್ಪ ನಲಿಕೆ ವಾಸ: ಕುಕ್ಕುಪುಣಿ ಮನೆ ನಿಡ್ಪಳ್ಳಿ ಗ್ರಾಮ ಪುತ್ತೂರು ತಾಲುಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ಲಕ್ಷ್ಮೀಶ್. ಕೆ 18 ವರ್ಷ ತಂದೆ: ಕೊರಗಪ್ಪ ನಲಿಕೆ ವಾಸ: ಕುಕ್ಕುಪುಣಿ ಮನೆ ನಿಡ್ಪಳ್ಳಿ ಗ್ರಾಮ ಪುತ್ತೂರು ತಾಲುಕು ರವರ ತಂದೆ ಕೊರಗಪ್ಪ ನಲಿಕೆ ರವರು ಈ ದಿನ ದಿನಾಂಕ 14.06.2021 ರಂದು ಮಧ್ಯಾಹ್ನ 12.15 ಗಂಟೆಗೆ ಮನೆಯಲ್ಲಿ ಊಟ ಮಾಡುತ್ತಿದ್ದ ಸಮಯ ತಿಂದ ಆಹಾರವು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡು ಉಸಿರಾಡಲು ಕಷ್ಟವಾಗಿ ಅಸ್ವಸ್ಥಗೊಂಡವರನ್ನು ಪಿರ್ಯಾದಿದಾರರು ಕೂಡಲೇ ಒಂದು ಆಟೋರಿಕ್ಷಾದಲ್ಲಿ ಮುಡಿಪಿನಡ್ಕ ಕಶ್ಯಪ ಕ್ಲಿನಿಕ್‌ಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಪುತ್ತೂರಿಗೆ ಕರೆದುಕೊಂಡು ಹೋಗಲು ತಿಳಿಸಿದಂತೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಮಧ್ಯಾಹ್ನ 2.10 ಗಂಟೆಗೆ ಕರೆತಂದಿದ್ದು, ವೈದ್ಯರು ಪಿರ್ಯಾದಿದಾರರ ತಂದೆ ಕೊರಗಪ್ಪರವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು,.ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆ ಯುಡಿಅರ್ ನಂಬ್ರ 21/21  ಕಲo: 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-06-2021 10:27 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080