ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ದಿನೇಶ್ , ಪ್ರಾಯ: 40 ತಂದೆ: ಕೊಗ್ಗುಪೂಜಾರಿ ವಾಸ: ಗೋಳ್ತಮಜಲು ಮನೆ, ಗೋಳ್ತಮಜಲು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 15-11-2022 ರಂದು ಪಿರ್ಯಾದಿದಾರರು ಅಗತ್ಯ ಕೆಲಸದ ನಿಮಿತ್ತ ಗಣೇಶ ಮಂದಿರದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಸಮಯ ಸುಮಾರು ಸಂಜೆ 6:30 ಗಂಟೆಗೆ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಗೋಳ್ತಮಜಲು ಎಂಬಲ್ಲಿ ವಿಟ್ಲ ಕಡೆಯಿಂದ ಬಂದ ಟಾಮ್ ಟಾಮ್ ವೊಂದರಿಂದ ಮಮತಾ ಎಂಬವರು ಇಳಿದು ರಸ್ತೆ ದಾಟುತ್ತಿದ್ದ ಸಮಯ ಕಲ್ಲಡ್ಕ ಕಡೆಯಿಂದ KA-02-MK-2757 ಕಾರನ್ನು ಅದರ ಚಾಲಕ ಅಂತೋನಿ ಲೋಬೋ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ದೂರದಿಂದ ನೋಡಿದರು ನಿದಾನಿಸದೆ ಪಾದಚಾರಿ ಮಹಿಳೆ ಮಮತಾ ರವರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಪಾದಚಾರಿ ಮಹಿಳೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದು, ಎಡ ಭಾಗ ಕೋಲು ಕಾಲು ಮತ್ತು ಮಣಿಗಂಟಿಗೆ ಗುದ್ದಿದ ರಕ್ತ ಗಾಯ, ಎಡ ಭುಜಕ್ಕೆ ಗುದ್ದಿದ ಹಾಗೂ ತರಚಿದ ಗಾಯ, ತಲೆಗೆ ಗುದ್ದಿದ ಮತ್ತು ರಕ್ತ ಗಾಯವಾಗಿ ಕಲ್ಲಡ್ಕ ಪುಷ್ಪರಾಜ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ  ಅ.ಕ್ರ 140/2022 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಲಕ್ಷ್ಮಣ್ಣ ಪೂಜಾರಿ, ಪ್ರಾಯ: 48ತಂದೆ: ಶೀನಪ್ಪ ಪೂಜಾರಿ ವಾಸ: ನಾಗಶ್ರೀ ನಿಲಯ ಪಿಲಿ ಕುಡೇಲು ಮನೆ, ಮೋಗ್ರು ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆದಿನಾಂಕ 16-11-2022 ರಂದು ಪಿರ್ಯಾದಿದಾರರು ಹಾಗೂ ಶೀಲಾವತಿ ರವರು ಮಾಧವರವರ ಬಾಬ್ತು KA-18-N-8327 ನೇ ಕಾರಿನಲ್ಲಿ ಮಾಧವ ರವರು ಚಾಲಕನಾಗಿ ಪುತ್ತೂರು ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸಿಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 04:00 ಗಂಟೆಗೆ ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಕಲ್ಲಡ್ಕ – ಕೆ ಸಿ ರೋಡು ಎಂಬಲ್ಲಿಗೆ ತಲುಪುತ್ತಿದಂತೆ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಕಾರನ್ನು ಅದರ ಚಾಲಕ ಮಾಧವ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಗೆ ನಿರ್ಮಿಸಿರುವ ಪಿಲ್ಲರ್ ಹೊಂಡಕ್ಕೆ ಬೀಳಿಸಿದ ಪರಿಣಾಮ ಕಾರಿನಲ್ಲಿದ್ದ ಶೀಲಾವತಿರವರಿಗೆ ತಲೆಗೆ ಮತ್ತು ಕಣ್ಣಿಗೆ ಗುದ್ದಿದ ಹಾಗೂ ರಕ್ತ ಗಾಯ, ಬಲ ಭಾಗ ಭುಜಕ್ಕೆ ಗುದ್ದಿದ ಗಾಯವಾಗಿ ಮಂಗಳೂರು ಜ್ಯೋತಿ ಕೆ ಎಂ ಸಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ .ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 141/2022 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಿಶಾಲ್‌ ಕುಮಾರ್‌ ಕೂನಬೇವು ಪ್ರಾಯ 26 ವರ್ಷ ತಂದೆ: ಮಲ್ಲಿಕಾರ್ಜುನ ವಾಸ: ಹರಿಜನ ಸ್ಟ್ರೀಟ್‌, ಮೊಟೆ ಬೆನ್ನೂರು, ಬ್ಯಾಡಗಿ ತಾಲೂಕು , ಹಾವೇರಿ ಎಂಬವರ ದೂರಿನಂತೆ ದಿನಾಂಕ: 16-11-2022 ರಂದು ಪಿರ್ಯಾದಿದಾರರು ಕೆಎ 27 M 8601 ನೇ ಕಾರಿನಲ್ಲಿ ಪರಿಚಯಸ್ಥರಾದ ರಾಜಶೇಖರ, ಶಂಕರಪ್ಪ ಮಜ್ಜಿಗೆ, ಕೊಟ್ರೇಶ್‌ ಕಾಕೋಡ್, ಮಲ್ಲಪ್ಪ ಗೌಡ ಎಂಬವರನ್ನು ಸಹ ಪ್ರಯಾಣಿಕರನ್ನಾಗಿ ಕುಳ್ಳಿರಿಸಕೊಂಡು ಕಾರನ್ನು ಪಿರ್ಯಾದಿದಾರರು ಕೊಕ್ಕಡ ಕಡೆಯಿಂದ ಧರ್ಮಸ್ಥಳ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು ಮಧ್ಯಾಹ್ನ 2. 45 ಗಂಟೆಗೆ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಪೈರೋಡಿ ಕ್ರಾಸ್‌ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಧರ್ಮಸ್ಥಳ ಕಡೆಯಿಂದ ಕೊಕ್ಕಡ ಕಡೆಗೆ ಕೆಎ 53 N 7337 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ಕಾರುಗಳು ಜಖಂಗೊಂಡು ಪಿರ್ಯಾದಿದಾರರ ಕಾರಿನಲ್ಲಿದ್ದ ಸಹ ಪ್ರಯಾಣಿಕರಾದ ರಾಜಶೇಖರ ಎಂಬವರು ಹಣೆಯ ಬಲಬದಿಗೆ ರಕ್ತಗಾಯ, ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಉಜಿರೆ SDM ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 142/2022 ಕಲಂ; 279,337ಭಾದಂ ಸಂ ಮತ್ತು & RR Rules 7 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

 • ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಪದ್ಮವತಿ ಪ್ರಾಯ 42 ವರ್ಷ ಗಂಡ:ಉಮೇಶ ವಾಸ: ಐವತ್ತೊಕ್ಲು ಮನೆ, ಐವತ್ತೊಕ್ಲು ಗ್ರಾಮ ಸುಳ್ಯ ಎಂಬವರ ದೂರಿನಂತೆ ದಿನಾಂಕ 16.11.2022 ರಂದು ಪಿರ್ಯಾದಿದಾರರ ಮಗಳು ಸುಪ್ರೀತ ಪ್ರಾಯ 19 ವರ್ಷ ಎಂಬವರು ಸುಮಾರು 1 ವರ್ಷದಿಂದ ಗಾರ್ಬಲ್‌‌ನಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ 11.11.2022 ರಂದು ಬೆಳಿಗ್ಗೆ 04:00 ಗಂಟೆಯ ಸಮಯಕ್ಕೆ ಮನೆಯಲ್ಲಿ ವಾಂತಿಮಾಡಿರುತ್ತಾಳೆ ನಂತರ ಬೆಳಿಗ್ಗೆಯ ತನಕ ಹೊಟ್ಟೆನೊವೆಂದು ಹೇಳಿದ್ದು ಬೆಳಿಗ್ಗೆ 9:30 ಗಂಟೆಗೆ ಕಾಣಿಯೂರಿನ ಉದಯ ಕ್ಲಿನಿಕ್‌ ಆಸ್ಪತ್ರೆಗೆ ಹೋದಾಗ ಅಲ್ಲಿ ವೈದ್ಯಾಧಿಕಾರಿಗಳು ಪರೀಕ್ಷಿಸಿ ಚಿಕಿತ್ಸೆ ನೀಡಿ ಸ್ಕ್ಯಾನಿಂಗ್‌‌‌ ಮಾಡಿಸಿಕೊಂಡು ಬರುವಂತೆ ಸೂಚಿಸಿದ ಮೇರೆಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಅಲ್ಲಿ ಸ್ಕ್ಯಾನಿಂಗ್‌‌ ಮಾಡುವರೇ ಕೆವಿಜಿ ಆಸ್ಪತ್ರೆಗೆ ಹೋಗಲು