ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ವಿಟ್ಲ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಕು|| ಶ್ರುತಿ ಪ್ರಾಯ 23ವರ್ಷ ತಂದೆ:ದಿ||ಲಕ್ಷ್ಮಣ ಆಚಾರ್ಯ ವಾಸ:ನಿಡ್ಯಾರ ಮನೆ ಅನಂತಾಡಿ ಗ್ರಾಮ ಬಂಟ್ವಾಳ ತಾಲೂಕು ಎಂಬವರು ತಮ್ಮ ಸಂಬಂದಿ ಅನಸೂಯ ರವರ ಬಾಬ್ತು ಕೆಎ-21-ಡಬ್ಲ್ಯ-3999 ನಂಬ್ರದ ದ್ವಿ ಚಕ್ರ ವಾಹನದಲ್ಲಿ ತಮ್ಮ ಮನೆ ಕಡೆಯಿಂದ ವಿಟ್ಲ ಕಡೆಗೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮ ಒಕ್ಕೆತ್ತೂರು ಎಂಬಲ್ಲಿ ದಿನಾಂಕ:13.02.2021ರಂದು ಸಮಯ 09:10 ಗಂಟೆಗೆ ಸಹ ಸವಾರಳಾಗಿ ಕುಳಿತುಕೊಂಡು ಬರುತ್ತಿರುವಾಗ ಕಲ್ಲಡ್ಕ ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ ಕೆಎ-42-2370 ನಂಬ್ರದ ಟಿಪ್ಪರ್‌ ಲಾರಿಯ ಚಾಲಕ ಅಜಾಗರೂಕತೆಯಿಂದ ತನ್ನ ಟಿಪ್ಪರ್‌ ಲಾರಿಯನ್ನು ಚಲಾಯಿಸಿ ಸ್ಕೂಟರ್‌ನ ಬಲ ಬದಿಗೆ ತಾಗಿಸಿ ಮುಂದೆ ಸಂಚರಿಸಿದ ಪರಿಣಾಮ ಸ್ಕೂಟರ್‌ ಸವಾರಿ ಮಾಡುತ್ತಿದ್ದ ಗಾಯಾಳು ಅನಸೂಯ ರವರಿಗೆ ತರಚಿದ ಹಾಗೂ ರಕ್ತಗಾಯವಾಗಿದ್ದಲ್ಲದೇ ಸಹಸವಾರಳಾಗಿ ಕುಳಿತಿದ್ದ ಪಿರ್ಯಾದುದಾರರಿಗೂ ಸಹ ತರಚಿದ ಹಾಗೂ ಗುದ್ದಿನ ನೋವು ಗಾಯವಾಗಿರುತ್ತದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 28/2021 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಹರೀಶ್‌ ಕುಮಾರ್‌ ಎಮ್‌ ವಿ  ತಂದೆ ಅಣ್ಣು ನಾಯ್ಕ ನಾರ್ಕೋಡು ಮನೆ ಆಲೆಟ್ಟಿ ಗ್ರಾಮ ಸುಳ್ಯ ತಾಲೂಕು ಎಂಬವರು ದಿನಾಂಕ: 10.02.2021 ಸಮಯ ಸುಮಾರು 21:20 ಗಂಟೆಗೆ ತಮ್ಮ ಬಾಬ್ತು ಡಿಯೋ ಸ್ಕೂಟಿ ನಂಬ್ರ ಕೆಎ 21 ಯು 1587 ನೇದರಲ್ಲಿ ಸುಳ್ಯ- ಮಡಿಕೇರಿ ರಾಜ್ಯ ಹೆದ್ದಾರಿಯ ಮೂಲಕ ಸುಳ್ಯ ಬಸ್ ನಿಲ್ದಾಣದಿಂದ ಗಾಂಧಿನಗರಕ್ಕೆ ಹೋಗುತ್ತಿರುವಾಗ ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಯೂನಿಯನ್ ಬ್ಯಾಂಕ್ ಬಳಿ ತಲುಪುತ್ತಿದ್ದಂತೆ ಪಿರ್ಯಾದುದಾರರ ಹಿಂಬದಿಯಿಂದ ಬಂದ ಕೆಎ 22 ಪಿ 0745 ನೇದರ ಕಾರು ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಕಾರನು ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಸ್ಕೂಟಿಗೆ ಡಿಕ್ಕಿವುಂಡು