ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹಮ್ಮದ್‌ ನೌಫಾಲ್‌, ಪ್ರಾಯ 36 ವರ್ಷ, ತಂದೆ: ಸರಕಾರಿ ಶಾಲೆಯ ಹತ್ತಿರ, ಬೆಟ್ಟಂಪಾಡಿ, ಬೆಟ್ಟಂಪಾಡಿ ಅಂಚೆ ಮತ್ತು ಗ್ರಾಮ, ಪುತ್ತೂರು ಎಂಬವರ ದೂರಿನಂತೆ ದಿನಾಂಕ 16-08-2022 ರಂದು 10-00 ಗಂಟೆಗೆ ಆರೋಪಿ ಅಟೋರಿಕ್ಷಾ ಚಾಲಕ ಮೊಹಮ್ಮದ್‌ ಸಾದತ್‌ ಎಂಬವರು KA-21-C-0631 ನೇ ನೋಂದಣಿ ನಂಬ್ರದ ಅಟೋರಿಕ್ಷಾವನ್ನು ದರ್ಬೆ-ಪುತ್ತೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪುತ್ತೂರು ಕಡೆಯಿಂದ ದರ್ಬೆ ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ಅರುಣಾ ಸಿನಿಮಾ ಮಂದಿರದ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿದ ಪರಿಣಾಮ, ರಸ್ತೆಯ ಎಡಬದಿಯಲ್ಲಿ ರಸ್ತೆಯ ಬಲಬದಿಗೆ ದಾಟಲು ನಿಂತುಕೊಂಡಿದ್ದ ಅಬ್ದುಲ್ಲ ನೆಕ್ಕರೆ( 71 ವ) ಎಂಬವರಿಗೆ ಅಟೋರಿಕ್ಷಾ ಡಿಕ್ಕಿಯಾಗಿ ಅವರು ರಸ್ತೆಗೆ ಬಿದ್ದು, ಬಲಕಾಲಿನ ಕೋಲು ಕಾಲಿಗೆ, ತಲೆಯ ಹಿಂಬದಿಗೆ ಗುದ್ದಿದ ಹಾಗೂ ರಕ್ತಗಾಯವಾಗಿ ಪುತ್ತೂರು ಧನ್ವಂತರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಹೈಲ್ಯಾಂಡ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ ಅ.ಕ್ರ: 130/2022  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ನೆಬಿಸಾ, ಪ್ರಾಯ: 51 ವರ್ಷ, ಗಂಡ: ಕೆ. ಖಾಸಿಂ, ವಾಸ: ಕೂರ್ನಡ್ಕ ಮನೆ, ದರ್ಬೆ ಅಂಚೆ, ಕೆಮ್ಮಿಂಜೆ ಗ್ರಾಮ, ಪುತ್ತೂರು ಎಂಬವರ ದೂರಿನಂತೆ ಫಿರ್ಯಾದಿದಾರರವರು ದಿನಾಂಕ 16.08.2022 ರಂದು ಅವರ ಗಂಡನ ಬಾಬ್ತು ಕೆಎ-21-ಬಿ-7261 ನೇ ಆಟೋ ರಿಕ್ಷಾದಲ್ಲಿ ಕೂರ್ನಡ್ಕದಿಂದ ಸಂಪ್ಯಕ್ಕೆ ಮಾಣಿ – ಮೈಸೂರು ಹೆದ್ದಾರಿಯಲ್ಲಿ ಬರುತ್ತಾ ಸಂಜೆ ಸಮಯ ಸುಮಾರು 6.00 ಗಂಟೆಗೆ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಸಂಪ್ಯ ಕಮ್ಮಾಡಿಯ ಆಟೋ ಗ್ಯಾಸ್ ಪಂಪ್ ನ ಬಳಿಗೆ ತಲುಪಿದಾಗ ಖಾಸಿಂ ರವರು ಆಟೋ ರಿಕ್ಷಾವನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಆಟೋ ರಿಕ್ಷಾಕ್ಕೆ ನಾಯಿಯೊಂದು ರಸ್ತೆಯಲ್ಲಿ ಅಡ್ಡ ಬಂದಾಗ ಒಮ್ಮೆಲೇ ಬ್ರೇಕ್ ಹಾಕಿದಾಗ ಆಟೋ ರಿಕ್ಷಾವು ಬಲಗಡೆಗೆ ಡಾಮಾರು ರಸ್ತೆಗೆ ಮಗುಚಿ ಬಿದ್ದಾಗ ಸದ್ರಿ ಆಟೋ ರಿಕ್ಷಾದ ಹಿಂಬದಿಯಲ್ಲಿ ಕುಳಿತುಕೊಂಡಿದ್ದ ಫಿರ್ಯಾದಿದಾರರು ಕೂಡಾ ಬಿದ್ದು ಸದ್ರಿಯವರ ಬಲ ಕೈ ಆಟೋ ರಿಕ್ಷಾದಡಿಯಲ್ಲಿ ಸಿಲುಕಿಕೊಂಡಿದ್ದು, ಆಟೋ ರಿಕ್ಷಾ ಮಗುಚಿ ಬಿದ್ದದ್ದನ್ನು ನೋಡಿದ ಸಾರ್ವಜನಿಕರು ಬಂದು ಆಟೋ ರಿಕ್ಷಾವನ್ನು ಮೇಲೆತ್ತಿ ಫಿರ್ಯಾದಿದಾರರನ್ನು ಉಪಚರಿಸಿ ನೋಡಿದಾಗ ಸದ್ರಿಯವರ ಬಲ ಕೈ ಮಣಿ ಗಂಟಿಗೆ ಗುದ್ದಿದ ನೋವು ಮತ್ತು ಬೆನ್ನಿಗೆ ಗುದ್ದಿದ ರೀತಿಯ ನೋವುಂಟಾಗಿದ್ದು, ಆಟೋ ಚಲಾಯಿಸುತ್ತಿದ್ದ ಖಾಸಿಂ ರವರಿಗೆ ಯಾವುದೇ ಗಾಯವುಂಟಾಗಿರದೇ ಇದ್ದು, ಆಟೋ ರಿಕ್ಷಾದ ಬಲ ಬದಿ ಜಖಂಗೊಂಡಿರುತ್ತದೆ. ಸದ್ರಿ ಸ್ಥಳದಲ್ಲಿದ್ದ ಫಿರ್ಯಾದಿದಾರರ ಪರಿಚಯದ ಪಿಕಪ್ ಚಾಲಕ ಫಾರೂಕ್ ಮತ್ತು ಸಾರ್ವಜನಿಕರು ಸೇರಿ  ಫಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿ ಒಳರೋಗಿಯನ್ನಾಗಿ ದಾಖಲಿಸಿಕೊಂಡಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ. Cr.No : 85/2022  ಕಲo:279,337  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಸುಳ್ಯ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ರಾಜೇಶ್ ಟಿ. ಪ್ರಾಯ 32 ವರ್ಷ ತಂದೆ: ಕಣ್ಣ ಬೆಳ್ಚಪ್ಪಾಡ, ವಾಸ: ತೋಟಪಾಡಿ ಮನೆ, ಮಂಡೆಕೋಲು ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರಾದ ರಾಜೇಶ್ ಟಿ ರವರು ದಿನಾಂಕ 15.08.2022 ರಂದು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-21-ವೈ-7771 ನೇದರಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ದರ್ಶನ ಮುಗಿಸಿ ವಾಪಾಸು ಮನೆಗೆ ಬರುತ್ತಿರುವ ಸಮಯ 15.30 ಗಂಟೆ ಸಮಯಕ್ಕೆ ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಕರಿಯಮೂಲೆ ಎಂಬಲ್ಲಿಗೆ ತಲುಪಿದಾಗ ಮೇನಾಲ ಕಡೆಯಿಂದ ಸುಳ್ಯ  ಕಡೆಗೆ ಮೋಟಾರ್ ಸೈಕಲನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಒಂದು ಅಟೋರಿಕ್ಷಾವನ್ನು ಓವರ್‌ಟೇಕ್ ಮಾಡಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್ ಸೈಕಲಿಗೆ ಢಿಕ್ಕಿ ಹೊಡೆದುದರಿಂದ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಬಲಕಾಲಿನ ಪಾದಕ್ಕೆ ಮತ್ತು ಬೆರಳುಗಳಿಗೆ ರಕ್ತಗಾಯವಾಗಿದ್ದು, ಅಲ್ಲಿ ಸೇರಿದ ಜನರು ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಸುಳ್ಯ ಕೆವಿಜಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು, ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಅ,ಕ್ರ 92/2022          ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: 1

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀನಾಥ್ ಶೆಟ್ಟಿ (31) ತಂದೆ:ಸದಾನಂದ ಶೆಟ್ಟಿ ವಾಸ:ಕೊಡಕಲ್ ಮನೆ ಕುರ್ನಾಡ್ ಗ್ರಾಮ ಮತ್ತು ಅಂಚೆ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಫಿರ್ಯಾಧಿದಾರರಿಗೆ ಮೂರು ಹಿಟಾಚಿ ಇದ್ದು, ಅವರ ಒಂದು ಹಿಟಾಚಿಯು ಬೆಳ್ತಂಗಡಿ ತಾಲೂಕು, ಮೊಗ್ರು ಗ್ರಾಮದ, ಮೊಗೆರಡ್ಕ ದೇವಸ್ಥಾನದ ಬಳಿ ಎಪ್ರಿಲ್ ನಲ್ಲಿ ಕೆಲಸ ಮಾಡುತ್ತಿದ್ದು,ಮಳೆಗಾಲದಲ್ಲಿ ಕೆಲಸ ಕಡಿಮೆಯಾಗಿ ಹಿಟಾಚಿಯನ್ನು ಅಲ್ಲಿಯೇ ನಿಲ್ಲಸಿದ್ದು, ಮಳೆ ವಿಪರೀತವಾಗಿ ಜೂನ್ ತಿಂಗಳಲ್ಲಿ ಹಿಟಾಚಿಗೆ ಕೆಲಸ ಇಲ್ಲದೆ ನಿಲ್ಲಿಸಿದ್ದು, ಮಳೆ ಕಡಿಮೆಯಾದಾಗ ಫಿರ್ಯಾಧಿದಾರರು ಬಂದು ನಿಲ್ಲಿಸಿದ ಹಿಟಾಚಿಯನ್ನು ನೋಡಲಾಗಿ ಹಿಟಾಚಿಗೆ ಅಳವಡಿಸಿದ ಎರಡು ಬ್ಯಾಟರಿ ಹಾಗೂ ಹಿಟಾಚಿ ಒಳಗೆ ಇದ್ದ ಒಂದು ಬ್ಯಾಟರಿ  ಸೇರಿ ಮೂರು ಬ್ಯಾಟರಿಗಳನ್ನು ಯಾರೋ ಕಳ್ಳರು  ಕಳವು ಮಾಡಿದ್ದು ನಂತರ ನೋಡಿದಾಗ ಹಿಟಾಚಿಯಲ್ಲಿದ್ದ ಡೀಸೆಲ್ ಹಾಗೂ ಹಿಟಾಚಿಯ ಒಳಗಡೆ ಕ್ಯಾನಿನಲ್ಲಿ ತುಂಬಿಸಿ ಇರಿಸಿದ ಡೀಸೆಲ್ ಸೇರಿ  ಸುಮಾರು 400 ಲೀ  ಕೂಡ ಯಾರೊ ಕಳ್ಳರು ಕಳವು ಮಾಡಿರುತ್ತಾರೆ. ಕಳವಾದ ಬ್ಯಾಟರಿಯ ಅಂದಾಜು ಮೌಲ್ಯ ರೂ. 