ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪ್ರಶಾಂತ್‌ (36) ತಂದೆ:ಡೇವಣ್ಣ ಗೌಡ  ವಾಸ: ಡೆಕ್ಕಲಕೋಡಿ ಮನೆ ಕನ್ಯಾಡಿ 2 ಧರ್ಮಸ್ಥಳ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ: 16-05-2022 ರಂದು KL 26 H 3971 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರ ವಿಪಿನ್‌ ಎಂಬವರು ಸಹಸವಾರನನ್ನಾಗಿ ಮ್ಯಾಥ್ಯೂ ಎಂಬವರನ್ನು ಕುಳ್ಳಿರಿಸಿಕೊಂಡು ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಸಂಜೆ 6:15 ಗಂಟೆಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ನೀರಚಿಲುಮೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಅವರ ವಿರುದ್ಧ ದಿಕ್ಕಿನಿಂದ ಅಂದರೆ ಧರ್ಮಸ್ಥಳ ಕಡೆಯಿಂದ ಉಜಿರೆ ಕಡೆಗೆ KA 19 AB 1817 ನೇ ಟಿಪ್ಪರ್‌ ಲಾರಿಯನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ದ್ವಿ ಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿ ಚಕ್ರ ವಾಹನ ಸವಾರ ಮತ್ತು ಸಹಸವಾರ ದ್ವಿ ಚಕ್ರ ವಾಹನದೊಂದಿಗೆ ರಸ್ತೆಗೆ ಬಿದ್ದು ಸವಾರ ವಿಪಿನ್‌ ರವರು ಎಡ ಕೈ ಗೆ ಗುದ್ದಿದ ರಕ್ತ ಗಾಯ ಹಾಗೂ ಸಹಸವಾರ ಮ್ಯಾಥ್ಯೂ ರವರು ಎಡ ಕಾಲಿಗೆ ಗುದ್ದಿದ ರಕ್ತಗಾಯಗೊಂಡು ಚಿಕಿತ್ಸೆ ಬಗ್ಗೆ ಮಂಗಳೂರು ವೆನ್‌ ಲಾಕ್‌ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 74/2022 279,337 ಭಾ ದಂ ಸಂ,ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಹಮೀದ್ ಕೆ (65) ತಂದೆ ಎ. ಇಸ್ಮಾಯಿಲ್ ವಾಸ: ಜಾರಿಗೆ ಬೈಲು ಮನೆ, ನ್ಯಾಯ ತರ್ಪು ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ದಿನಾಂಕ: 15.05.2022 ರಂದು ತನ್ನ ಪತ್ನಿ ಅನಾರೋಗ್ಯದ ಬಗ್ಗೆ ಮಂಗಳೂರು ಆಸ್ಪತ್ರೆಗೆ ಹೋಗಿ ರಾತ್ರಿ ಮಂಗಳೂರಿನ ತನ್ನ ಸಂಬಂದಿಕರ ಮನೆಯಲ್ಲಿ  ಉಳಕೊಂಡಿದ್ದು, ಮನೆಯಲ್ಲಿ ಫಿರ್ಯಾದಿದಾರರ ಮಗ ಸುಝೂನ್ ಒಬ್ಬನೇ ಹಗಲು ಹೊತ್ತಿಗೆ ಮನೆಯಲ್ಲಿದ್ದು ರಾತ್ರಿ ಸಮಯ ಅಲ್ಲೇ ತನ್ನ ಅಜ್ಜಿ ಮನೆಗೆ ಹೋಗಿ ಉಳಕೊಂಡಿದ್ದು, ದಿನಾಂಕ:15.05.2022 ರಂದು 19.30 ಗಂಟೆಯಿಂದ ದಿನಾಂಕ:16.05.2022 ರಂದು ಬೆಳಿಗ್ಗೆ 7.00 ಗಂಟೆ ಮಧ್ಯದ ಸಮಯದಲ್ಲಿ ವಾಸ್ತವ್ಯದ ಮನೆಯ ಹಿಂಬದಿ ಬಾಗಿಲ ಬೀಗವನ್ನು ಒಡೆದು ಒಳಪ್ರವೇಶಿಸಿ ಮನೆಯ ಒಳಗಿದ್ದ ಗೋದ್ರೇಜ್‌ನ್ನು ಒಡೆದು ಅದರಲ್ಲಿದ್ದ ರೂ 80,000 ನಗದು, ಡಬ್ಬಿಯಲ್ಲಿರಿಸಿದ ಸುಮಾರು ರೂ 5,000 ನಾಣ್ಯಗಳು ಹಾಗೂ ವಿವಿಧ ಕಂಪೆನಿಯ ಸುಮಾರು ರೂ 10,000/- ಮೌಲ್ಯದ ವಾಚ್‌ಗಳು-5 ಒಟ್ಟು- ರೂ 95,000/- ಮೌಲ್ಯದ ನಗದು ಹಾಗೂ ಸೊತ್ತುಗಳನ್ನು ಯಾರೂ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ 32/2022 ಕಲಂ 454, 457, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಹಲ್ಲೆ ಪ್ರಕರಣ: 2

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ರಕ್ಷಿತ್‌ ಹೆಗ್ಡೆ (30 ವರ್ಷ) ತಂದೆ: ರಾಜೇಂದ್ರ ಹೆಗ್ಡೆ ವಾಸ: ಉರ್ಲಾಂಡಿ ಮನೆ ,ರಕ್ಷಾ ನಿಲಯ ಬೈಪಾಸ್‌ ರಸ್ತೆ , ಪುತ್ತೂರು ಕಸಬಾ ಗ್ರಾಮ ,ಪುತ್ತೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ರಕ್ಷಿತ್‌ ಹೆಗ್ಡೆ (30 ವರ್ಷ) ತಂದೆ: ರಾಜೇಂದ್ರ ಹೆಗ್ಡೆ , ವಾಸ: ಉರ್ಲಾಂಡಿ ಮನೆ , ರಕ್ಷಾ ನಿಲಯ ಬೈಪಾಸ್‌ ರಸ್ತೆ , ಪುತ್ತೂರು ಕಸಬಾ ಗ್ರಾಮ ,ಪುತ್ತೂರು ತಾಲೂಕು ರವರು ದಿನಾಂಕ 16.05.2022 ರಂದು ರಾತ್ರಿ 7.30 ಗಂಟೆಗೆ ಮನೆಯಲ್ಲಿರುವಾಗ ಅವರ  ಸಂಬಂಧಿಯಾದ ತಿರುಮಲೇಶ್ ಹೆಗ್ಡೆ ರವರು ತಿರುಗಾಡುವ ರಸ್ತೆಯಲ್ಲಿ ಯಾಕೆ ಕಾರನ್ನು ನಿಲ್ಲಿಸಿದ್ದೀಯ ಎಂದು ಪಿರ್ಯಾದಿದಾರರ ಜೊತೆ ಜಗಳ ಮಾಡಿ ಹೋಗಿದ್ದು , ಬಳಿಕ ರಾತ್ರಿ ಪಿರ್ಯಾದಿದಾರರು ಮನೆಯ ಸಿಟ್ ಜೌಟ್ ನಲ್ಲಿ ಪಿರ್ಯಾದಿದಾರರು ಮತ್ತು ಅವರ ಸ್ನೇಹಿತ ಶಿವಪ್ರಸಾದ್‌ ನಾಯ್ಕ್‌ ರವರು ರಾತ್ರಿ ಸುಮಾರು 1.30 ಗಂಟೆಗೆ ಮಾತನಾಡಿಕೊಂಡು ಕುಳಿತಿರುವಾಗ ತಿರುಮಲೇಶ್ ಹೆಗ್ಡೆ ಮತ್ತು ಆತನ ತಂದೆ ಗೋಪಾಲಕೃಷ್ಣ ಹೆಗ್ಡೆರವರು  ಏಕಾಏಕಿ ಪಿರ್ಯಾದಿದಾರರ ಮನೆಯ ಸಿಟ್ ಜೌಟ್ ಗೆ ಅಕ್ರಮ ಪ್ರವೇಶ ಮಾಡಿ ತಿರುಮಲೇಶ್ ಹೆಗ್ಡೆರವರು ಪಿರ್ಯಾದಿದಾರರನ್ನು ಉದ್ದೇಶಿಸಿ ನೀನು ಬಾರಿ ರಸ್ತೆಯಲ್ಲಿ ಕಾರು ನಿಲ್ಲಿಸುತ್ತೀಯ ಎಂದು ಕೇಳಿ ಅವಾಚ್ಯ ಶಬ್ದಗಳಿಂದ ಬೈದು ಆತನ ಕೈಯಲ್ಲಿದ್ದ  ಕತ್ತಿಯಿಂದ ಪಿರ್ಯಾದಿದಾರರ ಎಡಭುಜಕ್ಕೆ ಹಲ್ಲೆ ಮಾಡಿದ್ದು, ಪುನಃ ಹಲ್ಲೆ ಮಾಡಲು ಬಂದಾಗ ಪಿರ್ಯಾದಿದಾರರು ಬಲಕೈಯನ್ನು ಅಡ್ಡ ಹಿಡಿದಾಗ ಎರಡು ಬೆರಳುಗಳಿಗೆ ರಕ್ತಗಾಯವಾಗಿರುತ್ತದೆ, ತಿರುಮಲೇಶ್ ಹೆಗ್ಡೆಯ ತಂದೆ ಶಿವಪ್ರಸಾದ್‌ ನಾಯ್ಕ್ ರವರನ್ನು ಕೈಯಿಂದ ದೂಡಿ ಬೀಳಿಸಿದ್ದು , ಪಿರ್ಯಾದಿದಾರರು ಬೊಬ್ಬೆ ಹೊಡೆದಾಗ ಆರೋಪಿಗಳು ಅವರ ಮನೆ ಕಡೆಗೆ ಹೋಗಿರುತ್ತಾರೆ . ನಂತರ ಪಿರ್ಯಾದಿದಾರರನ್ನು ಮನೆಯವರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 34/2022 ಕಲಂ: 447, 504, 324,323, ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ತಿರುಮಲಾಕ್ಷ ಪ್ರಾಯ: 30 ವರ್ಷ ತಂದೆ: ಗೋಪಾಲಕೃಷ್ಣ  ಹೆಗ್ಡೆ ವಾಸ: ರಾಜೀವ ನಿವಾಸ ಉರ್ಲಾಂಡಿ ಮನೆ ಪುತ್ತೂರು ಕಸ್ಬಾ ಗ್ರಾಮ ಪುತ್ತೂರು ಎಂಬವರ ದೂರಿನಂತೆ ಪಿರ್ಯಾದಿದಾರರಾದ ತಿರುಮಲಾಕ್ಷ ಪ್ರಾಯ: 30 ವರ್ಷ ತಂದೆ: ಗೋಪಾಲಕೃಷ್ಣ  ಹೆಗ್ಡೆ ವಾಸ: ರಾಜೀವ ನಿವಾಸ ಉರ್ಲಾಂಡಿ ಮನೆ ಪುತ್ತೂರು ಕಸ್ಬಾ ಗ್ರಾಮ ಪುತ್ತೂರು ತಾಲೂಕು ಎಂಬವರು ದಿನಾಂಕ: 16-05-2022 ರಂದು ತನ್ನ ತಾಯಿ  ಅಸೌಖ್ಯದಿಂದ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಆರೈಕೆ ಮಾಡಿ ವಾಪಸ್ಸು ಪಿರ್ಯಾದಿದಾರರ ಮನೆಗೆ ಹೋಗುವ ಸಮಯ ಸಂಜೆ 6:00 ಗಂಟೆಗೆ ಪಿರ್ಯಾದಿದಾರರ ಮನೆಯ ಹತ್ತಿರ ಮನೆಗೆ ಹೋಗುವ ರಸ್ತೆಗೆ  ಪಿರ್ಯಾದಿದಾರರ ಸಂಬಂಧಿ ರಕ್ಷಿತ್ ಹೆಗ್ಡೆ ಎಂಬಾತನು ಆತನ ಕಾರು ನಂಬ್ರ ಕೆ.ಎ 19 ಎಂ.ಕೆ 3055 ನೇದನ್ನು ಅಡ್ಡ ನಿಲ್ಲಿಸಿದ್ದನು. ಪಿರ್ಯಾದಿದಾರರು ಆತನಲ್ಲಿ ಕಾರನ್ನು ತೆಗೆಯಲು ಹೇಳಿದಕ್ಕೆ  ಪಿರ್ಯಾದಿದಾರರನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಾಗ ಪಿರ್ಯಾದಿದಾರರು ಕೂಡಲೇ 112 ನೇ ತುರ್ತು ನಂಬರಿಗೆ ಕರೆ ಮಾಡಿ ಸ್ಥಳಕ್ಕೆ ಪೊಲೀಸರು ಬಂದು ಠಾಣೆಗೆ ಹೋಗಿ ದೂರು ನೀಡುವಂತೆ ತಿಳಿಸಿದರು ಬಳಿಕ  ಸಮಯ ರಾತ್ರಿ 11:00 ಗಂಟೆಗೆ ಪಿರ್ಯಾದಿದಾರರು ಮನೆಯಲ್ಲಿರುವಾಗ ರಕ್ಷಿತ್ ಹೆಗ್ಡೆ ಪಿರ್ಯಾದಿದಾರರಿಗೆ ಮತ್ತು ಪಿರ್ಯಾದಿದಾರರ ತಂದೆಗೆ ಅವಾಚ್ಯ ಶಬ್ದಗಳಿಂದ ಬೈದು ರಕ್ಷಿತ್ ಹೆಗ್ಡೆ ಮತ್ತು ಶರತ್ ಎಂಬವರು ಪಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ  ಮನೆಯ ಬಾಗಿಲಿಗೆ ಕಾಲಿನಿಂದ ತುಳಿದು ಒಳಪ್ರವೇಶಿಸಿ ಮರದ ದೊಣ್ಣೆಯಿಂದ ಮನೆಯ ಒಳಗಿದ್ದ , ಟಿ.ವಿ, ಪ್ರಿಡ್ಜ್ ಮನೆಯ ಕಿಟಕಿ ಮನೆಯ ಎರಡು ಬಾಗಿಲು ಮತ್ತು ಹೊರಗಡೆ ನಿಲ್ಲಿಸಿದ್ದ ಕಾರನ್ನು ಹುಡಿಮಾಡಿ ನಷ್ಟವನ್ನುಂಟು ಮಾಡಿರುತ್ತಾರೆ. ಪಿರ್ಯಾದಿದಾರರು ಮತ್ತು ಅವರ ತಂದೆ ತಡೆಯಲು ಹೋದಾಗ ಪಿರ್ಯಾದಿದಾರರಿಗೆ ರಕ್ಷಿತ್ ಹೆಗ್ಡೆಯು ಆತನ ಕೈಯಲ್ಲಿದ್ದ ಮರದ ದೊಣ್ಣೆಯಿಂದ  ಪಿರ್ಯಾದಿದಾರರ ಬಲಕಾಲಿನ ಮೊಣಕಾಲಿಗೆ, ಸೊಂಟಕ್ಕೆ, ಎದೆಯ ಭಾಗಕ್ಕೆ ಹೊಡೆದನು. ಪಿರ್ಯಾದಿದಾರರ ತಂದೆಯನ್ನು ದೂಡಿ ಹಾಕಿ ಕಾಲಿನಿಂದ ತುಳಿದನು . ಶರತ್ ಎಂಬಾತನು ಕಾಲಿನಿಂದ ತುಳಿದು ಕೈಯಿಂದ ಕೈಯಿಂದ ಹಲ್ಲೆ ಮಾಡಿರುತ್ತಾನೆ. ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ  ಪ್ರಗತಿ ಆಸ್ಪತ್ರೆ ಪುತ್ತೂರು ಇಲ್ಲಿ ಒಳರೋಗಿಯಾಗಿ  ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ  ಅ.ಕ್ರ: 35/2022 ಕಲಂ: 504, 448, 427, 323, 324 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಇತರೆ ಪ್ರಕರಣ: 3

  • ಪುತ್ತೂರು ನಗರ ಪೊಲೀಸ್ ಠಾಣೆ : ದಿನಾಂಕ: 17.05.2022 ರಂದು 00.15 ಗಂಟೆಗೆ ರಾಜೇಶ್ ಕೆ.ವಿ ಪೊಲೀಸ್ ಉಪನಿರೀಕ್ಷಕರು ಪುತ್ತೂರು ನಗರ ಪೊಲೀಸ್ ಠಾಣೆರವರು, ಠಾಣಾ ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕು  ಕೆದಿಲ ಗ್ರಾಮದ  ಸ್ವಾಗತನಗರ ಎಂಬಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರು ಹಣವನ್ನು ಪಣವಾಗಿಟ್ಟುಕೊಂಡು ಉಲಾಯಿ-ಪಿದಾಯಿ ಎಂಬ ಇಸ್ಪೀಟು ಆಟ ಆಡುತ್ತಿದ್ದಾಗ ದಾಳಿ ಮಾಡಿ ಇಸ್ಪೀಟು ಆಟವಾಡುತ್ತಿದ್ದ (1) ತಾರಾನಾಥ .ಕೆ ಪ್ರಾಯ 34 ವರ್ಷ, ವಾಸ : ಕೋಡಿಕುಂಡಾಜೆ ಮನೆ, ಕಡೆಶೀವಾಲಯ  ಗ್ರಾಮ, ಬಂಟ್ವಾಳ ತಾಲೂಕು ಮತ್ತು ( 2) ಪ್ರಶಾಂತ್‌ .ವೈ ಪ್ರಾಯ 27 ವರ್ಷ ವಾಸ: ಎನಾಜೆ ಮನೆ, ಪೆರಾಜೆ ಗ್ರಾಮ, ಬಂಟ್ವಾಳ ತಾಲೂಕು ಎಂಬವರನ್ನು ವಶಕ್ಕೆ ಪಡೆದಿದ್ದು 3 ಜನರು  ತಪ್ಪಿಸಿಕೊಂಡ ಓಡಿ ಹೋಗಿರುತ್ತಾರೆ,  ಓಡಿ ಹೋದವರ  ಹೆಸರು ವಿಳಾಸ ತಿಳಿಯಲಾಗಿ 1.