ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ವಿಟ್ಲ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಶ್ರೀ ರಾಜೇಂದ್ರ ಕೃಷ್ಣ ಪ್ರಾಯ 34 ವರ್ಷ ತಂದೆ ಕೃಷ್ಣ ಭಟ್  ವಾಸ ಪಂಜಿಗದ್ದೆ ಮನೆ   ವಿಟ್ಲ ಪಡ್ನೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 17-07-2022 ರಂದು ಪೈವಳಿಕೆ ಹೋಗಿ ಪೈಲ್ಸ್ ಬಗ್ಗೆ ವೈದ್ಯಾಧಿಕಾರಿಯವರನ್ನು ಬೇಟಿ ಮಾಡಿ ಮದ್ದು ತೆಗೆದುಕೊಂಡು ವಾಪಸ್ಸು ಮನೆಗೆ ತನ್ನ ಬಾಬ್ತು ಕಾರಿನಲ್ಲಿ ಉಪ್ಪಳ- ಕನ್ಯಾನ ಸಾರ್ವಜನಿಕ ರಸ್ತೆಯಲ್ಲಿ ಪೈವಳಿಕೆ ಕಡೆಯಿಂದ ಕನ್ಯಾನ ಮಾರ್ಗವಾಗಿ ಕಲ್ಲಡ್ಕ ಹೋಗುತ್ತಿರುವಾಗ  ಸುಮಾರು ರಾತ್ರಿ 7.45 ಗಂಟೆಗೆ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಕಮ್ಮಾಜೆ ಎಂಬಲ್ಲಿಗೆ ತಲುಪಿದಾಗ ತಾನು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಕಾರಿನ ಮುಂದೆ ಕನ್ಯಾನ ಕಡೆಗೆ ಹೋಗುತ್ತಿದ್ದ ಕೆಎ-19-ವೈ-8303ನೇ ನಂಬ್ರ ಬಜಾಜ್ ಕಂಪನಿಯ ಪ್ಲಾಟಿನ ಮೋಟಾರ್ ಸೈಕಲ್ ಸವಾರ ತನ್ನ ಮೋಟಾರ್ ಸೈಕಲ್ ಚಾಲನಾ ನಿಯಂತ್ರಣ ತಪ್ಪಿ ರಸ್ತೆಯ ತೀರಾ ಬಲಬದಿಗೆ ಹೋಗಿ ರಸ್ತೆಯ ಬಲ ಬದಿಯಲ್ಲಿರುವ ಮಣ್ಣಿನ ಧರೆಗೆ ಡಿಕ್ಕಿಯನುಂಟು ಮಾಡಿ ನೀರು ಹೋಗುವ ಕಣಿಗೆ ಬಿದ್ದವರನ್ನು ಪಿರ್ಯಾಧಿ ತಾನು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಕಾರನ್ನು ನಿಲ್ಲಿಸಿ ಅಪಘಾತಗೊಂಡವರ ಬಳಿ ಹೋಗಿ ನೋಡಲಾಗಿ ಸದ್ರಿಯವರು ಪಿರ್ಯಾಧಿದಾರರ ದೂರದ ಸಂಬಂಧಿ ಸತ್ಯನಾರಾಯಣ ಭಟ್ರವರು ಆಗಿದ್ದು. ಅಪಘಾತದಿಂದ ಅಸ್ವಸ್ಥಗೊಂಡವರನ್ನು ಅಸುಪಾಸಿನ ಸ್ಥಳೀಯರು ಮತ್ತು ಪಿರ್ಯಾಧಿದಾರರು ಉಪಚರಿಸಿ  ಪಿರ್ಯಾಧಿದಾರರ ಬಾಬ್ತು ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ  ರಾತ್ರಿ 9.00 ಗಂಟೆ ಸಮಯಕ್ಕೆ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದು ವೈದ್ಯಾಧಿಕಾರಿಯವರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 120/2022  ಕಲಂ: 279 ,304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಳವು ಪ್ರಕರಣ: 1

ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಆಶ್ರಫ್ ಕೆ  (32), ತಂದೆ: ಆದಂ, ವಾಸ: ಹುಣಸೆಪಲ್ಕೆ   ಮನೆ, ವೇಣೂರು  ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 16-07-2022 ರಂದು ರಾತ್ರಿ 11:00 ಗಂಟೆಯಿಂದ 17-07-2022 ರ ಬೆಳಿಗ್ಗೆ 05:00 ಗಂಟೆಯ ಮಧ್ಯಕಾಲದಲ್ಲಿ ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ಹುಣ್ಸೆಪಲ್ಕೆ ಎಂಬಲ್ಲಿರುವ ಫಿರ್ಯಾದಿದಾರರ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಫಿರ್ಯಾದಿದಾರರ ಬಾಬ್ತು ದ್ವಿಚಕ್ರ ವಾಹನ ಸಂಖ್ಯೆ: ಕೆಎ.21.