ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರವಿರಾಜ್‌ ಪ್ರಾಯ 43 ವರ್ಷ ತಂದೆ: ರಾಮಪ್ಪ ಪೂಜಾರಿ ವಾಸ: ಆರಾಧನಾ ಮನೆ, ಮೇಲಂತಬೆಟ್ಟು ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 14-12-2022 ರಂದು ಕೆಎ 21 Q 9015 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರ ಏಲಿಯಾಸ್‌ ಲಾಸ್ರಾದೋ ಎಂಬವರು ಮದ್ದಡ್ಕ ಕಡೆಯಿಂದ ಬೆಳ್ತಂಗಡಿ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ಸಂಜೆ 4.00 ಗಂಟೆಗೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಕಿನ್ನಿಗೋಳಿ ಎಂಬಲ್ಲಿ ದ್ವಿ ಚಕ್ರ ವಾಹನದ ಬಲಬದಿ ಇಂಡಿಕೇಟರ್‌ ಹಾಕಿ ದ್ವಿ ಚಕ್ರ ವಾಹನವನ್ನು ರಸ್ತೆಯ ಪೂರ್ತಿ ಬಲಬದಿಗೆ ಅಂದರೆ ರೇಷ್ಮೆ ರೋಡ್‌ ಕಡೆಗೆ ತಿರುಗಿಸುತ್ತಿದ್ದಂತೆ ವಿರುದ್ದ ದಿಕ್ಕಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಮದ್ದಡ್ಕ ಕಡೆಗೆ ಕೆಎ 70 M 1047 ನೇ ಇಕೋ ವಾಹನವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ದ್ವಿ ಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿ ಚಕ್ರ ವಾಹನ ಸವಾರ ಏಲಿಯಾಸ್‌ ಲಾಸ್ರಾದೋ ರವರು ದ್ವಿ ಚಕ್ರ ವಾಹನದೊಂದಿಗೆ ರಸ್ತೆಗೆ ಬಿದ್ದು ಎಡಕಾಲಿನ ಕೋಲು ಕಾಲಿಗೆ, ಮೂಳೆ ಮುರಿತದ ರಕ್ತಗಾಯ, ಹಣೆಗೆ, ಮುಖಕ್ಕೆ ತರಚಿ ರಕ್ತಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣಾ ಅ.ಕ್ರ: 160/2022 ಕಲಂ; 279 338,  ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಲಕ್ಷ್ಮಪ್ಪ H (59) ತಂದೆ:ದಿ.ಯಲ್ಲಪ್ಪ,ನಾಗಶ್ರೀ ನಿಲಯ, ರೆಂಜಾಳ, ಉಜಿರೆ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 15-12-2022 ರಂದು ಕೆಎ 21 Y 7085 ನೇ ಮೋಟಾರು ಸೈಕಲ್‌ನಲ್ಲಿ ಅದರ ಸವಾರ ಸಂತು ಗಂಗೂ ಲಮಾನಿ ರವರು ಸಹಸವಾರ ಮಂಜುನಾಥ ಎಂಬವರನ್ನು ಕುಳ್ಳಿರಿಸಿಕೊಂಡು ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು ರಾತ್ರಿ 9.30 ಗಂಟೆಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಕನ್ಯಾಡಿ ಎಸ್‌.