ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಪ್ರಶಾಂತ್ ಪೂಜಾರಿ(33) ತಂದೆ: ಕೃಷ್ಣಪ್ಪ ಪೂಜಾರಿ, ವಾಸ: ಕೊರಿಯಾ ಮನೆ, ಬಾಳ್ತಿಲ ಗ್ರಾಮ, ಬಂಟ್ವಾಳ ತಾಲೂಕು ರವರು ದಿನಾಂಕ: 14.06.2021 ರಂದು ತನ್ನ ಬಾಬ್ತು KA-01-JJ-2482 ನೇ ಮೋಟಾರ್ ಸೈಕಲಿನಲ್ಲಿ ಬಾಳ್ತಿಲ ಕಡೆಯಿಂದ ಬಂಟ್ವಾಳ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಎಂಬಲ್ಲಿಗೆ ತಲುಪಿದಾಗ ಬಿ.ಸಿ.ರೋಡ್ ಕಡೆಯಿಂದ KA-19-AB-4446 ನೇ ಟ್ಯಾಂಕರನ್ನು ಅದರ ಚಾಲಕ ಮಹಾದೇವರವರು ಅತೀವೇಗ, ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಾಂಗ್ ಸೈಡಿಗೆ ಚಲಾಯಿಸಿಕೊಂಡು ಬಂದು ಪುತ್ತೂರು ಕಡೆಯಿಂದ ಬರುತ್ತಿದ್ದ KL-10-AE-4092 ನೇ ಅಂಬುಲೆನ್ಸ್ ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಟ್ಯಾಂಕರ್ ಲಾರಿಯು ಮುಂದಕ್ಕೆ ಬಲಕ್ಕೆ ಚಲಿಸಿ ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಡಿಕ್ಕಿಯಾಗಿ ಅಪಘಾತವಾಗಿರುತ್ತದೆ. ಅಪಘಾತದಲ್ಲಿ ಪಿರ್ಯಾದಿದಾರರು, ಅಂಬುಲೆನ್ಸ್ ನಲ್ಲಿದ್ದ ರೋಗಿ ಶ್ರೀನಿವಾಸ ಮತ್ತು ಅಂಬುಲೆನ್ಸ್ ಚಾಲಕ ಮನ್ಸೂರು ಫರಾಜ್ ಅಹಮದ್ ರವರು ಗಾಯಗೊಂಡಿದ್ದು, ಪಿರ್ಯಾದಿದಾರರು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರರೋಗಿಯಾಗಿಯೂ, ಅಂಬುಲೆನ್ಸ್ ನಲ್ಲಿದ್ದ ರೋಗಿ ಶ್ರೀನಿವಾಸರವರು ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 55/2021  ಕಲಂ 279, 337  ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

 

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಿ ಹರೀಶ ಪ್ರಾಯ: 41 ವರ್ಷ ತಂದೆ: ವಾಸುಗೌಡ, ವಾಸ; ಸ್ಪಂದನ ನಿವಾಸ, ನೆರಿಯಾ  ಗ್ರಾಮ, ಬೆಳ್ತಂಗಡಿ ತಾಲೂಕು. ರವರು ಮಾನ್ಯ ತಹಶಿಲ್ದಾರರವರ ಕಛೇರಿ ಆದೇಶ ಸಂಖ್ಯೆ ಕೋವಿಡ್-೧೯ ಸಿ.ಆರ್ 01/2021-22 ರಂತೆ ದಿನಾಂಕ: 12.06.2021 ರಂತೆ ಬೆಳಿಗ್ಗೆ 09.00 ಗಂಟೆಗೆ ನೆರಿಯಾ ಗ್ರಾಮದ ಅಣಿಯೂರು ಪೇಟೆಯಲ್ಲಿ ನೆರಿಯಾ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಮತಿ ಗಾಯತ್ರಿ, ಪಂಚಾಯತ್ ಸಿಬ್ಬಂದಿ ಮಧುಮಾಲ, ನೆರಿಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ: ವಾಣಿಶ್ರೀ , ನೆರಿಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಸರೋಜ ರವರೊಂದಿಗೆ ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಕತವ್ಯ ನಿರ್ವಹಿಸುತ್ತಿರುವ ಸಮಯ ಕೆಎ 21 ಬಿ 4035ನೇ ಗೂಡ್ಸ್ ವಾಹನದಲ್ಲಿ ಮಹಮ್ಮದ್ ಸಂಶುದ್ದಿನ್ ಎಂಬವರು ಸುಮಾರು 8 ಕ್ಕು ಅಧಿಕ ಜನರನ್ನು ತುಂಬಿಸಿಕೊಂಡು ಬಂದಾಗ ತಡೆದು ನಿಲ್ಲಿಸಿ ಮಹಮ್ಮದ್ ಸಂಶುದ್ದಿನ್ ರವರ ತಂದೆ-ಹಾಗೂ ತಾಯಿಗೆ ಕೆಲವು ದಿನಗಳ ಹಿಂದೆ ಕೋವಿಡ್-19 ಪಾಸಿಟಿವ್ ಬಂದಿದ್ದ ಕಾರಣ ಇವರನ್ನು ಹಾಗೂ ವಾಹನದಲ್ಲಿ ತುಂಬಿದ ಜನರನ್ನು ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕೋವಿಡ್ ಪರೀಕ್ಷೆ ಮಾಡಿ ತೆರಳುವಂತೆ ವಿನಂತಿಸಿದಾಗ ಮಹಮ್ಮದ್ ಸಂಶುದ್ದಿನ್ನು ಅವಾಚ್ಯ ಶಬ್ದಗಳಿಂದ ಸಾರ್ವಜನಿಕವಾಗಿ ಬೈದು ವಾಹನದಲ್ಲಿದ್ದವರ ಪರೀಕ್ಷೆಗೆ ಒಳಪಡದಂತೆ ಏಕಾಏಕಿ ವಾಹನವನ್ನು ಚಲಾಯಿಸಿಕೊಂಡು ಹೋಗಿ ಕೊವಿಡ್ -19 ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ  ಕರ್ತವ್ಯದಲ್ಲಿದ್ದವರಿಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ ಕ್ರ 33/2021 ಕಲಂ: 504,269 ಐಪಿಸಿ ಮತ್ತು 5(2) KARNATAKA EPIDEMIC DISEASES ACT-2020 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 1

