ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರವೀಣ್ ಕುಮಾರ್ (52) ತಂದೆ: ಜಗನ್ನಾಥ ಪೂಜಾರಿ ವಾಸ: ಆರ್ಲ ಮನೆ ಕಲ್ಮಂಜ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 15-06-2022 ರಂದು ಕೆಎ 36 L 208 ನೇ ಮೋಟಾರು ಸೈಕಲ್‌ ನ್ನು ಅದರ ಸವಾರ ವಸಂತ ಕುಮಾರ್‌ ಜೈನ್‌ ಎಂಬವರು ಧರ್ಮಸ್ಥಳ ಕಡೆಯಿಂದ ಉಜಿರೆ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ಬೆಳಿಗ್ಗೆ 5.30 ಗಂಟೆಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಎಣ್ಣೆಕಲ ತೋಟ ಎಂಬಲ್ಲಿ ದುಡುಕುತನದಿಂದ ಸವಾರಿ ಮಾಡಿ ರಸ್ತೆಯಲ್ಲಿ ಮುರಿದು ಬಿದ್ದಿದ ಒಣಗಿದ ಮರಕ್ಕೆ ಢಿಕ್ಕಿ ಹೊಡೆದು ಮೋಟಾರು ಸೈಕಲ್‌ ಸ್ಕಿಡ್‌ ಆಗಿ ಸುಮಾರು 30 ಅಡಿ ಮುಂದಕ್ಕೆ ಮೋಟಾರು ಸೈಕಲ್‌ ಸವಾರ ಮೋಟಾರು ಸೈಕಲ್‌ ನೊಂದಿಗೆ ಜಾರಿಕೊಂಡು ಹೋಗಿ ಮೋಟಾರು ಸೈಕಲ್‌ ನೊಂದಿಗೆ ರಸ್ತೆಗೆ ಬಿದ್ದು ತಲೆಗೆ ಮೈ ಕೈಗೆ ತೀವ್ರ ರಕ್ತಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 83/2022 ಕಲಂ: 279, 304(A) ಭಾ ದಂ ಸಂ, ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಅಬ್ಬಾಸ್‌ (53) ತಂದೆ: ಇದ್ದಿನ್‌ ಕುಂಞ್ಞ ವಾಸ: ಲಾಡಾ ಮನೆ, ಮಂಜನಾಡಿ ಗ್ರಾಮ ಮೊಂಟಿಪದವು ಅಂಚೆ ಮಂಗಳೂರು ಎಂಬವರ ದೂರಿನಂತೆ ದಿನಾಂಕ: 13-06-2022 ರಂದು ಪಿರ್ಯಾದಿದಾರರು ತನ್ನ ಬಾಬ್ತು KA 19 EW 0089 ನೇ ದ್ವಿ ಚಕ್ರ ವಾಹನದಲ್ಲಿ ಸಾಹುಲ್‌ ಹಮೀದ್‌ ರವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ದ್ವಿ ಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ನಾರಾವಿ- ಗುರುವಾಯನಕೆರೆ ರಸ್ತೆಯಲ್ಲಿ ಬರುತ್ತಾ ಸಮಯ ಸುಮಾರು ರಾತ್ರಿ 8:15 ಗಂಟೆಗೆ ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಬದ್ಯಾರು ಜಂಕ್ಷನ್‌ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಪೊಟ್ಟುಕೆರೆಯಿಂದ ನಾರಾವಿ ಕಡೆಗೆ ಒಂದು ಆಟೋರಿಕ್ಷಾವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ದ್ವಿ ಚಕ್ರ ವಾಹನಕ್ಕೆ ಢಿಕ್ಕಿ  ಹೊಡೆದು ಅಲ್ಲಿಯೆ ರಸ್ತೆ ಬದಿಯಲ್ಲಿ ನಿಂತಿದ್ದ ಪಾದಚಾರಿ ಜಗದೀಶ್‌ ಎಂಬವರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಸಹ ಸವಾರ ಸಾಹುಲ್‌ ಹಮೀದ್‌ ರವರು ದ್ವಿ ಚಕ್ರ ವಾಹನ ಸಮೇತ ರಸ್ತೆಗೆ ಬಿದ್ದರು ಸಹ ಸವಾರ ಸಾಹುಲ್‌ ಹಮೀದ್‌ ರವರಿಗೆ ಬಲಕಾಲಿನ ಕೋಲು ಕಾಲಿಗೆ ರಕ್ತಗಾಯ, ಎಡಕೈ ಮೊಣಗಂಟಿಗೆ, ಎಡಕೋಲು ಕೈ ಗೆ ತರಚಿದ ಗಾಯವಾಗಿದ್ದು ಪಾದಚಾರಿ ಜಗದೀಶ್‌ ರವರಿಗೆ ಬಲಕಾಲಿನ ಕೋಲು ಕಾಲಿಗೆ, ಬಲಕೈ ಅಂಗೈ ಗೆ ರಕ್ತಗಾಯ, ತುಟಿಗೆ ತರಚಿದ ಗಾಯವಾಗಿ ಗಾಯಾಳುಗಳು ಬದ್ಯಾರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ, ಪಿರ್ಯಾದಿದಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಯಾವುದೇ ಚಿಕಿತ್ಸೆ ಪಡೆದಿರುವುದಿಲ್ಲ. ಅಪಘಾತ ನಡೆಸಿದ ಆಟೋರಿಕ್ಷಾ ವಾಹನ ಚಾಲಕ ವಾಹನ ನಿಲ್ಲಿಸದೇ ಗಾಯಾಳುಗಳನ್ನು ಉಪಚರಿಸದೇ, ಸಂಬಂಧಪಟ್ಟವರಿಗೆ ಮಾಹಿತಿ ನೀಡದೇ ಆಟೋರಿಕ್ಷಾ ಸಮೇತ ಪರಾರಿಯಾಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 84/2022 ಕಲಂ: 279, 337 ಭಾ ದಂ ಸಂ, ಜೊತೆಗೆ 134 (A&B) R/w 187 IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಜಿತ್‌ ಕೆ ಪ್ರಾಯ 48 ವರ್ಷ ಆಡಳಿತ ಪಾಲುದಾರರು ಹಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ  ದರ್ಬೆ, ಪುತ್ತೂರು ಕಸಬಾ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಆಸ್ಪತ್ರೆಯ ಉಪಯೋಗಕ್ಕೋಸ್ಕರ ಆಸ್ಪತ್ರೆಯ ಹೊರಗಿನ ಆವರಣದಲ್ಲಿ  ಜನರೇಟರ್‌ ಅಳವಡಿಸಿದ್ದು, ದಿನಾಂಕ: 15.06.22 ರಂದು ಮಧ್ಯಾಹ್ನ ಸುಮಾರು 20.30 ಗಂಟೆಗೆ ಆಸ್ಪತ್ರೆಯಲ್ಲಿ ಕರೆಂಟ್ ಹೋದ ಸಮಯ ಜನರೇಟರ್ ಆನ್ ಆಗದೇ ಇದ್ದಾಗ ಹೋಗಿ ಪರಿಶೀಲಿಸಿದಾಗ ಜನರೇಟರ್ ಗೆ ಅಳವಡಿಸಿದ ಬ್ಯಾಟರಿ ಇಲ್ಲದಿರುವುದು ಕಂಡು ಬಂದಿದ್ದು, ಆಸ್ಪತ್ರೆಯ ಆವರಣದ ಸಿಸಿ ಕ್ಯಾಮರಾ ಪರಿಶೀಲಸಿದಾಗ ನಿನ್ನೆ ದಿನಾಂಕ: 14.06.2022 ರಂದು ಮಧ್ಯಾಹ್ನ ಸುಮಾರು 2.30 ಗಂಟೆಗೆ ಯಾರೋ ಕಳ್ಳರು ಜನರೇಟ್ ಬ್ಯಾಟರಿಯನ್ನು ಕಳವು ಮಾಡಿಕೊಂಡು ಹೋಗಿರುವುದು ಪಿರ್ಯಾದಿದಾರರಿಗೆ ತಿಳಿದು ಬಂದಿದ್ದು, ಕಳವಾದ ಬ್ಯಾಟರಿಯ ಮೌಲ್ಯ ಸುಮಾರು ರೂ 8,000 /- ಆಗಬಹುದು.ಈ ಬಗ್ಗೆ ಪುತ್ತೂರು ನಗರ ಠಾಣಾ ಅ.ಕ್ರ: 46/2022 ಕಲಂ:  379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ 15.06.2022 ರಂದು 8.30 ಗಂಟೆಗೆ  ಹರೀಶ್ ಎಂ ಆರ್ ಪಿಎಸ್‌ಐ ಬಂಟ್ವಾಳ ಗ್ರಾಮಾಂತರ ಠಾಣೆರವರು ಸಜೀಪ ಜಂಕ್ಷನ್  ಬಳಿ ಸಾರ್ವಜನಿಕ ಸ್ಥಳದಲ್ಲಿ ಮೊಹಮ್ಮದ್ ಜಾಫರ್ ಪ್ರಾಯ 34 ವರ್ಷ ವಾಸ ಕುಂಟಾಲ್ ಗುಡ್ಡೆ ಮನೆ ಸಜಿಪನಡು ಗ್ರಾಮ ಬಂಟ್ವಾಳ  ಎಂಬಾತನು ಯಾವುದೋ ಮಾದಕ ವಸ್ತುವನ್ನು ಸೇವಿಸಿ ನಶೆ ಹೊಂದಿ ಅಸಭ್ಯವಾಗಿ  ವರ್ತಿಸುತ್ತಿದ್ದಾಗ    ಸಿಬಂದಿಗಳೊಂದಿಗೆ  ಅಲ್ಲಿಗೆ ತಲುಪಿ ಸದ್ರಿಯವರುಗಳನ್ನು ಸುತ್ತುವರಿದು  ವಿಚಾರಿಸಲಾಗಿ ನಿಷೇದಿತ ಮಾಧಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾರೆ. ನಂತರ  ಆಸ್ಪತ್ರೆ  ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿ ಮಾಧಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ. ಆತನ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 42/2022 ಕಲಂ 27(b)  NDPS ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ : ದಿನಾಂಕ 15-06-2022 ರಂದು 14.30 ಗಂಟೆಗೆ ವಿಟ್ಲ ಪೊಲೀಸ್‌ ಠಾಣಾ ಉಪನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ ರವರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಎರ್ಮೆತೊಟ್ಟಿ ಎಂಬಲ್ಲಿ ಕೊರೆಯ ವಠಾರದಲ್ಲಿ ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ದಾಸ್ತಾನು ಮಾಡಿದ್ದ ಜಾಗಕ್ಕೆ ತೆರಳಿ ಸದ್ರಿ ಸ್ಥಳದಲ್ಲಿ ಹುಡುಕಾಡಿದಾಗ ಒಂದು ಖಾಲಿ ಮನೆಯ ಬಳಿಯ ಪೊದೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸ್ಪೋಟಕ ವಸ್ತುವಾದ ಜಿಲೆಟಿನ್ ಕಡ್ಡಿಗಳನ್ನು ತುಂಬಿಸಿಟ್ಟಿರುವುದು ಕಂಡುಬಂದಿರುತ್ತದೆ. ಸದ್ರಿ ಸ್ಥಳದ ಬಳಿಯಿರುವ ಮನೆಯ ವ್ಯಕ್ತಿಯನ್ನು ಕರೆದು ವಿಚಾರಿಸಲಾಗಿ ತನ್ನ ಹೆಸರು ದೇವಪ್ಪ ನಾಯ್ಕ ಎಂಬುದಾಗಿ ತಿಳಿಸಿದರು. ಬಳಿಕ ಸ್ಪೋಟಕ ವಸ್ತುವಿನ ಬಗ್ಗೆ ವಿಚಾರಿಸಲಾಗಿ ಸದ್ರಿ ಜಮೀನು ತನಗೆ ಸಂಬಂಧಿಸಿರುವುದಾಗಿಯೂ ಈ ಜಮೀನಿನ ಬಳಿಯಿರುವ ಕಪ್ಪು ಕಲ್ಲು ಕೋರೆಯ ಕಲ್ಲುಗಳನ್ನು ಸ್ಪೋಟಕ ಬಳಸಿ ಒಡೆಯುವ ಉದ್ದೇಶದಿಂದ ಕೋರೆಯ ಮಾಲಕ ಮಹಮ್ಮದ್ ಕುಂಞಿ ಹಾಗೂ ಬ್ಲಾಸ್ಟರ್ ಅಶೋಕ್ ರವರು ಒಟ್ಟಾಗಿ ಸೇರಿಕೊಂಡು ಸದ್ರಿ ವಸ್ತುಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟಿರುವುದಾಗು ತಿಳಿಸಿದ್ದು, ಸದ್ರಿ ಸ್ಥಳದಲ್ಲಿ APEX POWER-90, ಜಿಲೆಟಿನ್ ಜೆಲ್-510 ಕಡ್ಡಿಗಳು ದೊರಕಿರುತ್ತದೆ., ಇದರ ಅಂದಾಜು ಮೌಲ್ಯ 6120=00 ರೂಪಾಯಿಗಳು ಆಗಬಹುದು. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 97/2022  ಕಲಂ: 9B(1)(b) The Explosives Act 1884 ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ದಿನೇಶ್ ಜೆ., ಪ್ರಾಯ: 26 ವರ್ಷ. ತಂದೆ:  ದಿ. ರಾಮಚಂದ್ರ ಪೂಜಾರಿ, ವಾಸ: ಜೈಲಾಡಿ ಮನೆ, ಕುಕ್ಕಳ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಫಿರ್ಯಾಧಿದಾರರ ಅಣ್ಣ ಸುರೇಶ, ಪ್ರಾಯ 32 ವರ್ಷ ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದವರು, ದಿನಾಂಕ: 14-06-2022 ರಂದು ರಾತ್ರಿ 9.00 ಗಂಟೆಗೆ ತನ್ನ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಹೊರಗೆ ಹೋದವರು ವಾಪಾಸು ಬಾರದೆ ಇದ್ದಾಗ ಮನೆಯ ಹತ್ತಿರದಕಾಡಿನಲ್ಲಿ ಹುಡುಕಾಡುತ್ತಿರುವಾಗ ಬೆಳ್ತಂಗಡಿ ತಾಲೂಕು ಕುಕ್ಕಳ ಗ್ರಾಮದ ಹಟ್ಟತ್ತೋಡಿ ಕೃಷ್ಣಭಟ್ ರವರಿಗೆ ಸೇರಿದ ಕಾಡು ಜಾಗದಲ್ಲಿ ರಾತ್ರಿ 11.00 ಗಂಟೆ ಮಧ್ಯೆ ಮರದ ಕೊಂಬೆಗೆ ನೈಲಾನ್ ಹಗ್ಗ ಕಟ್ಟಿ ಅದರ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣಾ UDR NO 17/2022 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-06-2022 11:45 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080