ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಾಜಶೇಖರ,  ಪ್ರಾಯ 43 ವರ್ಷ, ತಂದೆ: ದಿ.ಶೇಶಪ್ಪ ಕುಲಾಲ್, ವಾಸ: ಅಮ್ಮುಂಜೆ ಮನೆ, ಮೊಟ್ಟೆತ್ತಡ್ಕ, ಕೆಮ್ಮಿಂಜೆ  ಗ್ರಾಮ, ದರ್ಬೆ ಅಂಚೆ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 13-10-2022 ರಂದು 20:15 ಗಂಟೆಗೆ ಆರೋಪಿ ಹೆಸರು ಮತ್ತು ನೊಂದಣಿ ನಂಬ್ರ ತಿಳಿದು ಬಾರದ ಕಾರು ಚಾಲಕ ಕಾರನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಣಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ,  ಪುತ್ತೂರು ತಾಲೂಕು ಕಬಕ ಗ್ರಾಮದ ರಕ್ತೇಶ್ವರಿ ವಠಾರ ಕ್ರಾಸ್‌ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಾದಾಚಾರಿಯಾಗಿದ್ದ ಪಿರ್ಯಾದುದಾರರ ತಮ್ಮ ರಾಮಕೃಷ್ಣರವರಿಗೆ ಅಪಘಾತವಾಗಿ, ರಾಮಕೃಷ್ಣ ರವರಿಗೆ ತಲೆಗೆ ಗಾಯಗಳಾಗಿ, ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ  ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್‌ ಲಾಕ್‌ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆರೋಪಿ ಕಾರು ಚಾಲಕ ಗಾಯಳುವನ್ನು ಆಸ್ಪತ್ರೆಗೆ ಸೇರಿಸದೇ, ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನಿಡದೇ ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ156/2022 ಕಲಂ: 279, 337 ಐಪಿಸಿ, 134(A&B) MV Act.ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಯತ್ನ ಪ್ರಕರಣ: 1

  • ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸಿಲ್ವಿಯಾ  ಫೆರ್ನಾಂಡೀಸ್‌ ಪ್ರಾಯ 55 ವರ್ಷಗಂಡ: ದಿ. ಪ್ರಾಂಕಿ ಪಿಂಟೋ ವಾಸ: ಕೆಎಸ್‌ಆರ್‌ಟಿಸಿ ಬಸ್‌ಸ್ಟಾಂಡ್‌ ಹತ್ತಿರ ಪುಂಜಾಲಕಟ್ಟೆ ಕುಕ್ಕಳ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರು ಬಂಟ್ವಾಳ ತಾಲೂಕು ಸರಪಾಡಿ ಗ್ರಾಮ ಪಂಚಾಯತ್‌ ನಲ್ಲಿ ಸುಮಾರು 3 ವರ್ಷಗಳಿಂದ ಪಂಚಾಯತ್‌ ಅಭಿವೃದ್ದಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಎರಡು ವಾರಕ್ಕೊಮ್ಮೆ ತನ್ನ ಮನೆಗೆ ಬಂದು ಹೋಗುತ್ತಿರುವುದಾಗಿದೆ. ಇತ್ತೀಚೆಗೆ ಕೆಲವು ಸಮಯದಿಂದ ಪಿರ್ಯಾದಿದಾರರು ತನ್ನ ಮನೆಯಿಂದಲೇ ಕರ್ತವ್ಯಕ್ಕೆ ಹೋಗಿ ಬರುತ್ತಿದ್ದು, ದಿನಾಂಕ: 13.10.2022 ರಂದು ರಾತ್ರಿ 8.00 ಗಂಟೆಗೆ ಪಿರ್ಯಾದಿದಾರರು ತನ್ನ ಮನೆಗೆ ಬೀಗ ಹಾಕಿಕೊಂಡು ಮಡಂತ್ಯಾರಿನಲ್ಲಿರುವ ತನ್ನ ಮಗಳ ಮನೆಗೆ ಹೋಗಿದ್ದು ದಿನಾಂಕ: 14.10.2022 ರಂದು ಬೆಳಿಗ್ಗೆ 7.15 ಗಂಟೆಗೆ ಪಿರ್ಯಾದಿದಾರರು ಮಗಳ ಮನೆಯಿಂದ  ತನ್ನ ಮನೆಗೆ ಮರಳಿ ಬಂದು  ಮುಂದಿನ ಬಾಗಿಲನ್ನು ತೆರೆಯಲು ಪ್ರಯತ್ನಿಸಿದಾಗ  ಬಾಗಿಲನ್ನು ತೆರಯಲು ಆಗದಿರುವುದರಿಂದ ಅನುಮಾನಗೊಂಡ ಪಿರ್ಯಾದಿದಾರರು  ಮನೆಯ ಹಿಂಬದಿಗೆ ಹೋಗಿ ಪರಿಶೀಲಿಸಿದಾಗ ಮನೆಯ ಹಿಂಬಾಗಿಲು ತೆರೆದಂತೆ ಕಂಡು ಬಂದಿದ್ದು ಕೈಯಿಂದ ದೂಡಿದಾಗ ಬಾಗಿಲು ತೆರದುಕೊಂಡಿರುತ್ತದೆ. ಬಳಿಕ ಪಿರ್ಯಾದಿದಾರರು  ಮನೆಯ ಒಳಗೆ ಹೋಗಿ ಪರಿಶೀಲಿಸಿದಾಗ ಮನೆಯ ಬಲಬದಿಯ ಕಬ್ಬಿಣದ ಕಿಟಕಿಯನ್ನು ಯಾವುದೋ ಸಾಧನದಿಂದ ಮುರಿದು ಕಳ್ಳರು ಮನೆಯೊಳಗೆ  ಪ್ರವೇಶಿಸಿರುವುದು ಕಂಡು ಬಂದಿದ್ದು,  ಪಿರ್ಯಾದಿದಾರರು ಮನೆಯೊಳಗೆ ಪರಿಶೀಲಿಸಿದಾಗ ಮನೆಯ ಬೆಡ್‌ ರೂಂ ನೊಳಗೆ ಇದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿ ಮಾಡಿ ಮರದ ಕಪಾಟನ್ನು ತೆರೆದು  ಕಪಾಟಿನೊಳಗೆ  ಇದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದಲ್ಲದೇ  ಕಪಾಟಿನೊಳಗೆ ಇದ್ದ  ಪಿರ್ಯಾದದಿಆರರ ಬಾಬ್ತು  ಒಟ್ಟು 1,20,000 ರೂ ಮೌಲ್ಯದ ಸುಮಾರು 25 ಗ್ರಾಂ ಚಿನ್ನದ ಒಡವೆಗಳನ್ನು  ಕಳ್ಳರು ಕಳ್ಳತನ ಮಾಡಿರುವುದು  ಕಂಡು ಬಂದಿರುತ್ತದೆ.ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ79/2022 ಕಲಂ: 457, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಬ್ದುಲ್‌ ರಹಿಮಾನ್‌ ಪ್ರಾಯ 48 ವರ್ಷ ತಂದೆ: ದಿ|| ಆದಂ ವಾಸ:ಒಕ್ಕೆತ್ತೂರು ಮನೆ, ಮಂಗಿಲಪದವು,ವಿಟ್ಲ ಕಸಬ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರ ಬಾಬ್ತು ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ವಿಟ್ಲ ಪೇಟೆಯಲ್ಲಿರುವ ದೀಪಕ್‌ ವಾಚು ರೀಪೆರಿಯ ಅಂಗಡಿ ಬಾಗಿಲಿನ ಶಟರ್‌ಗೆ ದಿನಾಂಕ:11-10-2022 ರಂದು ರಾತ್ರಿ 9.00 ಗಂಟೆಯಿಂದ ದಿನಾಂಕ:12-10-2022 ರ ಬೆಳಿಗ್ಗೆ 08.30 ಗಂಟೆಯ ಮದ್ಯೆ ಯಾರೋ ಕಿಡಿಗೇಡಿಗಳು ಕೋಮು ಸೌಹಾರ್ಧತೆಗೆ ಧಕ್ಕೆಯನ್ನುಂಟುವಂತಹ ಬರಹಗಳನ್ನು ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಬರೆದು ಶಟರ್‌ ನ್ನು ವಿರೂಪಗೊಳಿಸಿ ಪಿರ್ಯಾಧಿದಾರರಿಗೆ 1000/- ರೂ ನಷ್ಟು ಹಾನಿ ಮಾಡಿ ನಷ್ಟ ವುಂಟುಮಾಡಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 