ಯು.2988 ನೇಯದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ದ್ವಿಚಕ್ರ ವಾಹನವನ್ನು ಸುತ್ತ ಮುತ್ತಲಿನ ಪರಿಸರದಲ್ಲಿ ಹುಡುಕಾಡಿದರೂ ಪತ್ತೆಯಾಗದೇ ಇದ್ದು.ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 42-2022 ಕಲಂ 379   ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 3

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಭಾಸ್ಕರ್ ಎನ್ ಪ್ರಾಯ 49 ತಂದೆ: ದಿ ಗಂಗಯ್ಯ ಮೂಲ್ಯ ವಾಸ:  ಕಿನ್ನಿ ತೋಟ್ ಮನೆ ನೀರು ಮಾರ್ಗ ಅಂಚೆ ಮಂಗಳೂರು ಎಂಬವರ ದೂರಿನಂತೆ ಅವರ ತಮ್ಮನಾದ ಹೇಮಚಂದ್ರ ಹೆಂಡತಿಯ ಜೊತೆ ಪೆರಿಯೋಡಿ ಬೀಡು ಮನೆ ಕಳ್ಳಿಗೆ ಗ್ರಾಮ ಬಂಟ್ವಾಳ ತಾಲೂಕು ಎಂಬಲ್ಲಿ ವಾಸವಾಗಿದ್ದು  ಪೈಟಿಂಗ್ ಕೆಲಸವನ್ನು ಮಾಡಿಕೊಂಡಿರುತ್ತಾನೆ. ದಿನಾಂಕ 17/07/2022 ರಂದು ಬೆಳಿಗ್ಗೆ ಫಿರ್ಯಾದಿದಾರರ ತಮ್ಮ ನ ಹೆಂಡತಿ ಫಿರ್ಯಾದಿದಾರರಿಗೆ ಕರೆ ಮಾಡಿ ಮನೆಯ ಬಚ್ಚಲು ಕೋಣೆಯಲ್ಲಿ ನೀರು ಬಿಸಿ ಮಾಡಲು ಉಪಯೋಗಿಸುವ ವಿದ್ಯುತ್ ಕಾಯಿಲ್ ತಗುಲಿ ಮೃತ ಪಟ್ಟಿರುವುದಾಗಿ ತಿಳಿಸಿದಂತೆ, ಫಿರ್ಯಾದಿದಾರರು ತಮ್ಮನ ಮನೆಗೆ ಬಂದು ಪತ್ನಿಯಲ್ಲಿ ವಿಚಾರಿಸಲಾಗಿ ದಿನಾಂಕ: 16/07/2022 ರಂದು ಹೇಮಚಂದ್ರ ಕೆಲಸ ಮುಗಿಸಿ ಬಂದು ರಾತ್ರಿ 11.00 ಗಂಟೆಗೆ ಸ್ನಾನ ಮಾಡಲು ಬಚ್ಚಲು ಕೋಣೆಗೆ ಹೋಗಿ ಬಿಸಿ ನೀರು ಮಾಡಲು ವಿದ್ಯುತ್ ಕಾಯಿಲ್ ಬಳಸಿ ಚಿಲಕ ಹಾಕಿ ಸ್ನಾನ ಮಾಡಲು ಹೋಗಿದ್ದು, ರಾತ್ರಿ 1.00 ಗಂಟೆಯಾದರು ಕಾಣದೇ ಇರುವಾಗ ಕಿಟಕಿ ಮೂಲಕ ನೋಡಿದಾಗ ವಿದ್ಯುತ್ ಕಾಯಿಲ್ ತಗುಲಿ ಕೋಣೆಯ ಒಳಗೆ ಕುಸಿದು ಬಿದ್ದು ಮೃತಪಟ್ಟಿರುವುದಾಗಿ ತಿಳಿಸಿದಂತೆ ಪಿರ್ಯಾಧಿದಾರರು ಬಚ್ಚಲು ಮನೆಗೆ ಹೋಗಿ ನೋಡಲಾಗಿ ಫಿರ್ಯಾದಿದಾರರ ತಮ್ಮ ಹೇಮಚಂದ್ರ ಮೃತಪಟ್ಟಿರುವುದು ಕಂಡು ಬಂದಿದ್ದು. ಬಿಸಿ ನೀರು ಮಾಡಲು ಉಪಯೋಗಿಸಿದ ವಿದ್ಯುತ್ ಕಾಯಿಲ್ ತಗುಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 28/2022 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಸುಳ್ಯ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಸಿದ್ದಪ್ಪ (40) ತಂದೆ: ಗದಿಗಪ್ಪ ವಾಸ: ಹೊಸಮಣೆ ಗ್ರಾಮ, ಮಣಿಕಟ್ಟಿ ಸವದತ್ತಿ  ತಾಲೂಕು, ಬೆಳಗಾಂ ಜಿಲ್ಲೆ ಎಂಬವರ ದೂರಿನಂತೆ ಅವರು ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಂತೆ ದಿನಾಂಕ 16.07.2022 ರಂದು ಕೆಎ 19 ಎಫ್ 3020 ನೇ ಬಸ್ ನಲ್ಲಿ ಪಿರ್ಯಾದುದಾರರು ನಿರ್ವಾಹಕರಾಗಿ ಹಾಗೂ ಬಸ್ ನ ಚಾಲಕರಾಗಿ ಮಲ್ಲೇಶ್ (56) ರವರನ್ನು