ಅಭಿಪ್ರಾಯ / ಸಲಹೆಗಳು

ಇತರೆ ಪ್ರಕರಣ: 2

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅಬ್ದುಲ್ ಬಸೀರ್ ತಂದೆ ಅಬ್ದುಲ್ ಖಾದರ್, ವಾಸ: ನಂದಾವರ ಮನೆ, ಸಜೀಪ ಮುನ್ನೂರು ಗ್ರಾಮ, ಬಂಟ್ವಾಳತಾಲೂಕು ಎಂಬವರ ದೂರಿನಂತೆ ಅವರ ಮಗ ಹಿದಾಯತುಲ್ಲಾ (ಪ್ರಾಯ 30 ವರ್ಷ) ಎಂಬವರು ಪುತ್ತೂರಿನ ರಾಜಧಾನಿ ಚಿನ್ನದ ಮಳಿಗೆಯಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ : 13.09.2021 ರಂದು ಸಜಿಪ ಮುನ್ನೂರು ಗ್ರಾಮದ ನಂದಾವರದ ತನ್ನ ಮನೆಯಿಂದ ಕೆಲಸಕ್ಕೆಂದು ಹೊರಟು ಹೋದವನು  ವಾಪಾಸು ಮನೆಗೆ ಬಾರದೇಯಿದ್ದು, ದಿನಾಂಕ : 13.09.2021 ರಂದು ರಾತ್ರಿ 8.00 ಗಂಟೆಯ ಬಳಿಕ ಯಾರ ಸಂಪರ್ಕಕ್ಕೂ ಸಿಗದೇ ಕಾಣೆಯಾಗಿರುವುದಾಗಿದೆ.  ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಅಕ್ರ:108/2021 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ :ಪಿರ್ಯಾದಿದಾರರಾದ ವಿದ್ಯಾ, ಪ್ರಾಯ: 36 ವರ್ಷ, ಗಂಡ: ದಿ. ಲೋಕೇಶ್ ಗೌಡ, ವಾಸ: ಬಪ್ಪಳಿಗೆ ಗುಂಪಕಲ್ಲು ಮನೆ,ಪುತ್ತೂರು ಕಸಬಾ ಗ್ರಾಮ, ಪುತ್ತೂರು ತಾಲೂಕು  ಎಂಬವರ ದೂರಿನಂತೆ, ಸದ್ರಿಯವರ ತಮ್ಮ 32 ವರ್ಷ ಪ್ರಾಯದ ವಿನೋದ್‌ರವರು ಬಲ್ನಾಡು ಗ್ರಾಮದ ಉಜ್ರುಪಾದೆಯಲ್ಲಿ ವಾಸವಾಗಿದ್ದು, ಕಳೆದ ಒಂದು ವಾರದಿಂದ ಫಿರ್ಯಾದಿದಾರರ ತಮ್ಮ ವಿನೋದ್‌ರವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಯಾವುದೇ ದೂರವಾಣಿ ಕರೆಯನ್ನು ಸ್ವೀಕರಿಸದೇ ಇದ್ದು, ಈ ಬಗ್ಗೆ ಸಂಶಯಗೊಂಡ ಫಿರ್ಯಾದಿದಾರರು ಉಜ್ರುಪಾದೆಯ ವಿನೊಧ್‌ರವರ ಮನೆಗೆ ತೆರಳಿ ನೋಡಿದಾಗ ಮನೆಗೆ ಬೀಗ ಹಾಕಿದ್ದು, ಈ ಬಗ್ಗೆ ನೆರೆಕರೆಯವರಲ್ಲಿ ವಿಚಾರಿಸಿದಾಗ ವಿನೋದ್‌ರವರು ಮನೆಗೆ ಬಂದಿರುವುದಿಲ್ಲವಾಗಿದ್ದು ಇಲ್ಲಿಯವರೆಗೆ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ ಅಕ್ರ:82/2021, ಕಲo: ಮನುಷ್ಯ ಕಾಣೆ ಐಪಿಸಿ    ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ   ಹೇಮಾವತಿ ಪ್ರಾಯ 56 ಗಂಡ ಡೋಂಬಯ್ಯ  ಗೌಡ ಬಂಟ್ವಾಳ ತಾಲೂಕು ನಾವೂರು  ಗ್ರಾಮ ಐಕುರಿ ಎಂಬವರ ದೂರಿನಂತೆ ದಿನಾಂಕ 15.09.2021 ರಂದು ಬೆಳಿಗ್ಗೆ 10.00 ಗಂಟೆಗೆ ಮನೆಯಿಂದ  ಕೆಲಸಕ್ಕೆಂದು ಹೊರಗೆ ಹೋದವರು ಮಧ್ಯಾಹ್ನ ಆದರೂ  ಊಟಕ್ಕೆ ಬಾರದೇ ಇದ್ದು ಸುಮಾರು ಮಧ್ಯಾಹ್ನ 2.00 ಗಂಟೆಗೆ ನೆರೆಯ ಜ್ಯೋತಿಕಿರಣ ರವರು ಕರೆ ಮಾಡಿ ನಿಮ್ಮ ಗಂಡ ನಮ್ಮ ಅಡಿಕೆ ತೋಟದಲ್ಲಿ  ಅಡಿಕೆ ಮರದಿಮದ ಬಿದ್ದುಕೊಂಡಿರುತ್ತಾರೆ ಎಂದು ತಿಳಿಸಿದ್ದು ಕೂಡಲೇ ಪಿರ್ಯಾದುದಾರರು ಬಂದು ನೋಡಿದಾಗ ಜ್ಯೋತಿಕಿರಣ ರವರ ಅಡಿಕೆ ತೋಟದಲ್ಲಿ ಒಂದು ಮರಕ್ಕೆ  ಹತ್ತಿ  ಅಡಿಕೆ ಮರವು   ಮಧ್ಯದಲ್ಲಿ ತುಂಡಾಗಿ  ಗಂಡ ಡೋಂಬಯ್ಯ ರವರು ನೆಲಕ್ಕೆ ಬಿದ್ದಿದ್ದು ಪಿರ್ಯಾದುದಾರರ ಗಂಡ ಅಡಿಕೆ ಮರ  ಹತ್ತಿ ಅಡಿಕೆ ತೆಗೆಯುತ್ತಿದ್ದ ಸಮಯ ಅಡಿಕೆ ಮರವು ಆಕಸ್ಮಿಕವಾಗಿ  ತುಂಡಾಗಿ ಅಡಿಕೆ ಮರ ಸಮೇತ ನೆಲಕ್ಕೆ ಬಿದ್ದು ಅವರಿಗಾದ ತೀವ್ರ ಒಳಗಾಯದಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯು ಡಿ ಆರ್ ನಂ 35/2021 ಕಲಂ 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ :ಪಿರ್ಯಾದಿದಾರರಾದ ವಿಶ್ವನಾಥ (48) ತಂದೆ: ಸಂಜೀವ ಪೂಜಾರಿ, ವಾಸ: ಬಲವುದಕಲ್ಲು ಮನೆ, ದರೆಗುಡ್ಡೆ ಗ್ರಾಮ  ಮೂಡಬಿದ್ರೆ ತಾಲೂಕು ಎಂಬವರ ದೂರಿನಂತೆ  ಅಕ್ಕ ಶ್ರೀಮತಿ ಶೋಭಾಳನ್ನು ಸುಮಾರು 25 ವರ್ಷದ ಹಿಂದೆ ಕೊಕ್ರಾಡಿಯ ದರ್ಖಾಸು ಮನೆ ವಾಸಿ ರಮೇಶ್ ಎಂಬುವರಿಗೆ ಹಿರಿಯರ ಪದ್ದತಿಯಂತೆ ಮದುವೆ ಮಾಡಿಕೊಟ್ಟಿದ್ದು,ಅವರಿಗೆ ಕಾವ್ಯಶ್ರೀ (22) ಮತ್ತು ಭವ್ಯಶ್ರೀ(21) ಎಂಬ ಎರಡು ಹೆಣ್ಣು ಮಕ್ಕಳಿರುವುದಾಗಿದೆ. ಶೋಭಾಳಿಗೆ ಸುಮಾರು ಒಂದು ವರ್ಷದಿಂದ ಮಾನಸಿಕ ಖಾಯಿಲೆ ಇದ್ದು, ದಿನಾಂಕ: 07.09.2021 ರಂದು ಬೆಳಿಗ್ಗೆ 06.00 ಗಂಟೆಗೆ ಪಿರ್ಯಾದಿದಾರರ  ಅಕ್ಕ ಶ್ರೀಮತಿ ಶೋಭಾ (49) ಎಂಬುವರು ಅವರ ಗಂಡನ ಮನೆಯಲ್ಲಿ ಅಡುಗೆ ಮಾಡಲು ಒಲೆಗೆ ಡಿಸೇಲ್ ಹಾಕಿ ಬೆಂಕಿ ಹಚ್ಚುತ್ತಿರುವಾಗ   ಆಕಸ್ಮಿಕವಾಗಿ ಬೆಂಕಿ ಅವಳ ಮೈಗೆ ತಾಗಿ  ಸುಟ್ಟು ಗಾಯಗೊಂಡವರನ್ನು ಅವರ ಗಂಡ ರಮೇಶ್ ರವರು ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ  ಚಿಕಿತ್ಸೆ  ಬಗ್ಗೆ ಅದೇ ದಿನ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದು ಅಲ್ಲಿ  ಅವಳು ಚಿಕಿತ್ಸೆಯಲ್ಲಿರುತ್ತಾ  ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ;15.09.2021 ರಂದು ಬೆಳಿಗ್ಗೆ 07.05 ಗಂಟೆಗೆ ಮೃತಪಟ್ಟಿರುದಾಗಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣಾ ಯು ಡಿಆರ್ ನಂಬ್ರ: 23-2021 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 16-09-2021 11:49 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080