ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕೌಶಿಕ್ ಪ್ರಾಯ: 28 ವರ್ಷತಂದೆ: ದಿ|| ಕೃಷ್ಣ ವಾಸ: ಕೊಯಗುಡ್ಡೆ ಮನೆ, ಅರಳ ಅಂಚೆ ಮತ್ತು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿ ಕೌಶಿಕ್ ರವರು ದಿನಾಂಕ 14-06-2022 ರಂದು ಮೋಟಾರು ಸೈಕಲಿನಲ್ಲಿ ಅಣ್ಣಳಿಕೆಯಿಂದ ಸ್ನೇಹಿತ ಸಂತೋಷ್ ರವರನ್ನು ಹಿಂಬದಿ ಕುಳ್ಳಿರಿಸಿಕೊಂಡು ಬಂಟ್ವಾಳಕ್ಕೆ ಹೋಗುತ್ತಾ ಸಮಯ ಸುಮಾರು 16:30 ಗಂಟೆಗೆ ಬಂಟ್ವಾಳ ತಾಲೂಕು ಅರಳ ಗ್ರಾಮದ ಸೊರ್ನಾಡು ಎಂಬಲ್ಲಿಗೆ ತಲುಪಿದಾಗ ತನ್ನ ಎದುರಿನಿಂದ KA-19-AC-5963 ನೇ ಮೋಟಾರು ಸೈಕಲಿನಲ್ಲಿ ಅದರ ಸವಾರ ಸಹಸವಾರನನ್ನು ಕುಳ್ಳಿರಿಸಿಕೊಂಡು ನಿಧಾನವಾಗಿ ರಸ್ತೆಯ ಎಡಬದಿಯಲ್ಲಿ ಹೋಗುತ್ತಾ ರಸ್ತೆಯ ತಿರುವಿಗೆ ತಲುಪಿದಾಗ KA 21 B 2070 ನೇ ಟಿಪ್ಪರ್ ಲಾರಿಯನ್ನು ಅದರ ಚಾಲಕ ಶ್ರೇಯಸ್ ರವರು ದುಡುಕುತನ ನಿರ್ಲಕ್ಷ್ಯತನದಿಂದ ರಸ್ತೆಯ ತೀರ ಬಲಬದಿಗೆ ಚಲಾಯಿಸಿ ಮೋಟರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ   ನಿತೇಶ್ ಮತ್ತು ಸಹಸವಾರರವರು ಮೋಟರ್ ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಅವರ ಮೇಲೆ ಟಿಪ್ಪರ್ ಲಾರಿ ಚಕ್ರ ಹರಿದು  ಗಂಭೀರ ರಕ್ತಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಅಂಬ್ಯುಲೆನ್ಸ್ ವಾಹನದಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆತಂದಲ್ಲಿ 17:10 ಗಂಟೆಗೆ ವೈದ್ಯರು ಪರೀಕ್ಷಿಸಿ ಗಾಯಾಳುಗಳಿಬ್ಬರೂ ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 71/2022 ಕಲಂ: 279, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಸಂತ ಎಂ ಕೆ (42) ತಂದೆ: ಸುಂದರ ಎಂ ಕೆ ವಾಸ: ನೆಕ್ಕರೆ ಮನೆ ಕಳಿಂಜ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 13-06-2022 ಪಿರ್ಯಾದಿದಾರರು ಅವರ ಹೆಂಡತಿ ಸುಜಾತಾ, ಮಗು ಸುಶ್ಮಿತಾ ಹಾಗೂ ಹಸೈನಾರ್‌ ರವರೊಂದಿಗೆ  KA 21 B 6661 ನೇ ಆಟೋರಿಕ್ಷಾದಲ್ಲಿ ಸಹಪ್ರಯಾಣಿಕರಾಗಿ ಕುಳಿತುಕೊಂಡು ಆಟೋರಿಕ್ಷಾವನ್ನು ಅದರ ಚಾಲಕ ಸನವರ್‌ ಶಾಫಿ ರವರು ಕೊಕ್ಕಡ ಕಡೆಯಿಂದ ಧರ್ಮಸ್ಥಳ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು ಸಂಜೆ 4:45 