30,000/-ಆಗಬಹುದು. ಕಳವಾದ ಡೀಸಿಲ್ ನ ಅಂದಾಜು ಮೌಲ್ಯ ರೂ. ರೂ.31,000/- ಆಗಬಹುದು. ಅಲ್ಲದೇ ಹಿಟಾಚಿಯ ಸ್ಪಾನರ್ ಸೆಟ್ ಗಳು ಮತ್ತು ಆಯಿಲ್  ಕೂಡ ಕಳ್ಳತನವಾಗಿದ್ದು ಇದರ ಅಂದಾಜು ಮೌಲ್ಯ ರೂ 1,500/-ಆಗಬಹುದು.  ಬ್ಯಾಟರಿ, ಡೀಸಿಲ್,  ಮತ್ತು ಸ್ಪಾನರ್ ಸೆಟ್ಟ್ ಹಾಗೂ ಆಯಿಲ್ ನ  ಒಟ್ಟು ಅಂದಾಜು 62,500/- ಆಗ ಬಹುದು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 90/2022 ಕಲಂ: 379 ಭಾದಂಸಂ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 2

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಗೋಪಾಲಕೃಷ್ಣ  (57) ತಂದೆ:ಚಿನ್ನಪ್ಪ ಪೂಜಾರಿ  ವಾಸ: ಪುಂಡಿಕಲ್ ಮನೆ ಕೊಣಾಜೆ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ಫಿರ್ಯಾಧಿದಾರರ ಜಮೀನಿಗೆ ಎದ್ರಿದಾರರಾದ ಶ್ರಿಮತಿ ಸಾರಿಕ ಎಂಬವರು ದಿನಾಂಕ:17.08.2022 ರಂದು ಮಧ್ಯಾನ್ಹ ಸುಮಾರು 2-45 ಗಂಟೆಯ ಸಮಯಕ್ಕೆ ಫಿರ್ಯಾಧಿದಾರರು ಹಾಗೂ ಕೂಲಿ ಕೆಲಸದವರು ಊಟಕ್ಕೆಂದು ಮನೆಗೆ ಹೋಗಿ ಮರಳಿ ಜಮೀನಿಗೆ ಬರುತ್ತಿರುವಾಗ ಫಿರ್ಯಾಧಿದಾರರ ಜಮೀನಿಗೆ ಆರೋಪಿತಳು ಅಕ್ರಮ ಪ್ರವೇಶ ಮಾಡಿ ರಬ್ಬರ್ ಮರಗಳನ್ನು ಕಡಿದು ನಷ್ಠ ಉಂಟು ಮಾಡಿರುತ್ತಾಳೆ ಅಷ್ಟರಲ್ಲಿ ಫಿರ್ಯಾಧಿದಾರರು ತಕ್ಷೀರು ಸ್ಥಳಕ್ಕೆ ಹೋಗುವಾಗ ಆರೋಪಿತಳು ತಪ್ಪಿಸಿಕೊಂಡು ಓಡುವ ಸಂದರ್ಭದಲ್ಲಿ ತನ್ನಲ್ಲಿದ್ದ ಕತ್ತಿಯೊಂದಿಗೆ ನೆಲಕ್ಕೆ ಬಿದ್ದು ಗಾಯಮಾಡಿಕೊಂಡಿರುತ್ತಾಳೆ. ಬಳಿಕ ಆಕೆಯು ಬಿದ್ದಲ್ಲಿಂದ ಎದ್ದು ಫಿರ್ಯಾಧಿದಾರರನ್ನು ಉದ್ದೇಶಿಸಿ  ಈ ಜಮೀನಿಗೆ ನೀವು ಬಂದರೆ ನಿಮ್ಮನ್ನೆಲ್ಲಾ ಕಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾಳೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 91/2022 ಕಲಂ: 447,427,504,506  ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶೀಮತಿ ಸಾರಿಕ(57) ಗಂಡ:ಗಣೇಶ ಪೂಜಾರಿ  ವಾಸ: ಪುಂಡಿಕಲ್ ಮನೆ ಕೊಣಾಜೆ ಗ್ರಾಮ ಕಡಬ ತಾಲೂಕುಎಂಬವರ ದೂರಿನಂತೆ ಫಿರ್ಯಾಧಿದಾರರಾದ ಶ್ರೀಮತಿ ಸಾರಿಕ ಎಂಬವರು ದಿನಾಂಕ:17.08.2022 ರಂದು ಮಧ್ಯಾನ್ಹ 02-30 ಗಂಟೆ ಸಮಯಕ್ಕೆ ಮನೆಯ ಹೊರಗಡೆ ಇರುವ ಸಮಯ ಸಂಬಂಧಿಕರಾದ ಬಾಲಕೃಷ್ಣ ಹಾಗೂ ಗೋಪಾಲಕೃಷ್ಣ ಎಂಬವರು ಏಕಾ ಏಕಿಯಾಗಿ ಕತ್ತಿ ಮತ್ತು ದೊಣ್ಣೆಯನ್ನು ಹಿಡಿದುಕೊಂಡು ಫಿರ್ಯಾಧಿದಾರರ ಜಮೀನಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಬಾಲಕೃಷ್ನನು ಕತ್ತಿಯಿಂದ ಕಡಿಯಲು ಬಂದಾಗ ಫಿರ್ಯಾಧಿದಾರರು ತಪ್ಪಿಸಿಕೊಂಡ ಕಾರಣ ಎಡಬದಿ ತಲೆಗೆ ಕತ್ತಿ ತಾಗಿ ರಕ್ತ ಗಾಯವಾಗಿರುತ್ತೆ ಆ ಸಮಯ ಫಿರ್ಯಾಧಿದಾರರು ನೆಲಕ್ಕೆ ಬಿದ್ದಾಗ ಗೋಪಾಲಕೃಷ್ಣನು ಕಾಲಿನಿಂದ ತುಳಿದು ದೊಣ್ಣೆಯಿಂದ ಹಲ್ಲೆ ನಡೆಸಿರುತ್ತಾರೆ. ಆ ಸಮಯ ಫಿರ್ಯಾಧಿದಾರರು ಬೊಬ್ಬೆ ಹಾಕಿದಾಗ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ತಂದಿದ್ದ ಕತ್ತಿ ಹಾಗೂ ದೊಣ್ಣೆಯನ್ನು ಆರೋಪಿತರು ತೆಗೆದುಕೊಂಡು ಹೋಗಿರುತ್ತಾರೆ. ಗಾಯಗೊಂಡ ಫಿರ್ಯಾಧಿದಾರರ ತಮ್ಮ ಸುರೇಶ,ಚಂದ್ರಶೇಖರ, ಕೇಶವ ಮತ್ತು ಕೀರ್ತನ್ ಎಂಬವರು ಚಿಕಿತ್ಸೆಯ ಬಗ್ಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈಧ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಅ.ಕ್ರ 92/2022 ಕಲಂ:447, 504,324, 506 r/w 34 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಇತರೆ ಪ್ರಕರಣ: 1

  • ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ: 17.08.2022 ರಂದು ಬೆಳಿಗ್ಗೆ  09.00 ಗಂಟೆಗೆ ಉದಯರವಿ ಎಂ. ವೈ.  ಪೊಲೀಸ್‌ ಉಪನಿರೀಕ್ಷಕರು ಪುತ್ತೂರು ಗ್ರಾಮಾಂತರ  ಪೊಲೀಸ್‌ ಠಾಣೆರವರು ಕರ್ತವ್ಯದ ನಿಮಿತ್ತ ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಮಾಡಾವು ಎಂಬಲ್ಲಿಗೆ ತೆರಳಿದಾಗ ಅಲ್ಲಿ  ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬನು  ಅನುಚಿತವಾಗಿ ವರ್ತಿಸುತ್ತ ಸಾರ್ವಜನಿಕರಿಗೆ ಮುಜುಗರ ಉಂಟು ಮಾಡುವ ರೀತಿಯಲ್ಲಿ ವರ್ತಿಸುತ್ತಿರುವುದು ಕಂಡು ಬಂದಿದ್ದು, ಅದರಂತೆ ಸದ್ರಿಯವನನ್ನು ವಿಚಾರಿಸಲಾಗಿ ಸದ್ರಿ ವ್ಯಕ್ತಿಯು ಯಾವುದೋ ಮಾದಕ ವಸ್ತು ಸೇವಿಸಿ ನಶೆಯಲ್ಲಿರುವಂತೆ ಕಂಡು ಬಂದಿದ್ದು, ಆತನು ಮಾದಕ ದ್ರವ್ಯ ಗಾಂಜಾ ಸೇವನೆ ಮಾಡಿದ ಬಗ್ಗೆ ಸಂಶಯ ಕಂಡು ಬಂದಿರುವುದರಿಂದ ಆತನನ್ನು  ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ಸದ್ರಿಯವನು  ಮುಹಾದ್,  ಪ್ರಾಯ: 30 ವರ್ಷ, ತಂದೆ: ಇಬ್ರಾಹಿಂ ಮುಸ್ಲಿಯಾರ್, ವಾಸ: ಕೋಚಕಟ್ಟೆ ಮನೆ, ಪೆರಾಬೆ ಗ್ರಾಮ, ಕಡಬ ತಾಲೂಕು ಎಂಬುದಾಗಿ ಹೆಸರು ವಿಳಾಸ ತಿಳಿಸಿರುತ್ತಾನೆ. ಬಳಿಕ  ಸದ್ರಿಯವನ ಬಳಿ ಇದ್ದ AP31 BT 7777ನೇ ನೋಂದಣಿ ಸಂಖ್ಯೆಯ ಮಹೀಂದ್ರ ಸ್ಕಾರ್ಪಿಯೋ ವಾಹನವನ್ನು ಕೂಡಾ ಸ್ವಾಧೀನಪಡಿಸಿಕೊಂಡಿರುತ್ತಾರೆ. ನಂತರ ಸದ್ರಿಯವನನ್ನು ಮಂಗಳೂರು ದೇರಳಕಟ್ಟೆಯಲ್ಲಿರುವ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ, ಆತನು ಮಾದಕ ವಸ್ತುವಾದ ಗಾಂಜಾ ಸೇವಿಸಿರುವ ಬಗ್ಗೆ ವೈದ್ಯಕೀಯ ದೃಢಪತ್ರ ಪಡೆದುಕೊಂಡಿದ್ದು, ಸದ್ರಿ ಮುಹಾದ್‌ನು ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಸೇವಿಸಿ, ಸಾರ್ವಜನಿಕ ಸ್ಥಳದಲ್ಲಿ ಪತ್ತೆಯಾಗಿರುವುದರಿಂದ  ಸದ್ರಿ ಆರೋಪಿಯನ್ನು ಹಾಗೂ ಸದ್ರಿಯವನ ಬಳಿ ಇದ್ದ  AP  31 BT 7777 ನೇ ನೋಂದಣಿ ಸಂಖ್ಯೆಯ ಮಹೀಂದ್ರ ಸ್ಕಾರ್ಪಿಯೋ ವಾಹನವನ್ನು ಸ್ವಾಧೀನಪಡಿಸಿಕೊಂಡು ಈ ಬಗ್ಗೆ ಪುತ್ತೂರು ಗ್ರಾಮಾಂತರ  ಠಾಣಾ.Cr.No : 86/2022  ಕಲo:NARCOTIC DRUGS AND PSYCHOTROPIC SUBSTANCES ACT.1985 U/S 27(b) ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಬೆಳ್ತಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವೇಣುಗೋಪಾಲ ರೈ ಪ್ರಾಯ:42 ವರ್ಷ ತಂದೆ;ದಿ/ ರಘುನಾಥ ರೈ ವಾಸ; ಪಲ್ಲತಡ್ಕ ಮನೆ ರೇಖ್ಯಾ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಅಣ್ಣ ಮಂಜುನಾಥ ರೈ (50) ರವರು ನಿಶ್ಮಿತಾ ಬಸ್ಸಿನಲ್ಲಿ ನಿರ್ವಾಹಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 17-08-2022 ರಂದು ಬೆಂಗಳೂರಿನಿಂದ ಮೂಡಬಿದ್ರೆ ಹೋಗುವ ಸಮಯ ಬೆಳಿಗ್ಗೆ 