ಅಭಿಪ್ರಾಯ / ಸಲಹೆಗಳು

 

ಅಪಘಾತ ಪ್ರಕರಣ: 3

  • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರಮೀಳಾ ಡಿಸೋಜಾ (19) ತಂದೆ: ಇನಾಸ  ಡಿಸೋಜಾ ವಾಸ:ಕೆದುವಾರು ಮನೆ ಪೆರುವಾಯಿ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿರವರು ದಿನಾಂಕ: 15.09.2022 ರಂದು ವಿಟ್ಲ ಪೇಟೆಯಿಂದ ಆಗತ್ಯ ಕೆಲಸ ಮುಗಿಸಿ ವಿಟ್ಲದಿಂದ ಪಕಳಕುಂಜ  ಕ್ಕೆ ಸಂಚರಿಸುವ ಕೆ ಎಸ್ ಆರ್ ಟಿ ಸಿ  ಕೆಎ-09-ಎಫ್-4883 ನೇದರಲ್ಲಿ ಪ್ರಯಾಣಿಕನಾಗಿ ವಿಟ್ಲ ದಿಂದ ಹೊರಟು ಪಿರ್ಯಾದಿದಾರರ ಮನೆಯಾದ ಬಂಟ್ವಾಳ ತಾಲೂಕು ಪೆರುವಾಯಿ ಕೆದುವಾರು ಎಂಬಲ್ಲಿಗೆ ಸುಮಾರು 12.25 ಗಂಟೆ ಸಮಯಕ್ಕೆ ಬಸ್ ತಲುಪಿದ  ಸಮಯ ಬಸ್ ಸ್ಟಾಪ್ ನಲ್ಲಿ ಇಳಿಯಲು ಪಿರ್ಯಾದಿದಾರರ ತಂದೆ: ಎದ್ದು ನಿಂತಾಗ ಕೆ ಎಸ್ ಆರ್ ಟಿ ಸಿ ಬಸ್ಸ್  ಚಾಲಕನು ತಿರುವು ರಸ್ತೆಯಲ್ಲಿ ಒಮ್ಮೆಲೇ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಬಸ್ಸನ್ನು ಚಲಾಯಿಸಿದ ಪರಿಣಾಮ ಪಿರ್ಯಾದಿದಾರರ ತಂದೆಯವರು ಬಸ್ಸಿನ ಹಿಂಬದಿಯ ಬಾಗಿಲಿನಿಂದ ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ತೀವ್ರ ತರಹದ ಗಾಯಗಳಾಗಿದ್ದು ತಂದೆಯ  ಬರುವಿಕೆಯನ್ನು ಕಾಯುತಿದ್ದ ಪಿರ್ಯಾದಿದಾರರು ಇನಾಸ್ ಡಿಸೋಜಾ ರವರನ್ನು ಕೆ ಎಸ್ ಹೆಗ್ಡೆ ಮೆಡಿಕಲ್ ಕಾಲೇಜು ಹಾಸ್ಪಿಟಲ್ಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 145/2022  ಕಲಂ: 279,337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀವತ್ಸ, ಪ್ರಾಯ: 20 ವ‍ರ್ಷ ತಂದೆ: ಎಂ.ಸುಬ್ರಹ್ಮಣ್ಯ ಭಟ್ , ವಾಸ: ಮಂಜನಡ್ಕ ಮನೆ, ಸಜಿಪ ಮುನ್ನೂರು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 16-09-2022 ರಂದು ಪಿರ್ಯಾದಿದಾರರು ತನ್ನ ಸ್ನೇಹಿತರಾದ ಸುಬ್ರಹ್ಮಣ್ಯ ಶೇಟ್ ಹಾಗೂ ಸೂರ್ಯ ನಾರಾಯಣ ಭಟ್ ರವರು ಮೂರು ಮೋಟಾರ್ ಸೈಕಲಿನಲ್ಲಿ ಗುರುವಾಯನಕೆರೆಯಲ್ಲಿರುವ ಸ್ನೇಹಿತನ ಮನೆಗೆ ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 08:30 ಗಂಟೆಗೆ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಕೆಳಗಿನ ವಗ್ಗ ಎಂಬಲ್ಲಿಗೆ ತಲುಪುತ್ತಿದ್ದಂತೆ ಬೆಳ್ತಂಗಡಿ ಕಡೆಯಿಂದ  KA-19 AB-8356 ನೇ ಆಟೋರಿಕ್ಷಾವನ್ನು ಅದರ ಚಾಲಕ ನವೀನ್ ಎಂಬವರು ತಿರುವು ರಸ್ತೆಯಲ್ಲಿ ಒಂದು ವಾಹನವನ್ನು ಓವರ್ ಟೇಕ್ ಮಾಡಿಕೊಂಡು ರಸ್ತೆಯ ಬಲಬದಿಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಸಿಕೊಂಡು ಬಂದು ಬಿ.ಸಿ.ರೋಡ್ ಕಡೆಯಿಂದ  ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ KA-19-AD-1127 ನೇ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಆಟೋರಿಕ್ಷಾ ಎಡಮಗ್ಗುಲಾಗಿ ರಸ್ತೆಗೆ ಬಿತ್ತು ಹಾಗೂ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಸೂರ್ಯನಾರಾಯಣ ಭಟ್ ರವರಿಗೆ ಬಲಭುಜ ಮತ್ತು ಬಲ ಮುಂಗೈಗೆ ಗುದ್ದಿದ ನೋವಾಗಿದ್ದು ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಾದ ಭಾಸ್ಕರ್ ರವರಿಗೆ ಬಲಭಾಗ ತಲೆಗೆ, ಬಲಕಣ್ಣಿಗೆ, ಮೂಗಿಗೆ ಗುದ್ದಿದ ಹಾಗೂ ತರಚಿದ ಗಾಯಗಳಾಗಿದ್ದು, ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕರಾದ ರಾಮ ಪೂಜಾರಿ ಹಾಗೂ ಆಟೋರಿಕ್ಷಾ ಚಾಲಕನಿಗೆ ಯಾವುದೇ ಗಾಯ ನೋವು ಆಗಿರುವುದಿಲ್ಲ. ಈ ಬಗ್ಗೆ ಬಂಟ್ವಾಳ ಸಂಚಾರ ಠಾಣಾ ಅ.ಕ್ರ 108/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರವೀಣ್ ಎ ಪ್ರಾಯ: 47 ವರ್ಷ, ತಂದೆ: ಮೋಹನ್ ದಾಸ್ ಗಟ್ಟಿ , ಬಸ್ತಕೋಡಿ ಮನೆ ಕೊಡಂಬೆಟ್ಟು ಗ್ರಾಮ ಬಂಟ್ವಾಳ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ: 15.09.2022 ರಂದು ಸಮಯ ಸುಮಾರು 16.00 ಗಂಟೆಗೆ ಪಿರ್ಯಾದಿದಾರರು ಬಂಟ್ವಾಳ ತಾಲೂಕು ಕೊಡಂಬೆಟ್ಟು ಗ್ರಾಮದ ಬಸ್ತಿಕೋಡಿ ಪೇಟೆಯಲ್ಲಿನ ತನ್ನ ಬಾಬ್ತು  ಪ್ರಜ್ವಲ್ ಜನರಲ್ ಸ್ಟೋರ್ ನಲ್ಲಿರುವ ಸಮಯ ಜೈನ ಬಸದಿಗೆ ಹೋಗುವ ದ್ವಾರದ ಮುಂಭಾಗದಲ್ಲಿ ಹಾದು ಹೋಗುವ ನೇರಳೆಕಟ್ಟೆ – ಕುದ್ಕೊಳಿ ರಸ್ತೆಯ ಎಡ ಭಾಗದಲ್ಲಿ ಕಚ್ಚಾ ಮಣ್ಣು ರಸ್ತೆಯಲ್ಲಿ ಒರ್ವ ಪ್ರಾಯದ ವ್ಯಕ್ತಿ ಹಾಗೂ ಮಗು ರಸ್ತೆ ದಾಟುವರೇ ನಿಂತುಕೊಂಡಿದ್ದ ಸಮಯ ವಾಮದಪದವು ಪೇಟೆಯಿಂದ ನೇರಳೆಕಟ್ಟೆ ಕಡೆಗೆ ಒರ್ವ ಸ್ಕೂಟರ್ ಸವಾರನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸುತ್ತಾ ರಸ್ತೆಯ ತೀರಾ ಎಡಬದಿಗೆ ಬಂದು ಕಚ್ಚಾ ಮಣ್ಣು ರಸ್ತೆಯಲ್ಲಿ ನಿಂತುಕೊಂಡಿದ್ದ ಮಗುವಿಗೆ ಡಿಕ್ಕಿ ಹೊಡೆದ ಪರಿಣಾಮ ಮಗು ಡಾಮಾರು ರಸ್ತೆಯ ಅಂಚಿಗೆ ಎಸೆಯಲ್ಪಟ್ಟು ಬಿದ್ದದನ್ನು ನೋಡಿ ಪಿರ್ಯಾದಿದಾರರು ಅಲ್ಲಿಗೆ ಹೋಗಿದ್ದು  ಬಳಿಕ ಮಗುವಿನ ಅಜ್ಜ ಹಾಗೂ ಇತರರು ಮಗುವನ್ನು ಎತ್ತಿ ಆರೈಕೆ ಮಾಡಿ ನೋಡಿದಾಗ ಮಗುವಿನ ತಲೆಯ ಹಿಂಭಾಗಕ್ಕೆ ತೀವ್ರ ತರಹದ ರಕ್ತ ಗಾಯವಾಗಿದ್ದು,ಸೊಂಟಕ್ಕೆ ಹಾಗೂ ಭುಜಕ್ಕೆ ತರಚಿದ ಗಾಯವಾಗಿದ್ದು, ಗಾಯಗೊಂಡ ಮಗುವಿನ ಹೆಸರು ಕೇಳಲಾಗಿ ಕ್ರಿಸ್ಟಾನ್ ಜಾನ್ ಲಸ್ರಾದೋ ಎಂಬುದಾಗಿ ತಿಳಿದು ಬಂದಿದ್ದು ಅಪಘಾತ ಪಡಿಸಿದ ಸ್ಕೂಟರ್ ನೊಂದಣಿ ನಂಬ್ರ ನೋಡಲಾಗಿ ಕೆಎ 19 ಹೆಚ್ ಕೆ 3332 ಆಗಿರುತ್ತದೆ. ಗಾಯಾಳು ಮಗುವನ್ನು   ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಪಾಧರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 67/2022 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮೊಹಮ್ಮದ್ ಶಮೀರ್ ಪ್ರಾಯ:51 ವರ್ಷ ತಂದೆ: ದಿ.ಅಬ್ದುಲ್‌ ರಝಾಕ್‌ ವಾಸ: ಪ್ರಕಾಶ್ ಮಂಜಿಲ್ ದರ್ಬೆ ಅಂಚೆ ಕಛೇರಿ ಎದುರು  ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಿರವರು  ಪುತ್ತೂರು ಕಸಬಾ ಗ್ರಾಮದ ಪುತ್ತೂರು ಬಸ್‌ ನಿಲ್ದಾಣದ ಬಳಿಯ ಮಾಯಿದೆ ದೇವೋಸ್‌ ಚರ್ಚ್‌ ಎದುರುಗಡೆ ಅವರ  ಮಾಲಿಕತ್ವದ  “ಪ್ರಕಾಶ್ ಫೂಟ್‌ವೇರ್ . ಕೋ” ಎಂಬ ಹೆಸರಿನ ಚಪ್ಪಲಿ ಅಂಗಡಿಯನ್ನು ಹೊಂದಿದ್ದು  ಅಲ್ಲದೇ   ಬೆಂಗಳೂರಿನಿಂದ ಹಳೆಯ  ಕಾರುಗಳನ್ನು  ಖರೀದಿಸಿ ತಂದು ಪುತ್ತೂರಿನಲ್ಲಿ ಮಾರಾಟ ಮಾಡುವ ವ್ಯವಹಾರವನ್ನು ಮಾಡುತ್ತಿದ್ದು.  