ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರಸಾದ್‌ ಕುಮಾರ್‌, ಪ್ರಾಯ 27 ವರ್ಷ, ತಂದೆ: ಈಶ್ವರ ಗೌಡ, ವಾಸ:  ಅಲುಂಬುಡ ಮನೆ, ಬನ್ನೂರು ಅಂಚೆ & ಗ್ರಾಮ,  ಪುತ್ತೂರು ತಾಲೂಕು ಎಂಬವರ ದೂರಿನಂತೆ ದಿನಾಂಕ 17-02-2023 ರಂದು 13-45 ಗಂಟೆಗೆ ಆರೋಪಿ ಕಾರು ಚಾಲಕ ಇಸ್ಮಾಯಿಲ್‌  ಎಂಬವರು KA-05-MF-9773 ನೇ ನೋಂದಣಿ ನಂಬ್ರದ ಕಾರನ್ನು ಪುತ್ತೂರು-ಉಪ್ಪಿನಂಗಡಿ ಸಾರ್ವಜನಿಕ ದ್ವಿ-ಪಥ ಡಾಮಾರು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿರುವುದನ್ನು ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕೇಪುಳು ಜಂಕ್ಷನ್‌ ಎಂಬಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಯಾವುದೇ ಸೂಚನೆಯನ್ನು ನೀಡದೇ, ಒಮ್ಮೆಲೇ ಮುಖ್ಯ ರಸ್ತೆಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರಾದ ಪ್ರಸಾದ್‌ ಕುಮಾರ್‌ ರವರು ಪಡೀಲ್‌ ಕಡೆಯಿಂದ ಕೃಷ್ಣನಗರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-19-ET-7649 ನೇ ನೋಂದಣಿ ನಂಬ್ರದ ಸ್ಕೂಟರಿಗೆ ಕಾರು ಅಪಘಾತವಾಗಿ, ಪಿರ್ಯಾದುದಾರರು ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು, ಬಲಕಾಲಿನ ಕೋಲು ಕಾಲಿಗೆ ಗುದ್ದಿದ ಹಾಗೂ ರಕ್ತಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತದಿಂದ ವಾಹನಗಳು ಜಖಂಗೊಂಡಿರುತ್ತವೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ 33/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ವಿಶ್ವನಾಥ್ ಪ್ರಾಯ: 39 ವರ್ಷ ತಂದೆ: ದಿ|| ಜಾರಪ್ಪ ಮುಗೇರಾ ವಾಸ : ಪೆರುಪಾದೆ ಮನೆ,  ಕಾವಳಪಡೂರು  ಗ್ರಾಮ, ವಗ್ಗ ಅಂಚೆ  ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ 16-02-2023 ರಂದು ಪಿರ್ಯಾದಿದಾರರ ಅಕ್ಕ ಲಕ್ಷ್ಮಿ ರವರು ಅಗತ್ಯ ಮನೆ ದಿನಸಿ ವಸ್ತುಗಳನ್ನು ಖರೀದಿಸಲು ಅಂಗಡಿಗೆ ಹೋಗಿ ಅಲ್ಲಿಂದ ವಾಪಾಸು ಮನೆ ಕಡೆಗೆ ಹೋಗುವರೆ  ರಸ್ತೆ ದಾಟುತ್ತಿದ್ದ ಸಮಯ ಸುಮಾರು ಸಂಜೆ 19:00 ಗಂಟೆಗೆ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಬಾಂಬಿಲ ಎಂಬಲ್ಲಿ ಬಂಟ್ವಾಳ – ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ತಂಗಡಿ ಕಡೆಯಿಂದ ದ್ವೀಚಕ್ರ ವಾಹನವೊಂದನ್ನು ಅದರ ಸವಾರ ದೂರದಿಂದ ನೋಡಿದರು ನಿದಾನಿಸದೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ಅಕ್ಕ ಲಕ್ಷ್ಮಿ ರವರಿಗೆ ಡಿಕ್ಕಿ ಹೊಡೆದು ಅಪಘಾತಪಡಿದ್ದು ಪರಿಣಾಮ ಲಕ್ಷ್ಮಿ ರವರು ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಎರಡು ಕಾಲಿಗೆ ಮತ್ತು ಮುಂಭಾಗ ತಲೆಗೆ ಗುದ್ದಿದ ಹಾಗೂ ತರಚಿದ ಗಾಯಗೊಂಡವರನ್ನು  ಚಿಕಿತ್ಸೆಯ ಬಗ್ಗೆ ಬಂಟ್ವಾಳ ತಾಲೂಕು ಸಾರ್ವಜನಿಕ  ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ. ಅಪಘಾತಪಡಿಸಿದ ಉಪಚರಿಸದೆ ಆಸ್ಪತ್ರಗೆ ದಾಖಲಿಸದೆ ವಾಹನ ಸಮೇತ ಪರಾರಿಯಾಗಿರುವುದಾಗಿದೆ.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 32/2023  ಕಲಂ: 279, 337 ಐಪಿಸಿ , 134(A&B) 187 ಐಎಮ್ ವಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವೇಣೂರು ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶ್ರೀಮತಿ ಕುಸುಮ   (34) ಗಂಡ: ಸತೀಶ್‌  ಪೂಜಾರಿ , ವಾಸ: ಮಾಂದಡ್ಕ ಮನೆ, ಮೂಡುಕೋಡಿಗ್ರಾಮ, ಬೆಳ್ತಂಗಡಿ   ಎಂಬವರ ದೂರಿನಂತೆ ದಿನಾಂಕ:16-02-2023 ರಂದು ಪಿರ್ಯಾದಿದಾರರು  ತನ್ನ   ಮಗ ಸುಮಂತ್‌   (10) ಎಂಬಾತನೊಂದಿಗೆ ವೇಣೂರು ಶ್ರೀ  ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವ  ಕಾರ್ಯಕ್ರಮದ ಕೆಲಸದ ನಿಮಿತ್ತ ಬಂದವರು   ರಾತ್ರಿ ಸುಮಾರು 08:00 ಗಂಟೆಗೆ  ವಾಪಾಸು  ಹೋಗುವರೇ     ಬೆಳ್ತಂಗಡಿ  ತಾಲೂಕು  ವೇಣೂರು  ಗ್ರಾಮದ ವೇಣೂರು ಶ್ರೀ  ಮಹಾಲಿಂಗೇಶ್ವರ   ದೇವಸ್ಥಾನದ  ದ್ವಾರದ  ಬಳಿ ನಿಂತಿಕೊಂಡಿರುವಾಗ  ಗುರುವಾಯನಕೆರೆ- ವೇಣೂರು  ಸಾರ್ವಜನಿಕ ರಸ್ತೆಯಲ್ಲಿ   ಗುರುವಾಯನಕೆರೆ  ಕಡೆಯಿಂದ ಕಾರು  ನಂಬ್ರ  KA  19ML 9163   ನೇ ದನ್ನು   ಅದರ  ಚಾಲಕ ದುಡುಕುತನ  ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಫಿರ್ಯಾದಿಯೊಂದಿಗೆ   ನಿಂತಿದ್ದ  ಬಾಲಕ ಸುಮಂತ್‌ (10)  ಎಂಬಾತನಿಗೆ  ಡಿಕ್ಕಿ  ಹೊಡೆದ ಪರಿಣಾಮ   ಎಡಕಾಲಿನ  ಪಾದದ ಬಳಿ  ರಕ್ತ ಗಾಯ ಉಂಟಾಗಿ ಬೆಳ್ತಂಗಡಿ ಅಭಯ ಆಸ್ಪತ್ರೆಗೆ ಚಿಕಿತ್ಸೆಗೆ  ದಾಖಲಾಗಿರುವುದಾಗಿದೆ.