ಅಭಿಪ್ರಾಯ / ಸಲಹೆಗಳು

 ಅಪಘಾತ ಪ್ರಕರಣ: 03

 • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ರುಮಾ ಯಾಸ್ಮೀನ್‌ (43), ಗಂಡ: ಉಸ್ಮಾನ್‌ ಬಿ, ವಾಸ: ಕೊಲ್ಲೆಜಾಲ್‌ ಮನೆ, ಹಿರೆಬಂಡಾಡಿ ಗ್ರಾಮ, ಪುತ್ತೂರು ತಾಲೂಕು  ಎಂಬವರ ದೂರಿನಂತೆ ದಿನಾಂಕ: 11-11-2022 ರಂದು ಅವರ ಗಂಡನ ಬಾಬ್ತು ಕೆಎ 21 Z 1063 ನೇ ಕಾರಿನಲ್ಲಿ ಪಿರ್ಯಾದಿದಾರರ ತಾಯಿ ಹಾಜಿರಾ, ತಂಗಿ ಸಲ್ಮಾ, ರವರೊಂದಿಗೆ ಸಹ ಪ್ರಯಾಣಿಕರಾಗಿ ಕುಳಿತುಕೊಂಡು ಕಾರನ್ನು ಪಿರ್ಯಾದಿದಾರರ ಗಂಡ ಉಸ್ಮಾನ್‌ರವರು ಚಿಕ್ಕಮಂಗಳೂರಿನಿಂದ ಉಜಿರೆ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವ ಸಮಯ ರಾತ್ರಿ 7.30 ಗಂಟೆಗೆ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಚಾರ್ಮಾಡಿ ಒಂದನೇಯ ತಿರುವು ಬಳಿ ತಲುಪುತ್ತಿದ್ದಂತೆ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿ ಚಾಲಕನ ಚಾಲನಾ ಹತೋಟಿ ತಪ್ಪಿ ರಸ್ತೆಯ ಎಡಬದಿಯಲ್ಲಿರುವ ಹೊಂಡಕ್ಕೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾದಿದಾರರಿಗೆ ತಲೆಯ ಹಿಂಬಾಗಕ್ಕೆ ಗುದ್ದಿದ ಗಾಯ, ಹಾಜಿರಾರವರಿಗೆ ಮುಖಕ್ಕೆ, ಮುಗಿಗೆ, ಹಣೆಗೆ ಗುದ್ದಿದ ಗಾಯ, ಸಲ್ಮಾರವರಿಗೆ ಗಲ್ಲಕ್ಕೆ ಗುದ್ದಿದ ಗಾಯ ಕಾರು ಚಾಲಕ ಉಸ್ಮಾನ್‌ರವರಿಗೆ ತಲೆಯ ಹಿಂಬಾಗಕ್ಕೆ ಮತ್ತು ಬೆನ್ನಿಗೆ ಗುದ್ದಿದ ಗಾಯವಾಗಿರುತ್ತದೆ ಗಾಯಳುಗಳೆಲ್ಲಾರು ಚಿಕಿತ್ಸೆ ಬಗ್ಗೆ ಮಂಗಳೂರು ಹೈಲ್ಯಾಂಡ್‌ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 140/2022 ಕಲಂ; 279,337 ಐಪಿಸಿ & ಕಲಂ: 134(ಬಿ)ಜೊತೆಗೆ 187 ಐಎಮ್‌ವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ  ರಾಜೇಶ್‌ ಬಿ, ಪ್ರಾಯ 46  ವರ್ಷ, ತಂದೆ: ರಾಮ ಪೂಜಾರಿ, ವಾಸ: ನಂದಿಲ ಮನೆ, ಹಾರಾಡಿ, ಪುತ್ತೂರು ಕಸಬಾ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 14-11-2022 ರಂದು 09:00 ಗಂಟೆಗೆ ಆರೋಪಿತೆ ಸ್ಕೂಟರ್‌  ಸವಾರೆ ಹರ್ಷಿತಾ  ಎಂಬವರು KA-21-EC-6522 ನೇ ನೋಂದಣಿ ನಂಬ್ರದ ಸ್ಕೂಟರಿನಲ್ಲಿ ಪಿರ್ಯಾದುದಾರರಾದ ರಾಜೇಶ್‌ ಬಿ.ರವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾರಾಡಿ ಕಡೆಯಿಂದ ಮಂಜಲ್ಪಡ್ಪು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಕಬಕ ಗ್ರಾಮದ ಮಂಜಲ್ಪಡ್ಪು ಲಾ ಕಾಲೇಜ್‌ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಸ್ಕೂಟರಿಗೆ ಒಮ್ಮೆಲೇ ಬ್ರೇಕ್‌ ಹಾಕಿದ ಪರಿಣಾಮ, ಸ್ಕೂಟರ್‌ ಸ್ಕಿಡ್‌ ಆಗಿ ಪಿರ್ಯಾದುದಾರರು ಮತ್ತು ಸವಾರೆ  ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರಿಗೆ ಎಡಕೈ ಭುಜದ ಬಳಿ, ಎಡಕಾಲಿನ ಮೊಣಗಂಟಿಗೆ ಗುದ್ದಿದ ಹಾಗೂ ಬಲಕೈಯ ತಟ್ಟಿಗೆ ತರಚಿದ ಗಾಯವಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಸವಾರೆಗೆ ಸೊಂಟಕ್ಕೆ ಮತ್ತು ಕಾಲುಗಳಿಗೆ ಗುದ್ದಿದ ಗಾಯವಾಗಿರುತ್ತದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 176/2022 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಉಪ್ಪಿನಂಗಡಿ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಸುಭಾಷ ಪ್ರಾಯ 44 ವರ್ಷ ತಂದೆ:ಕೆ.ಕೆ. ಎಸ್. ಸೋಮನಾಥನ್ ವಾಸ:ಅಯ್ಯಪ್ಪ ಬೆಟ್ಟದ ಬಳಿ ಮನೆ ಕೌಕ್ರಾಡಿ ಗ್ರಾಮ ಕಡಬ ತಾಲೂಕು‌ ಎಂಬವರ ದೂರಿನಂತೆ ದಿನಾಂಕ 13-11-2022ರಂದು ಬೆಳಿಗ್ಗೆ ಸುಮಾರು 9.00 ಗಂಟೆಗೆ ಅಗತ್ಯ ಕೆಲಸದ ನಿಮಿತ್ತ ಧರ್ಮಸ್ಥಳ ಕಡೆಗೆ ಮೋಟಾರು ಸೈಕಲ್ ನಲ್ಲಿ ಹೊರಟು ಧರ್ಮಸ್ಥಳ-ಕೊಕ್ಕಡ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಾ ಬೆಳಿಗ್ಗೆ 9.30 ಗಂಟೆಗೆ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಮೂಡುಬೈಲು ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿಯ ಎದುರುಗಡೆಯಿಂದ ಅಂದರೆ ಧರ್ಮಸ್ಥಳ ಕಡೆಯಿಂದ ಕೊಕ್ಕಡ ಕಡೆಗೆ ಒಂದು ಪ್ರಯಾಣಿಕರಿದ್ದ ನಂಬ್ರ ಕೆಎ-51-ಬಿ-9324ನೇ ಮಿನಿಬಸ್ ನ್ನು ಅದರ ಚಾಲಕನು ತಿರುವು ರಸ್ತೆಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮಿನಿಬಸ್ಸು ಚಾಲಕನ ಹತೋಟಿ ತಪ್ಪಿ ರಸ್ತೆಯ ಬಲ ಬದಿ ಹೊಂಡಕ್ಕೆ ಮಗುಚಿ ಬಿದ್ದ ಪರಿಣಾಮ ಮಿನಿಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಪ್ರಯಾಣಿಕರಿಗೆ ಮತ್ತು ಚಾಲಕನಿಗೆ ಗುದ್ದಿದ ನೋವು ಮತ್ತು ತರಚಿದ ರಕ್ತಗಾಯಗಳಾಗಿದ್ದು, ಸ್ಥಳಕ್ಕೆ ಬಂದ ಅಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಕಳುಹಿಸಿದಲ್ಲಿ ಗಾಯಾಳುಗಳು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ   ಅ.ಕ್ರ 119/2022 ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 01

 • ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶಾಕೀರ್‌ ಪ್ರಾಯ 30 ವರ್ಷ ತಂದೆ:ಅಬೂಬಕ್ಕರ್‌ ವಾಸ:ನಾಡಾಜೆ ಮನೆ, ಬೊಳಂತೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 13.11.2022 ರಂದು ರಾತ್ರಿ ತನ್ನ ಬಾಬು ಕೆಎ-70-4096ನೇ ರಿಕ್ಷಾದಲ್ಲಿ ಬೆಳಗಿನ ಜಾವ 03:15 ಗಂಟೆಗೆ ಬಂಟ್ವಾಳ ತಾಲೂಕು ಬೊಳಂತೂರು ಗ್ರಾಮದ ಮದಕ ಎಂಬಲ್ಲಿ ತಲುಪಿದಾಗ ಸುಮಾರು 30 ಅಡಿ ದೂರ ರಸ್ತೆಯ ಬಲ ಭಾಗದಲ್ಲಿ ಮೂರು ಜನ ನಿಂತಿದ್ದು ಅವರಲ್ಲಿ ಒರ್ವ ರಿಕ್ಷಾದ ಗ್ಲಾಸ್‌ಗೆ ಟಾರ್ಚ್ ಲೈಟ್ ಬೆಳಕು ಹಾಯಿಸಿದ್ದು ಆದರಿಂದಾಗಿ ರಿಕ್ಷಾವನ್ನು ನಿಧಾನಿಸಿ ಮುಂದೆ ಹೋದಾಗ ಮೂರು ಜನ ಸೇರಿ ರಿಕ್ಷಾವನ್ನು ಅಡ್ಡಗಟ್ಟಿ ನಿಲ್ಲಿಸಿದ್ದು. ಆ ಮೂವರಲ್ಲಿ ಓರ್ವ ಪರಿಚಯದ ಸಾಧಿಕ್ @ಕುಂಡ ಎಂಬನಾಗಿದ್ದು ಪಿರ್ಯಾದಿದಾರರನ್ನು ಉದ್ದೇಶಿಸಿ ನನ್ನ ಮೇಲೆ ನೀನು ಹಾಗೂ ನಿನ್ನ ಅಣ್ಣ ಸೇರಿಕೊಂಡು ಕೇಸು ಮಾಡಿದ್ದೀರಾ ಸುಮಾರು ಸಮಯದಿಂದ ನೀನು ಒಬ್ಬನೇ ಸಿಗುವುದನ್ನು ಕಾಯುತ್ತಿದ್ದು ಇವತ್ತು ಸಿಕ್ಕಿದ್ದೀಯಾ, ನಿನ್ನನ್ನು ಒಂದು ಕೈ ನೋಡುತ್ತೇನೆ, ಎಂದು ಹೇಳಿ ತಲವಾರು ರೀತಿಯ ಆಯಧವನ್ನು ತೋರಿಸಿ ಅದರಿಂದ ಕಡಿಯಲು ಬಂದಾಗ ಪಿರ್ಯಾದಿ ಬಲಗೈಯನ್ನು ಅಡ್ಡ ಹಿಡಿದಿದ್ದು ಆಯುಧ ತಾಗಿದ ಪರಿಣಾಮ ಕುತ್ತಿಗೆಯ ಬಲಭಾಗ,ಬಲಕಿವಿ ಮತ್ತು ಬಲಕೈ ಮಣಿಗಂಟಿನ ಬಳಿ ರಕ್ತಗಾಯವಾಗಿರುತ್ತದೆ, ಸಾಧಿಕ್ ನ ಜೊತೆಗಿದ್ದ ಮುಖ ಪರಿಚಯದ ಇನ್ನಿಬ್ಬರು ಆತನಿಗೆ ಸಹಕರಿಸಿ ಒಬ್ಬಾತ ಸೊಂಟಕ್ಕೆ ತುಳಿದಿದ್ದು ,ಇನ್ನೊಬ್ಬನು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ, ಕೊಂದು ಹಾಕುತ್ತೇವೆ ಎಂದು ಹೇಳಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ ಪಿರ್ಯಾಧಿ ಚಿಕಿತ್ಸೆಯ ಬಗ್ಗೆ ಕಲ್ಲಡ್ಕದ ಪುಷ್ಪರಾಜ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 176/2022  ಕಲಂ:341,323,324,504,506 34 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 02

 • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕಿರಣ್‌ ಕುಮಾರ್‌   ಪ್ರಾಯ:56 ವರ್ಷ ತಂದೆ: ದಿ. ಹುಕ್ರ ಮುಗೇರ  ವಾಸ: ಮಣಿಲ ಮನೆ ಪಟ್ರಮೆ   ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಚಿಕ್ಕಪ್ಪ ಅವರ ಮಗಳಾದ ಜಾನಕಿ, ಸೊಸೆ ಮಮತಾ, ಹಾಗೂ ಮೊಮ್ಮಗಳು ರಮ್ಯಳೊಂದಿಗೆ ವಾಸವಾಗಿದ್ದು ಅವರ ಮನೆಯಲ್ಲಿ ಚಿಕ್ಕಪ್ಪನ ಮಗಳು ಜಾನಕಿ ಸೊಸೆ ಮಮತಾ, ಹಾಗೂ ಚಿಕ್ಕಪ್ಪನವರು ಅಮಲು ಪಧಾರ್ಥ ಸೇವಿಸುವ ಚಟವನ್ನು ಹೊಂದಿದ್ದು ಮನೆಯಲ್ಲಿ ಆಗಾಗ ಗಲಾಟೆ ಮಾಡುತ್ತಿದ್ದವರಾಗಿದ್ದು, ದಿನಾಂಕ:14-11-2022 ರಂದು ಬೆಳಿಗ್ಗೆ  05:30 ಗಂಟೆಗೆ ಪಿರ್ಯಾದಿದಾರರ ಚಿಕ್ಕಪ್ಪನ ಮಗಳಾದ ಜಾನಕಿ ಎಂಬವರು ಪಿರ್ಯಾದಿದಾರರ ಮನೆಗೆ  ಬಂದು ತಂದೆಯವರಿಗೆ ಎನೋ ಹುಷಾರಿಲ್ಲ‌ ಬಾಯಿಯಲ್ಲಿ ಕಫ ಬರುತ್ತಿದೆ. ಎಂದು ಹೇಳಿದಾಗ ಪಿರ್ಯಾದಿದಾರರು ಸಂಬಂಧಿಕರಿಗೆ ಚಿಕ್ಕಪ್ಪನವರಿಗೆ ಹುಷಾರಿಲ್ಲ ಎಂದು ಮೊಬೈಲ್‌ ಗೆ ಕರೆ ಮಾಡಿ ಪಿರ್ಯಾದಿದಾರರು ಕೂಡಲೇ ಪತ್ನಿ ಲಲಿತಾರವರನ್ನು ಕರೆದುಕೊಂಡು ಮನೆಗೆ ಹೋಗಿ ನೋಡಿದಾಗ ಗುರುವ ಮುಗೇರರವರು ಮನೆಯೊಳಗೆ ಮಲಗಿ ಮಾತನಾಡುವ ಸ್ಥಿಯಲ್ಲಿ ಇರುವುದಿಲ್ಲವಾದದನ್ನು ಕಂಡು ನಂತರ ಪಿರ್ಯಾದಿದಾರರು ಹಾಗೂ ಬಾಬು, ಕರಿಯಪ್ಪ ಹಾಗೂ ಉಮೇಶವರು ಸೇರಿ ಗುರುವ ಮುಗೇರರವರನ್ನು ಉಪಚರಿಸಿ ನೋಡಿದಾಗ ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಯುಡಿಆರ್‌ ಕ್ರಮಾಂಕ: 65/2022 ಕಲಂ: 174 (3) (4) ಸಿ ಆರ್‌ ಪಿ ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸವಿತಾ,  ಪ್ರಾಯ-38 ವರ್ಷ, ಗಂಡ ಶೀನ, ವಾಸ- ಉಪ್ಪಳಿಗೆ  ಮನೆ, ಬೆಟ್ಟಂಪಾಡಿ    ಗ್ರಾಮ  ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದುದಾರರಾದ ಗಂಡನಾದ  45 ವರ್ಷ ಪ್ರಾಯದ  ಶೀನ ಎಂಬವರು ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು, ಜಾಗ ಮತ್ತು ಮನೆ ಕಟ್ಟುವರೇ ಸಾಲವನ್ನು ಮಾಡಿದ್ದು, ಮಾಡಿದ ಸಾಲವನ್ನು ಹಿಂತಿರುಗಿಸಲಾಗದೇ ಬೇಸರದಲ್ಲಿದ್ದರು. ದಿನಾಂಕ:-14.11.2022ರಂದು  ಸಂಜೆ 4.00 ಗಂಟೆಗೆ ಫಿರ್ಯಾದುದಾರರು  ಉಪ್ಪಳಿಗೆ ಸರಕಾರಿ ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಬರಲು ಹೋದಾಗ ಶೀನರವರು ತನ್ನ ಮನೆಯಲ್ಲಿಯೇ ಇದ್ದು, ಬಳಿಕ ಸಂಜೆ 4.20 ಗಂಟೆಗೆ ಫಿರ್ಯಾದುದಾರರು ವಾಪಾಸು ತನ್ನ ಮನೆಗೆ ಬಂದಾಗ  ಶೀನರವರು ತನ್ನ ಮನೆಯ  ಎದುರಿನ ಕೋಣೆಯಲ್ಲಿ ನೈಲಾನ್ ಸೀರೆಯ ತುಂಡನ್ನು ಮಾಡಿನ ಸಲಾಕೆಗೆ ಕಟ್ಟಿ,  ತನ್ನ ಕುತ್ತಿಗೆಗೆ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ UDR.NO 34/2022 ಕಲಂ: 174 ಸಿ ಆರ್‌ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-11-2022 12:53 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080