ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 4

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸುಜಿತ್  ಪ್ರಾಯ : 30 ವರ್ಷ, ತಂದೆ: ದಿ|| ವಾಸು ಮಡಿವಾಳ, ವಾಸ: ಕಂಬಳಕೋಡಿ ಮನೆ, ಕರ್ಪೆ ಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 14-05-2022 ರಂದು ತಮ್ಮ ಬಾಬ್ತು ಮೋಟಾರು ಸೈಕಲಿನಲ್ಲಿ ಬಂಟ್ವಾಳದಿಂದ ಮನೆಯಾದ ಕರ್ಪೆ ಕಡೆಗೆ ಹೋಗುತ್ತಾ ಮದ್ಯಾಹ್ನ 3.30 ಗಂಟೆಗೆ ಬಂಟ್ವಾಳ ತಾಲೂಕು ರಾಯಿ ಗ್ರಾಮದ ರಾಯಿ ಎಂಬಲ್ಲಿಗೆ ತಲುಪಿದಾಗ ಮೂಡಬಿದ್ರೆ ಕಡೆಯಿಂದ KA-52-A-3033 ನೇ  ನಂಬ್ರದ ಖಾಸಗಿ ಬಸ್ಸನ್ನು ಅದರ ಚಾಲಕ ಆದಂ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ KA-19AB-5584 ನೇ ಅಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು ಪರಿಣಾಮ ರಿಕ್ಷಾ ಚಾಲಕ ಶಶಿಧರ ಶೆಣೈ ರವರಿಗೆ ಕಿವಿಗೆ, ತಲೆಗೆ ರಕ್ತಗಾಯವಾಗಿದ್ದು  ರಿಕ್ಷಾದಲ್ಲಿದ್ದ ಪ್ರಯಾಣಿಕರಾದ ಪ್ರಮೀಳಾ ರವರ ಮುಖಕ್ಕೆ ರಕ್ತಗಾಯವಾಗಿರುತ್ತದೆ. ಗಾಯಗೊಂಡ ಗಾಯಾಳುಗಳನ್ನು ವಾಹನವೊಂದರಲ್ಲಿ ಮಂಗಳೂರು ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ 54/2022 ಕಲಂ 279,337ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹೇಶ ಪ್ರಾಯ 37 ವರ್ಷ ತಂದೆ: ಕೃಷ್ಣಪ್ಪ ವಾಸ; 36/5 ಪಾಪರೆಡ್ಡಿ ಪಾಳ್ಯ ಮನೆ, ಶ್ರೀ ಗಂಧದ ಕವಲ್‌  ಬೆಂಗಳೂರು ಎಂಬವರ ದೂರಿನಂತೆ ಪಿರ್ಯಾದಿದಾರರು ಮತ್ತು ಅವರ ಸಂಬಂಧಿಕರಾದ ಹೆಮಂತ್‌ ಕುಮಾರ್‌ ರವರ ಜೊತೆಯಲ್ಲಿ ದಿನಾಂಕ: 14-05-2022 ರಂದು ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಕಲ್ಲೇರಿ ಪೆಟ್ರೋಲ್‌ ಬಂಕ್‌ನ ಬಳಿ ರಸ್ತೆ ದಾಟುತ್ತಿರುವ ಸಮಯ ಸುಮಾರು ರಾತ್ರಿ 9.15 ಗಂಟೆಗೆ ಕೊಕ್ಕಡ ಕಡೆಯಿಂದ ಧರ್ಮಸ್ಥಳ ಕಡೆಗೆ ಕೆಎ 21 ಎಫ್‌ 0103 ನೇ ಕೆಎಸ್‌ಆರ್‌ಟಿಸಿ ಬಸ್‌ನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಮತ್ತು ಹೇಮಂತ್‌ ಕುಮಾರ್‌ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಬಲ ಕೈ ಭುಜಕ್ಕೆ, ಬಲಭಾಗದ ದವಡೆಗೆ ಮತ್ತು ಬಲಕಾಲಿಗೆ ಗುದ್ದಿದ ಗಾಯವಾಗಿದ್ದು, ಹೇಮಂತ್‌ ಕುಮಾರ್‌ರವರಿಗೆ  ಬಲಭಾಗದ ಪಕ್ಕೇಲುಬುಗೆ, ಸೊಂಟಕ್ಕೆ, ಬಲಕಾಲಿಗೆ, ಬಲ ಕೈಗೆ ಗುದ್ದಿದ ರಕ್ತ ಗಾಯವಾಗಿರುತ್ತದೆ, ಗಾಯಳುಗಳು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ, ಹಾಗೂ ಢಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್‌ನ್ನು ಅದರ ಚಾಲಕ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿ ನಂತರ ಗಾಯಳುಗಳನ್ನು ಉಪಚರಿಸದೇ ಸಂಬಂಧಪಟ್ಟವರಿಗೆ ಮಾಹಿತಿ ನೀಡದೇ ಬಸ್‌ ಸಮೇತ ಪರಾರಿಯಾಗಿರುತ್ತಾನೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 71/2022 279,337 ಭಾ ದಂ ಸಂ,   ಜೋತೆಗೆ 187 ಐಎಮ್‌ ವಿ ಕಾಯ್ದೆ,ಕಲಂ:134 (ಎ&ಬಿ)ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಜಯ್‌ ಕುಮಾರ್‌ ಪ್ರಾಯ 31 ವರ್ಷ ತಂದೆ: ರಾಜಪ್ಪ ಕೆ ವಾಸ; ಬೆತ್ತೋಡಿ ಮನೆ, ಐತ್ತೂರು ಗ್ರಾಮ, ಸುಂಕದಕಟ್ಟೆ ಅಂಚೆ, ಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ: 14-05-2022 ರಂದು ಪಿರ್ಯಾಧಿದಾರರು ತನ್ನ ಬಾಬ್ತು ಕೆಎ 21 ಇಬಿ 5806 ನೇ ಮೋಟಾರು ಸೈಕಲ್‌ ನಲ್ಲಿ ಸಹ ಸವಾರನನ್ನಾಗಿ ಸುರೇಶ್‌ ಎಂಬವರನ್ನು ಕುಳ್ಳಿರಿಸಿಕೊಂಡು ಉಜಿರೆ ಕಡೆಯಿಂದ ಗುರುವಾಯನಕೆರೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ರಾತ್ರಿ 8.30 ಗಂಟೆಗೆ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸ್ಬಾ ಗ್ರಾಮದ ಬೆಳ್ತಂಗಡಿ ಬಸ್‌ ನಿಲ್ದಾಣದ ಬಳಿ ತಲುಪುತ್ತಿದ್ದಂತೆ ಪಿರ್ಯಾಧಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಗುರುವಾಯನಕೆರೆ ಕಡೆಯಿಂದ ಉಜಿರೆ ಕಡೆಗೆ ಕೆಎ 20 ಎ 8345 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ ಮೋಟಾರು ಸೈಕಲ್‌ ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿದಾರರು ಮತ್ತು ಸಹ ಸವಾರ ಮೋಟಾರು ಸೈಕಲ್‌ ನೊಂದಿಗೆ ರಸ್ತೆಗೆ ಬಿದ್ದು ಪಿರ್ಯಾಧಿದಾರರಿಗೆ ಸೊಂಟಕ್ಕೆ ಗುದ್ದಿದ ಗಾಯ, ಸಹ ಸವಾರ ಸುರೇಶ ರವರಿಗೆ ಬಲ ಕಾಲಿನ ತೊಡೆಗೆ, ಎಡಕಾಲಿನ ಕೋಲು ಕಾಲಿಗೆ, ಗುದ್ದಿದ ರಕ್ತಗಾಯವಾಗಿದ್ದು ಗಾಯಾಳುಗಳು ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ..ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 72/2022 279,337 ಭಾ ದಂ ಸಂ,    ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಭರತ್‌ ಪ್ರಾಯ: 21 ವರ್ಷ ತಂದೆ: ವಸಂತ ಕುಮಾರ್‌ ವಾಸ: ಕೌಡಿಚ್ಚಾರ ಮನೆ ಅರಿಯಡ್ಕ ಗ್ರಾಮ ಪುತ್ತೂರು ಎಂಬವರ ದೂರಿನಂತೆ  ದಿನಾಂಕ 15.05.2022 ರಂದು ಮೈಂದನಡ್ಕದಿಂದ ಕೆಂಪು ಕಲ್ಲುಗಳನ್ನು ಕೆಎ-21-ಕೆ-3222 ನೇ ಲಾರಿಯಲ್ಲಿ ಲೋಡ್ ಮಾಡಿಕೊಂಡು ಕಡಬಕ್ಕೆ ಹೋಗಿ ಖಾಲಿ ಮಾಡಿ ವಾಪಾಸು ಮೈಂದನಡ್ಕ ಕಡೆಗೆ ಲಾರಿಯನ್ನು ಪುತ್ತೂರು ತಾಲೂಕು ಮುಂಡೂರು ಗ್ರಾಮದ ಸರ್ವೆ - ತಿಂಗಳಾಡಿ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು 16.45 ಗಂಟೆಗೆ ಕೂಡು ರಸ್ತೆ ಸಮೀಪ ತಲುಪಿದಾಗ ಎದುರುಗಡೆಯಿಂದ ಅಂದರೆ ಕೂಡು ರಸ್ತೆ ಕಡೆಯಿಂದ ಸರ್ವೆ ಕಡೆಗೆ ಕೆಎ-21-ಎ-5326 ನೇ ಪಿಕಪ್ ವಾಹನವನ್ನು ಅದರ ಚಾಲಕ ರೋ಼ಶನ್ ಬಂಗೇರರವು ತೀರಾ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಬಲ ಭಾಗಕ್ಕೆ ಜಖಂ ಆಗಿದ್ದು, ಡಿಕ್ಕಿ ಹೊಡೆದ ಪಿಕಪ್ ವಾಹನದ ಎದುರು ಭಾಗ ಕೂಡಾ ಜಖಂಗೊಂಡಿದ್ದು ಈ ಅಪಘಾತದಿಂದ ಫಿರ್ಯಾದಿದಾರರಿಗೆ ಮತ್ತು ಅವರ ಜೊತೆಯಲ್ಲಿ ಲಾರಿಯಲ್ಲಿದ್ದ ನವಾಜ್ ಮತ್ತು ನಿತಿನ್ ರವರಿಗೆ ಯಾವುದೇ ರೀತಿಯ ಗಾಯಗಳಾಗದೇ ಇದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಅ.ಕ್ರ 60/2022 ಕಲಂ 279,  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಹಲ್ಲೆ ಪ್ರಕರಣ: 1

 • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹಮ್ಮದ್ ಶರೀಫ್ (34) ತಂದೆ: ಕೆ.ಖಾದರ್ ವಾಸ: ದೊಡ್ಡಕೊಡ್ಲಿ ಕಲ್ಲು ಕೋರೆ ಮನೆ ಕೊಡ್ಲಿಪೇಟೆ ಗ್ರಾಮ,ಸೋಮವಾರಪೇಟೆ ತಾಲೂಕು ಮಡಿಕೇರಿ ಎಂಬವರ ದೂರಿನಂತೆ ಫಿರ್ಯಾದುದಾರರು ದಿನಾಂಕ: 14-05-2022 ರಂದು ತನ್ನ ಬಾಬ್ತು ಲಾರಿಯಲ್ಲಿ ಕಾಸರಗೋಡುನಲ್ಲಿನ ಗ್ರಾನೈಟ್ ಕೆಲಸ ಮುಗಿಸಿಕೊಂಡು ನಂತರದಲ್ಲಿ ಪ್ಲೇವುಡ್ ಲೋಡ್ ಮಾಡಿಕೊಂಡು ಬೆಂಗಳೂರು ಕಡೆಗೆ ಹೋಗುವಾಗ ಸಮಯ ಸುಮಾರು 11-45 ಗಂಟೆಗೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ಕುದ್ದುಪದವು ಜಂಕ್ಷನ್ ತಲುಪಿ ಲಾರಿ ಹಾರ್ನ್‌ ಮಾಡಿದಾಗ ಅಲ್ಲೇ ಇದ್ದ ಸುಮಾರು 06 ಜನರ ಗುಂಪೊಂದು ಕುದ್ದುಪದವುನಿಂದ ಸ್ವಲ್ಪ ಮುಂದೆ ಲಾರಿಯನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಪರಿಚಯದ ಗಣೇಶನು ಹಾಗೂ ಕಿರಣನು ಫಿರ್ಯಾದುದಾರರಿಗೆ  ಹಲ್ಲೆ ಮಾಡಿ ನಂತರದಲ್ಲಿ ಫಿರ್ಯಾದುದಾರರ ಅಕ್ಕನ ಮಗ ಸಾಧಿಕನು ಕಾರಿನಲ್ಲಿ ಬರುತ್ತಿದ್ದವನು ಫಿರ್ಯಾದುದಾರರನ್ನು ನೋಡಿ ಅವರ ಬಳಿ ಹೋದಾಗ ಅಲ್ಲಿದ್ದ ಗಣೇಶನು ತನ್ನ ಕೈಯಲ್ಲಿದ್ದ ಸ್ಟೀಲ್ ರಾಡ್ ನಿಂದ ಕಾರಿನ ಮುಂಭಾಗದ ಗ್ಲಾಸ್ ಒಡೆದು ಜಖಂ ಮಾಡಿ ಕಿರಣ್ ಎಂಬಾತನು ಸಾಧಿಕನ ಬೆನ್ನಿಗೆ ಹೊಡೆದು ಕೂಡಲೇ ಫಿರ್ಯಾದುದಾರರು ಮತ್ತು ಸಾಧಿಕನು ಹೆದರಿ  ಅಲ್ಲಿಂದ ಲಾರಿಯನ್ನು ಚಲಾಯಿಸಿಕೊಂಡು ವಿಟ್ಲ ಕಡೆಗೆ ಹೋದಾಗ ಮತ್ತೆ ಮೂರು ಜನ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಕೇಪು ಗ್ರಾಮದ ಕಲ್ಲಂಗಳ ಬಸ್ ನಿಲ್ದಾಣದ ಬಳಿ ಲಾರಿಯನ್ನು ಅಡ್ಡಗಟ್ಟಿ ನಿಲ್ಲಿಸಿ ಲಾರಿಯ ಒಳಗಡೆ ಬಂದು ಗಣೇಶನು ತನ್ನ ಕೈಯಲ್ಲಿದ್ದ ಸ್ಟೀಲ್ ರಾಡ್ ನಿಂದ ಫಿರ್ಯಾದುದಾರರ ಎದೆಗೆ ಮತ್ತು ಬಲಕೈಗೆ ಹೊಡೆದು ಮತ್ತೊಬ್ಬ ಕಿರಣ್ ಎಂಬಾತ ಲಾರಿಯ ಒಳಗೆ ಬಂದು ತನ್ನ ಕೈಯಲ್ಲಿದ್ದ ಕೋಳಿ ಬಾಲ್ ನಿಂದ ಎದೆಗೆ ಚುಚ್ಚಿದ್ದು ಮತ್ತೊಬ್ಬ ಕಾಲಿನಿಂದ ತುಳಿದು ತರಚಿದ ರಕ್ತಗಾಯವನ್ನುಂಟು ಮಾಡಿ ನಂತರ ರಸ್ತೆಯಲ್ಲಿ ವಾಹನವೊಂದನ್ನು ನಿಲ್ಲಿಸಲು ಹೋದಾಗ ಫಿರ್ಯಾದುದಾರರು ಲಾರಿಯನ್ನು ಚಲಾಯಿಸಿ ಉಕ್ಕುಡ ಬಳಿ ಬಂದು ತನ್ನ ಬಳಿ ಇದ್ದ ವ್ಯಾಪಾರದ ಹಣ ರೂ 27000/-ನ್ನು ನೋಡಿದಾಗ  ಇರದೇ ಇರುವುದಾಗಿದೆ. ನಂತರ ಫಿರ್ಯಾದುದಾರರು ಹಲ್ಲೆಯಿಂದ ತಲೆ ತಿರುಗಿ ಬಿದ್ದವರನ್ನು ಯಾರೋ ಚಿಕಿತ್ಸೆಗೆ ವಿಟ್ಲ ತನಕ ಬಂದಾಗ ಫಿರ್ಯಾದಿಯ ಅಕ್ಕನ ಮಗ ಸಾಧಿಕನು ಸಹ ಮಂಗಳೂರಿನ ಐಲ್ಯಾಂಡ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು.ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 76/2022 ಕಲಂ: 323,324,341,427,143,147,148 ಜೊತೆಗೆ 149  ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕೊಲೆಯತ್ನ ಪ್ರಕರಣ: 1

 • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗಿರೀಶ್ (33) ತಂದೆ: ಶಂಕರ ಪಾಟಾಳಿ  ವಾಸ: ಕುಂಞಪಾದೆ ಮನೆ ಕೇಪು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ: 14.05.2022 ರಂದು ರಾತ್ರಿ ಸುಮಾರು 11.00 ಗಂಟೆಗೆ ಕೆಲಸ ಮುಗಿಸಿ ತನ್ನ ಬಾಬ್ತು ಆಟೋ ರಿಕ್ಷಾ ದಲ್ಲಿ ತನ್ನ ಭಾವ ಮೋಹನ್ ಚಂದ್ರ ರವರ ಮನೆಯಾದ ಮೈರಾ ಗೆ ಹೋಗುತ್ತಿರುವ ಸಮಯ ಸುಮಾರು 11.30 ಗಂಟೆಗೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ಕರವೀರ ಬಸ್ ನಿಲ್ದಾಣದ ಬಳಿ ಎರಡು ಕಾರುಗಳು ನಿಂತಿದ್ದು ಪಿರ್ಯಾದಿದಾರರ ಪರಿಚಯದ ರಕ್ಷೀತ್ ಕುಮಾರ್ ಎಂಬವರಿಗೆ ಹಲ್ಲೆ ಮಾಡುತ್ತಿದ್ದುದ್ದನ್ನು  ಕಂಡು ಪಿರ್ಯಾದಿದಾರರು ಕರವೀರ ಬಸ್ ನಿಲ್ದಾಣದ ಬಳಿ ಹೋಗಿ ಹಲ್ಲೆ ಮಾಡುತ್ತಿರುವುದನ್ನು ತಡೆಯಲು ಹೋದಾಗ ಪಿರ್ಯಾದಿದಾರರನ್ನು ಉದ್ದೇಶಿಸಿ ಅವ್ಯಾಚವಾಗಿ ಬೈದು ಕೊಲ್ಲದೇ ಬಿಡುವುದಿಲ್ಲ ಎಂದು ಹಲ್ಲೆ ಮಾಡುತ್ತಿದ್ದವರ ಪೈಕಿ ಸಬಲ್ ರವರ ಮಗ ಸಾದಿಕ್ ನು ತನ್ನ ಕೈಯಲ್ಲಿದ್ದ ತಲವಾರಿನಿಂದ ಪಿರ್ಯಾದಿದಾರರ ತಲೆಗೆ ಹೊಡೆದು ನಂತರ ಅಲ್ಲಿದ್ದ ಜಾಬೀರ್ ಎಂಬಾತನು ತನ್ನ ಕೈಯಲ್ಲಿದ್ದ ತಲವಾರಿನಿಂದ ರಕ್ಷೀತ್ ಕುಮಾರ್ ನ  ತಲೆಗೆ, ಅಶ್ರಫ್ ಎಂಬಾತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ  ರಕ್ಷೀತ್ ಕುಮಾರ್ ನ  ತಲೆಯ ಹಿಂಬದಿಗೆ ಮತ್ತು ಜುಬೈರ್ ನು ತನ್ನ ಕೈಯಲ್ಲಿದ್ದ ತಲವಾರಿನಿಂದ ರಕ್ಷೀತ್ ಕುಮಾರ್ ನಿಗೆ ಹಲ್ಲೆ ಮಾಡಿ ರಸ್ತೆಯಲ್ಲಿ ಯಾವುದೋ ವಾಹನ ಬರುತ್ತಿರುವುದ್ದನ್ನು ಕಂಡು ಹಲ್ಲೆ ಮಾಡಿದ ಸಾದೀಕ್, ಜಾಬೀರ್,ಅಶ್ರಫ್,ಜುಬೈರ್  ಹಾಗೂ ಇತರ 4 ಜನರು ಆರೋಪಿಗಳು ಕೆಂಪು ಬಣ್ಣದ ಸ್ವೀಫ್ಟ್ ಕಾರಿನಲ್ಲಿ ಮತ್ತು ಮೆರೂನ್ ಬಣ್ಣದ ಆಲ್ಟೋ ಕಾರಿನಲ್ಲಿ ಪರಾರಿಯಾಗಿರುತ್ತಾರೆ. ಹಲ್ಲೆಗೊಳಗಾದ  ರಕ್ಷೀತ್ ಕುಮಾರ್ ನ ತಲೆಯ ಹಿಂಬದಿಗೆ,ಕಣ್ಣಿನ ಭಾಗಕ್ಕೆ ತೀವ್ರ ತರಹದ ರಕ್ತಗಾಯವಾದವರನ್ನು ಪಿರ್ಯಾದಿದಾರರು ತನ್ನ ಬಾಬ್ತು ಆಟೋರಿಕ್ಷಾ ದಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದು ವೈಧ್ಯರು ಪರಿಶೀಲಿಸಿ ಹೆಚ್ಚಿನ ಚಿಕಿತ್ಸೆಗೆ ತಿಳಿಸಿದಂತೆ ಅಂಬ್ಯುಲೇನ್ಸ್ ನಲ್ಲಿ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ, ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 75/2022 ಕಲಂ: 504,324,143,147,148,307 ಜೊತೆಗೆ 149  ಬಾಧಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

 • ಪುಂಜಾಲಕಟ್ಟೆ ಪೊಲೀಸ್ ಠಾಣೆ : ದಿನಾಂಕ: 15.05.2022 ರಂದು ಪುಂಜಾಲಕಟ್ಟೆ ಪೊಲೀಸ್ ಠಾಣಾ ಪಿಎಸ್ಐ ಸುತೇಶ್ ಕೆ.ಪಿ ರವರು ಠಾಣಾ ಸಿಬ್ಬಂದಿಗಳ ಜೊತೆ ಬಂಟ್ವಾಳ ತಾಲೂಕು  ಕುಕ್ಕಿಪ್ಪಾಡಿ ಗ್ರಾಮದ ಎಲ್ಪೇಲು  ತಲುಪಿ,  ಬೀದಿ ದೀಪದ ಅಡಿಯಲ್ಲಿ ವಾಹನಗಳನ್ನು  ತಪಾಸಣೆ  ಮಾಡುತ್ತಿರುವಾಗ  ಬೆಳಿಗ್ಗೆ 4.15 ಗಂಟೆಗೆ ವಾಮದಪದವು  ಕಡೆಯಿಂದ ಕುದ್ಕೋಳಿ  ಕಡೆಗೆ ಆರೋಪಿಗಳು KA70 3124  ನೇ TATA INTRA V10 ಗೂಡ್ಸ್ ಮಿನಿ ಟೆಂಪೋ  ಅತೀ ವೇಗವಾಗಿ  ಬರುತ್ತಿದ್ದುದ್ದನ್ನು ಕಂಡು  ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದರೂ ಕೂಡಾ ವಾಹನವನ್ನು ನಿಲ್ಲಿಸದೇ ಮುಂದೆ ಹೋಗಿದ್ದು, ಕೂಡಲೇ  