ತಿಳಿಸಿದ್ದು, ಕೆವಿಜಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌‌ ಮಾಡಿ ಬಂದು ಸರಕಾರಿ ಆಸ್ಪತ್ರೆ ಸುಳ್ಯದಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಸ್ತ್ರೀರೋಗ ತಜ್ಞರಲ್ಲಿ ತೋರಿಸಲು ಸೂಚಿಸಿದ ಮೇರೆಗೆ ದಿನಾಂಕ 12.11.2022 ರಂದು ಸುಳ್ಯ ಕೆವಿಜಿ ಮೆಡಿಕಲ್‌ ಕಾಲೇಜಿನಲ್ಲಿ ದಾಖಲಿಸಿ ಎರಡು ದಿನಗಳ ಚಿಕಿತ್ಸೆ ಪಡೆದು ನಂತರ ಕಾಯಿಲೆ ಊಲ್ಬಣಗೊಂಡಿರುವುದರಿಂದ ವೈದ್ಯರ ಸಲಹೆಯ ಮೇರೆಗೆ ದಿನಾಂಕ 14.11.2022 ರಂದು ಮಂಗಳೂರಿನ ಫಾದರ್‌‌‌ ಮುಲ್ಲರ್‌‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿರುವ ಸಮಯ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:15.11.2022 ರಂದು ಮದ್ಯಾಹ್ನ 02:50 ಗಂಟೆಗೆ ವೈದ್ಯಾಧಿಕಾರಿಯವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ, ಈ ಬಗ್ಗೆ ಸುಬ್ರಮಣ್ಯ  ಪೊಲೀಸ್‌ ಠಾಣಾ ಯುಡಿಆರ್ ನಂಬ್ರ  21-2022 ಕಲಂ  174 CRPC  ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಬಾಲಕೃಷ್ಣ ಪ್ರಾಯ 49 ವರ್ಷ ತಂದೆ:ಕುಶಾಲಪ್ಪ ಗೌಡ ವಾಸ: ಪರಮಲೆ ಮನೆ, ಯೇನೆಕಲ್ಲು ಗ್ರಾಮ, ಕಡಬ ಎಂಬವರ ದೂರಿನಂತೆ ಪಿರ್ಯಾದಿದಾರರ ತಮ್ಮ ಧರ್ಮಪಾಲ ಪ್ರಾಯ 46 ವರ್ಷ ಎಂಬವರು ದಿನಾಂಕ 15.11.2022 ರಂದು ಸಂಜೆ 07:00 ಗಂಟೆಯ ವೇಳೆಗೆ ಅವರ ಬಾಬ್ತು ಅಡಿಕೆ ತೋಟಕ್ಕೆ ಹೋಳೆಗೆ ಪಂಪ್‌‌ ಹಚ್ಚಲು ಹೋದವರು ಮರಳಿ ಮನೆಗೆ ಬಾರದೇ ಇದುದ್ದರಿಂದ ಪಿರ್ಯಾದಿದಾರರು ಮತ್ತು ಅವರ ಅಣ್ಣ ಲಿಂಗಪ್ಪ ಗೌಡ ಹಾಗೂ ಇತರರು ಸೇರಿ ಅವರನ್ನು ಹುಡುಕಾಡಿ ಪತ್ತೆಯಾಗಿರುವುದಿಲ್ಲ ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಗೆ ವಿಚಾರ ತಿಳಿಸಿ ಪೊಲೀಸರು ಹಾಗೂ ಸ್ಥಳೀಯರೊಂದಿಗೆ ಹುಡುಕಾಡುತ್ತಿರುವಾಗ ದಿನಾಂಕ 16.11.2022 ರಂದು ಬೆಳಿಗ್ಗೆ 07:00 ಗಂಟೆಯ ಸಮಯಕ್ಕೆ ಕಡಬ ತಾಲೂಕು ಯೇನೆಕಲ್ಲು ಗ್ರಾಮದ ಪರಮಲೆ ಕಲ್ಲಾಜೆ –ಯೇನೆಕಲ್ಲು ಹೋಳೆಯಲ್ಲಿ ಇಬ್ಬರ ಮೃತ ದೇಹವು ನೀರಿನಲ್ಲಿ ದೊರೆತಿದ್ದು, ಮೃತರು ಪಂಪ್‌‌ ಹಚ್ಚಲು ಹೋದಾಗ ಫುಟ್‌‌ಬಾಲ್‌‌‌ ನಲ್ಲಿ ನೀರು ನಿಲ್ಲದೇ ಇದುದರಿಂದ ಸದ್ರಿ ಫುಟ್‌‌‌ಬಾಲ್‌‌‌ ಪೈಪನ್ನು ಮೇಲೆತ್ತಲು ಪ್ರಯತ್ನಿಸಿದಾಗ ಇಬ್ಬರು ಕಾಲು ಜಾರಿ ಆಯಾ ತಪ್ಪಿ ನೀರಿಗೆ ಬಿದ್ದು ನೀರಿನ ಸೆಳೆತಕ್ಕೆ ಸಿಕ್ಕಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ, ಈ ಬಗ್ಗೆ ಸುಬ್ರಮಣ್ಯ  ಪೊಲೀಸ್‌ ಠಾಣಾ ಯುಡಿಆರ್ ನಂಬ್ರ  20-2022 ಕಲಂ  174 CRPC  ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-11-2022 11:37 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080