158/2022  ಕಲಂ: 153(ಎ),427 ಬಾಧಂಸಂ ಮತ್ತು ಕಲಂ:3 KARNATAKA OPEN PLACE DISFIGUREMENT ACT 1981 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವೇಣೂರು ಪೊಲೀಸ್ ಠಾಣೆ : ದಿನಾಂಕ: 14-10-2022  ರಂದು ಬೆಳ್ತಂಗಡಿ ತಾಲೂಕು ತೆಂಕಾರಂದೂರು ಗ್ರಾಮದ   ಉದಯಗಿರಿ ಎಂಬಲ್ಲಿ  ಶಿವಕುಮಾರ್‌ ಬಿ .  ವೃತ್ತನಿರೀಕ್ಷಕರು ಬೆಳ್ತಂಗಡಿ   ವೃತ್ತ ಬೆಳ್ತಂಗಡಿರವರು   ಸಿಬ್ಬಂದಿಯವರೊಂದಿಗೆ  ವಾಹನ   ತಪಾಸಣೆ  ನಡೆಸುತ್ತಿರುವ  ಸಮಯ  ಸುಮಾರು   ಬೆಳಗ್ಗೆ 10:45 ಗಂಟೆಗೆ   ಗುರುವಾಯನಕೆರೆ    ಕಡೆಯಿಂದ  ನಾರಾವಿ  ಕಡೆಗೆ  ಕೆಎ 19 ಎ ಡಿ1648 ನೇ  ಗೂಡ್ಸ್‌  ಆಟೋ ರಿಕ್ಷಾ   ಬರುತ್ತಿದ್ದನ್ನು    ನಿಲ್ಲಿಸಿ  ಪರಿಶೀಲನೆ  ನಡೆಸಿದಾಗ   ಆರೋಪಿಗಳಾದ  ಮೊಹಮ್ಮದ್‌  ಅಶ್ರಪ್‌  ಮತ್ತು ಅಬ್ದುಲ್‌ ಲತೀಫ್‌  ಎಂಬವರು ಗಳು  ಯಾವುದೇ  ಪರವಾನಿಗೆ  ಇಲ್ಲದೇ  ಮಾದಕ  ವಸ್ತುವಾದ   ಗಾಂಜಾ ಸಾಗಾಟ  ಮಾಡುತ್ತಿರುವುದು  ಕಂಡು  ಬಂದ   .ಮೇರೆಗೆ ಪಿರ್ಯಾದಿದಾರರು  ಆರೋಪಿಗಳ  ವಶದಲ್ಲಿದ್ದ ಸುಮಾರು 30,000/- ಮೌಲ್ಯದ 805 ಗ್ರಾಂ  ಗಾಂಜಾವನ್ನು  ಹಾಗೂ  ಸಾಗಾಟಕ್ಕೆ   ಬಳಸಿದ  ಸುಮಾರು  2,00,000 ರೂ   ಬೆಲೆ ಬಾಳುವ  ಗೂಡ್ಸ್‌  ಆಟೋ ರಿಕ್ಷಾವನ್ನು  ವಶಕ್ಕೆ   ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ: 62-2022 ಕಲಂ:  8 (c)  , 20(b) NDPS Act ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರವಿ, ಪ್ರಾಯ: 37 ವರ್ಷ, ತಂದೆ: ಗೋಪಾಲ ನಾಯ್ಕ, ವಾಸ: ಅತ್ತಾಜೆ ಮನೆ, ಉಜಿರೆ ಅಂಚೆ& ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ತಂದೆಯವರು ದಿನಾಂಕ: 13-10-2022 ರಂದು 16-00 ಗಂಟೆಗೆ ಎಂದಿನಂತೆ ಪೇಟೆಗೆ ಹೋದವರು ವಾಪಾಸು ಮನೆಗೆ ಬಾರದೆ ಇದ್ದು, ಹುಡುಕಾಡುತ್ತಿರುವ ಸಮಯ ಈ ದಿನ ದಿನಾಂಕ:14-10-2022 ರಂದು ಬೆಳಿಗ್ಗೆ 6-00 ಗಂಟೆಗೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಅತ್ತಾಜೆ ಕೆರೆಕೋಡಿ ಕೆರೆ ಯಲ್ಲಿ ಪಿರ್ಯಾದಿದಾರರ ತಂದೆಯವರ ಮೃತದೇಹವು ಪತ್ತೆಯಾಗಿದ್ದು. ಈ ಬಗ್ಗೆ ಬೆಳ್ತಂಗಡಿ ಠಾಣಾ UDR ನಂಬ್ರ: 44/2022 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-10-2022 09:54 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080