ಅಭಿಪ್ರಾಯ / ಸಲಹೆಗಳು

 

ಅಪಘಾತ ಪ್ರಕರಣ: 3

  • ಪುಂಜಾಲಕಟ್ಟೆ ಪೊಲೀಸ್ ಠಾಣೆ: ಸುತೇಶ್ ಕೆ.ಪಿ, ಪಿ.ಎಸ್‌ಐ, (ಕಾ ಮತ್ತು ಸು) ಪುಂಜಾಲಕಟ್ಟೆ ಪೊಲೀಸ್ ಠಾಣೆರವರು ದಿನಾಂಕ: 15-07-2022 ರಂದು ಸಿಬ್ಬಂದಿಯವರೊಂದಿಗೆ ಕಕ್ಯಪದವು, ಪಾಂಡವರಕಲ್ಲು ಮಾರ್ಗವಾಗಿ ವಾಪಾಸು ಬರುತ್ತಾ ಮದ್ಯಾಹ್ನ 2.15 ಗಂಟೆಗೆ ಬಡಗಕಜೆಕಾರು ಗ್ರಾಮದ ಕೊಮ್ಮಿನಡ್ಕ ಮಸೀದಿಯ ಬಳಿ ಬರುತ್ತಿರುವಾಗ ಮುಂದಿನಿಂದ ರಕ್ತೇಶ್ವರಿ ಪದವು ಕಡೆ 3 ಜನ ಯುವಕರು ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಹೆಲ್ಮೆಟ್ ಇಲ್ಲದೆ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡುತ್ತಾ ಹೋಗುತ್ತಿದ್ದು, ಫಿರ್ಯಾದಿದಾರರು ಅವರಿಗೆ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದರೂ ಅವರು ನಿಲ್ಲಿಸದೆ ಇದ್ದು, ಜೀಪಿನಲ್ಲಿರುವ ಮೈಕ್‌ನಲ್ಲಿ ನಿಲ್ಲಿಸುವಂತೆ 3 ಬಾರಿ ಅನೌನ್ಸ್ ಮಾಡಿದರೂ ನಿಲ್ಲಿಸದೆ ಇದ್ದು, ಅವರನ್ನು ಹಿಂಬಾಲಿಸುತ್ತಾ ರಕ್ತೇಶ್ವರಿ ಪದವು ಬಸ್ಸುನಿಲ್ದಾಣದ ಬಳಿ ಬಂದು ನೋಡಿದಾಗ, ಅಲ್ಲಿ  ಬೈಕ್ ನ್ನು ನಿಲ್ಲಿಸಿದ್ದು, ಅವರುಗಳ ವಿಳಾಸ, ವಾಹನ ದಾಖಲೆ ಮತ್ತು ಚಾಲನಾ ಪರವಾನಿಗೆಗಳ ಬಗ್ಗೆ ಕೇಳಿದಾಗ, ಸರಿಯಾಗಿ ಉತ್ತರ ನೀಡದೆ ಇದ್ದು,  ವಾಹನ ಸವಾರನು ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿ ರಸ್ತೆ ನಿಯಮ ಉಲ್ಲಂಘನೆ ಮಾಡಿರುತ್ತಾನೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 49/2022 ಕಲಂ: 279, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಭರತೇಶ (31) ತಂದೆ: ಮೋನಪ್ಪ ಗೌಡ ವಾಸ: ಗಾಣಂತಿ ಮನೆ ನಿಡ್ಲೆ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು  ಎಂಬವರ ದೂರಿನಂತೆ ದಿನಾಂಕ: 15-07-2022 ರಂದು ಕೆಎ 21 ಎಲ್‌ 7498  ನೇ ಮೋಟಾರು ಸೈಕಲ್‌ ನ್ನು  ಅದರ ಸವಾರ ಅಜೀತ್‌ ಕುಮಾರ್‌ ರವರು ಉಜಿರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ಬೆಳಿಗ್ಗೆ 8:55 ಗಂಟೆಗೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಎರ್ನೊಡಿ ಝಾಫ್ರನ್‌ ಪ್ಯಾಮಿಲಿ ರೆಸ್ಟೋರೆಂಟ್‌ ಬಳಿ ತಲುಪುತ್ತಿದ್ದಂತೆ ಅವರ ವಿರುದ್ದ ಧಿಕ್ಕಿನಿಂದ ಅಂದರೆ ಬೆಳ್ತಂಗಡಿ  ಕಡೆಯಿಂದ ಉಜಿರೆ ಕಡೆಗೆ ಕೆಎ 21 ಎಮ್‌ 8226 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಹೋಗಿ ಮೋಟಾರು ಸೈಕಲ್‌ ಗೆ  ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್‌ ಸವಾರ ಅಜೀತ್‌ ಕುಮಾರ್‌ ರವರು  ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು ಬಲಕಾಲಿನ ತೊಡೆಗೆ, ಬಲಕೈಯ ಭುಜಕ್ಕೆ ಗುದ್ದಿದ ರಕ್ತಗಾಯವಾಗಿದ್ದು, ಗಾಯಾಳನ್ನು ಚಿಕಿತ್ಸೆ ಬಗ್ಗೆ ಉಜಿರೆ ಬೆನಕ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಜಿರೆ ಎಸ್‌ಡಿಎಮ್‌ ಆಸ್ಪತ್ರೆಗೆ ಕೊಂಡು ಹೋಗಿ ನಂತರ  ಹೆಚ್ಚಿನ ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕೊಂಡು ಹೋಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 98/2022 ಕಲಂ: 279 337 ಭಾ ದಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಸದಾನಂದ ಕೆ ವಿ (33) ವೀರಪ್ಪ ಗೌಡ ವಾಸ: ಕೆಚೋಡಿ ಮನೆ ಕೊಕ್ಕಡ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ  ಎಂಬವರ ದೂರಿನಂತೆ ದಿನಾಂಕ: 14-07-2022 ರಂದು KA 21 Q 3350 ನೇ ಮೋಟಾರು ಸೈಕಲ್ ನ್ನು ಅದರ ಸವಾರ ಯತೀಂದ್ರ ಎಂಬವರು ಕೊಕ್ಕಡ ಕಡೆಯಿಂದ ಅರಸಿನಮಕ್ಕಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 8:00 ಗಂಟೆಗೆ ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಕೊಕ್ಕಡ ವಿಜೇತ ಹೋಟೆಲ್ ನ ಬಳಿ ತಲುಪುತ್ತಿದ್ದಂತೆ ಅವರ ವಿರುದ್ದ ದಿಕ್ಕಿನಿಂದ ಅಂದರೆ ಅರಸಿನಮಕ್ಕಿ ಕಡೆಯಿಂದ ಕೊಕ್ಕಡ ಕಡೆಗೆ KA 21-3622 ನೇ ಜೀಪನ್ನು ಅದರ ಚಾಲಕ ದುಡುಕುತನದಿಂದ ಯಾವುದೇ ಸೂಚನೆ ನೀಡದೆ ಒಮ್ಮೇಲೆ ರಸ್ತೆಯ ಬಲಬದಿಗೆಅಂದರೆ ಚಾಮುಂಡೇಶ್ವರಿ ಆಟೋವರ್ಕ್ಸ್ ಗ್ಯಾರೇಜ್ ಕಡೆಗೆ ಚಲಾಯಿಸಿ ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಯತೀಂದ್ರ ರವರು ಮೋಟಾರು ಸೈಕಲ್ ನೊಂದಿಗೆ ರಸ್ತೆಗೆ ಬಿದ್ದು ಬಲಕಾಲಿನ ಮಂಡಿಯ ಕೆಳಬಾಗಕ್ಕೆ ಗುದ್ದಿದ ರಕ್ತಗಾಯಗೊಂಡು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 99/2022 ಕಲಂ: 279 337 ಭಾ ದಂ ಸಂ,ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: 1