ಮೇಲಾಧಿಕಾರಿಗಳು ನೇಮಿಸಿದ್ದು. ಬಸ್ ನ್ನು ಸುಬ್ರಮಣ್ಹ್ಯ , ಬೀದಿಗುಡ್ಡೆ ಮಾರ್ಗವಾಗಿ ಸಂಚರಿಸಿಕೊಂಡು ಸುಳ್ಯ ದಿಂದ ಮರ್ಕಂಜಕ್ಕೆ 19:15 ಗಂಟೆಗೆ ತಲುಪಿ ಬಸ್ ನ್ನು ಸುಳ್ಯ ತಾಲೂಕು ಮರ್ಕಂಜ ಗ್ರಾಮದ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ, ವಿಶ್ರಾಂತಿ ಪಡೆಯುತ್ತಿರುವರೇ ಮಲ್ಲೇಶನ್ನು ಉಸಿರಾಟ ತೊಂದರೆಯಿಂದ ಎದೆನೋವು ಎಂದವನನ್ನು ಪಿರ್ಯಾದುದಾರರು ಅಲ್ಲೇ ಇದ್ದ ರಮೇಶ್ ಎಂಬವರ ಜೀಪಿನಲ್ಲಿ ಸುಳ್ಯದ, ಕೆ,ವಿ,ಜಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಸಮಯ ಸುಮಾರು 22:40 ಗಂಟೆಗೆ ಮಲ್ಲೇಶ್ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ .ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್ ನಂಬ್ರ 30/2022 ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಧರ್ಮಸ್ಥಳ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಲತಾ(63)ಗಂಡ: ದಿ.ತ್ರಿಮೂರ್ತಿ ವಾಸ: ದೊಡ್ಡಬನಹಳ್ಳಿ ಗ್ರಾಮ, ಬೆಂಗಳೂರು ಗ್ರಾಮಂತರ ಜಿಲ್ಲೆ ಎಂಬವರ ದೂರಿನಂತೆ ದಿನಾಂಕ:16-07-2022 ರಂದು ಮಗಳು ನಂದಿನಿ ಪ್ರಾಯ:36 ವರ್ಷ ಮತ್ತು ಅವಳ ಇಬ್ಬರು ಮಕ್ಕಳು ಹಾಗೂ   ಪಿರ್ಯಾದಿದಾರ ತಂಗಿ ಸರ್ವಮಂಗಳ ಮತ್ತು ಅವರ ಕುಟುಂಬದೊಂದಿಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆ  ಬಂದಿದ್ದು, ರಾತ್ರಿ 12:00 ರ ವೇಳೆಗೆ ಕನ್ಯಾಡಿ 2 ಆಶಯ ಲಾಡ್ಜ್ ನಲ್ಲಿ 3 ರೂಮ್  ಮಾಡಿಕೊಂಡಿದ್ದು ತಂಗಿದ್ದು.   ದಿನಾಂಕ:17-07-2022 ರಂದು ಬೆಳಿಗ್ಗೆ 8:30 ರ ವೇಳೆಗೆ  ಮಗಳು ಇದ್ದ ರೂಮ್ ಗೆ ಹೋಗಿ  ನೋಡಿದಾಗ ರೂಮ್ ಬಾಗಿಲು ತೆರೆದಿದ್ದು ಮಕ್ಕಳು  ಹೊರಗಡೆ ಆಟ ಆಡುತ್ತಿದ್ದು, ಮಗಳು ಸ್ನಾನಕ್ಕೆ ಹೋಗಿರಬಹುದೆಂದು ಭಾವಿಸಿ ಸ್ವಲ್ಪ ಸಮಯ ರೂಮ್ ನಲ್ಲಿ ಇದ್ದವರು. ತುಂಬಾ ಸಮಯ ಆದರೂ ಸ್ನಾನಗೃಹದಿಂದ ಹೊರಗೆ ಬಾರದೇ ಇದ್ದದರಿಂದ   ಪಿರ್ಯಾದಿದಾರರು ಮತ್ತು ಪಿರ್ಯದಿದಾರರ  ತಂಗಿಯ ಮಗ ರೂಮ್ ಬಾಯ್ ಗೆ ತಿಳಿಸಿ ಅವರು ಬಂದು  ಬಾತ್ ರೂಮ್ ಬಾಗಿಲು  ತೆರದು ನೋಡಲಾಗಿ ಪಿರ್ಯಾದಿದಾರರ ಮಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದು , ಕೂಡಲೇ ಖಾಸಗಿ ವಾಹನವೊಂದರಲ್ಲಿ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ಕರ್ತವ್ಯ ನಿರತ ವೈಧ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ ಅಕ್ರ ಯುಡಿಆರ್ ನಂಬ್ರ 40/2022 ಕಲಂ: 174 ಸಿಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-07-2022 02:15 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080