ಮಾಡಿದ ಪರಿಣಾಮ ಪಿರ್ಯಾದುದಾರರು ಸ್ಕೂಟಿ ಸಮೇತ ರಸ್ತೆಗೆ ಬಿದ್ದು ಗಾಯಗೊಂಡವರನ್ನು ಕಾರು ಚಾಲಕ ಆತನ ಕಾರಿನಲ್ಲಿ, ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕೆ,ವಿ,ಜಿ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಪಿರ್ಯಾದುದಾರರ ಸಂಬಂಧಿಕರು ಮಂಗಳೂರಿನ ಕೆಎಸ್ ಹೆಗ್ಡೆ ಆಸ್ಪತ್ರೆಗೆ ಸೇರಿಸಿರುವುದಾಗಿದೆ, ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ 14/2021 ಕಲಂ 279 337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.‌

 

ಇತರೆ ಪ್ರಕರಣ: 3

 

ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ;17-02-2021 ರಂದು 11.00 ಗಂಟೆ ಸಮಯಕ್ಕೆ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಮೈರೋಳ್ತಡ್ಕ ಸಾರ್ವಜನಿಕ ಸ್ಥಳದಲ್ಲಿ   ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ಬಂದ ಖಚಿತ ವರ್ತ ಮಾನದ ಮೇರೆಗೆ ಧರ್ಮಸ್ಥಳ ಪೊಲೀಸ್‌ ಠಾಣಾ ಪಿ.ಎಸ್.ಐ ಮತ್ತು ಸಿಬ್ಬಂದಿಗಳು ಧಾಳಿ ನಡೆಸಿ ಅಕ್ರಮವಾಗಿ  ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುತ್ತಿರುವುದು  ಕಂಡು ಬಂದ ಮೇರೆಗೆ  ಆರೋಪಿಗಳ ಬಳಿಯಿಂದ  ಗಾಜಿನ ಗ್ಲಾಸ್ -1 ಪ್ರೆಸ್ಟೇಜ್ ಕಂಪನಿಯ 180 ಎಂ.ಎಲ್ ನ ಖಾಲಿ ಪ್ಲಾಸ್ಟಿಕ್ ಬಾಟ್ಲಿ-1,  180 ಎಂ.ಎಲ್.ನ ಕುಡಿದು ಅರ್ಧ ಉಳಿದ ಪ್ರೆಸ್ಟೇಜ್ ಕಂಪೆನಿಯ ಪ್ಲಾಸ್ಟಿಕ್ ಬಾಟ್ಲಿ – 1 , 180 ಎಂ.ಎಲ್.ನ ಮದ್ಯ ತುಂಬಿದ ಪ್ರೆಸ್ಟೇಜ್  ಕಂಪೆನಿಯ  ಪ್ಲಾಸ್ಟಿಕ್ ಬಾಟ್ಲಿ-1 ನ್ನು  ಸ್ವಾಧೀನ ಪಡಿಸಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು .ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 12/2021 ಕಲಂ;15(ಎ) ,32(3) ಕರ್ನಾಟಕ ಅಬಕಾರಿ ಕಾಯ್ದೆ 1965 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಪುಂಜಾಲಕಟ್ಟೆ ಪೊಲೀಸ್ ಠಾಣೆ : ದಿನಾಂಕ: 17.02.2021  ರಂದು. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ  ಕಲಂ: 376, ಐ.ಪಿ.