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹಬೀಬ್‌ ರಹಿಮಾನ್‌ ಪ್ರಾಯ 43 ವರ್ಷ ತಂದೆ:ದಿ|| ಸಿ ಮಹಮ್ಮದ್‌ ವಾಸ:ಬಂಡಿತಡ್ಕ ಮನೆ,ಕನ್ಯಾನ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿಯ ಅಣ್ಣ ಅಬ್ದುಲ್‌ ಮಜೀದ್‌ರವರು ದಿನಾಂಕ:16-06-2022 ರಂದು ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಬಂಡಿತ್ಡಕ ಎಂಬಲ್ಲಿರುವ ಪಿರ್ಯಾಧಿಯ ಮನೆಯಿಂದ ಹೋದವರು ರಾತ್ರಿಯಾದರು ಮನೆಗೆ ಬಾರದೆ ಇದ್ದಾಗ ಪಿರ್ಯಾಧಿದಾರರು ಆತನು ಉಪಯೋಗಿಸುತ್ತಿದ್ದ ಮೊಬೈಲ್‌ ನಂಬ್ರಗೆ ಕರೆ ಮಾಡಿದಾಗ ಅದು ಸ್ವಿಚ್‌ ಆಫ್‌ ಎಂದು ಬರುತ್ತಿತ್ತು. ಈ ಮೊದಲಿನಂತೆ ಮುಂಬಯಿಗೆ ಹೋಗಿರಬಹುದೆಂದು ತಿಳಿದುಕೊಂಡಿದ್ದು. ಒಂದು ವಾರ ಕಳೆದರು ಕೂಡಾ ಅಣ್ಣ ಮನೆಗೆ ಬಾರದೆ ಇದ್ದಾಗ ಮತ್ತೆ ಆತನ ಮೊಬೈಲ್‌ಗೆ ಕರೆ ಮಾಡಿದಾಗ ಆತನು ಮೊಬೈಲ್‌ ಸ್ವಿಚ್‌ ಆಫ್ ಆಗಿತ್ತು. ಆದರೆ ಆತನು ಮುಂದಿನ ದಿನಗಳಲ್ಲಿ ಮನೆಗೆ ಬರಬಹುದೆಂದು ನಾವು ಸುಮ್ಮನಿದ್ದೇವು. ಬಳಿಕ ಈ ವಿಚಾರವನ್ನು ನಮ್ಮ ನೆರೆ ಹೊರೆಯವರಲ್ಲಿ ಹಾಗೂ ನಮ್ಮ ಸಂಬಂಧಿಕರಲ್ಲಿ ತಿಳಿಸಿ ವಿಚಾರಿಸಿದಾಗ ಪಿರ್ಯಾಧಿಯ ಅಣ್ಣನ ಇರುವಿಕೆ ತಿಳಿದು ಬಂದಿರುವುದಿಲ್ಲ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 119/2022  ಕಲಂ: ಮನ್ಯಷ್ಯ ಕಾಣೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 1