ಈ ಬಗ್ಗೆ ವೇಣೂರು ಪೊಲೀಸ್  ಠಾಣಾ ಅ.ಕ್ರ: 07/2023 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಫಿರ್ಯಾದಿದಾರರಾದ ಸನಾವುದ್ದೀನ್ ಕೌಕ್ರಾಡಿ ಪ್ರಾಯ: 36 ವರ್ಷ ವಾಸ: ಅಲಂಪಾಡಿ ಮನೆ, ಕೌಕ್ರಾಡಿ ಗ್ರಾಮ, ಕಡಬ ತಾಲೂಕು ಎಂಬವರ ದೂರಿನಂತೆ  ಕೌಕ್ರಾಡಿ ಗ್ರಾಮದಲ್ಲಿರುವ ಪಿರ್ಯಾದಿದಾರರ ತಮ್ಮ ಅತ್ತಾವುಲ್ಲ ಮತ್ತು ಅಕ್ಕ ಖಲಂದರ್ ಬೀಬಿರವರಿಗೆ ಸೇರಿದ ಜಮೀನನ್ನು ಪಿರ್ಯಾದಿದಾರರು   ರಖೋಲೆ ಮಾಡಿರುತ್ತಾರೆ. ದಿನಾಂಕ: 16.02.2023 ರಂದು ಬೆಳಿಗ್ಗೆ 9.00 ಗಂಟೆಗೆ ಸದ್ರಿ ಜಮೀನನ್ನು ಆರೋಪಿಗಳು  ಕಬಳಿಸುವ ಸಮಾನ ದುರುದ್ದೇಶದಿಂದ ಅಕ್ರಮ ಕೂಟವನ್ನು ಕಟ್ಟಿಕೊಂಡು ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಪ್ಲಾಸ್ಟಿಕ್ ಡೇರೆ /ಟೆಂಟ್ ಗಳನ್ನು ನಿರ್ಮಿಸಲು ಪ್ರಾರಂಭಿಸಿರುತ್ತಾರೆ. ಹಾಗೂ ಜಮೀನಿನಲ್ಲಿದ್ದ 8 ತೆಂಗಿನ ಗಿಡಗಳನ್ನು ಬೇರು ಸಮೇತ ಕಿತ್ತು ನಾಶ ಮಾಡಿರುತ್ತಾರೆ. ಹಾಗೂ   ತಂತಿ ಬೇಲಿಗೆ ಹಾಕಿದ 4-5  ಕಂಬಗಳನ್ನು ಕಿತ್ತು ಬಿಸಾಡಿರುತ್ತಾರೆ. ಪಿರ್ಯಾದಿದಾರರು ಆರೋಪಿಗಳಲ್ಲಿ ಪ್ರಶ್ನೆ ಮಾಡಿದಾಗ ಪಿರ್ಯಾದಿದಾರರಿಗೆ ಹಾಗೂ ಅವರ ಅಣ್ಣನವರಾದ ಗಫೂರ್ ಮತ್ತು ಸಿದ್ದೀಕ್ ರವರಿಗೆ ಅವ್ಯಾಚವಾಗಿ  ಬೈದು 1 ನೇ ಆರೋಫಿ ಮಹಮ್ಮದ್ ಭಾವನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ಪಿರ್ಯಾದಿದಾರರ ಮೇಲೆ ಹಲ್ಲೆಗೆ ಮುಂದಾಗಿರುತ್ತಾನೆ.  ಅಲ್ಲದೇ ಜಾಗವನ್ನು ಬಲತ್ಕಾರವಾಗಿ ಸ್ವಾಧೀನ ಪಡೆಯುವುದಾಗಿ ಬೆದರಿಕೆ ಒಡ್ಡಿರುವುದಲ್ಲದೇ ಉಳಿದ  ಆರೋಪಿಗಳು ಪಿರ್ಯಾದಿದಾರರ ಮೇಲೆ ಹಲ್ಲೆ , ಬೆದರಿಕೆ ನೀಡಲು ಕುಮ್ಮಕ್ಕು ನೀಡಿರುತ್ತಾರೆ  ಮತ್ತು ನಮ್ಮನ್ನು ಸುಮ್ಮನೆ  ಬಿಡುವುದಿಲ್ಲ  ಎಂದು ಬೆದರಿಕೆ ಒಡ್ಡಿರುತ್ತಾರೆ. ಈ ಹಿಂದೆಯೂ ಕೂಡ  ಆರೋಪಿಗಳು ಪಿರ್ಯಾದಿದಾರರ ಅಣ್ಣ ಗಫೂರ್  ಎನ್ನುವವರ ಮೇಲೆ ಹಲ್ಲೆ ನಡೆಸಿ ಕ್ರಿಮಿನಲ್ ಪ್ರಕರಣ ದಾಖಲಾಗಿ ವಿಚಾರಣೆಯಲ್ಲಿರುತ್ತದೆ . ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 14/2023 ಕಲಂ: 143, 147, 447, 427, 504, 506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

