ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜಯಾನಂದ ಪ್ರಾಯ: 40ವರ್ಷ ತಂದೆ: ದಿ|| ಕರಿಯಪ್ಪ ಮೂಲ್ಯ  ವಾಸ : ಕೂಡುಮುನ್ನೂರು ಮನೆ, ಸಜಿಪಮೂಡ  ಗ್ರಾಮ, ನಗ್ರಿ ಅಂಚೆ  ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು  ದಿನಾಂಕ 15-02-2023 ರಂದು ಕಲ್ಲಡ್ಕ ದಲ್ಲಿ ಕೆಲಸ ಮುಗಿಸಿಕೊಂಡು ತನ್ನ ಬಾಬ್ತು KA-19-EL-4928 ನೇ ಮೊಟಾರ್ ಸೈಕಲ್ ನಲ್ಲಿ ಮೇಲ್ಕಾರ್ ಮಾರ್ಗವಾಗಿ ಬಂಟ್ವಾಳ ತಾಲೂಕು ಸಜೀಪ ಮೂಡ ಗ್ರಾಮದ ಕೋಯಮಜಲು ಎಂಬಲ್ಲಿಗೆ ತಲುಪಿದಾಗ ಸಮಯ ಸುಮಾರು ಸಂಜೆ 17:25 ಗಂಟೆಗೆ ಬೇಂಕ್ಯ ಕಡೆಯಿಂದ ಮೆಲ್ಕಾರ್ ಕಡೆಗೆ ಸರಕು ಸಾಗಾಟ ಮಾಡುವ ಆಟೋರಿಕ್ಷಾವೊಂದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷತನದಿಂದ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೊಟಾರ್ ಸೈಕಲಿಗೆ ಎದುರಿನಿಂದ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸಮೇತ ಮೋಟಾರ್ ಸವಾರ ಎಸೆಯಲ್ಪಟ್ಟು ರಸ್ತೆಗೆ ಬಿದ್ದ ಪರಿಣಾಮ ಬಲ ಕೈ ಮಣಿಗಂಟಿಗೆ ಗುದ್ದಿದ ರಕ್ತ ಗಾಯವಾಗಿರುತದೆ, ಕೂಡಲೇ ಗಾಯಗೊಂಡ ಪಿರ್ಯಾದಿದಾರರನ್ನು ಲೋಹಿತಾಕ್ಷ ಎಂಬುವರು ವಾಹನವೊಂದರಲ್ಲಿ ಬಿ ಸಿ ರೋಡ್ ದೀಪಕ್ ಪಿಂಟೋ ಕ್ಲಿನಿಕ್ ಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಸಲಹೆ ನೀಡಿರುತ್ತಾರೆ..ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 31/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಯಾಕೂಬ್‌ ಖಾನ್, ಪ್ರಾಯ 66 ವರ್ಷ, ತಂದೆ: ದಿ|| ಸಾಬ್‌ ಜಾನ್‌ ಖಾನ್‌, ವಾಸ:  ಗೌಸಿಯಾ ಮಂಝಿಲ್‌, ಬಪ್ಪಳಿಗೆ, ಪುತ್ತೂರು ಕಸಬಾ ಗ್ರಾಮ,  ಪುತ್ತೂರು ಎಂಬವರ ದೂರಿನಂತೆ ದಿನಾಂಕ 16-02-2023 ರಂದು 12:30 ಗಂಟೆಗೆ ಆರೋಪಿತೆ ಸ್ಕೂಟರ್ ಸವಾರೆ ವಿನಯಾ ರಾವ್ ಎಂಬವರು KA-21-U-1092 ನೇ ನೋಂದಣಿ ನಂಬ್ರದ ಸ್ಕೂಟರನ್ನು ಬಲ್ನಾಡು-ಪುತ್ತೂರು ಸಾರ್ವಜನಿಕ ರಸ್ತೆಯಲ್ಲಿ  ಬಲ್ನಾಡು ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಬಪ್ಪಳಿಗೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಯಾಕೂಬ್ ಖಾನ್ ರವರು ಸವಾರರಾಗಿ ಕರ್ಕುಂಜ ಕಡೆಯಿಂದ ಬಪ್ಪಳಿಗೆ ಕಡೆಗೆ ಚಲಾಯಿಸಿಕೊಂಡು ಹೋಗಿ, ರಸ್ತೆಯ ಬಲಭಾಗದಲ್ಲಿರುವ  ಮನೆಯ ಕಡೆಗೆ  ಹೋಗಲು ಇಂಡಿಕೇಟರ್ ಹಾಕಿ ಚಲಾಯಿಸುತ್ತಿದ್ದ KA-21-W-2521 ನೇ  ನೋಂದಣಿ ನಂಬ್ರದ ಸ್ಕೂಟರಿಗೆ ಆರೋಪಿ ಸ್ಕೂಟರ್ ಹಿಂದಿನಿಂದ ಅಪಘಾತವಾಗಿ, ಪಿರ್ಯಾದುದಾರರು ಸ್ಕೂಟರಿನೊಂದಿಗೆ ರಸ್ತೆಗೆ ಬಿದ್ದು,  ಪಿರ್ಯಾದುದಾರರಿಗೆ ಸೊಂಟದ ಬಲಭಾಗಕ್ಕೆ ಗುದ್ದಿದ ಒಳನೋವಾಗಿದ್ದು, ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 32/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಉಪ್ಪಿನಂಗಡಿ ಪೊಲೀಸ್ ಠಾಣೆ:  ದಿನಾಂಕ: 15.02.2023 ರಂದು ಬಸ್ಸು ನಂಬ್ರ: ಕೆಎ-51.ಡಿ-6799 ನೇಯದರಲ್ಲಿ 26 ಜನ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು, ಸದ್ರಿ ಬಸ್ಸಿನಲ್ಲಿ  ಚಾಲಕರಾಗಿ ದಿನೇಶ್  ಹಾಗೂ ಪ್ರಕರಣದ ದೂರುದಾರರಾದ ವಾಸು  .ಎಂ. ಪ್ರಾಯ: 27 ವರ್ಷ ತಂದೆ: ಭತ್ಯ ವಾಸ: ಉತ್ತರ ಕೊಪ್ಪ, ಕಕ್ಕೆ ಮನೆ ಮತ್ತು ಗ್ರಾಮ ಭಟ್ಕಳ ತಾಲೂಕು , ಉತ್ತರ ಕನ್ನಡ ಜಿಲ್ಲೆ ರವರು ಕ್ಲೀನರ್ ಆಗಿ ರಾತ್ರಿ 8: 15 ಗಂಟೆಗೆ ಬೆಂಗಳೂರಿನಿಂದ ಭಟ್ಕಳಕ್ಕೆ ಹೋಗುವರೇ ಗುಂಡ್ಯ ಮಾರ್ಗವಾಗಿ  ಪ್ರಯಾಣಿಸುತ್ತಾ ದಿನಾಂಕ: 16.02.2023 ರಂದು ಬೆಳಗಿನ ಜಾವ ಸುಮಾರು 4:00 ಗಂಟೆಗೆ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ ತಲುಪಿದಾಗ ಬಸ್ಸಿನ ಚಾಲಕ ಬಸ್ಸನ್ನು ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ  ಚಾಲಕನ ನಿಯಂತ್ರಣ ತಪ್ಪಿ ಬಸ್ಸು ರಸ್ತೆಯ ಎಡ ಬದಿಗೆ ಮಗುಚಿ ಬಿತ್ತು .ಬಸ್ಸು ಮಗುಚಿ ಬಿದ್ದ ಪರಿಣಾಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಗುದ್ದಿದ ಹಾಗೂ ತರಚಿದ ರಕ್ತ ಗಾಯವಾಗಿರುತ್ತದೆ.  ಗಾಯಗೊಂಡ ಪ್ರಯಾಣಿಕರನ್ನು ಅಲ್ಲಿ ಸೇರಿದ ಸಾರ್ವಜನಿಕರು ಅಂಬ್ಯುಲೆನ್ಸ್‌ ಹಾಗೂ ಇತರ ವಾಹನಗಳಲ್ಲಿ   ಚಿಕಿತ್ಸೆ ಬಗ್ಗೆ ಅಸ್ಪತ್ರೆಗಳಿಗೆ ಕಳುಹಿಸಿಕೊಟ್ಟಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 13/2023 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

 

 