ಗಂಟೆಗೆ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಮಲ್ಲಿಗೆ SLV ಪೆಟ್ರೋಲ್‌ ಪಂಪ್‌ ಬಳಿ ದುಡುಕತನದಿಂದ ಚಲಾಯಿಸಿ ಚಾಲಕನ ಚಾಲನಾ ಹತೋಟಿ ತಪ್ಪಿ ಆಟೋರಿಕ್ಷಾ ಎಡ ಮಗ್ಗುಲಾಗಿ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಎಡ ಮತ್ತು ಬಲ ಕೈಯ ಮಣಿಗಂಟಿಗೆ ಗುದ್ದಿದ ಗಾಯ, ಹಣೆಗೆ, ಬಲಕೋಲು ಕಾಲಿಗೆ, ಎಡಕಾಲಿನ ಪಾದಕ್ಕೆ ತರಚಿದ ಗಾಯ, ಸುಜಾತಾ ರವರಿಗೆ ಎಡ ಕೆನ್ನೆಗೆ ಗುದ್ದಿದ ಗಾಯ, ಮಗು ಸುಶ್ಮಿತಾಳಿಗೆ ಎಡ ಕೆನ್ನೆಗೆ ಗುದ್ದಿದ ಗಾಯ, ಎಡ ಕೋಲು ಕಾಲಿಗೆ ತರಚಿದ ಗಾಯ , ಹಸೈನಾರ್‌ ರವರಿಗೆ ಎಡ ಕೈಯ ಭುಜಕ್ಕೆ ಎಡಕಾಲಿನ ಕೋಲು ಕಾಲಿಗೆ ಗುದ್ದಿದ ಗಾಯವಾಗಿದ್ದು ಗಾಯಾಳುಗಳು ಚಿಕಿತ್ಸೆ ಬಗ್ಗೆ ಉಜಿರೆ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ .ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 82/2022 ಕಲಂ: 279,337 ಭಾ ದಂ ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಬಿ ಸತೀಶ್‌ ಪ್ರಭು, ಪ್ರಾಯ 50 ವರ್ಷ, ತಂದೆ: ಬಿ. ಸೀತಾರಾಮ ಪ್ರಭು, ವಾಸ: ಮನಿಯ ಮನೆ, ನರಿಮೊಗರು  ಅಂಚೆ & ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 13-06-2022 ರಂದು 17-00 ಗಂಟೆಗೆ ಆರೋಪಿ ಸವಾರ ಚಂದ್ರಹಾಸನ್‌ ಎಂಬವರು KA-21-Q-0747ನೇ ನೋಂದಣಿ ನಂಬ್ರದ ಸ್ಕೂಟರಿನಲ್ಲಿ ಸುಂದರ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಪುತ್ತೂರು-ಉಪ್ಪಿನಂಗಡಿ ಸಾರ್ವಜನಿಕ ದ್ವಿಪಥ ಡಾಮಾರು ರಸ್ತೆಯಲ್ಲಿ ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಜಂಕ್ಷನ್‌ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ತಿರುವು ರಸ್ತೆಯಲ್ಲಿ ಒಮ್ಮಲೇ ಬ್ರೇಕ್‌ ಹಾಕಿದ ಪರಿಣಾಮ, ಸಹಸವಾರ ಸುಂದರ್‌ ರವರು ರಸ್ತೆಗೆ ಬಿದ್ದು, ಸೊಂಟಕ್ಕೆ, ಬಲ ಕೈಗೆವ ಗುದ್ದಿದ ಗಾಯಗೊಂಡವರನ್ನು, ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಇಂಡಿಯಾನ ಆಸ್ಪತ್ರೆಯಲ್ಲಿ  ದಾಖಲಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  109/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರಶಾಂತ್‌ ಎಸ್‌, ಪ್ರಾಯ 44 ವರ್ಷ, ತಂದೆ: