ಅಭಿಪ್ರಾಯ / ಸಲಹೆಗಳು

 ಅಪಘಾತ ಪ್ರಕರಣ: 1

ಕಡಬ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಉಮೇಶ್ ಗೌಡ  ಪ್ರಾಯ 42 ವರ್ಷ, ತಂದೆ: ಗುಡ್ಡಪ್ಪ ಗೌಡ   ವಾಸ: ಹೊಸ  ಮನೆ, ಬಂಟ್ರ   ಗ್ರಾಮಕಡಬ ತಾಲೂಕು ಎಂಬವರ ದೂರಿನಂತೆ ದಿನಾಂಕ:14.08.2021  ವ್ಯಾಪಾರದ ನಿಮಿತ್ತ ಮರ್ಧಾಳದ ಮೀನು ಮಾರುಕಟ್ಟೆಯ ಬಳಿ ಇರುವ ಸಮಯ  ಸುಬ್ಮಹ್ಮಣ್ಯ – ಉಪ್ಪಿನಂಗಡಿ  ರಾಜ್ಯ ರಸ್ತೆಯ ಕಡಬ ತಾಲೂಕು  ಬಂಟ್ರ ಗ್ರಾಮದ ಮಾರ್ಧಳ ಜಂಕ್ಷನ್ ಎಂಬಲ್ಲಿ ಕಡಬ ಕಡೆಯಿಂದ ಒಂದು ಮೋಟಾರ್ ಸೈಕಲ್ KA.21.Y.4970  ನೇ ಸವಾರನು ಡಾಮಾರು ರಸ್ತೆಯ ಎಡ ಬದಿಯಲ್ಲಿ  ಮದ್ಯಾಹ್ನ 1-30 ಗಂಟೆಗೆ  ಚಾಲಯಿಸಿಕೊಂಡು ಬರುತ್ತಿದ್ದ ಸಮಯ  ಮರ್ಧಾಳ ಕಡೆಯಿಂದ ಒಂದು ಕಾರಿನ ಚಾಲಕನು ತೀರಾ ಅಜಾಗರುಕತೆ ಹಾಗೂ  ನಿರ್ಲ್ಷತನದಿಂದ   ಡಾಮರು ರಸ್ತೆ ತೀರ ಬಲ ಬದಿಗೆ  ಚಲಾಯಿಸಿಕೊಂಡು ಬಂದು  KA.21.Y.4970 ನೇ ಮೋಟಾರ್ ಸೈಕಲ್ ಗೆ ಅಪಘಾತ ಉಂಟು ಮಾಡಿದ ಪರಿಣಾಮ ಮೋಟಾರ್ ಸೈಕಲ್ ಸವಾರ ನು ಡಾಮಾರು ರಸ್ತೆಗೆ ಎಸೆಯಪ್ಪಟ್ಟಿದ್ದು ತಕ್ಷಣ ಅಲ್ಲೇ ಇದ್ದ ಪಿರ್ಯಾದುದಾರರು ಹತ್ತಿರ ಬಂದು ನೋಡಲಾಗಿ ಪರಿಚಯದ ಸ್ವಂತ ಮಾವ ಮೋನಪ್ಪ ಗೌಡರಾಗಿದ್ದು ನಂತರ ಉಪಚರಿಸಿ ನೋಡಲಾಗಿ ಕೈ ಮತ್ತು ಕಾಲುಗಳಿಗೆ ರಕ್ತ ಗಾಯ ಉಂಟಾಗಿದ್ದು ನಂತರ ಕಾರಿನ ನಂಬ್ರ  ನೋಡಲಾಗಿ KA-21-B-4691 ಟೂರಿಸ್ಟ್ ಕಾರಗಿದ್ದು ಆಗಿದ್ದು ಚಾಲಕನ ಹೆಸರು ತಿಳಿಯಲಾಗಿ  ಪರಶುರಾಮ ಎಂಬುದಾಗಿ  ತಿಳಿದಿರುತ್ತಾದೆ. ನಂತರ ಗಾಯಗೊಂಡವರನ್ನು ಪಿರ್ಯಾದುದಾರರು ಹಾಗೂ ಅಲ್ಲೆ ಇದ್ದ ಕಾರ್ತಿಕ್  ಮುರುಳಿ ಎಂಬುವರು ಒಂದು ಖಾಸಗಿ ಜೀಪಿ ನಲ್ಲಿ  ಚಿಕಿತ್ಸೆಯ ಬಗ್ಗೆ ಕಡಬ ಸಮುದಾಯ ಆರೋಗ್ಯ ಕೇಂದ್ರ ಕ್ಕೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಪುತ್ತೂರು ಹಿತಾ ಅಸ್ವತ್ರೆಗೆ ಕರೆದುಕೊಂಡು ಹೋಗಿ  ವೈದ್ಯರಲ್ಲಿ ಪರಿಕ್ಷೀಸಿ ಒಳರೋಗಿಯಾಗಿ ದಾಖಲು  ಮಾಡಿಕೊಂಡು  ಚಿಕಿತ್ಸೆ ನೀಡಿರುವುದಾಗಿದೆ. ಈ ಬಗ್ಗೆ ಕಡಬ ಠಾಣಾ ಅ.ಕ್ರ 65/2021 ಕಲಂ: 279.337. ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 3

ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಆಶಾ ಇ ಪ್ರಾಯ: 37 ವರ್ಷ ಪಂಚಾಯತ್ ಅಬಿವೃದ್ಧಿ ಅಧಿಕಾರಿ ಕಬಕ ಗ್ರಾಮಪಂಚಾಯತ್ ರವರ ದೂರಿನಂತೆ ಮಾನ್ಯ ಕೇಂದ್ರ ಸರ್ಕಾರದ ಅಜಾದಿ ಕಾ ಅಮೃತ ಮಹೋತ್ಸವದ ಆಚರಣೆಯನ್ನು  ಕಬಕ ಗ್ರಾಮ ಪಂಚಾಯತ್ ನಲ್ಲಿ ಆಚರಿಸುತ್ತಾ ಸಮಯ ಸುಮಾರು  09:45 ಗಂಟೆ ಸಮಯಕ್ಕೆ ಪುತ್ತೂರು ತಾಲೂಕು ಕಬಕ ಗ್ರಾಮದ ಕಬಕ ಗ್ರಾಮ ಪಂಚಾಯತ್ ಎದುರುಗಡೆ ಗ್ರಾಮ ಪಂಚಾಯತ್ ವತಿಯಿಂದ ಕೋವಿಡ್ -19 ರ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತರಿಗೆ ಸನ್ಮಾನ ವನ್ನು ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಬಗ್ಗೆ ವಾಹನ ನಂಬ್ರ ಕೆ.ಎ 21 ಬಿ 9604 ನೇದರಲ್ಲಿ ಭಾರತ ಮಾತೆಯ ಭಾವಚಿತ್ರವಿರುವ ಬ್ಯಾನರ್ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಇರಿಸಿ ಜನರಿಗೆ ಮಾಹಿತಿ ನೀಡಲು ವಾಹನವನ್ನು ಚಾಲನೆ ಮಾಡುವ ಸಮಯ ಆರೋಪಿಗಳಾದ 1) ಅಜೀಜ್ 2) ನೌಷದ್ 3) ಶಮೀರ್ 4) ಹಾರೀಸ್, 5) ಅದ್ದು 6) ತೌಸೀಪ್  7) ಶಾಫಿ  ಹಾಗೂ ಇತರರು   ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ಕೋವಿಡ್ 19 ರ ನಿಯಾಮವಳಿಯನ್ನು ಉಲ್ಲಂಘಿಸಿ 75 ಸ್ವಾತಂತ್ರ್ಯೋತ್ಸವವನ್ನು ಆಚರಿಸದಂತೆ ಸಾರ್ವಜನಿಕ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪಂಚಾಯತ್ ಅಧ್ಯಕ್ಷರನ್ನು ಕೈಯಿಂದ ದೂಡಿ, ಭಾರತ ಮಾತೆಯ ಭಾವಚಿತ್ರವನ್ನು ಹಾನಿಗೊಳಿಸಿ, ಸಾರ್ವಜನಿಕ ಆಸ್ತಿಗೆ ಹಾನಿಯನ್ನು ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆ  ಅ.ಕ್ರ:   61/2021 ಕಲಂ: 143,147,269,353,323,427 ಜೊತೆಗೆ 149 ಐ.ಪಿ.