ಪಿರ್ಯಾದಿದಾರರು  ಸಿಬ್ಬಂದಿಯವರ ಜೊತೆ ಇಲಾಖಾ ಜೀಪಿನಲ್ಲಿ, ಸದ್ರಿ ವಾಹನವನ್ನು  ಹಿಂಬಾಲಿಸಿಕೊಂಡು ಹೋಗಿ  ಕುದ್ಕೋಳಿ ಜಂಕ್ಷನ್ ಎಂಬಲ್ಲಿ ತಡೆದು ನಿಲ್ಲಿಸಿದ್ದು, ಆರೋಪಿಗಳು  ವಾಹನದಿಂದ ಇಳಿದು ಓಡಲು ಪ್ರಯತ್ನಿಸುವಾಗ ಪಿರ್ಯಾದಿದಾರರು ಹಾಗೂ ಸಿಬ್ಬಂದಿಯವರು ಜೀಪಿನಿಂದ ಇಳಿದು ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸಿದ್ದು,  ಆರೋಪಿಗಳು ಪಿರ್ಯಾದಿದಾರರನ್ನು  ದೂಡಿ ಹಾಕಿದರಿಂದ ನೆಲಕ್ಕೆ ಬಿದ್ದು, ಬಲ ಕೈಯ ಭುಜಕ್ಕೆ ಗುದ್ದಿದ ಗಾಯವಾಗಿರುವುದಲ್ಲದೆ ಆರೋಪಿಗಳನ್ನು ಸಿಬ್ಬಂದಿಯವರು ಹಿಡಿಯಲು ಪ್ರಯತ್ನಿಸಿದರೂ ಕೂಡಾ ಕೈಗೆ ಸಿಗದೇ  ಅಲ್ಲಿಂದ ಓಡಿ ಪರಾರಿಯಾಗಿರುತ್ತಾರೆ.  ವಾಹನವನ್ನು ಪರಿಶೀಲಿಸಿದಾಗ ಆರೋಪಿಗಳು 3 ಜಾನುವಾರುಗಳನ್ನು ಎಲ್ಲಿಂದಲೋ ಕದ್ದು,  ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಹಿಂಸಾತ್ಮಕ ರೀತಿಯಲ್ಲಿ,  ವಧೆ ಮಾಡುವ ಸಲುವಾಗಿ ಸಾಗಾಟ ಮಾಡುತ್ತಿದ್ದುದ್ದನ್ನು ಪತ್ತೆಹಚ್ಚಿ ಮುಂದಿನ ಕ್ರಮದ ಬಗ್ಗೆ TATA INTRA V10 ಮಿನಿ ಗೂಡ್ಸ್ ಟೆಂಪೋ ಹಾಗೂ ಅದರಲ್ಲಿದ್ದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು ಸ್ವಾಧೀನಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ ರೂ, 6,40,000/- ಆಗಬಹುದು. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 33/2022 ಕಲಂ: 4,5,8,12 ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಅಧಿನಿಯಮ 1964 & ಕಲಂ: 11(1)(ಡಿ) ಪ್ರಾಣಿ ಹಿಂಸೆ ತಡೆ ಮತ್ತು ಜಾನುವಾರು ಪರಿರಕ್ಷಣೆ ಅಧಿನಿಯಮ ಕಾಯ್ದೆ 1960 & ಕಲಂ: 66 ಜೊತೆಗೆ 192(ಎ) ಐ ಎಂ ವಿ  ಕಾಯ್ದೆ & ಕಲಂ: 41(1)(ಡಿ) ಜೊತೆಗೆ 102 ಸಿಆರ್‌ಪಿಸಿ ಮತ್ತು 379, 186, 353, 332,  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-05-2022 10:54 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080