ಕಳವು ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಬ್ದುಲ್ ಕರೀಂ(49) ವರ್ಷ ತಂದೆ ಟಿ ಹೈದರ್, ಮದಕ ಮನೆ,ತುಂಬೆ ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾಧಿದಾರರು ಬಂಟ್ವಾಳ ತಾಲೂಕು, ತುಂಬೆ ಗ್ರಾಮದ,  ವಳವೂರು  ಎಂಬಲ್ಲಿರುವ   ಇನ್ ಲ್ಯಾಂಡ್ ರಿಯಲ್ ಎಸ್ಟೇಟ್  ನ ಮಾಲಕರಾದ ಸಿರಾಜ್ ಅಹಮ್ಮದ್ ರವರ ಬಾಬ್ತು ಒಟ್ಟು 7  ಎಕ್ರೆ ಕೃಷಿ ಜಾಗವನ್ನು  ನೋಡಿಕೊಳ್ಳುವ ಕೆಲಸವನ್ನು ಮಾಡಿಕೊಂಡಿದ್ದು ಪಿರ್ಯಾದಿದಾರರು . ದಿನಾ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ  10 ಗಂಟೆಯ ವರೆಗೆ  ಕೃಷಿ ಜಾಗವನ್ನು ನೋಡಿಕೊಂಡು ಅಲ್ಲಿಯೇ  ಇರುತ್ತಿದ್ದರು. ಪಿರ್ಯಾದಿದಾರರು ನೋಡಿಕೊಳ್ಳುತ್ತಿರುವ .   ಕೃಷಿ ಜಾಗದಲ್ಲಿ ಅಡಿಕೆ,  ತೆಂಗು,  ಬಾಳೆ ಹಾಗು   ರಂಬೂಟಾನ್  ಪ್ರೂಟ್ಸ್  ಗಿಡಗಳು ಇದ್ದು .   ಕೃಷಿ ಜಾಗದಲ್ಲಿ ಬೆಳೆದ ಅಡಿಕೆ ಗಿಡಗಳಿಂದ ತೆಗೆದ ಸಿಪ್ಪೆ ಸಹಿತ  ಅಡಿಕೆಯನ್ನು  ಒಣಗಿಸಿ  ಪ್ಲಾಸ್ಟಿಕ್  ಚೀಲಗಳಲ್ಲಿ ಮಾರಾಟಕ್ಕಾಗಿ  ತುಂಬಿಟ್ಟಿದ್ದು  ಅಂತೆಯೇ ಒಟ್ಟು 21  ಪ್ಲಾಸ್ಟಿಕ್  ಚೀಲಗಳಲ್ಲಿ  ತಲಾ 30 ಕೆ.ಜಿ. ತೂಕದ ಸಿಪ್ಪೆ ಸಹಿತ ಅಡಿಕೆಯನ್ನು ತೋಟದ ಪಕ್ಕದ  ಎತ್ತರದ  ಖಾಲಿ ಜಾಗದಲ್ಲಿ   ಇಟ್ಟಿದ್ದರು     ದಿನಾಂಕ: 12-02-2023  ರಂದು ರಾತ್ರಿ 10 ಗಂಟೆಯವರೆಗೆ   ತೋಟದಲ್ಲಿ, ಕೆಲಸ ಮಾಡಿ ಬಳಿಕ  ಮನೆಗೆ ಹೋಗಿದ್ದು   ದಿನಾಂಕ: 13-02-2023 ರಂದು   ಎಂದಿನಂತೆ   ಬೆಳಿಗ್ಗೆ  7-00 ಗಂಟೆಗೆ   ಪಿರ್ಯಾದುದಾರರು ಕೆಲಸಕ್ಕೆ ಹೋದಾಗ ಸಿರಾಜ್ ಅಹಮ್ಮದ್ ರವರ ಬಾಬ್ತು ಕೃಷಿ ಜಾಗದಲ್ಲಿ ಮಾರಾಟಕ್ಕಾಗಿ ದಾಸ್ತಾನಿರಿಸಿದ ಸಿಪ್ಪೆ ಸಹಿತ ಅಡಿಕೆ ತುಂಬಿದ್ದ  ಒಟ್ಟು 21 ಪ್ಲಾಸ್ಟಿಕ್ ಚೀಲಗಳು ಇಲ್ಲದೇ   ಇದ್ದು  ಅವುಗಳನ್ನು ಯಾರೋ ಕಳ್ಳರು ದಿನಾಂಕ: 12-02-2023  ರಂದು ರಾತ್ರಿ 10 ಗಂಟೆಯಿಂದ  ದಿನಾಂಕ: 13-02-2023 ರಂದು  ಬೆಳಿಗ್ಗೆ  7-00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು  ಕಳವು ಮಾಡಿರುವುದಾಗಿದೆ.  ಕಳವು ಆಗಿರುವ ಸಿಪ್ಪೆ ಸಹಿತ  ಅಡಿಕೆಯ  ಒಟ್ಟು ತೂಕ  400 ಕೆ.