ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಅಬೂಬಕ್ಕರ್ ಪ್ರಾಯ 48 ವರ್ಷ ತಂದೆ: ದಿ|| ಇಬ್ರಾಹಿಂ ವಾಸ: ಅಜಲಾಡಿ ಜನತಾ ಕಾಲೋನಿ ಕುರಿಯ ಗ್ರಾಮ ಪುತ್ತೂರು ತಾಲೂಕು ರವರು ದಿನಾಂಕ 14.07.2021 ರಂದು ತನ್ನ ಬಾಬ್ತು ಅಟೋರಿಕ್ಷಾ ನಂಬ್ರ ಕೆಎ-21-ಬಿ-4540 ನೇದನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಸಮಯ ಪಡ್ಪು ಎಂಬಲ್ಲಿ ಪರಿಚಯದ ಜೀವನ್ ಕುಮಾರ್ ಮತ್ತು ನಿತಿನ್ ಎಂಬವರು ಕುಂಬ್ರಕ್ಕೆ ಬರುವುದಾಗಿ ತಿಳಿಸಿದ ಮೇರೆಗೆ ಅಟೋರಿಕ್ಷಾದ ಹಿಂಬದಿ ಸೀಟಿನಲ್ಲಿ ಪ್ರಯಾಣಿಕರಾಗಿ ಕುಳ್ಳಿಸಿಕೊಂಡು ಬರುತ್ತಿರುವ ಸಮಯ ಪುತ್ತೂರು ತಾಲೂಕು ಕುರಿಯ ಗ್ರಾಮದ ಬೊಟ್ಟತ್ತಾರು ಸಾರ್ವಜನಿಕ ರಸ್ತೆಯ ತಿರುವಿನಲ್ಲಿ ತಲುಪಿದಾಗ ಎದುರಿನಿಂದ ಅಂದರೆ ಪರ್ಪುಂಜ ಕಡೆಯಿಂದ ಕುರಿಯ ಕಡೆಗೆ ಮಾರುತಿ ಓಮಿನಿ ಕಾರು ನಂಬ್ರ ಕೆಎ-21-ಎನ್-9938 ನೇದನ್ನು ಅದರ ಚಾಲಕ ಚಂದ್ರಹಾಸ ಎಂಬವರು ತಮ್ಮ ಬಾಬ್ತು ಮಾರುತಿ ಓಮಿನಿ ಕಾರನ್ನು ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಅಟೋರಿಕ್ಷಾದ ಬಲಭಾಗದ ಮಧ್ಯಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಟೋರಿಕ್ಷಾ ಜಖಂಗೊಂಡಿದ್ದಲ್ಲದೇ ಪಿರ್ಯಾದಿದಾರರ ಹಣೆಗೆ ಗುದ್ದಿದ ಗಾಯ ಹಾಗೂ ಪ್ರಯಾಣಿಕರಾದ ಜೀವನ್ ಕುಮಾರ್‌ ರವರಿಗೆ ಬಲಕಾಲಿಗೆ ಗುದ್ದಿದ ಗಾಯ ಹಾಗೂ ನಿತಿನ್‌ರವರಿಗೆ ಮೂಗಿಗೆ ಗುದ್ದಿದ ಗಾಯವಾಗಿರುವುದಾಗಿದೆ, ಈ ಬಗ್ಗೆ ಪುತ್ತೂರು ಗ್ರಾಮಾಂತರ ಆ.ಕ್ರ 62/21 ಕಲಂ: 279 337  ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಡಬ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಚಿಕ್ಕಣ್ಣ ಪ್ರಾಯ:30 ವರ್ಷ, ತಂದೆ:ಬೈರಪ್ಪ ವಾಸ: ಕಾಜಿ ಪಾಳ್ಯ  ಗ್ರಾಮ, ಕುದೂರು ಹೋಬಳಿ, ಮಾಗಡಿ ತಾಲೂಕು ರಾಮನಗರ ಜಿಲ್ಲೆ ರವರು ದಿನಾಂಕ:13.07.2021 ರಂದು ತನ್ನ ಬಾಬ್ತು ಸ್ವೀಫ್ಟ್‌ ಕಾರು ನಂಬ್ರ:KA-22 N-3760 ನೇದರಲ್ಲಿ  ತನ್ನ ಅಣ್ಣನಾದ ಗಂಗರಾಜು, ಲೋಕೇಶ್‌, ಹಾಗೂ ತಮ್ಮನಾದ ಬೈರೇಗೌಡ ಎಂಬವರೊಂದಿಗೆ ತನ್ನ ಮನೆಯಿಂದ ತೀರ್ಥಯಾತ್ರೆಗೆ ಹೊರಟು ದಿನಾಂಕ:14.07.2021 ರಂದು ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿದ್ದು ಕಡಬ ತಾಲೂಕು ಬಂಟ್ರ ಗ್ರಾಮದ ಮರ್ದಾಳ ಬೀಡು ಎಂಬಲ್ಲಿಗೆ ಸಮಯ ಸುಮಾರು ಮದ್ಯಾಹ್ನ 02.00 ಗಂಟೆಗೆ ತಲುಪಿದಾಗ ಎದುರುಗಡೆಯಿಂದ ಅಂದರೆ ಮರ್ದಾಳ ಕಡೆಯಿಂದ KA-05 LA-7311 ಮೋಟಾರ್‌ ಸೈಕಲ್‌ ಸವಾರನಾದ ಆರೋಪಿತನು ತೀರಾ ಅಜಾಗರೂಕತೆಯಿಂದ ಮೋಟಾರ್‌ ಸೈಕಲ್‌  ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಬಾಬ್ತು KA-22 N-3760 ನೇ ಸ್ವೀಫ್ಟ್‌ ಕಾರು ವಾಹನದ ಕಡೆಗೆ ಬಂದಾಗ ಪಿರ್ಯಾದುದಾರರು ಅಪಘಾತವನ್ನು ತಪ್ಪಿಸುವರೇ ಕಾರು ವಾಹನವನ್ನು ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದರೂ ಮೋಟಾರ್‌ ಸೈಕಲ್‌ ಸವಾರನು ತೀರಾ ಅಜಾಗರೂಕತೆಯಿಂದ ಮೊಟಾರ್‌ ಸೈಕಲ್‌ ಚಲಾಯಿಸಿಕೊಂಡು ಹೋಗಿ ಪಿರ್ಯಾದುದಾರರ  ಕಾರು ವಾಹನದ ಬಲಬದಿಗೆ ಡಿಕ್ಕಿಯನ್ನುಂಟು ಮಾಡಿರುತ್ತಾನೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ KA-05 LA-7311 ಮೋಟಾರ್‌ ಸೈಕಲ್‌ ಸವಾರನು ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಬಲಕಾಲಿಗೆ ತೀವ್ರ ರಕ್ತಗಾಯವಾಗಿದ್ದು ಕಾಲಿನ ಮೂಳೆ ಮುರಿದಂತೆ ಕಾಣುತ್ತಿರುತ್ತದೆ, ನಂತರ ಸ್ಥಳಕ್ಕೆ ಬಂದ ಸಾರ್ವಜನಿಕರು ಮತ್ತು ಪಿರ್ಯಾದುದಾರರು ಸೇರಿಕೊಂಡು ಮೋಟಾರ್‌ ಸೈಕಲ್‌ ಸವಾರನಾದ ಗಾಯಾಳುವನ್ನು ಉಪಚರಿಸಿ ಒಂದು ಖಾಸಾಗಿ ವಾಹನದಲ್ಲಿ ಕಡಬ ಸರ್ಕಾರಿ ಆಸ್ಪತ್ರಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಮಾಡಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವಿನ ಸಂಬಂದಿಕರೊಬ್ಬರು 108 ಅಂಬ್ಯುಲೆನ್ಸ್ ವಾಹನದಲ್ಲಿ ಮಂಗಳೂರಿಗೆ ಕರೆದುಕೊಂಡು ಹೋಗಿರುತ್ತಾರೆ ಈ ಬಗ್ಗೆ ಕಡಬ ಠಾಣಾ ಅ.ಕ್ರ 56/2021 ಕಲಂ 279 337. 338. IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-07-2021 10:54 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080