ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಚರಣ್ ಪ್ರಾಯ: 19 ವರ್ಷ ತಂದೆ: ಭಾಸ್ಕರ್ ವಾಸ: ಚಂಡ್ತಿಮಾರ್ ಮನೆ, ಬಿ ಕಸಬಾ ಗ್ರಾಮ ಬಂಟ್ವಾಳ ತಾಲೂಕು. ಎಂಬವರ ದೂರಿನಂತೆ ದಿನಾಂಕ 10-12-2022 ರಂದು ಪಿರ್ಯಾದಿದಾರರು ಸ್ಕೂಟರ್ನಲ್ಲಿ ತನ್ನ ತಮ್ಮ ತರುಣ್ ರವರನ್ನು ಕರೆದುಕೊಂಡು ಹೋಗಲು ಚಂಡ್ತಿಮಾರ್ ಮನೆ ಕಡೆಯಿಂದ ಜಕ್ರಿಬೆಟ್ಟು ಕಡೆಗೆ ಹೋಗಿ ಸ್ಕೂಟರನ್ನು ತಿರುಗಿಸುವ ಸಲುವಾಗಿ ನಿಲ್ಲಿಸಿದಾಗ ತಮ್ಮನ ಜೊತೆಗೆ ಆತನ ಗೆಳೆಯ ಪೃಥ್ವಿ ಮತ್ತು ರಕ್ಷಿತ್ ಎಂಬುವವರಿದ್ದು ಸಮಯ ಸುಮಾರು ರಾತ್ರಿ 10:00 ಗಂಟೆಗೆ ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ಜಕ್ರಿಬೆಟ್ಟು ಬಂಟ್ವಾಳ – ಕಡೂರು ರಾಷ್ಟೀಯ ಹೆದ್ದಾರಿಯಲ್ಲಿ ಪಿರ್ಯಾದಿದಾರರು ನೋಡುತ್ತಿದಂತೆಯೆ ಬಿ ಸಿ ರೋಡು ಕಡೆಯಿಂದ KA-21-Q-5025 ನೇ ಮೋಟಾರ್ ಸೈಕಲನ್ನು ಅದರ ಸವಾರ ದೂರದಿಂದ ನೋಡಿದರು ನಿದಾನಿಸದೆ  ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ಬದಿಯಲ್ಲಿ ನಿಂತುಕೊಂಡಿದ್ದ ಪಿರ್ಯಾದಿದಾರರ ತಮ್ಮ ತರುಣ್ ರವರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಪರಿಣಾಮ ತರುಣ್ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಎಡ ಕೋಲು ಕಾಲಿಗೆ ಮತ್ತು ಬಲ ಕಾಲು ಮೊಣಗಂಟಿಗೆ ಗುದ್ದಿದ ಮತ್ತು ತರಚಿದ ಗಾಯವಾಗಿದ್ದು ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಅತ್ತಾವರ ಕೆ ಎಂ ಸಿ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದ್ದು ಬಳಿಕ ಅತ್ತಾವರ ಕೆ ಎಂ ಸಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ   ದಾಖಲಾಗಿರುವುದಾಗಿದೆ.  .ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 154/2022 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಉಮ್ಮರ್ ಫಾರೂಕ್  ಪ್ರಾಯ: 35 ವರ್ಷ ತಂದೆ: ಅಬ್ದುಲ್ ರಹಿಮಾನ್  ವಾಸ: ಟಿಪ್ಪು ನಗರ ಲೊರೊಟ್ಟೋಪದವು  ಬಿ ಕಸಬಾ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 14.12.2022 ರಂದು ಕೈಕಂಬದಿಂದ ಮೊಡಂಕಾಪುವಿಗೆ ಅವರ ಬಾಬ್ತು KA 70-3536 ನೇ ಆಟೋರಿಕ್ಷಾದಲ್ಲಿ 3 ಜನ ಹೆಂಗಸು ಮತ್ತು 1 ಮಗುವನ್ನು ಆಟೋರಿಕ್ಷಾದಲ್ಲಿ ಕುಳ್ಳಿರಿಸಿಕೊಂಡು ಬಾಡಿಗೆ ನಿಮಿತ್ತ ಹೋಗುತ್ತಿದ್ದ ಸಮಯ ಸುಮಾರು 15:15 ಗಂಟೆಗೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ  ಮೊಡಂಕಾಪು ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರಿನಿಂದ ಅಂದರೆ ಪೊಳಲಿ ಕಡೆಯಿಂದ  KA -19-AA-0629 ನೇ ಲಾರಿ ಚಾಲಕ ಅಬ್ದುಲ್ ಕಲಾಂ ಅಹಮ್ಮದ್  ರವರು ಲಾರಿಯನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾ ರಸ್ತೆಗೆ ಮಗುಚಿ ಬಿದ್ದು, ರಿಕ್ಷಾದಲ್ಲಿದ್ದ ಪಿರ್ಯಾದಿದಾರರ ಬಲಕೆನ್ನೆಗೆ , ಬಲಕಾಲು ಕೈಗಳಿಗೆ , ಗುದ್ದಿದ್ದ ಗಾಯಗಳಾಗಿದ್ದು, ಪ್ರಯಾಣಿಕರಾದ ಅವ್ವಮ್ಮ (70) ರವರಿಗೆ  ಬಲಕೈಗೆ ಬಲಕಣ್ಣಿಗೆ ಎಡಕೈಗೆ ಗುದ್ದಿದ ರಕ್ತಗಾಯವಾಗಿದ್ದು, ತಸ್ಲೀಮಾ (18) ರವರಿಗೆ ತಲೆಗೆ ಗುದ್ದಿದ ಗಾಯ, ಮುಮ್ತಾಜ್ (43) ರವರಿಗೆ ತಲೆಗೆ , ಎದೆಗೆ, ಎರಡೂ ಕೈಗಳಿಗೆ ಗುದ್ದಿದ ಗಾಯವಾಗಿದ್ದು, ಮಹಮ್ಮದ್ ಪಾಲೀಲ್ (06) ಮಗುವಿಗೆ  ಎಡಕೈಗೆ ತರಚಿದ ಗಾಯಗಳಾಗಿದ್ದು, ಚಿಕಿತ್ಸೆ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 155/2022 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗೋಪಾಲಕೃಷ್ಣ ಜೋಯಿಸ (69) ತಂದೆ: ಮೃತ  ಯರ್ಮುಂಜ ಭೀಮ ಜೋಯೀಸ ವಾಸ: ಕೆದಿಮಾರು ಮನೆ ಪಡ್ನೂರು ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರ ಬಾಬ್ತು ಪಡ್ನೂರು ಗ್ರಾಮದಲ್ಲಿ ಅಡಿಕೆ ತೋಟವಿದ್ದು ಸದ್ರಿ ತೋಟಕ್ಕೆ ಹೋಗಿ ಬರಲು ರಸ್ತೆ ಇದ್ದು, ರಸ್ತೆಯಿಂದ ಪಿರ್ಯಾದಿದಾರರ ಬಾಬ್ತು ತೋಟಕ್ಕೆ ತೋಡು ದಾಡಿ ಹೋಗುವರೇ ಕಬ್ಬಿಣದ ಕಾಲು ಸಂಕವನ್ನು ಸುಮಾರು 1,50,000 ವೆಚ್ಚದಲ್ಲಿ ಹಾಕಿಸಿರುತ್ತಾರೆ. ದಿನಾಂಕ: 13-12-2022 ರಂದು ಸಂಜೆ 6:45 ಗಂಟೆಗೆ   ಆರೋಪಿತರುಗಳು  ನೊಂದಾಣಿ ಸಂಖ್ಯೆ ಕೆ.ಎ 21 ಪಿ 4136 ನೇ ಕ್ರೇನ್  ತಂದು ಸದ್ರಿ ರಸ್ತೆಯಿಂದ ಪಿರ್ಯಾದಿದಾರರ ಬಾಬ್ತು ತೋಟಕ್ಕೆ ಹಾಕಲಾದ ಕಬ್ಬಿಣದ ಕಾಲು ಸಂಕವನ್ನು ಆರೋಪಿಗಳೆಲ್ಲಾ ಒಟ್ಟು ಸೇರಿ ಕಾಲು ಸಂಕವನ್ನು ಕದ್ದೋಯ್ಯುವ ಸಮಾನ ಉದ್ದೇಶದಿಂದ ಸಂಕವನ್ನು ತೆಗೆಯಲು ಬಂದಾಗ ಪಿರ್ಯಾದಿದಾರರ ಮಗ ಪವನ್ ತಡೆಯಲು ಯತ್ನಿಸಿದಾಗ  1ನೇ ಆರೋಪಿಯು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಪಿರ್ಯಾದಿದಾರರನ್ನು ನೆಲಕ್ಕೆ ದೂಡಿ ಹಾಕಿರುತ್ತಾನೆ, ಆಗ ಅಲ್ಲಿದ್ದ6ನೇ ಆರೋಪಿ ಆತನ ಕೈಯಲ್ಲಿದ್ದ ಬೈರಾಸಿನಿಂದ ಪಿರ್ಯಾದಿದಾರರನ್ನು ಕಟ್ಟಿ ಹಾಕಿ ಸೊಂಟಕ್ಕೆ ತುಳಿದಿರುವುದಾಗಿದೆ. 2 ಮತ್ತು 3 ನೇ ಆರೋಪಿತರು ಪಿರ್ಯಾದಿದಾರರ ಮಗನ ನ್ನು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದಿರುತ್ತಾರೆ ನಂತರ ಆತನನ್ನು ಸಂಕದಿಂದ ಆಚೆ ಬದಿಗೆ ಎಳೆದುಕೊಂಡು ಹೋಗಿ ಮರದ ದೊಣ್ಣೆಯಿಂದ ಹೊಡೆದಿರುತ್ತಾರೆ. ಕಬ್ಬಿಣದ ಕಾಲು ಸಂಕವನ್ನು ತೆಗೆದುಕೊಂಡು ಹೋಗಿ  1ನೇ ಆರೋಪಿಯ ತೋಟದಲ್ಲಿ ಇಟ್ಟಿರುತ್ತಾರೆ  ಇದರಿಂದ 1.50 ಲಕ್ಷದಷ್ಟು ನಷ್ಟವುಂಟು ಮಾಡಿರುತ್ತಾರೆ.ಈ ಬಗ್ಗೆ ಪುತ್ತೂರು ನಗರ ಪೊಲೀಸ್‌ ಠಾಣಾ  ಅ.ಕ್ರ: 102/22 U/S 143,147,148,324,342,427,504,506 ಜೊತೆಗೆ 149 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-12-2022 10:42 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080