ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ರಮೇಶ್ ಹೊಳ್ಳ ಪ್ರಾಯ: 59ವರ್ಷತಂದೆ: ವೆಂಕ್ರಮಣ ಹೊಳ್ಳ ವಾಸ: ಕೊರ್ಯ ಮನೆ, ಬಾಳ್ತಿಲ ಗ್ರಾಮ,ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ: 13.12.2021 ರಂದು ಬಂಟ್ವಾಳ ತಾಲೂಕು  ಬಾಳ್ತಿಲ  ಗ್ರಾಮದ  ದಾಸಕೋಡಿ ಎಂಬಲ್ಲಿ ಪಿರ್ಯಾದಿದಾರರ ಚಿಕ್ಕಪ್ಪ ರವರಾದ ಶಿವರಾಮ ಮಯ್ಯ ರವರು ಮಂಗಳೂರು-ಬೆಂಗಳೂರು ಹೆದ್ದಾರಿಯ ಬದಿಯಲ್ಲಿ ನಿಂತುಕೊಂಡಿದ್ದ ಸಮಯ ಸುಮಾರು ಬೆಳಿಗ್ಗೆ 9.30 ಗಂಟೆಗೆ ಕಲ್ಲಡ್ಕ ಕಡೆಯಿಂದ KA-21-EB-3512 ನೇ ಮೋಟಾರು ಸೈಕಲನ್ನು ಅದರ ಸವಾರ ದಯಾನಂದರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಶಿವರಾಮ ಮಯ್ಯ ರವರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಶಿವರಾಮ ಮಯ್ಯರವರ ಮುಖಕ್ಕೆ, ತಲೆಗೆ ರಕ್ತ ಗಾಯಗಳಾಗಿ ಕಲ್ಲಡ್ಕ ಪುಷ್ಪರಾಜ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ K.S.ಹೆಗ್ಗೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ಅ.ಕ್ರ. 140/2021  ಕಲಂ 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುತ್ತೂರು ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಕೆ ಭವಾನಿ, ಪ್ರಾಯ 45 ವರ್ಷ, ಗಂಡ: ರಾಮಚಂದ್ರ ಬೊಳುವಾರು, ವಾಸ: ಬೊಳುವಾರುಬೈಲು ಮನೆ, ಬೊಳುವಾರು, ಪುತ್ತೂರು ಕಸಬಾ ಗ್ರಾಮ, ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 16-12-2021 ರಂದು 08-00 ಗಂಟೆಗೆ ಆರೋಪಿ ಮೋಟಾರ್ ಸೈಕಲ್ ಸವಾರ ಅಂಶುಮಾನ್ ಶರ್ಮಾ ಎಂಬವರು ನೋಂದಣಿ ನಂಬ್ರ ಅಳವಡಿಸದೇ ಇರುವ ಹೊಸ YAMAHA FZ ಮೋಟಾರ್ ಸೈಕಲನ್ನು ಬೊಳುವಾರು-ದರ್ಬೆ ಸಾರ್ವಜನಿಕ ಮುಖ್ಯ ರಸ್ತೆಯಲ್ಲಿ ದರ್ಬೆ ಕಡೆಯಿಂದ ಬೊಳುವಾರು ಕಡೆಗೆ  ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಬೊಳುವಾರು ಬಸ್ ನಿಲ್ದಾಣದ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ, ಬೊಳುವಾರು ಬಸ್ ನಿಲ್ದಾಣದ ಬಳಿ ರಸ್ತೆ ದಾಟಲು ನಿಂತಿದ್ದ ಪಿರ್ಯಾದುದಾರರಿಗೆ ಮೋಟಾರ್ ಸೈಕಲ್ ಅಪಘಾತವಾಗಿ ಪಿರ್ಯಾದುದಾರರು ರಸ್ತೆಗೆ ಬಿದ್ದ ಪರಿಣಾಮ, ತಲೆಯ ಎಡಹಿಂಭಾಗ, ಬಲಹಿಂಭಾಗ ಹಾಗೂ ಎಡಮೊಣಕೈಗೆ ಗಾಯಗಳಾಗಿ, ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  153/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಉಪ್ಪಿನಂಗಡಿ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ತಿಮ್ಮಪ್ಪ , ಪ್ರಾಯ: 36 ವರ್ಷ. ತಂದೆ: ನಾರ್ಣಪ್ಪ ಗೌಡ    ಕಡಬ ತಾಲೂಕು   ಎಂಬವರ ದೂರಿನಂತೆ ಅವರ ತಮ್ಮ ದಿನೇಶನು ತನ್ನ ಮದುವೆಯ ದಿನದ ಪ್ರಯುಕ್ತ  ದಿನಾಂಕ:15-12-2021 ರಂದು ಶ್ರೀಸೌತಡ್ಕ ದೇವಸ್ಥಾನಕ್ಕೆ ಹೋಗುವರೇ ಮನೆಯಿಂದ ದ್ವಿಚಕ್ರ ವಾಹನ ನಂಬ್ರ ಕೆ ಎ 19 ಇ,ಹೆಚ್ 9262 ನೇದರಲ್ಲಿ  ತನ್ನ ಹೆಂಡತಿ ಗೀತಾ ಪ್ರಾಯ 30 ವರ್ಷ ಹಾಗು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಹೊರಟು ಮಾದೇರಿ ಕೊಲ್ಯೊಟ್ಟು ಸಾರ್ವಜನಿಕ ರಸ್ತೆಯಲ್ಲಿ ಹೋಗುವಾಗ ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಕೊಂತ್ರಿಜಾಲು ಕೊಳ್ಯೊಟ್ಟು ಅಂಗನವಾಡಿ ಬಳಿಗೆ ಬೆಳಿಗ್ಗೆ 11-00 ಗಂಟೆಗೆ ತಲುಪುತ್ತಿದ್ದಂತೆ ದ್ವಿಚಕ್ರ ಸವಾರನು ದ್ವಿಚಕ್ರ ವಾಹನವನ್ನು ಅಜಾಗರೂಕತೆ ಹಾಗು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಬಲಬದಿಗೆ ಮಗುಚಿ ಬಿದ್ದ ಪರಿಣಾಮ ಸಹ ಸವಾರರಾದ ಗೀತಾ(30) ಹಾಗೂ ಇಬ್ಬರು ಹೆಣ್ಣು ಮಕ್ಕಳು ರಸ್ತೆಗೆ ಬಿದ್ದು   ಶ್ರೀಮತಿ ಗೀತಾ ರವರ ತಲೆಗೆ ಮತ್ತು   ಮಗಳು ವಿಹಾನಿ (2 1/2 ) ರವರ ಕೈಗೆ ಗಾಯಗೊಂಡವರನ್ನು  ಚಿಕಿತ್ಸೆಯ  ಬಗ್ಗೆ ಮಂಗಳೂರು  ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ಶ್ರೀಮತಿ ಗೀತಾ ರವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:16-12-2021ರಂದು ಬೆಳಿಗ್ಗೆ 06.30ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆ 163/2021 ಕಲಂ: 279 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: 1

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಅಕ್ಷತಾ ಪ್ರಾಯ: 26 ವರ್ಷ ಗಂಡ: ರೆಜಿ   ವಾಸ; ಮೂಜಿನಾಡು ಹತ್ಯಡ್ಕ  ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಅವರ ತಮ್ಮ ಗಣೇಶ್ ಪ್ರಾಯ 24 ವರ್ಷ ಎಂಬವರು ದಿನಾಂಕ:14-12-2021 ರಂದು ರಾತ್ರಿ 9.30 ಗಂಟೆಗೆ ಮನೆಯಿಂದ ಹೊರಗೆ ಹೋದವರು ವಾಪಸ್ಸು ಮನೆಗೆ ಬಾರದೇ ಇದ್ದುದರಿಂದ ಸುತ್ತ ಮುತ್ತ ನೆರೆಕೆರೆಯವರಲ್ಲಿ ಹಾಗೂ ಸಂಭಂದಿಕರಲ್ಲಿ ವಿಚಾರಿಸಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ ಈವರೆಗೂ ಮನೆಗೂ ಬಾರದೆ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 87/2021  ಕಲಂ:ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 17-12-2021 11:16 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080