ಸಿ ಮತ್ತು 2(A) KPDLP ACT ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ನಗರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಫಿರ್ಯಾದಿದಾರರಾದ ನಿತಿನ್‌. ಎಂ.,ಪ್ರಾಯ: 22 ವರ್ಷ, ತಂದೆ: ಚೆನ್ನಪ್ಪ ನಾಯ್ಕ , ವಾಸ: ಮೇಲ್‌ಮಜಲು ಮನೆ , ಆರ್ಯಾಪು ಗ್ರಾಮ ಮತ್ತು ಅಂಚೆ ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 15.08.2021 ರಂದು ತಾನು ಹೇರ್‌ ಕಟ್ಟಿಂಗ್‌ ಮಾಡಲು ಪುತ್ತೂರಿಗೆ ಬಂದಿದ್ದು, ಬಳಿಕ ಸಮಯ ಸುಮಾರು 12.00 ಗಂಟೆಗೆ ದರ್ಬೆಯಲ್ಲಿರುವ SBI ಎಟಿಎಂ ಗೆ ಹೋಗಿ ಫಿರ್ಯಾದಿದಾರರು ಅಕೌಂಟ್‌ ಬ್ಯಾಲೆನ್ಸ್ ನ್ನು  ಚೆಕ್‌ ಮಾಡಿ ಮನೆಗೆ ಹೊರಡಲು ತನ್ನ ದ್ವಿಚಕ್ರ ವಾಹನದ ಬಳಿ ಮಾರ್ಗಕ್ಕೆ ಬಂದಾಗ ಮೂರು ಜನ ಅಪರಿಚಿತರು ಮೋಟಾರ್‌ ಸೈಕಲ್‌ನಲ್ಲಿ ಬಂದು ಮೋಟಾರು ಸೈಕಲ್‌ನ್ನು ಫಿರ್ಯಾದಿದಾರರ ಹತ್ತಿರ ನಿಲ್ಲಿಸಿ ಮೋಟಾರ್‌ ಸೈಕಲ್‌ನ್ನು ಚಲಾಯಿಸುತ್ತಿದ್ದ ವ್ಯಕ್ತಿಯು ಆತನ ತಲೆಯಿಂದ ಹೆಲ್ಮೆಟ್‌ನ್ನು ತೆಗೆದು ಏಕಾಏಕಿ ಫಿರ್ಯಾದಿದಾರರ ತಲೆಗೆ ಮತ್ತು ಎಡಕೈ ಬೆರಳುಗಳಿಗೆ ಹಲ್ಲೆ ನಡೆಸಿದ್ದು, ಆ ಸಮಯ ಫಿರ್ಯಾದಿದಾರರು ಜೋರಾಗಿ ಬೊಬ್ಬೆ ಹೊಡೆದಾಗ ಮಾರ್ಗದ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಸಾರ್ವಜನಿಕರು ಫಿರ್ಯಾದಿದಾರರ ಹತ್ತಿರ ಬರುವುದನ್ನು ಕಂಡು ಆರೋಪಿಗಳು ಮೋಟಾರು ಸೈಕಲ್‌ನಲ್ಲಿ ಹೊರಟು ಹೋಗಿರುತ್ತಾರೆ . ನಂತರ ಫಿರ್ಯಾದಿದಾರರು ಚಿಕಿತ್ಸೆಗಾಗಿ ಪುತ್ತೂರು ಪ್ರಗತಿ ಆಸ್ಪತ್ರೆಗೆ ಬಂದಾಗ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆ   ಅ.ಕ್ರ: 62/2021 ಕಲಂ:  324 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ-ನಿರೀಕ್ಷರಾದ ಉದಯರವಿ ಎಂ.ವೈ.ರವರಿಗೆ  ದಿನಾಂಕ:-15.08.2021 ರಂದು 17.00 ಗಂಟೆಗೆ ಪುತ್ತೂರು ತಾಲೂಕು ಆರ್ಯಾಪು  ಗ್ರಾಮದ ಮಚ್ಚಿಮಲೆ  ಎಂಬಲ್ಲಿ ಸರಕಾರಿ ಗುಡ್ಡ ಪ್ರದೇಶದಲ್ಲಿ ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಹಾಗೂ ಯಾವುದೇ ಮುನ್ನಚ್ಚರಿಕಾ  ಕ್ರಮವನ್ನು ವಹಿಸದೇ ಗುಂಪಾಗಿ ಸೇರಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜು ಅಡುತ್ತಿದ್ದು, ಇದರಿಂದ ಸಾಂಕ್ರಾಮಿಕ ರೋಗವಾದ COVID 19 ಸೋಂಕು ಹರಡುವಿಕೆಗೆ ಕಾರಣವಾಗುವ ಸಾಧ್ಯತೆ ಇದೆ ಎಂಬುದಾಗಿ ದೊರೆತ ಖಚಿತ ವರ್ತಮಾನದಂತೆ ಸದ್ರಿಯವರು ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ  17.30  ಗಂಟೆಗೆ ಮಾಹಿತಿ ಬಂದ ಸ್ಥಳವಾದ ಪುತ್ತೂರು ತಾಲೂಕು ಆಯ  ಗ್ರಾಮದ ಚನಿಲ ಎಂಬಲ್ಲಿರುವ  ಸರಕಾರಿ  ಗುಡ್ಡಪ್ರದೇಶದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ಜೂಜು ಆಡುತ್ತಿದ್ದವರನ್ನು ಕಂಡು ಪೊಲೀಸ್ ಉಪ-ನಿರೀಕ್ಷಕರು  ಮತ್ತು ಸಿಬ್ಬಂದಿಗಳು ಸುತ್ತುವರಿದು, ಪಂಚರ ಸಮಕ್ಷಮದಲ್ಲಿ ದಾಳಿ ನಡೆಸಿ ಆರೋಪಿಗಳು ಆಟಕ್ಕೆ ಬಳಸಿದ ಒಟ್ಟು ನಗದು ಹಣ ರೂಪಾಯಿ 11,880/- ಹಾಗೂ ಕೋಳಿ ಅಂಕದ ಕೋಳಿಗಳು ಮತ್ತು  ಜೂಜಾಟದ ಸ್ಥಳಕ್ಕೆ ಬರಲು ಉಪಯೋಗಿಸಿದ ವಾಹನಗಳಾದ KA 21 E 9532 ನೇ  ಹೀರೋ ಕಂಪೆನಿಯ ಸ್ಪ್ಲೆಂಡರ್ ಮೋಟಾರು ಸೈಕಲ್.( ಅಂದಾಜು ಬೆಲೆ ರೂ. 15,000/-)   KA 21 ವೈ 8119ನೇ ಹೋಂಡಾ ಕಂಪೆನಿಯ ಶೈನ್ ಮೋಟಾರ್ ಸೈಕಲ್ .(ಅಂದಾಜು ಬೆಲೆ ರೂ. 20,000/-)   ಇವುಗಳನ್ನು  ಪಂಚರ ಸಮಕ್ಷಮ 17.45  ಗಂಟೆಯಿಂದ 19.15 ಗಂಟೆಯ ತನಕ ಮಹಜರನ್ನು ತಯಾರಿಸಿ  ಸ್ವಾಧೀನಪಡಿಸಿಕೊಂಡಿದ್ದು. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣಾ ಅ.ಕ್ರ: 73/2021 u/s 269 R/w 34 IPC u/s 87 KP Act ನಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತ್ತೀಚಿನ ನವೀಕರಣ​ : 16-08-2021 11:32 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080