ಅಭಿಪ್ರಾಯ / ಸಲಹೆಗಳು

 ಕಳವು ಪ್ರಕರಣ: 01

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜೀವನ್ ಪ್ರಾಯ:18 ವರ್ಷ ತಂದೆ: ಕೆ. ಪದ್ಮಯ್ಯ ಗೌಡ, ವಾಸ: ಕಂಚಿನಡ್ಕ ಮನೆ, ಶಿಶಿಲ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಕೆಎ 19 ಇಹೆಚ್ 0500 ನಂಬ್ರದ ಮೋಟಾರ್ ಸೈಕಲ್ ಹೊಂದಿದ್ದು,. ದಿನಾಂಕ;16.12.2022 ರಂದು ಎಂದಿನಂತೆ ಬೆಳಿಗ್ಗೆ 07;40 ಗಂಟೆಗೆ ಧರ್ಮಸ್ಥಳದ ಅತ್ತೆ ಮನೆಯಿಂದ ಹೊರಟು ಬೆಳಿಗ್ಗೆ 07;50 ಗಂಟೆಗೆ ಧರ್ಮಸ್ಥಳ ಖಾಸಗಿ ಬಸ್ಸು ತಂಗುದಾಣದ ವಠಾರದಲ್ಲಿ ಪಾರ್ಕ್ ಮಾಡಿ ಕೀ ಹಾಕಿ ನಂತರ ಧರ್ಮಸ್ಥಳದಿಂದ ಮೂಡಬಿದ್ರೆ ಕಡೆಗೆ ಹೋಗುವ ಕೆ.ಎಸ್ .ಆರ್.ಟಿ.ಸಿ ಬಸ್ಸಲ್ಲಿ ಮೂಡಬಿದ್ರೆ ಕಾಲೇಜಿಗೆ ಹೋಗಿದ್ದು, ಕಾಲೇಜ್ ಮುಗಿಸಿ ವಾಪಾಸು ಅಲ್ಲಿಂದ ಹೊರಟು  ಮಧ್ಯಾಹ್ನ 12;30 ಗಂಟೆಗೆ ಧರ್ಮಸ್ಥಳಕ್ಕೆ ಬಂದು ಪಿರ್ಯಾದಿದಾರರು  ಮೋಟಾರ್ ಸೈಕಲ್ ಪಾರ್ಕ್ ಮಾಡಿದ ಸ್ಥಳಕ್ಕೆ ಹೋದಾಗ ಅಲ್ಲಿ  ಬೆಳಿಗ್ಗೆ ನಿಲ್ಲಿಸಿ ಹೋದ ಮೋಟಾರ್ ಸೈಕಲ್ ಅಲ್ಲಿ ಇರಲಿಲ್ಲ. ನಂತರ ಪಿರ್ಯಾದಿದಾರರು ಎಲ್ಲಾ ಕಡೆ ಹುಡುಕಾಡಿ ವಿಚಾರವನ್ನು ಮನೆಯವರಿಗೆ ತಿಳಿಸಿ ಸುತ್ತಮುತ್ತ ಹುಡುಕಾಡಿದಲ್ಲಿ ಮೋಟಾರ್ ಸೈಕಲ್ ಪತ್ತೆಯಾಗಿರುವುದಿಲ್ಲ.ಪಿರ್ಯಾದಿಯ ಬಾಬ್ತು ಹೀರೋ ಮೋಟಾರ್ ಸೈಕಲ್ ಮೋಟೋಕಾರ್ಪ್ ಲಿಮಿಟೆಡ್ ಕಂಪನಿಯ  ನೀಲಿ ಕಪ್ಪು ಬಣ್ಣದ ಮೋಟಾರ್ ಸೈಕಲನ್ನು ದಿನಾಂಕ;16.12.2022 ರಂದು ಬೆಳಿಗ್ಗೆ 07;50 ಗಂಟೆಯಿಂದ ಮಧ್ಯಾಹ್ನ 12;30 ಗಂಟೆಯ ಮಧ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು,ಅದರ ಅಂದಾಜು ಮೌಲ್ಯ ರೂ,15,000/- ಆಗಬಹುದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಠಾಣಾ ಅಕ್ರ  ನಂಬ್ರ 90/2022 ಕಲಂ:379 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 01