ಜಿ ಆಗಿದ್ದು,  ಅಂದಾಜು ಮೌಲ್ಯ ರೂ.90,000/-  ಆಗಬಹುದು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ  ಅ.ಕ್ರ  13-2023 ಕಲಂ 379 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಾಣೆ ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ತಿಮ್ಮೇಶ್ ಬಿ.ಜಿ (35) ತಂದೆ: ಗೂರಪ್ಪ ಬಿ ವಾಸ: ಅಡೆಪಿಲ ಅಡ್ಡರಸ್ತೆ, ಶಂಬೂರು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಮತ್ತು ಅವರ ತಮ್ಮ ಯಲ್ಲಪ್ಪ ಕೂಲಿ ಕೆಲಸ ಮಾಡಿಕೊಂಡಿದ್ದು, ಕಳೆದು ಒಂದು ತಿಂಗಳಿನಿಂದ ಶಂಬೂರುನಲ್ಲಿ ನೆಲೆಸಿರುತ್ತಾರೆ. ಯಲ್ಲಪ್ಪನು ದಿನಾಂಕ:07-02-2023 ರಂದು ಸಂಜೆ 7.30 ಗಂಟೆಗೆ ಧರ್ಮಸ್ಥಳಕ್ಕೆ ಹೋಗಿ ಊರಿಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದು, ಆತನನ್ನು ನಾಗರಾಜ್ ಎಂಬವರು ಬಿಸಿರೋಡ್ ಗೆ ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದು, ಅಲ್ಲಿ ಧರ್ಮಸ್ಥಳ ಬಸ್ ಮಿಸ್ ಆಗಿದ್ದು, ಬಳಿಕ ಆಪೆರಿಕ್ಷಾದಲ್ಲಿ ಗುರುವಾಯಣಕೆರೆ ತನಕ ಹೋಗಿ ಅಲ್ಲಿಂದ ಬಸ್ ನಲ್ಲಿ ಧರ್ಮಸ್ಥಳಕ್ಕೆ ಹೋಗಿ ಅಲ್ಲಿಂದ ಊರಿಗೆ ಹೋಗುವುದಾಗಿ ನಾಗರಾಜ್ ರವರಿಗೆ ಪಿರ್ಯಾದಿದಾರರ ತಮ್ಮ ತಿಳಿಸಿರುತ್ತಾರೆ. ಆದರೆ ಆತನ ಮೊಬೈಲ್ ಬಿಸಿರೋಡ್ ನಿಂದಲೇ ಸ್ವಿಚ್ ಆಫ್ ಆಗಿದ್ದು, ಮರುದಿನ ಊರಿಗೆ ಕರೆ ಮಾಡಿ ವಿಚಾರಿಸಿದಾಗ ಆತನು ಊರಿಗೆ ಹೋಗಿರುವುದಿಲ್ಲ. ಯಲ್ಲಪ್ಪನನ್ನು ಈ ದಿನದವರೆಗೆ ಎಲ್ಲಾ ಕಡೆ ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗಿರುವುದಿಲ್ಲ.ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ ನಂ:11/2023 ಕಲಂ :ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 2

  • ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ: 16-02-2023 ರಂದು ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ ನಂ:10/2023 ಕಲಂ : 504 ಐಪಿಸಿ ಮತ್ತು ಕಲಂ: 3(1)(ಎಸ್) ಎಸ್ ಸಿ ಎಸ್ ಟಿ ಆಕ್ಟ್ 2014 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ದ.ಕ ಮಹಿಳಾ ಪೊಲೀಸ್ ಠಾಣೆ : ದಿನಾಂಕ 16.02.2023  ರಂದು  ದ.ಕ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಕಲಂ:  354(A)(1)ಐಪಿಸಿ ಮತ್ತು ಕಲಂ: 8 ಪೋಕ್ಸೋ ಕಾಯಿದೆ -2012 ಯಂತೆ ಪ್ರಕರಣ ದಾಖಲಾಗಿರುತ್ತದೆ

