ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸದಾನಂದ, ಪ್ರಾಯ 47 ವರ್ಷ.ತಂದೆ: ದಿ||ಮೊನಪ್ಪಗೌಡ ವಾಸ: ಹಳೆಗೇಟು ಮನೆ, ನಾವೂರು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 13-08-2022 ರಂದು ಕೃಷಿ ಕೆಲಸದ ನಿಮಿತ್ತ ಹಳೆ ಮನೆ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಸುಮಾರು ಸಂಜೆ 05:30 ಗಂಟೆಗೆ ಬಂಟ್ವಾಳ ತಾಲೂಕು ನಾವೂರು ಗ್ರಾಮದ ಹಳೆಗೇಟು ಬಳಿ ತಲುಪುವಾಗ ಬಿ.ಸಿ ರೋಡ್ ಕಡೆಯಿಂದ KA-19-HF-1467 ನೇ ಸ್ಕೂಟರ್ ಸವಾರ ದೂರದಿಂದ ನೋಡಿದರು ನಿಧಾನಿಸದೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಾದಚಾರಿ ವೆಂಕಪ್ಪಗೌಡ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಹಾಗೂ ಸ್ಕೂಟರ್ ಸವಾರ ಹಾಗೂ ಸಹಸವಾರಿಣಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅಪಘಾತವಾಗಿದ್ದು, ಪಾದಚಾರಿ ವೆಂಕಪ್ಪಗೌಡ ರವರಿಗೆ ಎಡಕಾಲಿಗೆ ಗುದ್ದಿದ ರಕ್ತಗಾಯ ಹಾಗೂ ಮುಖಕ್ಕೆ, ಕೈ ಗಳಿಗೆ ತರಚಿದ ಗಾಯವಾಗಿದ್ದು, ಸ್ಕೂಟರ್ ಸವಾರ ಹಾಗೂ ಸಹ ಸವಾರಿಣಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಸ್ಕೂಟರ್ ಸವಾರ ಹಾಗೂ ಸಹ ಸವಾರಿಣಿಗೆ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ, ಪಾದಚಾರಿ ವೆಂಕಪ್ಪಗೌಡ ರವರು ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್  ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಅ.ಕ್ರ 89/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬೂಬಕ್ಕರ್‌ ಪ್ರಾಯ 41 ವರ್ಷ, ತಂದೆ: ಉಮರಬ್ಬ ವಾಸ: ಸೋಕಿಲ ಮನೆ, ಬಾರ್ಯ ಅಂಚೆ ಮತ್ತು ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ 14-08-2022 ರಂದು 12-50 ಗಂಟೆಗೆ ಆರೋಪಿ ಕಾರು ಚಾಲಕ ಮಹಮ್ಮದ್‌ ಸ್ವಾಲಿಹ್‌ ಎಂಬವರು KA-04-MT-1590 ನೇ ನೋಂದಣಿ ನಂಬ್ರದ ಕಾರನ್ನು ಅಜಿಲಮೊಗರು-ನೀಲಗಿರಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ನೀಲಗಿರಿ ಕಡೆಯಿಂದ ಅಜಿಲಮೊಗರು ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಪಂರ್ದ-ಸೋಕಿಲ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಕೆ.ಹೆಚ್‌.ದಾವೂದ್‌ ಎಂಬವರು ಸಹಸವಾರರಾಗಿ, ಜಾಬಿರ್‌ ಎಂಬವರು ಸವಾರರಾಗಿ ಅಜಿಲಮೊಗರು ಕಡೆಯಿಂದ ನೀಲಗಿರಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-X-3092 ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲಿಗೆ ಅಪಘಾತವಾಗಿ ಸವಾರರಿಬ್ಬರೂ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಸವಾರನಿಗೆ ಮೈಕೈಗೆ ಗುದ್ದಿದ ಗಾಯ ಮತ್ತು ಸಹಸವಾರನಿಗೆ ಬಲಕಾಲಿನ ಮೊಣಗಂಟಿಗೆ, ಬಲಕೈ ಮೊಣಗಂಟಿಗೆ, ಬಲಕಾಲಿನ ತೊಡೆಗೆ ಗುದ್ದಿದ ಹಾಗೂ ರಕ್ತಗಾಯವಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಮಂಗಳೂರು  ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ .ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ:  129/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ರುಕ್ಮುಣಿ  ಗಂಡ: ಸಂಕಪ್ಪ ರಾಣ್ಯ ಪ್ರಾಯ 50 ವರ್ಷ  ಕೋರ್ಯ ಮನೆ,ಬಾಳ್ತಿಲ ಗ್ರಾಮ ಮತ್ತು ಅಂಚೆ,ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರ ಗಂಡನಾದ ಸಂಕಪ್ಪ ರಾಣ್ಯ ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 13-08-2022 ರಂದು 6.30 ಗಂಟೆ ಕಲ್ಲಡ್ಕಕ್ಕೆ ಹೋದವರು  ವಾಪಾಸು ಮನೆಗೆ ಬಾರದೇ ಇದ್ದಾಗ ಎಲ್ಲರೂ ಸೇರಿ  ಹುಡುಕಾಡಿದಾಗ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ದಿನಾಂಕ 14-08-2022 ರಂದು ತೋಟದಲ್ಲಿರುವ ಕುಡಿಯುವ ನೀರಿನ ಕಟ್ಟೆಯಿಲ್ಲದ ಬಾವಿಯ ಬಳಿ ಪೊದೆಯಲ್ಲಿ ಹುಡುಕಿದ್ದು, ಬಾವಿಯ ಬದಿಯಲ್ಲಿ ಜಾರಿದ ಗುರುತುಗಳನ್ನು ನೋಡಿ ಅಗ್ನಿ ಶಾಮಕದವರಿಗೆ ತಿಳಿಸಿದ್ದು, ಅವರುಮೃತದೇಹವನ್ನು ಮೇಲಕ್ಕೆತ್ತಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 33/2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-08-2022 11:34 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080