ದಿ. ಸದಾಶಿವ ರಾವ್‌, ವಾಸ: ಅಜಯನಗರ ಮನೆ, ಪಡ್ನೂರು  ಅಂಚೆ & ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 14-06-2022 ರಂದು 17-15 ಗಂಟೆಗೆ ಆರೋಪಿ ಸವಾರ ಅದ್ವಿತ್‌ ಎಂಬವರು KA-51-HK-4747ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ಕಡೆಯಿಂದ ನೆಹರೂ ನಗರ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಕಲ್ಲೇಗ ರಕ್ತೇಶ್ವರಿ ಕ್ರಾಸ್‌ ಬಳಿ, ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬದಿಗೆ ಚಲಾಯಿಸಿದ ಪರಿಣಾಮ, ರವೀಂದ್ರ ರವರು ಸವಾರರಾಗಿ ನೆಹರೂನಗರ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ ಬಲಭಾಗದಲ್ಲಿರುವ ರಕ್ತೇಶ್ವರಿ ವಠಾರ ಕಡೆಗೆ ಹೋಗಲು ಸೂಚನೆ ನೀಡಿ ಇಂಡಿಕೇಟರ್‌ ಹಾಕಿ ಬಲಭಾಗಕ್ಕೆ ತಿರುಗಿ ಹೆದ್ದಾರಿಯ ಅಂಚನ್ನು ತಲುಪಿದ KA-21-Y-3079ನೇ ನೋಂದಣಿ ನಂಬ್ರದ ಸ್ಕೂಟರಿಗೆ ಮೋಟಾರ್‌ ಸೈಕಲ್‌ ಅಪಘಾತವಾಗಿ, ಎರಡೂ ವಾಹನಗಳು ಸವಾರರ ಸಮೇತ ರಸ್ತೆಗೆ ಬಿದ್ದು, ರವೀಂದ್ರ ರವರಿಗೆ ತಲೆಗೆ ಹಾಗೂ ಕಾಲಿಗೆ ಗಾಯವಾಗಿ, ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಫಸ್ಟ್‌ ನ್ಯೂರೋ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ಆರೋಪಿ ಮೋಟಾರ್‌ ಸೈಕಲ್‌ ಸವಾರನಿಗೂ ಗಾಯಗಳಾಗಿದ್ದು ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  110/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಆದಿತ್ಯ  ಪ್ರಾಯ 32 ವರ್ಷ ತಂದೆ. ಗಣೇಶ್‌ ಭಟ್‌ ವಾಸ: ರಾದಾ ಹರಿ ನಿವಾಸ. 34ನೇ ನೆಕ್ಕಿಲಾಡಿ ಗ್ರಾಮ ಪುತ್ತೂರು ಎಂಬವರ ದೂರಿನಂತೆ ದಿನಾಂಕ:10-06-2022ರಂದು ಬೆಳಿಗ್ಗೆ 11.30ಗಂಟೆಯಿಂದ 12.45ಗಂಟೆಯ ಮದ್ಯದ ಅವಧಿಯಲ್ಲಿ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಕಾರ್ತಿಕ್‌ ಬಾರ್‌  & ರೆಸ್ಟೋರೆಂಟ್‌ನ  ಮುಂಭಾಗ ನಿಲ್ಲಿಸಿದ್ದ ಪಿರ್ಯಾದಿದಾರರ ಬಾಬ್ತು  ಕೆಎ21ಯು4901 ನೇ  ಹೊಂಡಾ ಆಕ್ಟಿವಾ  ದ್ವಿಚಕ್ರ ವಾಹನವನ್ನು  ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ವಾಹನದ ಅಂದಾಜು ಮೌಲ್ಯ ರೂ 25,000 ಆಗಿರುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 72/2022 ಕಲಂ:379 ಭಾದಂಸಂ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಹಲ್ಲೆ ಪ್ರಕರಣ: 2

