ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಿವಕುಮಾರ್‌ ಪ್ರಾಯ 40 ವರ್ಷ ತಂದೆ: ತಿಪ್ಪೆಸ್ವಾಮಿ ವಾಸ;ಕುರುಡೇಹಳ್ಳಿಗ್ರಾಮ, ಬಾಳೆನಹಳ್ಳಿ ಸುಂಕದಕಟ್ಟೆ ಅಂಚೆ, ಚಳ್ಳಕೆರೆ ತಾಲೂಕು,ಚಿತ್ರದುರ್ಗ ಎಂಬವರ ದೂರಿನಂತೆ ದಿನಾಂಕ: 16-05-2022 ರಂದು ಪಿರ್ಯಾಧಿದಾರರು ತನ್ನ ಬಾಬ್ತು ಕೆಎ 21ಯು3480 ನೇ ಮೋಟಾರು ಸೈಕಲ್‌ನಲ್ಲಿ ಉಜಿರೆ- ಚಾರ್ಮಾಡಿ ರಸ್ತೆಯಲ್ಲಿ ಚಾರ್ಮಾಡಿಕಡೆಗೆ ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ10.00 ಗಂಟೆಗೆ ಬೆಳ್ತಂಗಡಿ ತಾಲೂಕು ,ಕಲ್ಮಂಜ ಗ್ರಾಮದ ನಿಡಿಗಲ್‌ ಎಂಬಲ್ಲಿ ತಲುಪುತಿದ್ದಂತೆ ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಚಾರ್ಮಾಡಿಕಡೆಯಿಂದ ಉಜಿರೆ ಕಡೆಗೆ ಮೋಟಾರು ಸೈಕಲ್‌ನ್ನು ಅದರ ಸವಾರ ಇತರ ವಾಹನಗಳನ್ನು ಹಿಂದಿಕ್ಕುವ ಭರದಲ್ಲಿ ಮೋಟಾರು ಸೈಕಲ್‌ನ್ನು ದುಡುಕುತನದಿಂದ ಸವಾರಿಮಾಡಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್‌ಗೆ ಢಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು ಬಲಗೈಯ ಮಣಿಗಂಟಿಗೆ ತರಚಿದ ರಕ್ತಗಾಯ ಬಲಗೈಯ ತೋರು ಬೆರಳಿಗೆ ತರಚಿದ ಗಾಯ, ಬಲಗೈಯ ಮುಂಗೈಗೆ ಗುದ್ದಿದ ಗಾಯ, ಬಲಕಾಲಿನ ಮಣಿಗಂಟಿಗೆ ತರಚಿದ ರಕ್ತಗಾಯ,ಎಡಕಾಲಿ ಕೊಲು ಕಾಲಿಗೆ ತರಚಿದ ರಕ್ತಗಾಯಗಳಾಗಿದ್ದು ಹಾಗೂ ಪಿರ್ಯಾದಿದಾರರಿಗೆ ಢಿಕ್ಕಿಹೋಡೆದ ಮೋಟಾರು ಸೈಕಲ್‌ ಸವಾರನು ಗಾಯಾಳುವನ್ನು ಉಪಚರಿಸದೇ ಸಂಬಂದಪಟ್ಟವರಿಗೆ ಮಾಹಿತಿ ನೀಡದೇ ಮೋಟಾರು ಸೈಕಲ್‌ ಸಮೇತ ಪರಾರಿಯಾಗಿರುತ್ತಾನೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 73/2022 279,337 ಭಾ ದಂ ಸಂ,ಮತ್ತು ಕಲಂ: 134(ಎ)&(ಬಿ) ಜೊತೆಗೆ 187 ಐಎಮ್‌ವಿ ಕಾಯ್ದೆ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನವೀನ್ ಎಸ್ (30) ಧರ್ಮಪಾಲ ಗೌಡ ವಾಸ: ಸುಳ್ಳಿ ಮನೆ, ಎಲಿಮಲೆ, ನೆಲ್ಲೂರು ಕೆಮ್ರಾಜೆ ಅಂಚೆ ಮತ್ತು ಗ್ರಾಮ, ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ 16.05.2022 ರಂದು ತಮ್ಮ ಬಾಬ್ತು ಮೋಟಾರ್ ಸೈಕಲ್ ನಲ್ಲಿ  ಸುಳ್ಯ ಕೆ,ವಿ,ಜಿ ಆಸ್ಪತ್ರೆಯಿಂದ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕಡೆಗೆ ಹೋಗುತ್ತಿರುವ ಸಮಯ ಸುಮಾರು 00:15 ಗಂಟೆಗೆ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಸರ್ಕಾರಿ ಆಸ್ಪತ್ರೆಯ ಬಳಿ ತಲುಪುತ್ತಿದ್ದಂತೆ ಪಿರ್ಯಾದುದಾರರ ಎದುರುಗಡೆಯಿಂದ ಕಾರೊಂದನ್ನು ಅದರ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಆತನ ತಪ್ಪುಬದಿಯಾದ ತೀರಾ ಬಲಬದಿಗೆ ಚಲಾಯಿಸಿಕೊಂಡು ಹೋಗಿ ಆತನ ಎದುರಿನಿಂದ ಬರುತ್ತಿದ್ದ ಅಂದರೆ ಜ್ಯೋತಿ ಸರ್ಕಲ್ ನಿಂದ ಸುಳ್ಯ ಬಸ್ ನಿಲ್ದಾಣದ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿವುಂಟು ಮಾಡಿದ ಪರಿಣಾಮ ಸವಾರ ಮೋಟಾರ್ ಸೈಕಲಿನಿಂದ ಎಸೆಯಲ್ಪಟ್ಟು ಬಿದ್ದಿದ್ದು,  ಪಿರ್ಯಾದಿದಾರರು ಕೂಡಲೇ ಹೋಗಿ ನೋಡಲಾಗಿ  ಪಿರ್ಯಾದಿದಾರರ ಪರಿಚಯದ ವಿಷ್ಣುರಾಜ್ ಆಗಿದ್ದು, ಅತನನ್ನು ಉಪಚರಿಸಿ ನೋಡಲಾಗಿ ಅವನ ತಲೆಗೆ, ಬಲಕಾಲಿಗೆ, ಬಲಕೈಗೆ  ಹಾಗೂ ಇತರ ಕಡೆಗಳಲ್ಲಿ ರಕ್ತಗಾಯವಾಗಿದ್ದವನ್ನು ಚಿಕಿತ್ಸೆ ಬಗ್ಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು  ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಂಗಳೂರು ಕಳುಹಿಸಿಕೊಟ್ಟಿದ್ದು. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ,ಕ್ರ 53/2022 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 2

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅನ್ನಮ್ಮ ಪಿ ಜೆ ಪ್ರಾಯ 50 ವರ್ಷ ತಂದೆ: ಜೋಸೆಫ್ ಕೆ ಜೆ ವಾಸ: ಕೊಟ್ಟೋಡಂ ಮನೆ ನೆರಿಯಾ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ: 15-05-2022 ರಂದು ಸಂಜೆ ಸುಮಾರು 6.00 ಗಂಟೆಗೆ ತಂಗಿ ಶೈಲಳ ಮನೆಯಾದ ದೇವಗಿರಿಗೆ ಹೋಗಿ ವಾಪಾಸ್ಸು ಮಕ್ಕಳೊಂದಿಗೆ ಮನೆಗೆ ಬರುವಾಗ ಸುಮಾರು ರಾತ್ರಿ 7.30 ಗಂಟೆಗೆ ದೇವಗಿರಿ ಕಾನ್ವೆಂಟ್ ಬಳಿ ಪಿರ್ಯಾದಿದಾರರ ಬಾಬ್ತು ಕಾರನ್ನು ಪಾರ್ಕ್ ಮಾಡಿದ ಸ್ಥಳಕ್ಕೆ ಪಿರ್ಯಾದಿದಾರರ ಸಹೋದರ ಬಿಜು ಪೈಕಾಟ್ ಯಾನೆ ದೇವಸ್ಯ ಬಂದು ಜಾಗದ ವಿಚಾರದಲ್ಲಿ ಬಾರಿ ವಿವಾದ ಮಾಡುತ್ತೀಯಾ ಎಂಬುದಾಗಿ ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದಾಗ ಪಿರ್ಯಾದಿದಾರರ ಮಗ ಆರೋಪಿಯನ್ನು ಪ್ರಶ್ನಿಸಿದಾಗ ನಿನ್ನ ಅಮ್ಮನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಕಬ್ಬಿಣದ ರಾಡ್ ನಿಂದ ಪಿರ್ಯಾದಿದಾರರ ತಲೆಗೆ ಎಡ ಕೈಗೆ ಹೊಡೆದು ದೂಡಿ ಹಾಕಿದ್ದು ನಂತರ ಬಿದ್ದಲ್ಲಿಗೆ ಬಂದು ಕಾಲಿನಿಂದ ಬೆನ್ನಿಗೆ ತುಳಿದುದಲ್ಲದೆ ಬಿಡಿಸಲು ಬಂದ ಪಿರ್ಯಾದಿದಾರರ ಮಗನನ್ನು ಕತ್ತು ಹಿಡಿದು ದೂಡಿ ಹಾಕಿರುತ್ತಾರೆ. ಅಷ್ಟರಲ್ಲಿ ಪಿರ್ಯಾದಿದಾರರು ಬೊಬ್ಬೆ ಹೊಡೆದಾಗ ಪಿರ್ಯಾದಿದಾರರ ತಂಗಿ ತಂಗಿಯ ಗಂಡ ಸೋನಿಚ್ಚನ್ ರವರು ಬರುವುದನ್ನು ನೋಡಿ ಆರೋಪಿ ಈಗ ಬದುಕ್ಕಿದ್ದೀಯಾ ಇನ್ನೂ ಮುಂದಕ್ಕೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿದ್ದು ಪಿರ್ಯಾದಿದಾರರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು.ಈ ಬಗ್ಗೆ ಧರ್ಮಸ್ಥಳ ಠಾಣಾ ಅ .ಕ್ರ 38-2022  ಕಲಂ : 504, 506, 324, 323 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಲೀಲಾ ಪಿ ಜೆ ಪ್ರಾಯ:72 ವರ್ಷ ಗಂಡ: ಜೊಸೇಫ್ ಪಿ ಜೆ  ವಾಸ; ಪೈಕಾಟ್ ಮನೆ, ನೆರಿಯಾ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದುದಾರರ ಮಗಳು ಅನ್ನಮ್ಮ ಎಂಬಾಕೆ ಜಮೀನಿನ ವಿಚಾರದಲ್ಲಿ ಆಗಾಗ ಗಲಾಟೆ ಮಾಡುತ್ತಿದ್ದು ದಿನಾಂಕ: 15-05-2022 ರಂದು ರಾತ್ರಿ ಸಮಯ ಸುಮಾರು 8.00 ಗಂಟೆಗೆ ಪಿರ್ಯಾದಿದಾರರು ಮನೆಯಲ್ಲಿ ಒಬ್ಬರೆ ಇದ್ದ ಸಮಯ ಅನ್ನಮ್ಮ ಹಾಗೂ ಅವರ ಮಗ ಮೆಲ್ವಿನ್ ಮನೆಗೆ ಬಂದವರು ನನಗೆ ಆಸ್ತಿ ಪಾಲು ಕೊಡಬೆಕೆಂದು ಹೇಳಿ ಪಿರ್ಯಾದಿದಾರರಿಗೆ ಮಲೆಯಾಳಿ ಬಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈಯ್ದು  ಮರದ ದೊಣ್ಣೆಯಿಂದ ಕಾಲಿಗೆ ಹಲ್ಲೆ ನಡೆಸಿದಾಗ ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹೊಡೆದುದನ್ನು ದಾರಿಯಲ್ಲಿ ಹೋಗುತ್ತಿದ್ದ ಪಿರ್ಯಾದಿದಾರರ ಮಗ ದೇವಸ್ಯ ಕೇಳಿಸಿಕೊಂಡು ಓಡಿ ಬಂದು ಪಿರ್ಯಾದಿದಾರರನ್ನು ವಿಚಾರಿಸಿದಾಗ ಮಗನಿಗೆ ಅನ್ನಮ್ಮ ಹಾಗೂ ಮೆಲ್ವಿನ್ ರವರು ಅವಾಚ್ಯ ಶಬ್ದಗಳಿಂದ ಬೈಯ್ದು ಕೈಂಯಿಂದ ಹಲ್ಲೆ ನಡೆಸಿ ಮುಂದಕ್ಕೆ ನಿನ್ನನ್ನು ಹಾಗೂ ನಿನ್ನ ಮಗನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಮರದ ದೊಣ್ಣೆಯನ್ನು ಅಂಗಳದಲ್ಲಿ ಬಿಸಾಕಿ ಹೋಗಿದ್ದು ಪಿರ್ಯಾದಿದಾರರು ಈ ದಿನ ತನಗಾದ ನೋವಿನ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿ ವಿಬಾಗದಲ್ಲಿ ಚಿಕಿತ್ಸೆ ಪಡೆದು ಮಗನಲ್ಲಿ ವಿಚಾರ ತಿಳಿಸಿ ದೂರು ನೀಡಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ .ಕ್ರ 39-2022  ಕಲಂ : 504, 324,323,506  ಜೊತೆಗೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-05-2022 10:30 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080