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಲಲಿತ(44) ಗಂಡ ರಾಜು , ದರ್ಖಾಸು ಮನೆ, ಕಾರಿಂಜ, ಕಾವಳ ಪಡೂರು ಗ್ರಾಮ ಬಂಟ್ವಾಳ ತಾಲೂಕು   ಎಂಬವರ ದೂರಿನಂತೆ ಪಿರ್ಯಾದಿದಾರರು ಬೀಡಿ ಕಟ್ಟುವ  ಕೆಲಸ ಮಾಡಿಕೊಂಡಿದ್ದು ಪಿರ್ಯಾದಿದಾರರ ಗಂಡ ಜೋಗಿ ಎಂಬುವವರು ಕೂಲಿ ಕೆಲಸ  ಮಾಡಿಕೊಂಡಿದ್ದರು. ಪಿರ್ಯಾದಿದಾರರ ಗಂಡ ವಿಪರೀತ ಅಮಲು ಪದಾರ್ಥ ಸೇವಿಸುತ್ತಿದ್ದು ಸುಮಾರು  6 ತಿಂಗಳ ಹಿಂದೆ  ರಸ್ತೆ  ಅಪಘಾತವಾಗಿ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದವರು ವಿಷ ಸೇವಿಸುವ ಮುನ್ನ ವಾರದ ಹಿಂದೆ ಮೂಡಿಗೆರೆಯ ಅಕ್ಕನ ಮನೆಗೆ  ಹೋಗಿ  ದಿನಾಂಕ 05.02.2023 ರಂದು ಮದ್ಯಾಹ್ನ 02.00 ಗಂಟೆಗೆ ಪಿರ್ಯಾದಿದಾರರ ಗಂಡ ಮನೆಗೆ ಬಂದಿದ್ದು ಪಿರ್ಯಾದಿದಾರೊಂದಿಗೆ ಎಂದಿನಂತೆ ಗಲಾಟೆ ಮಾಡಿಕೊಂಡು ಬೈಯ್ಯುತ್ತಿದ್ದವರು ಸುಮಾರು 04.00 ಗಂಟೆಗೆ  ಮನೆಯ ಹಿಂಬದಿಗೆ ಹೋಗಿ ಯಾವುದೋ ಒಂದು ವಿಷ ಪದಾರ್ಥ ಸೇವಿಸಿ ಪಿರ್ಯಾದಿದಾರರಲ್ಲಿ ಬಂದು ವಿಷ ಪದಾರ್ಥದ ಚಿಕ್ಕ ಟ್ಯೂಬ್ ನ್ನ ತೋರಿಸಿರುತ್ತಾರೆ. ಕೂಡಲೇ ಪಿರ್ಯಾದಾರರು ಮತ್ತು ಅವರ ಅಳಿಯ 108 ಕ್ಕೆ ಕರೆಮಾಡಿ ಆಂಬುಲೆನ್ಸ್ ನ್ನು ಬರಮಾಡಿಕೊಂಡು ಚಿಕತ್ಸೆ ಬರಮಾಡಿಕೊಂಡು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ  ವೈದ್ಯರು ಪರಿಕ್ಷೀಸಿ  ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಅದರಂತೆ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಇದ್ದವರು ದಿನಾಂಕ 15.02.2023 ರಂದು 14.55 ಗಂಟೆಗೆ  ಮೃತಪಟ್ಟರುವುದಾಗಿದೆ..ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ  09/2023  ಕಲಂ 174  ಸಿ ಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-02-2023 02:10 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080