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಿಥಲೇಶ್ ಕುಮಾರ್‌ (32) ತಂದೆ:ಗುಲಾಬಚಂದ ವಾಸ:ಕೋರೂನ್‌ ,ಮಝಾಪೂರ ,ಕೌಶುಂಬಿ ,ಉತ್ತರ ಪ್ರದೇಶ ಎಂಬವರ ದೂರಿನಂತೆ ಪಿರ್ಯಾಧಿದಾರರು ದಿನಾಂಕ:13-06-2022 ರಂದು ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಹಳಿರಾ ಎಂಬಲ್ಲಿರುವ ಉಮೇಶ್‌ ರವರ ಕೆಲಸಕ್ಕೆ ಹೋಗಿದ್ದು ಮದ್ಯಾಹ್ನ 2.00 ಗಂಟೆಗೆ ಉಮೇಶ್‌ ರವರ ಮನೆಗೆ ಒಂದು ಪಿಕಪ್‌ ವಾಹನ ಒಂದು ಬಂದಿದ್ದು ಅವರ ಮನೆಗೆ ಬರುವ ಮಣ್ಣು ರಸ್ತೆಗೆ ಅಡ್ಡವಾಗಿ ರಾ ಹೆದ್ದಾರಿಯ ಬದಿಯಲ್ಲಿ ಕೆಎ-52-ಬಿ-0200ನೇ ಲಾರಿ ನಿಂತಿತ್ತು. ಸದ್ರಿ ಲಾರಿಯನ್ನು ಬದಿಗೆ ನಿಲ್ಲಿಸಿ ಎಂದು ಹೇಳಲು ಲಾರಿ ಬಳಿ ಇದ್ದ ಚಾಲಕರಲ್ಲಿ ಪಿರ್ಯಾಧಿದಾರರು ಹೇಳಿದಾಗ ಚಾಲಕನು ಪಿರ್ಯಾಧಿದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ಹಿಂದಿ ಭಾಷೆಯಲ್ಲಿ ಬೈದು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಕಾಲರ್‌ ಪಟ್ಟಿ ಹಿಡಿದು ಕೈಯಿಂದ ಹೊಡೆದನು ಆ ಸಮಯಕ್ಕೆ ಆತನೊಂದಿಗೆ ಇದ್ದ ಇನ್ನೊಬ್ಬ ಕೂಡಾ ಪಿರ್ಯಾಧಿದಾರರ ಕೆನ್ನೆಗೆ ಹೊಡೆದಿರುತ್ತಾನೆ. ಆ ಸಮಯಕ್ಕೆ ಪಿಕಪ್‌ ಚಾಲಕ ಹಾಗೂ ಉಮೇಶ್‌ ಶೆಟ್ಟಿ ರವರು ಬರುವುದನ್ನು ಕಂಡು ಆರೋಪಿಗಳು ಪಿರ್ಯಾಧಿಗೆ ಹೊಡೆಯುದನ್ನು ನಿಲ್ಲಿಸಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಪಿರ್ಯಾಧಿದಾರರು ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 95/2022  ಕಲಂ: 504,341,323, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹಮ್ಮದ್ ತಾಜುದ್ದೀನ್‌ ಪ್ರಾಯ 25 ವರ್ಷ ತಂದೆ:ಇಬ್ರಾಹಿಂ ವಾಸ:ಪಳ್ಳಿಗದ್ದೆ  ಕೊಡಂಗೈ ,ವಿಟ್ಲಪಡ್ನೂರು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರು ಕೆಎ-52-ಬಿ-0200ನೇದರ  ಲಾರಿಯಲ್ಲಿ ಕೆಲಸ ಮಾಡಿಕೊಂಡಿದ್ದವರು ದಿನಾಂಕ:13-06-2022 ರಂದು ಸದ್ರಿ ಲಾರಿಯ ಪಾರ್ಸೇಲ್‌ಗಳನ್ನು ಪಿರ್ಯಾಧಿ ಮತ್ತು ಕ್ಲೀನರ್‌ ಶರೀಫ್‌ ಎಂಬವರು ಪುತ್ತೂರಿನಲ್ಲಿ ಅನ್‌ಲೋಡ್‌ ಮಾಡಿ ಮಂಗಳೂರಿಗೆಂದು ಹೊರಟು ಮದ್ಯಾಹ್ನ 1.50 