 

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ರೂಪೇಶ್‌ ಶೆಣೈ(28) ತಂದೆ:ದಿ||ರಂಗನಾಥ ಶೆಣೈವಾಸ:ಚೈತ್ರ ನಿಲಯ ಮಾರ್ನಡ್ಕ ಬನ್ನೂರು ಗ್ರಾಮ ಪುತ್ತೂರು ತಾಲೂಕು ರವರ ದೊಡ್ಡಪ್ಪ ಮಾದವ ಪೈ (80) ರವರ ಹೆಂಡತಿ ಕಳೆದ 2 ವರ್ಷಗಳ ಹಿಂದೆ ಅಕಾಲಿಕ ಮರಣವೊಂದಿದ ಬಳಿಕ ಮೃತರು ಹೃದಯ ಸಂಬಂದಿ ಖಾಯಿಲೆ,ಅಸ್ತಮಾ,ಕಾಲುಗಳ ನರದೌರ್ಬಲ್ಯ,ಸಕ್ಕರೆ ಖಾಯಿಲೆ ಹಾಗೂ ಬಿ ಪಿ ಖಾಯಿಲೆಯಿಂದ ಬಳಲುತ್ತಿದ್ದುದರಿಂದ ಕಳೆದ 10 ತಿಂಗಳ ಹಿಂದೆ ಆರೈಕೆ ಮಾಡಲು ಮನೆಯಲ್ಲಿ ಯಾರು ಇಲ್ಲದ ಕಾರಣ ಪಿರ್ಯಾದುದಾರರು ಮತ್ತು ಅವರ ಸಂಬಂದಿಕರು ಮಾತನಾಡಿಕೊಂಡು ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಭಾರತ್‌ ಸೇವಾಶ್ರಮಕ್ಕೆ ಕಳೆದ 10 ತಿಂಗಳ ಹಿಂದೆ ಸೇರಿಸಿದ್ದು ದಿನಾಂಕ:04-06-2021ರಂದು ಬೆಳಿಗ್ಗೆ ಸಮಯ ಸುಮಾರು 08:00 ಗಂಟೆಗೆ ಸೇವಾಶ್ರಮದ ಬಾತ್‌ರೂಮ್‌ಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಾಯಗೊಂಡವರನ್ನು ಸಂಸ್ಥೆಯವರು ಹಾಗೂ ಸಂಬಂದಿಕರು ಪುತ್ತೂರು ಸರಕಾರಿ ಆಸ್ವತ್ರೆಗೆ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಿಸಿ.ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ದಿನಾಂಕ:09-06-2021ರಂದು ಪುತ್ತೂರು ಸರಕಾರಿ ಆಸ್ವತ್ರೆಯ ವೈದ್ಯಾದಿಕಾರಿಯವರ ಸೂಚನೆ ಮೇರೆಗೆ ಮಂಗಳೂರು ಜಿಲ್ಲಾ ಸರಕಾರಿ ಆಸ್ವತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು ದಿನಾಂಕ:15-06-2021ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 14/2021  ಕಲಂ 174   ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 16-06-2021 11:17 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080