8-00 ಗಂಟೆಗೆ ಬೆಳ್ತಂಗಡಿ ತಾಲೂಕು ಕಸಬಾ ಗ್ರಾಮದ ಬಸ್ಸು ನಿಲ್ದಾಣದ ಬಳಿ ಪ್ರಯಾಣಿಕರನ್ನು ಇಳಿಸಲು ಬಸ್ಸು ನಿಂತಿರುವ ಸಮಯ ಬಸ್ಸಿನ ಮೆಟ್ಟಿಲಿನ ಬಳಿ ಕುಸಿದು ಬಿದ್ದು, ಅಸ್ವಸ್ಥಗೊಂಡವರನ್ನು ಬಸ್ಸಿನ ಚಾಲಕ ಮೊಯಿದ್ದೀನ್‌ ಎಂಬವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷಿಸಿ ಮಂಜುನಾಥ ರೈ ರವರು ಬೆಳಿಗ್ಗೆ 08.45 ಗಂಟೆಗೆ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಠಾಣಾ UDR ನಂಬ್ರ: 35/2022 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ವಸಂತಿ ಎಲ್ (57)ಗಂಡ; ಕೆ. ಲಿಂಗಪ್ಪ ವಾಸ: ರಕ್ತೇಶ್ವರಿ ವಠಾರ ನೆಹರೂ ನಗರ ಅಂಚೆ ಕಬಕ ಗ್ರಾಮ ಪುತ್ತೂರು ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರವರ ತಮ್ಮ ಜಗದೀಶ್ ಭಟ್ ಪ್ರಾಯ 42 ವರ್ಷ ಎಂಬವರು ಅಂಗವಿಕಲನಾಗಿದ್ದು ಅವಿವಾಹಿತನಾಗಿದ್ದು ಒಬ್ಬಂಟಿಯಾಗಿ ಚಿಕ್ಕಮುಡ್ನೂರು ಗ್ರಾಮದ  ರೋಟರಿಪುರದಲ್ಲಿ ಅವರ ಮನೆಯಲ್ಲಿ ವಾಸವಾಗಿದ್ದರು. ಜಗದೀಶ್ ಭಟ್ ರವರು ಸುಮಾರು 12 ವರ್ಷಗಳ ಹಿಂದೆ ಆರೋಗ್ಯ ಸಮಸ್ಯೆ.   ಮೂರ್ಛೆ ರೋಗ, ಹೃದಯ ಸಂಬಂಧಿ ಖಾಯಿಲೆಗಳಿಂದ ಬಳಲುತ್ತಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ದಿನಾಂಕ: 17.08.2022 ರಂದು ಮಧ್ಯಾಹ್ನ ಸುಮಾರು 2.30 ಗಂಟೆಗೆ ಫಿರ್ಯಾದಿದಾರರ ತಂಗಿ ಫಿರ್ಯಾದಿದಾರರಿಗೆ ಫೋನ್ ಕರೆ ಮಾಡಿ ತಮ್ಮನಾದ ಜಗದೀಶ್ ಭಟ್ ರವರು ಮನೆಯ ಚಾವಡಿಯ ಪಕ್ಕಾಸಿಗೆ ನೈಲಾನ್ ಶಾಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿರುತ್ತಾರೆ. ಅದರಂತೆ ಫಿರ್ಯಾದಿದಾರರು ರೋಟರೀಪುರಕ್ಕೆ ಬಂದು ನೋಡಿದಾಗ ಜಗದೀಶ್ ಭಟ್ ರವರು ಮನೆಯ ಚಾವಡಿಯ ಪಕ್ಕಾಸಿಗೆ ಶಾಲಿನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಪುತ್ತೂರು ನಗರ ಠಾಣಾ  ಯುಡಿಆರ್‌: 22/2022 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-08-2022 10:27 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080