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಅಳಿರಾ ಬಳಿ ರಸ್ತೆಯ ಎಡ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ಶರೀಫ್‌ ಮನೆಗೆ ಹೋಗಿದ್ದು ಶರೀಫನ ಬರುವಿಕೆಗಾಗಿ ಕಾಯುತ್ತಿರುವಾಗ ಮಂಗಳೂರು ಕಡೆಯಿಂದ ಒಂದು ಪಿಕಪ್‌ ವಾಹನವನ್ನು ಅದರ ಚಾಲಕ ಚಲಾಯಿಸಿಕೊಂಡು ಬಂದು ಪಿರ್ಯಾಧಿ ನಿಲ್ಲಿಸಿದ ಲಾರಿಯ ಹಿಂದೆ ಇದ್ದ ಮಣ್ಣು ರಸ್ತೆಯ ಕಡೆಗೆ ತಿರುಗಿಸಿದಾಗ ಲಾರಿ ಬಾಡಿಯ ಕೊಕ್ಕೆಯು ಪಿಕಪ್‌ ವಾಹನದ ಬಾಡಿಯ ಭಾಗಕ್ಕೆ ತಾಗಿತು ಆ ಸಮಯ ಪಿರ್ಯಾಧಿ ಪಿಕಪ್‌ ಚಾಲಕನಲ್ಲಿ ಸ್ವಲ್ಪ ಎಡ ಚಲಾಯಿಸು ಎಂದು ಹೇಳಿದಕ್ಕೆ ಒಬ್ಬ ಮುಖ ಪರಿಚಯದ ವ್ಯಕ್ತಿ ಪಿರ್ಯಾದಿಯನ್ನುದ್ದೇಶಿಸಿ ಇಲ್ಲಿಂದ ಲಾರಿ ತೆಗಿ ನಿನ್ನ ಅಪ್ಪ-ಅಮ್ಮನಾ ರೋಡಾ? ಎಂದು ಹೇಳಿದಾಗ ಆಕ್ಷೇಪಿಸಿದಕ್ಕೆ  ಆಗ ಆ ವ್ಯಕ್ತಿಯು ಹಿಂದಿ ಮಾತನಾಡುವ 5-6 ಕೆಲಸದವರಲ್ಲಿ ಹಿಂದಿ ಭಾಷೆಯಲ್ಲಿ ಮಾರೋ ಎಂಬುದಾಗಿ ಹೇಳಿದ್ದು  ಅವರೆಲ್ಲರೂ ಪಿರ್ಯಾಧಿಗೆ ಕೈಗಳಿಂದ ಹೊಡೆದು ನೆಲಕ್ಕೆ ಬಿಳಿಸಿ ಕಾಲಿನಿಂದ ತುಳಿದಿರುತ್ತಾರೆ.  ಆ ಸಮಯಕ್ಕೆ ಅಲ್ಲಿಗೆ ಶರೀಫ್‌ ಮತ್ತು ಇರತರರು ಬರುವವುದನ್ನು ಕಂಡು ಆರೋಪಿಗಳು ಹೊಡೆಯುವುದನ್ನು ಬಿಟ್ಟು ಹೋಗಿರುತ್ತಾರೆ ಹಲ್ಲೆಯಿಂದ ಗಾಯಗೊಂಡ ಪಿರ್ಯಾಧಿ ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 96/2022 ಕಲಂ: 504,143,147,323 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಜೀವ ಬೆದರಿಕೆ ಪ್ರಕರಣ: 1

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಖಲಂದರ್ ಐ.ಕೆ (36) ತಂದೆ: ಎ,ಎಂ ಇಬ್ರಾಹೀಂ ವಾಸ: ಎಲಿಮಲೆ ಕಾರ್ಸ್ ಮನೆ, ಜಟ್ಟಿಪಳ್ಳ, ಸುಳ್ಯ ಕಸಬಾ ಗ್ರಾಮ, ಸುಳ್ಯ ಎಂಬವರ ದೂರಿನಂತೆ ಪಿರ್ಯಾದುದಾರರ ಪತ್ನಿ ಶಾದಿಯಾ ಎಂಬವರು ದಿನಾಂಕ 14.06.2022 ರಂದು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಜಟ್ಟಿಪಳ್ಳದಲ್ಲಿರುವ ತಮ್ಮ ಮನೆಯಲ್ಲಿರುವ ಸಮಯ ಸುಮಾರು 15:00 ಗಂಟೆಗೆ ಆರೋಪಿ ಮಹಮ್ಮದ್ ಕಿಲ್ಲೂರು ಎಂಬಾತನು ಮನೆಯ ಹತ್ತಿಯ ಬಂದು ಪಿರ್ಯಾದುದಾರರ ಪತ್ನಿಯನ್ನು ಉದ್ದೇಶಿಸಿ ವಿನಃ ಕಾರಣ ಬೈದು, ಜೀವ ಬೆದರಿಕೆ ಹಾಕಿರುತ್ತಾನೆ. ಆಗ ಪಿರ್ಯಾದುದಾರರ ಪತ್ನಿ ಪೋನ್ ಮುಖಾಂತರ ತಿಳಿಸಿದಾಗ ಪಿರ್ಯಾದುದಾರರು ಮನೆಗೆ ಬಂದಾಗ ಆರೋಪಿ ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡು ಪಿರ್ಯಾದುದಾರರನ್ನು ಉದ್ದೇಶಿಸಿ ‘ ಮನೆಯ ಒಳಗೆ ಬಂದರೆ ಕೊಲ್ಲುವುದಾಗಿ ಚೂರಿಯನ್ನು ತೋರಿಸಿ ‘ ಪಿರ್ಯಾದುದಾರರ ಬಲಭಾಗದ ಕಣ್ಣಿಗೆ ಚೂರಿಯಿಂದ ಹಲ್ಲೆ ಮಾಡಿ, ಕಾಲಿನಿಂದ ಎದೆಗೆ  ಒದ್ದು,  ಚೂರಿಯನ್ನು ಬಿಸಾಡಿ ಓಡಿ ಹೋಗಿರುತ್ತಾನೆ. ಪಿರ್ಯಾದುದಾರರು ಬೊಬ್ಬೆ ಹೊಡೆದಿದ್ದು, ಅಲೇ ಹತ್ತಿರದಲ್ಲಿದ್ದ ಪೈಝಲ್ ಎಂಬವರು ಬಂದು ಪಿರ್ಯಾದುದಾರರನ್ನು ಉಪಚರಿಸಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ನಂತರ ಹೆಚ್ಚಿನ ಚಿಕಿತ್ಸೆ ಪುತ್ತೂರು ಆಸ್ಪತ್ರೆಗೆ ಹೋಗಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ 69/2022 ಕಲಂ: 504.506.324 IPC   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಪುಂಜಾಲಕಟ್ಟೆ ಪೊಲೀಸ್ ಠಾಣೆ : ದಿನಾಂಕ: 14.06.2022 ರಂದು 10.30 ಗಂಟೆಗೆ ಪುಂಜಾಲಕಟ್ಟೆ ಪೊಲೀಸ್‌ ಠಾಣಾ ಪೊಲೀಸ್‌ ಉಪ ನಿರೀಕ್ಷಕರಾದ ಸುತೇಶ್‌ ಕೆ.ಪಿ ರವರು ಠಾಣಾ ಸಿಬ್ಬಂದಿಗಳೊಂದಿಗೆ ಬೆಳ್ತಂಗಡಿ ತಾಲೂಕು ಕಳೆಂಜಿಬೈಲು ಅಂಗನವಾಡಿ ಕೇಂದ್ರದ ಹಿಂಬದಿಯಲ್ಲಿರುವ ಸರಕಾರಿ ಗುಡ್ಡ ಪ್ರದೇಶದಲ್ಲಿ 3-4 ಮಂದಿ ಆರೋಪಿಗಳು ಅಕ್ರಮವಾಗಿ ಗೋವಧೆ ನಡೆಸಿ ಮಾಂಸ ಮಾಡುತ್ತಿದ್ದಾಗ ದಾಳಿ ನಡೆಸಿದ್ದು  ಆರೋಪಿಗಳು ಅಲ್ಲಿಂದ ಓಡಿ ಪರಾರಿಯಾಗಿರುತ್ತಾರೆ. ಸ್ಥಳದಲ್ಲಿ ಮಾಂಸ ಹಾಗೂ ತ್ಯಾಜ್ಯ ಮತ್ತು ತಕ್ಷೀರಿಗೆ ಉಪಯೋಗಿಸಿದ ಇತರ ಸೊತ್ತುಗಳನ್ನು ಸ್ವಾದೀನಪಡಿಸಿಕೊಂಡು,  ಆರೋಪಿಗಳನ್ನು ಹುಡುಕುತ್ತಿರುವ ಸಮಯ ತಕ್ಷೀರು ಸ್ಥಳದಿಂದ ಸುಮಾರು 70  ಅಡಿ ದೂರದಲ್ಲಿ ಗೋವಧೆ ಮಾಡಿದ ಇನ್ನೊಂದು ಸ್ಥಳ ಪತ್ತೆಯಾಗಿದ್ದು, ಸದ್ರಿ ಸ್ಥಳದಲ್ಲಿ ಸಿಕ್ಕಿದ ಸೊತ್ತುಗಳನ್ನು ಸ್ವಾದೀನಪಡಿಸಿಕೊಂಡಿರುವುದಾಗಿದೆ. ಸ್ವಾದೀನಪಡಿಸಿಕೊಂಡ ಎಲ್ಲಾ ಸೊತ್ತುಗಳ ಮೌಲ್ಯ ರೂ 46,300/- ಆಗಬಹುದು. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ಅ.ಕ್ರ 37/2022 ಕಲಂ: ಕಲಂ: 4, 12 ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಅಧಿನಿಯಮ 2020ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-06-2022 10:30 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080