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ತುಳಸಿ ಮಂಜುನಾಥ್ ಪ್ರಾಯ: 41 ವರ್ಷ ಗಂಡ: ಮಂಜುನಾಥ ವಾಸ: ಸಪ್ತಗಿರಿ ನಿಲಯ ಕೆಮ್ಮಾಯಿ ಚಿಕ್ಕಮುಡ್ನೂರು ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿರವರು ಪುತ್ತೂರಿನಲ್ಲಿ ಸ್ವಾಭಿಮಾನ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಗಮದಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 12-07-2022 ರಂದು ಪಿರ್ಯಾದಿದಾರರು ಕಛೇರಿಯಲ್ಲಿರುವ ಸಮಯ ಬೆಳಿಗ್ಗೆ ಸುಮಾರು 11:00 ರಿಂದ 11:30 ಗಂಟೆ ಸಮಯದಲ್ಲಿ ಆರೋಪಿತರಾದ ಪಿರ್ಯಾದಿದಾರರ ಗಂಡನ ತಮ್ಮ ಕಿರಣ್ ಕುಮಾರ್ ರವರು  ಪಿರ್ಯಾದಿದಾರರು ಕೆಲಸ ಮಾಡುತ್ತಿರುವ ಸ್ಥಳಕ್ಕೆ ಬಂದು ಪಿರ್ಯಾದಿದಾರರನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು “ನಿನ್ನ ಕೈಕಾಲು ಮುರಿದು ಹಾಕಿ ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿರುತ್ತಾನೆ. ಈ ಬಗ್ಗೆ ಪುತ್ತೂರು ನಗರ ಠಾಣಾ ಅ.ಕ್ರ:  62/2022 ಕಲಂ:  504,506,509 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನವೀನ್‌ ಪ್ರಾಯ 35 ತಂದೆ ಸಂಜೀವ ಪೂಜಾರಿ ವಾಸ ಮೈಕೆ  ಮನೆ  ಇಡ್ಕಿದು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರ ತಂದೆಯವರಾದ ಸಂಜೀವ ಪೂಜಾರಿ ಪ್ರಾಯ 75 ವರ್ಷ ಎಂಬವರು ಸಹಕಾರಿ ಸಂಘದಿಂದ ಸಾಲವನ್ನು ತೆಗೆದುಕೊಂಡಿದ್ದು, ಸಾಲವನ್ನು ಮರುಪಾವತಿಸುವಂತೆ ನೋಟೀಸ್‌ ಕಳುಹಿಸಿರುತ್ತಾರೆ. ಪಿರ್ಯಾಧಿ ತಂದೆಯವರು ತೆಗೆದುಕೊಂಡ ಕೃಷಿ ಸಾಲವನ್ನು ಮರು ಪಾವತಿಸಲು ಸಾಧ್ಯವಾಗದ ಕಾರಣ ಸಾಲ ಬಾದೆಯಿಂದ ಬೇಸರಗೊಂಡು ಮಾನಸಿಕವಾಗಿನೊಂದು ಸಾಯುವ ಉದ್ದೇಶದಿಂದ ದಿನಾಂಕ:14-07-2022 ರಂದು ಸಂಜೆ ಸುಮಾರು 5.00 ಗಂಟೆಗೆ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮೈಕೆ ಎಂಬಲ್ಲಿಯ ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಅಶ್ವಸ್ಥಗೊಂಡವರನ್ನು ಪಿರ್ಯಾಧಿದಾರರ ಭಾವ ಶೇಖರ ಪೂಜಾರಿಯವರು ಹಾಗೂ ಇತರರು ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಸಂಜೆ 7.00 ಗಂಟೆಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋಗಿದ್ದು ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 29/2022  ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-07-2022 11:31 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080