ಸಿ. ಮತ್ತು ಕಲಂ; 4, 6 ಪೋಕ್ಸೋ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ನಗರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಶ್ರೀಮತಿ ವಸಂತ ಲಕ್ಷ್ಮೀ ಪ್ರಾಯ 42 ವರ್ಷ ಗಂಡ: ನಾರಾಯಣ ಭಟ್ ವಾಸ: ಕಶೆಕೋಡಿ ಮನೆ ಬಾಳ್ತಿಲ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 17-02-2021 ರಂದು ಬೆಳಿಗ್ಗೆ 5.55 ಗಂಟೆಗೆ ಮನೆಯಿಂದ ದಾಸಕೋಡಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದು ಸಮಯ 6.05 ಗಂಟೆಗೆ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಗ್ರಾಮ ಪಂಚಾಯತ್  ಹತ್ತಿರ ತಲುಪಿ ದಾಸಕೋಡಿ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಪಿರ್ಯಾಧಿದಾರರ ಹಿಂಬದಿಯಿಂದ ಓರ್ವ ವ್ಯಕ್ತಿಯು ಓಡಿಕೊಂಡು ಬರುವುದನ್ನು ನೋಡಿ ಆತನನ್ನು ಪಿರ್ಯಾದಿದಾರರು ಪ್ರಶ್ನಿಸಿದಾಗ ಯಾರೋ ನನ್ನನ್ನು ಓಡಿಸಿಕೊಂಡು ಬರುತ್ತಿದ್ದಾರೆ ಅಂತ ಹೇಳುತ್ತಾ ಪಿರ್ಯಾಧಿದಾರರ ಹತ್ತಿರ ಬಂದವನೇ ಎಡಗೈಯಿಂದ ಪಿರ್ಯಾಧಿದಾರರ ಬಾಯಿಯನ್ನು ಮುಚ್ಚಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಎಳೆದನು, ಆ ಸಮಯ ಪಿರ್ಯಾಧಿದಾರರು ಕರಿಮಣಿ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡು ಬೊಬ್ಬೆ ಹಾಕಿದ್ದು, ಆ ಸಮಯ ಸದ್ರಿ ರಸ್ತೆಯ ದೂರದಲ್ಲಿದ್ದ ನೆರೆಮನೆಯ ವಿಶ್ವನಾಥ ರವರು ಬೊಬ್ಬೆ ಕೇಳಿ ಟಾರ್ಚ್ ಲೈಟ್ ನ್ನು ಹಾಕಿ ಪಿರ್ಯಾಧಿದಾರರ ಕಡೆಗೆ ಬರುವುದನ್ನು ನೋಡಿ ಸದ್ರಿ ವ್ಯಕ್ತಿಯು ಒಂದು ತುಂಡು ಕರಿಮಣಿ ಸರವನ್ನು ತಾಳಿ ಸಮೇತ ಕಿತ್ತುಕೊಂಡು ಅಲ್ಲೇ ಸ್ವಲ್ಪ ದೂರದಲ್ಲಿ ನಿಂತಿದ್ದ ಕಾರಿನಲ್ಲಿ ನೀರಪಾದೆ ಕಡೆಗೆ ಹೋಗಿರುತ್ತಾನೆ, ಸದ್ರಿ ಆರೋಪಿತನು ಸುಮಾರು 22 ರಿಂದ 30 ವರ್ಷ ವಯಸ್ಸಾಗಿದ್ದು, ಕಪ್ಪು ಬಣ್ಣದ ಕಾರಿನಲ್ಲಿ ಹೋಗಿರುತ್ತಾನೆ, ತುಂಡು ಕರಿಮಣಿ ಸರ ಹಾಗೂ ತಾಳಿವು 3 ಗ್ರಾಂ ವಿದ್ದು,ಅಂದಾಜು ಮೌಲ್ಯ 15000/- ರೂ ಆಗಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆ ಅ.ಕ್ರ ನಂ: 18-2021ಕಲಂ: 392 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-02-2021 11:42 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080