            ಸದ್ರಿ ಪ್ರಕರಣಕ್ಕೆ ಸಂಬಂಧಿಸಿದಂತೆ  ಎಸ್ ಅಬ್ದುಲ್ಲಾ (68) ವಾಸ:ಹೊಸಮಜಲು ಮನೆ ಕೌಕ್ರಾಡಿ ಗ್ರಾಮ ಕಡಬ ತಾಲೂಕು  ಎಂಬವರಿಂದ ಪ್ರತಿದೂರು ದಾಖಲಾಗಿದ್ದು, ಅದರಂತೆ ಆರೋಪಿಗಳಾದ 1.ಅಬ್ದುಲ್ ಗಫರ್ 2.ಸನಾವುದ್ದೀನ್ 3ಸಿದ್ದೀಕ್ ಎಂಬವರುಗಳ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 15/2023 ಕಲಂ: 447, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸುಜಿತ್‌, ಪ್ರಾಯ: 24 ವರ್ಷ ತಂದೆ: ದಿ/ಚಿದಾನಂದ ಪೂಜಾರಿ, ವಾಸ: ಪೂರ್ಜೆ ಬೈಲು ಮನೆ, ಧರ್ಮಸ್ಥಳ ಗ್ರಾಮ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರಾದ ಸುಜಿತ್‌ ಪ್ರಾಯ 24 ವರ್ಷ   ರವರು ಧರ್ಮಸ್ಥಳ ದೇವಸ್ಥಾನದ ವೈಶಾಲಿ ವಸತಿ ಗೃಹದಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡಿಕೊಂಡಿದ್ದು. ಪಿರ್ಯದುದಾರರು ಈ ದಿನ ದಿನಾಂಕ: 17.02.2023 ರಂದು ಬೆಳಿಗ್ಗೆ 05.30 ಗಂಟೆಗೆ ವೈಶಾಲಿ ವಸತಿ ಗೃಹದಲ್ಲಿ ಕರ್ತವ್ಯದಲ್ಲಿದ್ದ ಸಮಯ ಓರ್ವ ವ್ಯಕ್ತಿಯು ವೈಶಾಲಿ ವಸತಿ ಗೃಹದ ಬಳಿ ಇರುವ ಸಾರ್ವಜನಿಕ ಶೌಚಾಲಯದ ಬಳಿ ಬಿದ್ದುಕೊಂಡಿರುವುದಾಗಿ ಅಲ್ಲಿದ್ದ ಸಾರ್ವಜನಿಕರು ತಿಳಿಸಿದ್ದು, ಪಿರ್ಯಾದುದಾರರು ಕೂಡಲೇ ಹೋಗಿ ನೋಡಲಾಗಿ ಓರ್ವ ವ್ಯಕ್ತಿಯು ರಕ್ತ ವಾಂತಿ ಮಾಡಿಕೊಂಡು  ನೆಲದ ಮೇಲೆ ಅಸ್ವಸ್ಥರಾಗಿ ಬಿದ್ದುಕೊಂಡಿದ್ದವರನ್ನು ಪಿರ್ಯಾದುದಾರರು ಕೂಡಲೇ 108 ಅಂಬ್ಯುಲೆನ್ಸ್‌ ಗೆ ಕರೆ ಮಾಡಿ ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು. ಸದ್ರಿ  ಅಪರಿಚಿತ ಗಂಡಸು ಯಾವೂದೋ ಕಾಯಿಲೆಯಿಂದ ರಕ್ತ ವಾಂತಿ ಮಾಡಿ ಬಿದ್ದುಕೊಂಡಿದ್ದವರು ಚಿಕಿತ್ಸೆ ಬಗ್ಗೆ ಕಳುಹಿಸಿಕೊಟ್ಟಿದ್ದರೂ ಚಿಕಿತ್ಸೆ ಫಲಕರಿಯಾಗದೇ ಮೃತಪಟ್ಟಿದ್ದು. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆ 13/2023 ಕಲಂ: 174 ಸಿ ಆರ್‌ ಪಿ ಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-02-2023 10:16 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080