ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 5

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ದಾವೊದ್ ಪ್ರಾಯ:(40) ವರ್ಷ.ತಂದೆ: ದಿ|| ಅಬೂಬಕ್ಕರ್.ವಾಸ: #2-55, ಪಲ್ಲತ್ತಾರು ಮನೆ, ಬಿಳಿಯೂರು ಗ್ರಾಮ, ಪೆರ್ನೆ ಅಂಚೆ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 15-10-2022 ರಂದು ಬೆಳಿಗ್ಗೆ 8:55 ಗಂಟೆಗೆ ಬಂಟ್ವಾಳ ತಾಲೂಕು ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ ಪಿರ್ಯಾದಿದಾರರು ತನ್ನ ಮಕ್ಕಳಾದ ಮೊಹಮ್ಮದ್ ಸಿನಾನ್ (13) ಮತ್ತು ಮೊಹಮ್ಮದ್ ಸೀಫಾನ್ (11) ರವರೊಟ್ಟಿಗೆ ರಸ್ತೆ ದಾಟುತ್ತಿದ್ದ ವೇಳೆಗೆ ಮಂಗಳೂರು ಕಡೆಯಿಂದ KA-19-HE-7808  ನೇ ಸ್ಕೂಟರ್ ಸವಾರ ಮಹಮ್ಮದ್ ಮುನೀರ್ ರವರು ದೂರದಿಂದ ನೋಡಿದರು ನಿದಾನಿಸದೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿಮಾಡಿಕೊಂಡು ಬಂದು ಪಿರ್ಯಾದಿದಾರರ ಮಗ ಮೊಹಮ್ಮದ್ ಸಿನಾನ್ ಗೆ  ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಮೊಹಮ್ಮದ್ ಸಿನಾನ್ ಮತ್ತು ಸ್ಕೂಟರ್ ಸವಾರ ಸ್ಕೂಟರ್ ಸಮೇತ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಪಿರ್ಯಾದಿದಾರರ ಮಗನಿಗೆ ಹಣೆಗೆ ಗುದ್ದಿದ ಹಾಗೂ ತರಚಿದ ಗಾಯ, ಎರಡು ಮೊಣಕೈ ಮತ್ತು ಹೊಟ್ಟೆಯ ಎಡ ಭಾಗಕ್ಕೆ ಗುದ್ದಿದ ಹಾಗೂ ತರಚಿದ ಗಾಯ, ಎರಡು ಕಾಲುಗಳಲ್ಲಿ ಸಣ್ಣಪುಟ್ಟ ತರಚಿದ ಗಾಯನೋವುಗಳಾಗಿದ್ದು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಹಾಗೂ ಅಪಘಾತಪಡಿಸಿದ ಸ್ಕೂಟರ್ ಸವಾರನಿಗೆ ಮುಖಕ್ಕೆ ಹಾಗೂ ಕೈ ಕಾಲುಗಳಲ್ಲಿ ಗುದ್ದಿದ ಹಾಗೂ ತರಚಿದ ಗಾಯ ನೋವುಗಳಾಗಿದ್ದು ಮಂಗಳೂರು ತೇಜಶ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 119/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಈಶ್ವರ ದೇವಾಡಿಗ ಪ್ರಾಯ 40 ವರ್ಷ ತಂದೆ: ನಾಗಪ್ಪ ದೇವಾಡಿಗ ವಾಸ: ಅಂಟೆ ಮಜಲು ಮನೆ, ಜೋಡುಸ್ತಾನ ಮನೆ, ಧರ್ಮಸ್ಥಳ ಗ್ರಾಮ  , ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 15-10-2022 ರಂದು ಪಿರ್ಯಾಧಿದಾರರು ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗಿನ ಜಾವ 4.00 ಗಂಟೆಯಿಂದ 5.00 ಗಂಟೆಯ ಮಧ್ಯೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಕನ್ಯಾಡಿ ಶ್ವೇತಾ ರೆಸಿಡೆನ್ಸಿ ಬಳಿ ತಲುಪುತ್ತಿದ್ದಂತೆ ಪಿರ್ಯಾಧಿದಾರರ ಹಿಂದಿನಿಂದ ಅಂದರೆ ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ ಯಾವುದೋ ಅಪರಿಚಿತ ವಾಹನವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಅಲ್ಲಿಯೇ ರಸ್ತೆಗೆ ಬಿದ್ದು ಬಲಕಾಲಿನ ಕೋಲು ಕಾಲಿಗೆ ತೀವ್ರಗಾಯ, ತಲೆಗೆ, ಹಣೆಗೆ, ಮುಖಕ್ಕೆ , ಬಲ ಕೈ ಭುಜಕ್ಕೆ ತರಚಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಅಪಘಾತ ನಡೆಸಿದ ವಾಹನವನ್ನು ಅದರ ಚಾಲಕ ನಿಲ್ಲಿಸದೇ ಪಿರ್ಯಾಧಿದಾರರನ್ನು ಉಪಚರಿಸದೇ ಸಂಬಂಧಪಟ್ಟವರಿಗೆ ಮಾಹಿತಿ ನೀಡದೇ ವಾಹನ ಸಮೇತ ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 124/2022 ಕಲಂ; 279,  338 ಭಾದಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಸಂತ ಕೆ ಪ್ರಾಯ 40 ವರ್ಷ ತಂದೆ: ಕುಶಾಲಪ್ಪ ಗೌಡ ವಾಸ: ಕಳೆಂಜಾರು ಮನೆ, ಕೊಯ್ಯೂರು ಗ್ರಾಮ, ಬೆಳ್ತಂಗಡಿ ತಾಲೂಕು    ಎಂಬವರ ದೂರಿನಂತೆ ದಿನಾಂಕ: 16-10-2022 ರಂದು ಮೋಟಾರು ಸೈಕಲ್‌ ನಂಬ್ರ ಕೆಎ 05 HN 5880 ನೇ ದ್ದನ್ನು ಅದರ ಸವಾರ ಕೃತಿಕ್‌ ಎಂಬವರು ಸಹ ಸವಾರಳನ್ನಾಗಿ ಕೃಪಾ ಎಂಬವರನ್ನು ಕುಳ್ಳಿರಿಸಿಕೊಂಡು ಪಿಜಕಲ ಕಡೆಯಿಂದ ದೊಂಪದಪಲ್ಕೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 11.30 ಗಂಟೆಗೆ ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ನೆಕ್ಕಿಲು ಎಂಬಲ್ಲಿ ಮೋಟಾರು ಸೈಕಲ್‌ ನ್ನು ದುಡುಕುತನದಿಂದ ಸವಾರಿ ಮಾಡಿ ವಿರುದ್ದ ದಿಕ್ಕಿನಿಂದ ಅಂದರೆ ದೊಂಪದಪಲ್ಕೆ ಕಡೆಯಿಂದ ಪಿಜಕಲ ಕಡೆಗೆ ಮಹಮ್ಮದ್‌ ಅಬ್ದುಲ್‌ ಖಾದರ್‌ ಪೈರೋಜ್‌ ಎಂಬವರು ಸವಾರಿ ಮಾಡಿಕೊಂಡು ಬರುತ್ತಿದ್ದ ಕೆಎ 21 EC 3365 ನೇ ಮೋಟಾರು ಸೈಕಲ್‌ ಗೆ ಢಿಕ್ಕಿ ಹೊಡೆದ ಪರಿಣಾಮ ಅಪಘಾತಕ್ಕೊಳಗಾದ ಮೋಟಾರು ಸೈಕಲ್‌ ಸವಾರ ಮತ್ತು ಅಪಘಾತ ನಡೆಸಿದ ಮೋಟಾರು ಸೈಕಲ್‌ ಸವಾರ ಮತ್ತು ಸಹ ಸವಾರಳು ಮೋಟಾರು ಸೈಕಲ್‌ ನೊಂದಿಗೆ ರಸ್ತೆಗೆ ಬಿದ್ದು ಕೃತಿಕ್‌ ಎಂಬವರು ಮುಖಕ್ಕೆ, ತಲೆಗೆ ತೀವ್ರ ರಕ್ತಗಾಯ, ಕೃಪಾ ರವರು ತಲೆಗೆ ತೀವ್ರ ರಕ್ತಗಾಯ,  ಮಹಮ್ಮದ್‌ ಅಬ್ದುಲ್‌ ಖಾದರ್‌ ಪೈರೋಜ್‌ ರವರಿಗೆ ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯ, ಬಲಕೈಗೆ,ಹಣೆಗೆ ರಕ್ತಗಾಯಗೊಂಡು ಗಾಯಾಳುಗಳ ಪೈಕಿ ಕೃತಿಕ್‌ ಮತ್ತು ಕೃಪಾ ರವರು ಮಂಗಳೂರು ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಹಾಗೂ ಮಹಮ್ಮದ್‌ ಅಬ್ದುಲ್‌ ಖಾದರ್‌ ಪೈರೋಜ್‌ ರವರು ಮಂಗಳೂರು ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 125/2022 ಕಲಂ; 279,  338 ಭಾದಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಿವಲಿಂಗಯ್ಯ,  ಪ್ರಾಯ 33 ವರ್ಷ, ತಂದೆ: ಶಿವಯ್ಯ, ವಾಸ: ಮ.ನಂ: 04, ಚೆಂಡೇನಹಳ್ಳಿ ಗ್ರಾಮ, ಕೆಂಕರೆ ಅಂಚೆ, ಅರಸೀಕೆರೆ ತಾಲೂಕು, ಹಾಸನ ಎಂಬವರ ದೂರಿನಂತೆ ದಿನಾಂಕ 15-10-2022 ರಂದು 16:00 ಗಂಟೆಗೆ ಆರೋಪಿ ಲಾರಿ ಚಾಲಕ ಕಾಂತರಾಜು ಎಂಬವರು  KA-01-ad-8513 ನೇ  ನೋಂದಣಿ ನಂಬ್ರದ ಲಾರಿಯಲ್ಲಿ ವಾಹನಗಳಿಗೆ ಬಳಸುವ servo  ಹೆಸರಿನ ಆಯಿಲ್‌ ಬ್ಯಾರೆಲ್‌ ಮತ್ತು ಟಿನ್‌ಗಳನ್ನು ಲೋಡ್‌ ಮಾಡಿಕೊಂಡು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ,  ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಮೈರಕಟ್ಟೆ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ  ಲಾರಿಯು ಹತೋಟಿ ತಪ್ಪಿ ಎಡಭಾಗದ ತಗ್ಗು ಜಾಗಕ್ಕೆ ಪಲ್ಟಿಯಾಗಿ ಲಾರಿ ಹಾಗೂ ಲಾರಿಯಲ್ಲಿದ್ದ ಸೊತ್ತುಗಳಿಗೆ ಹಾನಿಯಾಗಿರುತ್ತದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ157/2022 ಕಲಂ: 279 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಸಂಚಾರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಬೂಬಕ್ಕರ್  ಪ್ರಾಯ 40 ವರ್ಷ, ತಂದೆ: ದಿ.ಹಸನಬ್ಬ, ವಾಸ: ಕುಂಡೇವು ಮನೆ, ಮಣಿನಾಲ್ಕೂರು ಅಂಚೆ ಮತ್ತು ಗ್ರಾಮ, ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 16-10-2022 ರಂದು 12:00 ಗಂಟೆಗೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ಮಹಮ್ಮದ್‌ ರಫೀಕ್‌ ಎಂಬವರು KA-21-L-4946ನೇ ನೋಂದಣಿ ನಂಬ್ರದ ಮೋಟಾರ್‌ ಸೈಕಲನ್ನು ಕುಪ್ಪೆಟ್ಟಿ-ಉರುವಾಲುಪದವು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಕುಪ್ಪೆಟ್ಟಿ ಕಡೆಯಿಂದ ಉರುವಾಲು ಪದವು ಕಡೆಗೆ ಚಲಾಯಿಸಿಕೊಂಡು ಹೋಗಿ, ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಉರುವಾಲು ಪದವು ಬಳಿ ಬನಾರಿ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಅಟೋರಿಕ್ಷಾವೊಂದನ್ನು ಓವರ್‌ ಟೇಕ್‌ ಮಾಡಿ ರಸ್ತೆಯ ರಾಂಗ್‌ ಸೈಡಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಅಬೂಬಕ್ಕರ್‌ ರವರು ಸವಾರರಾಗಿ ಅವರ ಮಕ್ಕಳಾದ ಮಹಮ್ಮದ್‌ ಆದಿಲ್‌(8ವರ್ಷ), ಮಹಮ್ಮದ್‌ ಆಶಿಂ(6ವರ್ಷ) ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಉರುವಾಲು ಪದವು ಕಡೆಯಿಂದ ಕುಪ್ಪೆಟ್ಟಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-J-6004ನೇ ನಂಬ್ರದ ಮೋಟಾರ್‌ ಸೈಕಲಿಗೆ ಅಪಘಾತವಾಗಿ, ಸವಾರ ಮತ್ತು ಸಹಸವಾರರು ರಸ್ತೆಗೆ ಬಿದ್ದು, ಪಿರ್ಯಾದುದಾರರಾದ ಅಬೂಬಕ್ಕರ್‌ ರವರಿಗೆ ಬಲಪಾದ, ಎಡ ಕೋಲು ಕೈಗೆ ಗುದ್ದಿದ ಒಳ ನೋವು, ಬಲ ಹೆಬ್ಬೆರಳು, ಎಡಮೊಣಕಾಲು, ಎಡ ಕಣ್ಣಿನ ಬಳಿ ರಕ್ತಗಾಯ, ಮಹಮ್ಮದ್‌ ಆದಿಲ್ ರವರಿಗೆ ಬಲ ಮೊಣಕಾಲು ಬಳಿ ಗಾಯ ಮತ್ತು ಮಹಮ್ಮದ್‌ ಆಶಿಂ ರವರಿಗೆ ಹಣೆಯ ಎಡಭಾಗ, ಕೆನ್ನೆಗೆ ಗಾಯವಾಗಿ, ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಆರೋಪಿ ಮೋಟಾರ್‌ ಸೈಕಲ್‌ ಸವಾರ ಮಹಮ್ಮದ್‌ ರಫೀಕ್‌ ರವರಿಗೆ ಬಲಕಾಲಿಗೆ ಗಾಯವಾಗಿ ಉಪ್ಪಿನಂಗಡಿಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ158/2022 ಕಲಂ: 279, 337 IPC. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-10-2022 06:25 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080