ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ವೇಣೂರು ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಗಿರೀಶ ಪೂಜಾರಿ , ಪ್ರಾಯ-43 , ತಂದೆ- ಲೋಕಯ್ಯ ಪೂಜಾರಿ, ವಾಸ- ಶೇಡಿ ಗುರ್ಮೆದಡ್ಡ ಮನೆ, ಪಿಲ್ಯ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ 15.09.2022 ರಂದು 20.45 ಗಂಟೆಗೆ ಅಳದಂಗಡಿ ಕಡೆಯಿಂದ ಪಿಲ್ಯ ಕಡೆಗೆ ಹೋಗುತ್ತಿದ್ದ ಕೆಎ 19 ವೈ 1201 ನೇ ದ್ವಿಚಕ್ರ ವಾಹನವು ಪಿಲ್ಯ ಗ್ರಾಮದ ಬದ್ರಿಯಾ ಜುಮ್ಮಾ ಮಸೀದಿ ಮುಂಭಾಗ ಹಾದುಹೋಗುವ ನಾರಾವಿ- ಗುರುವಾಯನಕೆರೆ  ರಾಜ್ಯ ಹೆದ್ದಾರಿಗೆ ತಲುಪುವಾಗ  ಅದರ ಎದುರಿನಿಂದ ಅಂದರೆ ನಾರಾವಿ ಕಡೆಯಿಂದ ಬರುತ್ತಿದ್ದ ಕೆಎ 02 ಎಹೆಚ್ 5369 ನೇ  ಈಚರ್ ಲಾರಿಯನ್ನು ಅದರ ಚಾಲಕ ದುಡುಕುತನ ಮತ್ತು ನಿರ್ಲಕ್ಷತನದಿಂದ ರಸ್ತೆಯ ರಾಂಗ್ ಸೈಡಿಗೆ ಚಲಾಯಿಸಿ  ಕೆಎ 19 ವೈ 1201 ನೇ ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಪ್ರವೀಣ ಎಂಬವರು ವಾಹನ ಸಮೇತ ರಸ್ತೆಗೆ ಬಿದ್ದು ತಲೆಗೆ ಮತ್ತು ಕೈಕಾಲುಗಳಿಗೆ ತೀವ್ರವಾಗಿ ಗಾಯಗೊಂಡಿದ್ದು  ಅವರನ್ನು  ಬೆಳ್ತಂಗಡಿ ಸರಕಾರಿ ಆಸ್ಪತ್ರಗೆ ಸಾಗಿಸುವಾಗ ಮೃತಪಟ್ಟಿರುತ್ತಾರೆ, ಲಾರಿ ಚಾಲಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದು ಆತನನ್ನು ತೆಂಕಕಾರಂದೂರು ಗ್ರಾಮದ ಕಟ್ಟೆ ಎಂಬಲ್ಲಿ ತಡೆದು ಠಾಣೆಗೆ ಕಳುಹಿಸಿರುವುದಾಗಿದೆ. ಈ ಬಗ್ಗೆ ವೇಣೂರು ಪೊಲೀಸ್  ಠಾಣಾ ಅ.ಕ್ರ: 56/2022 ಕಲಂ: 279,304(A) IPC, 134 (A & B) IMV ACT  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಾಧಾಕೃಷ್ಣ (45), ತಂದೆ: ಮುದರ, ವಾಸ: ಅಡ್ಪಂಗಾಯ ಮನೆ, ಅಜ್ಜಾವರ ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿರವರು ದಿನಾಂಕ: 15.09.2022 ರಂದು ಅಜ್ಜಾವರ ಪೇಟೆಗೆ ಬಂದಿದ್ದವರು ವಾಪಾಸು ಮನೆಗೆ ಬರುತ್ತಾ ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ನೀಲಗಿರಿ ಅಡ್ಕ ಬಳಿ ತಲುಪಿದಾಗ ಪಿರ್ಯಾದಿದಾರರು ಅವರ ಸಂಬಂಧಿ ಅಶ್ವಿನ್‌ ರವರೊಂದಿಗೆ ಆಟೋರಿಕ್ಷಾದಲ್ಲಿ ಅಜ್ಜಾವರ ಪೇಟೆಗೆ ಬರುತ್ತಿರುವ ಸಮಯ ಸುಮಾರು 11:15 ಗಂಟೆಗೆ ಅಜ್ಜಾವರ ಕಡೆಗೆ ಮೋಟಾರ್‌ ಸೈಕಲೊಂದನ್ನು ಅದರ ಬಾಬ್ತು ಸವಾರ ಜಿಗ್‌ ಜಾಗ್‌ ರೀತಿಯಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ನಡೆದುಕೊಂಡು ಬರುತ್ತಿದ್ದ ಪಿರ್ಯಾದಿದಾರರ ತಂದೆಯವರಿಗೆ ಡಿಕ್ಕಿ ಉಂಟು ಮಾಡಿದ ಪರಿಣಾಮ ಪಿರ್ಯಾದಿದಾರರ ತಂದೆಯವರು ರಸ್ತೆ ಬದಿ ಬಿದ್ದಿದ್ದು, ಕೂಡಲೇ ಪಿರ್ಯಾದಿದಾರರು ಮತ್ತು ಜೊತೆಯಲ್ಲಿದ್ದ ಅಶ್ವಿನ್‌ರವರು ಹಾಗೂ ಅಪಘಾತ ಪಡಿಸಿದ ಮೋಟಾರ್‌ ಸೈಕಲ್‌ ಸವಾರ ಪಿರ್ಯಾದಿದಾರರ ತಂದೆಯವರನ್ನು ಉಪಚರಿಸಿ ನೋಡಲಾಗಿ ಅವರ ಎರಡು ಕಾಲಿಗೆ ತೀವ್ರ ಸ್ವರೂಪದ ಮತ್ತು ಹಣೆಗೆ ರಕ್ತ ಗಾಯವಾಗಿದ್ದು, ಅವರನ್ನು ಉಪಚರಿಸಿ  ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಆಟೋರಿಕ್ಷಾದಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಅಪಘಾತ ಉಂಟು ಮಾಡಿದ ಮೋಟಾರ್‌ ಸೈಕಲ್‌ ನಂಬ್ರ KA19EW5696 ಆಗಿದ್ದು, ಅದರ ಸವಾರನ ಹೆಸರು ಕೌಶಿಕ್‌ ಎಂಬುದಾಗಿ ತಿಳಿದಿದ್ದು, ಈ ಬಗ್ಗೆ ಸುಳ್ಯ ಠಾಣಾ ಪೊಲೀಸ್‌ ಠಾಣಾ ಅ. ಕ್ರ 102/2022 ಕಲಂ: 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜಯಕರ ಪೂಜಾರಿ ಪ್ರಾಯ:47 ತಂದೆ:ದಿಂ.ಮೋನಪ್ಪ ಪೂಜಾರಿ ವಾಸ:ಕಲ್ಲೇರಿ ಮನೆ ಆಲಂಕಾರು ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರವರು ದಿನಾಂಕ:14.09.2022 ರಂದು ತನ್ನ ಹೋಟೇಲ್‌ನಿಂದ ಕೆಲಸ ಮುಗಿಸಿಕೊಂಡು ರಾತ್ರಿ 07.45 ಗಂಟೆಗೆ ತನ್ನ ಮೋಟಾರ್ ಸ್ಕೂಟಿ ವಾಹನದಲ್ಲಿ ತನ್ನ ಮನೆ ಕಡೆಗೆ ಹೋಗುವರೇ ಆಲಂಕಾರು-ಕುದ್ಮಾರು ರಸ್ತೆಯಲ್ಲಿ  ಹೋಗುತಿದ್ದಾಗ  ಸಮಯ ರಾತ್ರಿ 08.00 ಗಂಟೆಗೆ ಆಲಂಕಾರು ಗ್ರಾಮದ ದುರ್ಗಾಂಬ ಮೈದಾನದ ಬಳಿ ತಲುಪಿದಾಗ ಅದೇ ಸಮಯಕ್ಕೆ ರಸ್ತೆಯ ಎಡಬದಿಯಿಂದ ಬಲಬದಿಯಲ್ಲಿರುವ  ದೃತಿ ಕಾಂಪ್ಲೇಕ್ಸ್ ಕಡೆಗೆ ವಿಶ್ವನಾಥ ಪೂಜಾರಿ ಎಂಬಾತನು ರಸ್ತೆ ದಾಟುವ ಸಮಯದಲ್ಲಿ ಆಲಂಕಾರು ಕಡೆಯಿಂದ ಕುದ್ಮಾರು ಕಡೆಗೆ ಹೋಗುತಿದ್ದ KA-02 KG 7122  ಮೊಟಾರ್‌ಸೈಕಲ್‌ ಸವಾರನಾದ ಆರೋಪಿತನು ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯ ತನದಿಂದ ಮೋಟಾರ್‌ ಸೈಕಲ್‌ ಚಲಾಯಿಸಿಕೊಂಡು ಬಂದು ರಸ್ತೆ ದಾಟುತಿದ್ದ ವ್ಯಕ್ತಿಗೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ರಸ್ತೆ ದಾಟುತ್ತಿದ್ದ ವಿಶ್ವನಾಥ ಎಂಬಾತನಿಗೆ ಎರಡು ಕಾಲುಗಳಿಗೆ ಮತ್ತು ಬೆನ್ನಿಗೆ ಗುದ್ದಿದ ಗಾಯವಾಗಿರುತ್ತದೆ ಹಾಗೂ ತಲೆಗೆ ರಕ್ತ ಗಾಯವಾಗಿರುವುದಾಗಿರುತ್ತದೆ ತಕ್ಷಣ ಪಿರ್ಯಾದುದಾರರು ಮತ್ತು ರಾಧಾಕೃಷ್ಣ ಮತ್ತು ಶಶಿಧರ ಅಜಿಲ ಎಂಬವರು ಉಪಚರಿಸಿ ಗಾಯಾಳುವನ್ನು  ಆಟೋರಿಕ್ಷಾದಲ್ಲಿ ಆಲಂಕಾರು ಲಕ್ಷ್ಮೀ ಕ್ಲೀನಿಕ್‌ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಮಾಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ 108 ಅಂಬ್ಯಲೆನ್ಸ್ ವಾಹನದಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ವೈದ್ಯರಲ್ಲಿ ಪರೀಕ್ಷೀಸಿ ನಂತರ ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ತಿಳಿಸಿದಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್‌ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 78/2022 ಕಲಂ: ಕಲಂ: 279.337  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ದಿವಾಕರ ಶಾಸ್ತ್ರಿ ,ಅಣ್ಣೆಂಗಲ ಮನೆ ಕಡೇಶ್ವಾಲ್ಯ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಕಡೇಶ್ವಾಲ್ಯ ಗ್ರಾಮದಲ್ಲಿ ಕೃಷಿ ಭೂಮಿ ಹೊಂದಿದ್ದು, ಶ್ರೀಗಂಧದ ಮರಗಳನ್ನು ನೆಟ್ಟಿರುತ್ತಾರೆ. ದಿನಾಂಕ 12.09.2022 ರಂದು ಸಂಜೆ ಸುಮಾರು 3.00 ಗಂಟೆಗೆ ನೋಡಿದಾಗ ಯಾರೋ ಕಳ್ಳರು 6 ಮರಗಳನ್ನು ಕಡಿದು ಹಾಕಿದ್ದು ಸದ್ರಿ 6 ಶ್ರೀ ಗಂಧದ ಮರಗಳ ಪೈಕಿ 3 ಶ್ರೀ ಗಂಧದ ಮರಗಳ ತಿರುಳು ಭಾಗವನ್ನು ಅಂದರೆ ಅಂದಾಜು 50 ರಿಂದ 60 ಕೆ.ಜಿ ತೂಕವಾಗುವಷ್ಟು ತಿರುಳು ಭಾಗವನ್ನು ಕೊಂಡು ಹೋಗಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಅ,ಕ್ರ 71-2022 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 2

  • ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ  ಪಾರ್ವತಿ, ಪ್ರಾಯ: 58 ವರ್ಷ, ಗಂಡ: ಕಣ್ಣನ್,  ವಾಸ: ತಳೂರು ಮನೆ, ದೇವಚಳ್ಳ ಗ್ರಾಮ, ಸುಳ್ಯ  ಎಂಬವರ ದೂರಿನಂತೆ ಪಿರ್ಯಾದಿದಾರರ ಮಗ ಪ್ರಸಾದ್ ಕುಮಾರ್ ಮತ್ತು ಸೊಸೆ ಶಿವಶಂಕರಿ ಇಬ್ಬರಿಗೂ ಸುಮಾರು ಒಂದು ತಿಂಗಳ ಹಿಂದೆ ಗಲಾಟೆ ಆಗಿದ್ದು,  ಸೊಸೆ ಶಿವಶಂಕರಿಯು ಮಗ ಮನ್ವಿತ್, ಪ್ರಾಯ: 4 ವರ್ಷ ಎಂಬಾತನನ್ನು ಗಂಡನ ಮನೆಯಲ್ಲಿ ಬಿಟ್ಟು, ತವರು ಮನೆಗೆ ಹೋಗಿದ್ದು, ದಿನಾಂಕ: 14-09-2022 ರಂದು ಸಮಯ ಸುಮಾರು 12:30 ಗಂಟೆಗೆ ಪಿರ್ಯಾದಿದಾರರು ,ಅವರ ಮಕ್ಕಳಾದ  ಶಿವಕುಮಾರ್ ಮತ್ತು ಪ್ರಸಾದ್ ಕುಮಾರ್ ರವರು ಮನೆಯೊಳಗಿರುವಾಗ ಶಿವಶಂಕರಿ ಮತ್ತು ಆಕೆಯ ತಂಗಿ ಅಶ್ವಿನಿ ಎಂಬವರು ಪಿರ್ಯಾದಿದಾರರ ಮನೆಯೊಳಗೆ ಪ್ರವೇಶಿಸಿ ಅಡುಗೆ ಕೋಣೆಯಿಂದ ಒಂದು ದೊಣ್ಣೆಯನ್ನು ಹಿಡಿದುಕೊಂಡು ಬಂದು ಪಿರ್ಯಾದಿದಾರರ ಬೆನ್ನಿಗೆ ಹೊಡೆದಿದ್ದು, ಆಗ ಪ್ರಸಾದ್ ಕುಮಾರ್ ತಡೆಯಲು ಬಂದಾಗ ಅಶ್ವಿನಿಯು ಆತನ ಕೆನ್ನೆಗೆ ಕೈಯಿಂದ ಹೊಡೆದಿದ್ದು, ಅಷ್ಟರಲ್ಲಿ ಶಿವಕುಮಾರ್ ಹೊಡೆಯಬೇಡಿ ಎಂದು ಹೇಳಿದಾಗ ಇಬ್ಬರು ಸೇರಿ ಆತನಿಗೂ ಹೊಡೆದು, ಅವ್ಯಾಚವಾಗಿ ಬೈದು,  ನಿಮ್ಮನ್ನು ಎಲ್ಲರನ್ನು ಸೇರಿ ಒಮ್ಮೆಲೆ ಕೊಂದು ಹಾಕುತ್ತೇವೆ  ಎಂದು ಜೀವ ಬೆದರಿಕೆ ಹಾಕಿ ಹೋಗಿರುವುದಾಗಿದೆ. ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣಾ ಅ.ಕ್ರ  : 89/2022 ಕಲಂ  448,324,323, 504,506 ಜೊತೆಗೆ 34 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ  ಶ್ರೀಮತಿ  ಶಂಕರಿ ಎಮ್ , ಗಂಡ:ಪ್ರಸಾದ್ ಕುಮಾರ್, ವಾಸ:  ತಳೂರು ಮನೆ, ದೇವಚಳ್ಳ    ಗ್ರಾಮ, ಸುಳ್ಯ  ಎಂಬವರ ದೂರಿನಂತೆ ಪಿರ್ಯಾದಿದಾರರು ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ತಳೂರು ಮನೆ ಎಂಬಲ್ಲಿ ವಾಸವಾಗಿದ್ದು, ಸುಮಾರು ಒಂದು ತಿಂಗಳ ಹಿಂದೆ ಪಿರ್ಯಾದಿದಾರರಿಗೂ ಮತ್ತು ಅವರ ಗಂಡ ಪ್ರಸಾದ್ ಕುಮಾರ್ ಇಬ್ಬರಿಗೂ ಗಲಾಟೆ ಆಗಿದ್ದು, ಮಗ ಮನ್ವಿತ್, ಪ್ರಾಯ: 4 ವರ್ಷ ಎಂಬಾತನನ್ನು ಗಂಡನ ಮನೆಯಲ್ಲಿ ಬಿಟ್ಟು, ತವರು ಮನೆಗೆ ಹೋಗಿದ್ದು,ದಿನಾಂಕ: 14-09-2022 ರಂದು ಸುಮಾರು 12:30 ಗಂಟೆಗೆ ಮಗ ಮನ್ವಿತ್ ನನ್ನು ನೋಡಲೆಂದು ತಂಗಿ ಅಶ್ವಿನಿಯೊಂದಿಗೆ ಪಿರ್ಯಾದಿದಾರರ ಮನೆಯ ಪಕ್ಕದಲ್ಲಿರುವ ಅವರ ಅತ್ತೆ ಪಾರ್ವತಿ (ಗಂಡನ ತಾಯಿ)ಯವರ ಮನೆಗೆ ಹೋದಾಗ, ಅತ್ತೆ ಪಾರ್ವತಿಯವರು ಪಿರ್ಯಾದಿದಾರರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿದ್ದು, ಅಷ್ಟರಲ್ಲಿ ಮನೆಯೊಳಗಿನಿಂದ ಪಿರ್ಯಾದಿದಾರರ ಗಂಡ ಪ್ರಸಾಧ್ ಕುಮಾರ್ ಬಂದು ಪಿರ್ಯಾದಿದಾರರ ತಲೆಯ ಬಲಬದಿಗೆ ಕೈಯಿಂದ ಹೊಡೆದಿದ್ದು, ಬಳಿಕ ಪಿರ್ಯಾದಿದಾರರ ಗಂಡನ ಅಣ್ಣ ಶಿವಕುಮಾರ್ ನು ಪಿರ್ಯಾದಿದಾರರಿಗೆ ಕೈಯಿಂದ ತಲೆಗೆ ಹೊಡೆದಿದ್ದು, ಇನ್ನು ಮುಂದಕ್ಕೆ ನಮ್ಮ ಮನೆಗೆ ಕಾಲಿಟ್ಟರೆ ಕೊಲ್ಲದೇ ಬಿಡುವುದಿಲ್ಲ. ಎಂದು ಜೀವ ಬೆದರಿಕೆ ಒಡ್ಡಿರುವುದಾಗಿದೆ. ಬಳಿಕ ಪಿರ್ಯಾದಿದಾರರನ್ನು ಅವರ ತಂಗಿ ಅಶ್ವಿನಿಯು ಚಿಕಿತ್ಸೆಯ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಪಿರ್ಯಾದಿದಾರರನ್ನು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣಾ ಅ.ಕ್ರ   ನಂಬ್ರ  : 90/2022 ಕಲಂ  341,323, 504,506 ಜೊತೆಗೆ 34 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬೇನಿಪ್ರಸಾದ್ ಪ್ರಾಯ:24 ವರ್ಷ ತಂದೆ:ಕೊರಗಪ್ಪ ಪೂಜಾರಿ, ಪಲ್ಲದಡಿ ಮನೆ, ಸವಣಾಲು ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಫಿರ್ಯಾದಿದಾರರ ತಂದೆಯವರು ಬೀಡಿ ಬ್ರಾಂಚ್‌ ನಲ್ಲಿ ಕೆಲಸ ಮಾಡಿಕೊಂಡಿದ್ದವರು ದಿನಾಂಕ: 14.09.2022 ರಂದು ಎಂದಿನಂತೆ ಬೀಡಿ ಬ್ರಾಂಚ್‌ಗೆ ಹೋಗಿ ಸಂಜೆ ಹಿಂತಿರುಗಿ ಬಂದು ಮನೆಯಲ್ಲಿ ಊಟ ಮಾಡಿ ಮಲಗಿದ್ದವರು ರಾತ್ರಿ ಸುಮಾರು 11.15 ಗಂಟೆಗೆ ಹೃದಯಾಘಾತದಿಂದ ಅಸ್ವಸ್ಥಗೊಂಡವರನ್ನು ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿದೆ ತಿಳಿಸಿದ್ದು. ಈ ಬಗ್ಗೆ ಬೆಳ್ತಂಗಡಿ ಠಾಣಾ ಯುಡಿಆರ್ ನಂ:  40/2022   ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-09-2022 10:59 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080