ಅದರಂತೆ   ಕಾರು ವ್ಯವಹಾರದ ಬಗ್ಗೆ  ಪಿರ್ಯಾದಿದಾರರಲ್ಲಿದ್ದ  ನಗದು ಹಣ ರೂ.8,00,000/- ಮತ್ತು ಸ್ನೇಹಿತ ಸಿದ್ದೀಕ್ ರವರು ನೀಡಿದ ನಗದು ಹಣ ರೂ.7,00,000/- ವನ್ನು ಒಟ್ಟು ಸೇರಿಸಿ ಪಿರ್ಯಾದಿದಾರರು  ಚಪ್ಪಲಿ ವ್ಯಾಪಾರ ಮಾಡುತ್ತಿರುವ ಅಂಗಡಿಯ ಕ್ಯಾಶ್‌ ಡ್ರಾವರ್‌ ನ ಹಿಂಬದಿ ಇನ್ನೊಂದು ಮರದ ಬಾಕ್ಸ್ ನಲ್ಲಿ ಇಟ್ಟಿದ್ದು. ದಿನಾಂಕ: 16-09-2022 ರಂದು ಬೆಳಿಗ್ಗೆ ಸುಮಾರು 9.00 ಗಂಟೆಗೆ ಪಿರ್ಯಾದಿದಾರರ  ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ  ತಾಜುದ್ದೀನ್ ರವರು   ಪಿರ್ಯಾದಿದಾರರಿಗೆ ಅಂಗಡಿಯಲ್ಲಿ ಕಳ್ಳತನವಾದ ವಿಚಾರವನ್ನು ತಿಳಿಸಿರುತ್ತಾರೆ ಅದರಂತೆ ಪಿರ್ಯಾದಿದಾರರು  ಪುತ್ತೂರಿಗೆ ಬಂದು ಅಂಗಡಿಯಲ್ಲಿ ನೋಡುವಾಗ ಅಂಗಡಿಯ ಹಂಚು ಛಾವಣಿಯ ಮಾಡಿನ ಹಂಚನ್ನು ತೆಗೆದು ಯಾರೋ ಕಳ್ಳರು ಅಂಗಡಿ ಮುಚ್ಚಿಗೆಯನ್ನು ಮುರಿದು ಒಳ ಪ್ರವೇಶಿಸಿ ಅಂಗಡಿಯ ಡ್ರಾವರ್‌ನಲ್ಲಿದ್ದ ವ್ಯಾಪಾರದ ಹಣ ರೂ 24,500/- ಮತ್ತು ಹಿಂಬದಿ ಮರದ ಬಾಕ್ಸ್ ನಲ್ಲಿಟ್ಟಿದ್ದ ರೂ 14,50,000/- ನಗದು ಹಣವನ್ನು ಹಾಗೂ ಅಂಗಡಿಯ ಸಿಸಿ ಕ್ಯಾಮರಾದ ಡಿವಿಆರ್‌  ನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತದೆ. ಒಟ್ಟು ಕಳವಾದ ಹಣ 14,74,500/- ಮತ್ತು ಡಿವಿಆರ್‌ ನ ಮೌಲ್ಯ ರೂ. 10,000/-ಆಗಿರುತ್ತದೆ.  ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ   ಅ.ಕ್ರ: 76/2022 ಕಲಂ: 454, 457, 380 ಐ.ಪಿ.ಸಿ      ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-09-2022 10:29 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080