ಪಿ ಲಾಡ್ಜ್‌ ಬಳಿ ತಲುಪುತ್ತಿದ್ದಂತೆ ಮೋಟಾರು ಸೈಕಲ್‌ನ್ನು ಅದರ ಸವಾರ ದುಡುಕುತನದಿಂದ ಸವಾರಿ ಮಾಡಿ ಮೋಟಾರು ಸೈಕಲ್‌ ಸವಾರ ಮತ್ತು ಸಹಸವಾರ ಮೋಟಾರು ಸೈಕಲ್‌ ಸಮೇತಾ ರಸ್ತೆಗೆ ಬಿದ್ದು ಸವಾರನಿಗೆ ಎಡಕಾಲಿನಕೋಲು ಕಾಲಿಗೆ ಗುದ್ದಿದ ರಕ್ತ ಗಾಯ, ಸಹಸವಾರ ಮಂಜುನಾಥರವರಿಗೆ ತಲೆಗೆ ಗುದ್ದಿದ ಗಾಯವಾಗಿರುತ್ತದೆ, ಗಾಯಾಳುಗಳ ಪೈಕಿ ಸವಾರ ಉಜಿರೆ ಬೆನಕ ಆಸ್ಪತ್ರೆಯಲ್ಲಿ ಮತ್ತು ಸಹಸವಾರ ಮಂಜುನಾಥ ಮಂಗಳೂರು ಜ್ಯೋತಿ ಕೆಎಮ್‌ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 161/2022 ಕಲಂ; 279 337,  ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಕಾಂತಪ್ಪ ಮೂಲ್ಯ, ಪ್ರಾಯ 62 ವರ್ಷ, ತಂದೆ: ದಿ. ಪುತ್ತ ಮೂಲ್ಯ, ವಾಸ: ಒಳತ್ತಡ್ಕ ಮನೆ, ಆರ್ಯಾಪು ಅಂಚೆ & ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 15-12-2022 ರಂದು 12:00 ಗಂಟೆಗೆ ಆರೋಪಿ ಲಾರಿ ಚಾಲಕ ಸಯ್ಯದ್‌ ಅರ್ಶಾದ್‌ ಎಂಬವರು  KA-21-C-3741 ನೇ ನೋಂದಣಿ ನಂಬ್ರದ ಲಾರಿಯನ್ನು ಸುಳ್ಯ ಕಡೆಯಿಂದ ಮಂಗಳೂರು ಕಡೆಗೆ  ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ-275 ರಲ್ಲಿ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಪರ್ಲಡ್ಕ ಬೈಪಾಸ್‌ ಜಂಕ್ಷನ್‌ ನಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಕಾಂತಪ್ಪ ಮೂಲ್ಯ ರವರು KA-21-S-7455ನೇ ನೋಂದಣಿ ನಂಬ್ರದ ಸ್ಕೂಟರನ್ನು ಪುತ್ತೂರು-ಪಾಣಾಜೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪುತ್ತೂರು ಕಡೆಯಿಂದ ಒಳತ್ತಡ್ಕ ಕಡೆಗೆ ಚಲಾಯಿಸಿಕೊಂಡು  ಹೋಗಿ ಪರ್ಲಡ್ಕ ಬೈಪಾಸ್‌ ಜಂಕ್ಷನ್‌ ಕ್ರಾಸ್‌ ಮಾಡುವ ಸಮಯ ಸ್ಕೂಟರಿಗೆ ಲಾರಿ ಅಪಘಾತವಾಗಿ, ಪಿರ್ಯಾದುದಾರರು ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು ಎಡ ಕೋಲು ಕಾಲಿಗೆ ಗುದ್ದಿದ ಒಳನೋವಿರುವ ಗಾಯ, ಬಲ ಪಾದಕ್ಕೆ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 188/2022 ಕಲಂ: 279, 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮಹಮ್ಮದ್‌ ರಾಹೀಲ್‌  (25) ತಂದೆ: ಮಹಮ್ಮದ್‌ ರಫೀಕ್ ವಾಸ: ಗಂಡಿಬಾಗಿಲು ಮನೆ, ಕೊಯಿಲಾ ಗ್ರಾಮ. ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರು ತನ್ನ ತಂದೆ,ತಾಯಿ ಹಾಗೂ ತನ್ನ ತಮ್ಮಂದಿರೊಂದಿಗೆ ವಾಸವಾಗಿದ್ದು ಮನೆ ಇಂಟೀರಿಯಲ್‌ ಡಿಸೈನ್‌ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದುದಾರರು ಮತ್ತು ಅವರ ತಂದೆಯವರು ಇಂಟಿರೀಯಲ್‌ ಡಿಸೈನ್‌ ಕೆಲಸ ಹಾಗೂ ಅಂಗಡಿ ವ್ಯಾಪಾರ ಮಾಡಿ ದುಡಿದ 2,00,000/- ಹಣವನ್ನು ಪಿರ್ಯಾದುದಾರರ ತಂದೆಯವರು ಮಲಗುವ ಕೋಣೆಯ ಕಪಾಟಿನಲ್ಲಿ 10 ದಿನಗಳ ಹಿಂದೆ ಇರಿಸಿರುತ್ತಾರೆ. ಸದ್ರಿ ಕೋಣೆಯ ಬಾಗಿಲಿನ ಕೀ ಪಿರ್ಯಾದುದಾರರ ತಾಯಿಯವರ ಬಳಿ ಇರುತ್ತದೆ. ದಿನಾಂಕ:13.12.2022 ರಂದು  ಪಿರ್ಯಾದುದಾರರ ತಂಗಿಗೆ ಪ್ರಗ್ನೇಂಟ್ ಸ್ಕ್ಯಾನಿಂಗ್‌ ಮಾಡಿಸುವರೇ ಪಿರ್ಯಾದುದಾರರು ಮತ್ತು ಅವರ ತಾಯಿ  ಪುತ್ತೂರು ಧನ್ವಂತರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ. ತಂಗಿಯ ಆರೈಕೆಯಲ್ಲಿ ಪಿರ್ಯಾದುದಾರರ ತಾಯಿ ಆಸ್ಪತ್ರೆಯಲ್ಲಿರುತ್ತಾರೆ ನಂತರ ಪಿರ್ಯಾದುದಾರರ ತಾಯಿ ಪಿರ್ಯಾದುದಾರರ ತಂದೆಯವರ ಮಲಗುವ ಕೋಣೆಯ ರೂಮಿನ ಬಾಗಿಲಿನ ಕೀಯನ್ನು ಕೊಟ್ಟು ರೂಮಿನ ಕಪಾಟಿನಲ್ಲಿದ್ದ ಹಣದಲ್ಲಿ 5000/-ತೆಗೆದುಕೊಂಡಿದ್ದು ಉಳಿದ ಹಣ ರೂಮಿನಲ್ಲಿಯೇ ಇದೆ ಎಂದು ತಿಳಿಸಿ ಬಳಿಕ ತಂಗಿಯ ಓಡವೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಇಡು ಎಂದು ಹೇಳಿ ಕಳುಹಿಸಿರುತ್ತಾರೆ ನಂತರ ಪಿರ್ಯಾದುದಾರು ಆಸ್ಪತ್ರೆಯಿಂದ ರಾತ್ರಿ 11.30 ಗಂಟೆಗೆ ಹೊರಟು ಮನೆಗೆ ಬಂದಾಗ ಮನೆಯಲ್ಲಿ ಪಿರ್ಯಾದುದಾರರ  ತಮ್ಮಂದಿರು ಮತ್ತು ದೊಡ್ಡಪ್ಪ ಸಿದ್ದಿಕ್‌  ಮತ್ತು ಮತ್ತೂಬ್ಬ ಸಂಬಂದಿಕರಾದ ಮಹಮ್ಮದ್‌ ಝುನೈದ್  ಇರುತ್ತಾರೆ  ಪಿರ್ಯಾದುದಾರರು ಆಸ್ಪತ್ರೆಯಲ್ಲಿ ನನ್ನ ತಾಯಿಯವರು ಕೊಟ್ಟ ಒಡವೆಗಳನ್ನು ತನ್ನ ರೂಮಿನಲ್ಲಿ ಇರಿಸಿ ಬಳಿಕ ಮಲಗಿರುತ್ತೇನೆ ರಾತ್ರಿ 2.30 ಗಂಟೆಯವರೆಗೆ ಮನೆಯಲ್ಲಿದ್ದ ಪಿರ್ಯಾದುದಾರರ ತಮ್ಮಂದಿರು ಮತ್ತು ದೊಡ್ಡಪ್ಪ ಹಾಗೂ ಮಹಮ್ಮದ್ ಝುನೈದ್  ಮೊಬೈಲ್‌ನಲ್ಲಿ ಫುಟ್ಬಾಲ್‌ ಮ್ಯಾಚ್‌ ನೋಡಿಕೊಂಡಿರುತ್ತಾರೆ. ಬೆಳಗ್ಗೆ 05.30 ಗಂಟೆಗೆ ಪಿರ್ಯಾದುದಾರರು ಎದ್ದು ನೋಡಿದಾಗ ಮನೆಯ ಬಾಗಿಲು ತೆರೆದಿದ್ದು ಹಾಗೂ ತಂದೆಯವರು ಮಲಗುವ ಕೋಣೆಯ ಬಾಗಿಲು ತೆರೆದಿರುತ್ತದೆ ಸದ್ರಿ ರೂಮಿನ ಕಪಾಟಿನಲ್ಲಿದ್ದ 2,00,000/-ಹಣವನ್ನು ಯಾರೋ ಕಳ್ಳರು ಕಳವು ಮಾಡಿರುವುದಾಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 104/2022 ಕಲಂ: ಕಲಂ:454.457.380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಇಸಾಕ್, ಪ್ರಾಯ 43 ವರ್ಷ ತಂದೆ: ದಿ|| ಕುಂಞಮೋನು, ವಾಸ: ಸಾರಾ ಪ್ಲಾಟ್, ತಲಪಾಡಿ, ಬಿ-ಮೂಡ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಮೇಸ್ತ್ರಿ ಕೆಲಸ ಮಾಡುತ್ತಿದ್ದು, ಮೂಡಬಿದ್ರೆ ಗಂಟಲ್ ಕಟ್ಟೆಯಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು ಬೆಳಿಗ್ಗೆ ಬಿ.ಸಿ.ರೋಡಿನಿಂದ ಮಹಾಗಣೇಶ್ ಬಸ್ಸಿನಲ್ಲಿ ಮೂಡಬಿದ್ರೆಗೆ ಪ್ರಯಾಣಿಸುತ್ತಿದ್ದು 2 ದಿನಗಳ ಹಿಂದೆ ಬೆಳಿಗ್ಗೆ ಬಿ.ಸಿ.ರೋಡಿನಿಂದ ಮೂಡಬಿದ್ರೆಗೆ ಹೋಗುತ್ತಿದ್ದ ಸಮಯ ಬಸ್ಸಿನಲ್ಲಿ ಪ್ರಯಾಣಿಕರು ಇದ್ದುದರಿಂದ ಶಾಲಾ ವಿದ್ಯಾರ್ಥಿನಿಯೊಬ್ಬಳು ನೀಡಿದ ಅವಳ ಬ್ಯಾಗನ್ನು ಹಿಡಿದುಕೊಂಡಿದ್ದು, ಅಂತೆಯೇ ದಿನಾಂಕ 14-12-2022 ರಂದು ಮೂಡಬಿದ್ರೆಯಿಂದ ಗಂಟಲ್ ಕಟ್ಟೆಗೆ ಹೋಗಲು ಬಿ.ಸಿ.ರೋಡಿನಿಂದ ಬೆಳಿಗ್ಗೆ 7:25 ಗಂಟೆಗೆ ಮಹಾ ಗಣೇಶ್ ಬಸ್ಸಿನಲ್ಲಿ ಹೋಗುತ್ತಾ ಬಸ್ಸು ಬೆಳಿಗ್ಗೆ 8:10 ಗಂಟೆಗೆ ಕುದ್ಕೋಳಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಬಸ್ಸಿನಲ್ಲಿ ಕುಳಿತುಕೊಂಡಿದ್ದ ಒಬ್ಬಾತನು  ಪಿರ್ಯಾದಿದಾರರು ಕುಳಿತಿದ್ದಲ್ಲಿಗೆ ಬಂದು ಅವ್ಯಾಚವಾಗಿ ಬೈದು ಬಸ್ಸಿನಿಂದ ಹೊರಗೆ ಕಳುಹಿಸಲು ಪ್ರಯತ್ನಿಸಿದ್ದು ಆಗ ಬಸ್ಸು ನಿಂತಾಗ ಇಬ್ಬರು ಬಸ್ಸಿಗೆ ಹತ್ತಿ ಬಸ್ಸಿನಿಂದ ಆ ಮೂವರು ಸೇರಿ ಪಿರ್ಯಾದಿದಾರರಿಗೆ ಹಲ್ಲೆ ನಡೆಸಿ ರಿಕ್ಷಾ ಪಾರ್ಕಿನಿಂದ ಬಂದ ರಿಕ್ಷಾದಲ್ಲಿ ಕುಳ್ಳಿರಿಸಿ ರಾಯಿ ಎಂಬಲ್ಲಿಗೆ ಕರೆದುಕೊಂಡು ಹೋಗಿ ರಸ್ತೆ ಬದಿಯಲ್ಲಿ ಒಂದು ಗೋಳಿ ಮರದ ಕೆಳಗೆ  ರಿಕ್ಷಾವನ್ನು ನಿಲ್ಲಿಸಿ ಕಾಡು ಮರದ ದೊಣ್ಣೆಯನ್ನು ತೆಗೆದು ಮೂವರು ಸೇರಿ ಬೆನ್ನಿಗೆ, ಎಡಕೈಗೆ, ಭುಜಕ್ಕೆ , ಎರಡೂ ಕಾಲಿನ ತೊಡೆಗೆ, ಹೊಟ್ಟೆಗೆ ಹೊಡೆದು, ನೀನು ಹುಡುಗಿಯರಿಗೆ ತೊಂದರೆ ಕೊಡುತ್ತೀಯಾ ಇನ್ನು ಮುಂದೆ ಈ ಬಸ್ಸಿನಲ್ಲಿ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಒಬ್ಬಾತನು ಕಣ್ಣಿಗೆ ಗುದ್ದಿ ಬೈದಿದ್ದು ಜನರು ಸೇರುವುದನ್ನು ಕಂಡು ಓಡಿ ಹೋಗಿರುತ್ತಾರೆ. ಔಷಧಿ ಪಡೆದು ಮನೆಗೆ ಬಂದಿದ್ದು ರಾತ್ರಿ ನೋವು ಜಾಸ್ತಿಯಾದುದರಿಂದ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ  ಅ.ಕ್ರ  93/2022 ಕಲಂ 504,506,323,324,342,352 ಜೊತೆಗೆ 34 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಇಸಾಕ್‌ ಪ್ರಾಯ 48 ವಷ, ತಂದೆ; ಹುಸೈನ್‌, ವಾಸ: ಹಳೆಗೇಟು ಮನೆ, ಉಪ್ಪಿನಂಗಡಿ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಪಂಚಾಯತ್ ನೌಕರರಾಗಿದ್ದು  ದಿನಾಂಕ: 15.12.2022 ರಂದು 18:30 ಗಂಟೆಯ ಸಮಯಕ್ಕೆ ದೂರವಾಣಿ ಮೂಲಕ ಸಾರ್ವಜನಿಕರು ಕರೆ ಮಾಡಿ ಪುತ್ತೂರು ತಾಲೂಕು ಉಪ್ಪಿನಂಗಡಿ  ಗ್ರಾಮದ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತು ಕೊಳ್ಳುವ ಸ್ಥಳದಲ್ಲಿ ಸುಮಾರು 40-45 ವರ್ಷ ಪ್ರಾಯದ ಅಪರಿಚಿತೆ ಹೆಂಗಸಿನ ಮೃತದೇಹ ಇರುವುದಾಗಿ ತಿಳಿಸಿದರು. ಅದರಂತೆ ಪಿರ್ಯಾದಿದಾರರು ಸ್ಥಳಕ್ಕೆ ಹೋದಾಗ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದಲ್ಲಿ ನೆಲದ ಮೇಲೆ ಅಪರಿಚಿತ ಹೆಂಗಸಿನ ಮೃತದೇಹ ಇರುವುದು ಕಂಡು ಬರುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಯುಡಿಆರ್ ನಂಬ್ರ 34/2022 ಕಲಂ:174 CRPC  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-12-2022 10:35 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080