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ನಿತೇಶ್, 30 ವರ್ಷ, ತಂದೆ : ಸದಾಶಿವ ಬೆಳ್ಚಡ, ವಾಸ: ಪದೆಂಜಾರ್ ಮನೆ, ಪುದು ಗ್ರಾಮ, ಫರಂಗೀಪೇಟೆ ಅಂಚೆ, ಬಂಟ್ವಾಳ ತಾಲೂಕು. ಎಂಬವರ ದೂರಿನಂತೆ ದಿನಾಂಕ  16.12.2022 ರಂದು ಪಿರ್ಯಾದುದಾರರು ತನ್ನ ಪತ್ನಿಯನ್ನು ಫರಂಗಿಪೇಟೆಯಿಂದ ಮನೆಗೆ ಕರೆದುಕೊಂಡು ಹೋಗಲು ಸಂಜೆ 7.30 ಗಂಟೆಗೆ ಬೈಕ್‌ನಲ್ಲಿ ಬಂದು ಪತ್ನಿಗೆ ಕರೆ ಮಾಡಿದಾಗ ಸ್ವೀಕರಿಸದೆ ಇದ್ದು ಮಂಗಳೂರಿನಿಂದ  ಬರುವಾಗ ತಡವಾಗುವುದರಿಂದ ವಾಪಾಸ್ಸು ಮನೆಗೆ ಹೋಗಿ ಬರುವುದಾಗಿ ಮನೆಗೆ  ಬೈಕ್‌ನಲ್ಲಿ ಹೋಗುತ್ತಾ ಫರಂಗಿಪೇಟೆಯ ಸಲಾಫಿ ಮಸೀದಿ ಬಳಿ ರಸ್ತೆಯ ಉಬ್ಬು ಬಳಿ ಬೈಕನ್ನು ನಿಧಾನ ಮಾಡಿದಾಗ ಹಿಂದಿನಿಂದ ಬಂದ ದ್ವಿಚಕ್ರ ವಾಹನವು ಪಿರ್ಯಾದುದಾರರ ಬೈಕ್‌ನ ಹಿಂಭಾಗಕ್ಕೆ ಢಿಕ್ಕಿಯಾಗಿದ್ದು ಪಿರ್ಯಾದುದಾರರು ಈ ಬಗ್ಗೆ ಸವಾರನಲ್ಲಿ ಕೇಳಿದಾಗ ಆತನು ಏಕಾಏಕಿಯಾಗಿ ಅವಾಚ್ಯ ಶಬ್ದಗಳಿಂದ ಬೈದು ಇನ್ನೂ ತಾಗಿಸುತ್ತೇನೆ ಎಂದು ಹೇಳಿ ಮುಂದೆ ಹೋಗಿದ್ದು, ಪಿರ್ಯಾದುದಾರರು ಮತ್ತೆ ಮನೆ ಕಡೆಗೆ ಹೋಗುತ್ತಾ ಜಂಕ್ಷನ್‌ ತಲುಪಿದಾಗ ಬೈಕ್‌ ಗೆ ಢಿಕ್ಕಿ ಮಾಡಿದ   ದ್ವಿಚಕ್ರ ಸವಾರನು ಅಲ್ಲಿ ನಿಂತುಕೊಂಡಿದ್ದು ಪಿರ್ಯಾದುದಾರರು ಹೋಗತ್ತಿದ್ದಂತೆ ಒಮ್ಮೆಲೇ ಕಬ್ಬಿಣದ ಪಟ್ಟಿಯಿಂದ ತಲೆಯ  ಎಡಭಾಗಕ್ಕೆ ಹೊಡೆದಾಗ ಅದು ಹೆಲ್ಮೇಟ್‌ಗೆ ತಾಗಿದ್ದು ಎಡಕೈ ಅಡ್ಡ ಹಿಡಿದಾಗ ಎಡಕೈ ಮೊಣಗಂಟು, ಎಡಭುಜಕ್ಕೆ ಹೊಡೆದಿರುವುದಾಗಿದೆ. ಬೊಬ್ಬೆ ಹೊಡೆದಾಗ ಜನರು ಬರುವುದನ್ನು ಕಂಡು  ಮುಂದಕ್ಕೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿದ್ದು ಅಲ್ಲಿಗೆ ಬಂದ ರಿಕ್ಷಾ ಚಾಲಕರೊಬ್ಬರು ಪಿರ್ಯಾದುದಾರರನ್ನು ತುಂಬೆಯ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಎಕ್ಸ್‌ ರೇ ಮಾಡಿ ಎಡಭುಜ ಮತ್ತು ಎಡಮೊಣಗಂಟಿನಲ್ಲಿ ಮೂಳೆ ಮುರಿತ ಆಗಿರುವುದಾಗಿ ತಿಳಿಸಿರುತ್ತಾರೆ .ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ  ಅ.ಕ್ರ  95/2022 ಕಲಂ 341,504, 506,326 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 01

  • ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ 15-12-2022 ರಂದು ಲೋಕೇಶ್.ಹೆಚ್.ಸಿ.ಬಂಟ್ವಾಳ ನಗರ ಪೊಲೀಸ್‌ ಠಾಣೆ ರವರು ಚಾಲಕ ಮಲ್ಲಿಕ್ ಸಾಬ್ ಜೊತೆ ಹೊಯ್ಸಳ-1 ರಲ್ಲಿ ಅಧಿಕಾರಿಯಾಗಿ ಕರ್ತವ್ಯದಲ್ಲಿ ಕಲ್ಲಡ್ಕದಲ್ಲಿರುವ  ಸಮಯ 23.00 ಗಂಟೆಗೆ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ದಾಸಕೋಡಿ ಎಂಬಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸುತ್ತಿದ್ದ ಕೆಎ 01.ಎಕೆ. 7947 ನೇ ದುರ್ಗಾಂಭ ಖಾಸಗಿ ಬಸ್ಸನ್ನು ಅಪರಿಚಿತ 5 ರಿಂದ 10 ಜನರು ತಡೆದು ನಿಲ್ಲಿಸಿರುತ್ತಾರೆ. ಎಂಬುದಾಗಿ ಬಂದ  ಮಾಹಿತಿಯಂತೆ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ದಾಸಕೋಡಿ ಎಂಬಲ್ಲಿಗೆ  23.15 ಗಂಟೆಗೆ ಹೋದಾಗ ಅಲ್ಲಿ ದುರ್ಗಾಂಭ ಖಾಸಗಿ ಬಸ್ಸನ್ನು ಕೆಎ-01-ಎಕೆ-7947ನೇ ಬಸ್ಸನ್ನು ಅಪರಿಚಿತ 5 ರಿಂದ 10  ಜನರು ಅಕ್ರಮ ಕೂಟ ಸೇರಿ ಬಸ್ಸನ್ನು ತಡೆದು ನಿಲ್ಲಿಸಿದ್ದು. ಅದರಲ್ಲಿ ಓರ್ವ ಯುವತಿ ಹಾಗೂ ಓರ್ವ ಹುಡುಗನನ್ನು ಸದರಿ ಅಪರಿಚಿತರು ಪ್ರಶ್ನಿಸುತ್ತಿರುವುದು ಕಂಡುಬಂದಿರುತ್ತದೆ. ಅಕ್ರಮ ಕೂಟ ಸೇರಿ ಬಸ್ಸನ್ನು ತಡೆದು ನಿಲ್ಲಿಸಿ ಬಸ್ಸಿನಲ್ಲಿ ಪ್ರಯಾಣಕ್ಕೆ ತೊಂದರೆ ನೀಡಿದ ಅಪರಿಚಿತ 5 ರಿಂದ 10 ಜನರ ವಿರುದ್ದ ಬಂಟ್ವಾಳ ನಗರ ಠಾಣಾ ಅ.ಕ್ರ: 116/2022 ಕಲಂ:  143, 147, 341 ಜೊತೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-12-2022 11:17 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080