ಹರೀಶ ಪೂಜಾರಿ ಪ್ರಾಯ 28 ವರ್ಷ ವಾಸ: ಎನಾಜೆ ಮನೆ, ಪೆರಾಜೆ ಗ್ರಾಮ, ಬಂಟ್ವಾಳ ತಾಲೂಕು ,2. ಚಂದ್ರಹಾಸ ಪೂಜಾರಿ ಪ್ರಾಯ 35 ವರ್ಷ ವಾಸ: ಮಿತ್ತಕುಂಡಾಜೆ ಮನೆ, ಕಡೆಶೀವಾಲಯ ಗ್ರಾಮ , ಬಂಟ್ವಾಳ ತಾಲೂಕು 3.ರಾಕೇಶ್‌ ಸಪಲ್ಯ ಪ್ರಾಯ 38 ವರ್ಷ ವಾಸ: ಬೊಲ್ಲುಕಲ್ಲು ಮನೆ,  ಪೆರಾಜೆ ಗ್ರಾಮ, ಬಂಟ್ವಾಳ ತಾಲೂಕು ಎಂದು ತಿಳಿಯಿತು. ಜೂಜಾಟದ ಸ್ಥಳದಲ್ಲಿ ಹಾಸಿದ್ದ ಹಳೇಯ ನ್ಯೂಸ್ ಪೇಪರ್, ಆಟಕ್ಕೆ ಉಪಯೋಗಿಸುತ್ತಿದ್ದ  ಇಸ್ಪೀಟು ಎಲೆಗಳು, ಇಸ್ಪೀಟು ಆಟಕ್ಕೆ ಉಪಯೋಗಿಸುತ್ತಿದ್ದ  ನಗದು ರೂ. 1,300 /- , ಆಟೋರಿಕ್ಷಾ , ಮೊಬೈಲ್‌ -2ನ್ನು  ಸ್ಥಳದಲ್ಲಿಯೇ  ಸ್ವಾಧೀನಪಡಿಸಿಕೊಳ್ಳಲಾಯಿತು. ಸ್ವಾಧೀನಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ 1,55,300/-ಆಗಬಹುದು. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ  ಅ.ಕ್ರ: 33/2022 ಕಲಂ: 87 ಕೆ.ಪಿ ಆಕ್ಟ್   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಬೆಳ್ಳಾರೆ ಪೊಲೀಸ್ ಠಾಣೆ : ದಿನಾಂಕ 17-05-2022 ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 44/2022 ಕಲಂ 3(1)(R)(S) SC/ST Act 2015ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ : ದಿನಾಂಕ: 17.05.2022  ರಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ಅ,ಕ್ರ 54/2022 ಕಲಂ: 403,405,409,415,420,464,468,477 ಎ ಮತ್ತು 34 ಐಪಿಸಿ ಐಪಿಸಿ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ಪ್ರೇಮ ದುರ್ಗಾ ನಗರ ಮನೆ, ಕುರಿಯಾಳಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರು ಗಂಡ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದು  ಪಿರ್ಯಾದಿಧಾರರ ಗಂಡ ವಿಶ್ವನಾಥ ರವರು  ಮರದ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ಗಂಡ  ವಿಶ್ವನಾಥ ರವರಿಗೆ ಒಂದು ವರ್ಷದಿಂದ ಅಸ್ತಮ ಖಾಯಿಲೆ ಇದ್ದು ಔಷದಿ ಮಾಡುತ್ತಿದ್ದರು. ಪಿರ್ಯಾದಿದಾರರ ಗಂಡ ವಿಶ್ವನಾಥ ರವರು ಮದ್ಯ ಸೇವನೆ ಮಾಡಿಕೊಂಡಿದ್ದು ಸುಮಾರು  ಒಂದು ವಾರದಿಂದ ಕೆಲಸಕ್ಕೆ ಹೋಗದೆ  ಮನೆಯಲ್ಲಿಯೇ ಇದ್ದು  ದಿನಾಂಕ 17-05-2022 ರಂದು ಪಿರ್ಯಾದಿದಾರರು ಕೆಲಸಕ್ಕೆ ಹೋಗುವ ಮುಂಚೆ  ಗಂಡ ವಿಶ್ವನಾಥ ರವರು  ಬೆಳಿಗ್ಗೆ 07.00 ಗಂಟೆಗೆ ಕೆಲಸಕ್ಕೆ ಹೋಗಿದ್ದು ಪಿರ್ಯಾದಿದಾರರ 08.30 ಗಂಟೆಗೆ  ಕೆಲಸಕ್ಕೆ ಹೋಗಿರುತ್ತಾರೆ. ಪಿರ್ಯಾದಿದಾರರು  ಮದ್ಯಾಹ್ನ 1.30 ಗಂಟೆಗೆ  ಮನೆಗೆ ಬಂದಾಗ  ಪಿರ್ಯಾದುದಾರರ ಗಂಡ  ಮನೆಯ  ಎದುರಿನ ಹಾಲ್ ನಲ್ಲಿ ನೇಣು ಬಿಗಿದುಕೊಂಡಿದ್ದು ಕೂಡಲೇ  ಪಕ್ಕದ ಮನೆಯವರಿಗೆ ತಿಳಿಸಿದ್ದು ಅಕ್ಕ ಪಕ್ಕದ ಮನೆಯ ಜನರು ಬಂದು ನೋಡಿದಾಗ ಪಿರ್ಯಾದುದಾರರ ಗಂಡ  ಗೊಡೆಗೆ ಅಳವಡಿಸಿದ ತಾಳೆ ಮರದ ಅಡ್ಡಕ್ಕೆ  ನೇಣು ಬಿಗಿದುಕೊಂಡು  ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ  ಯು ಡಿ ಆರ್  ನಂ 27/2022 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ರಶೀದಾ, ಪ್ರಾಯ: 32 ವರ್ಷ, ಗಂಡ: ನೂರುಲ್ಲಾ, ವಾಸ: ಪೊಮ್ಮಜೆ ಮನೆ,ಸೋಣಂದೂರು ಗ್ರಾಮ, ಪಣಕಜೆ ಅಂಚೆ, ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರಾದ ಶ್ರೀಮತಿ ರಶೀದಾ ಎಂಬವರ ಗಂಡ ನೂರುಲ್ಲಾ ಪ್ರಾಯ: 32 ವರ್ಷ ಎಂಬವರು ವೈಯಕ್ತಿಕ ವಿಚಾರದಲ್ಲಿ ನೊಂದು ಖಿನ್ನತೆಯಲ್ಲಿದ್ದವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 16.05.2022 ರಂದು ಮಧ್ಯಾಹ್ನದ ಹೊತ್ತು ಮದ್ಯಕ್ಕೆ ಇಲಿ ಪಾಷಾಣ ವಿಷ ಪದಾರ್ಥ ಸೇರಿಸಿ, ಅದನ್ನು ಸೇವಿಸಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಜಿಲ್ಲಾ ವೆನ್‌ಲಾಕ್‌ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈಧ್ಯರು ನೂರುಲ್ಲಾ ರವರನ್ನು ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದು, ದಿನಾಂಕ: 17.05.2022 ರಂದು ಬೆಳಿಗ್ಗೆ 07:22 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ವೈಧ್ಯರು ತಿಳಿಸಿರುವುದಾಗಿದೆ.ಈ ಬಗ್ಗೆ ಪುಂಜಾಲಕಟ್ಟೆ ಠಾಣಾ UDR NO 15/2022 ಕಲಂ: 174 ಸಿ ಆರ್‌ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-05-2022 10:46 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080