ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 2

 

ಪುತ್ತೂರು ಸಂಚಾರ ಪೊಲೀಸ್ ಠಾಣೆ:  ದಿನಾಂಕ 16-09-2021 ರಂದು 19-15 ಗಂಟೆಗೆ ಆರೋಪಿ ಚಾಲಕ ನಿಯಾಜ್ ಎಂಬವರು KA-19-C-9196 ನೇ ನೋಂದಣಿ ನಂಬ್ರದ ಜೆಸಿಬಿಯಂತೆ ಇರುವ ಟ್ರ್ಯಾಕ್ಟರ್ ವಾಹನವನ್ನು ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕಲ್ಲೇರಿ ಪೆಟ್ರೋಲ್ ಪಂಪ್ ಬಳಿ ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿರುವುದನ್ನು ಯಾವುದೇ ಸೂಚನೆ ನೀಡದೇ ಏಕಾಏಕಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಹೆದ್ದಾರಿಗೆ ಚಲಾಯಿಸಿದ ಪರಿಣಾಮ, ಪಿರ್ಯಾದಿದಾರರಾದ ಶ್ರೀಧರ್‌ ಭಟ್‌ ಕೆ, ಪ್ರಾಯ 54 ವರ್ಷ,   ತಂದೆ: ದಿ|| ನಾರಾಯಣ ಭಟ್‌, ವಾಸ: ಪದ್ಮಶ್ರೀ ಮನೆ, ಇಳಂತಿಲ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು ಎಂಬವರು ಮಡಂತ್ಯಾರು ಕಡೆಯಿಂದ ಇಳಂತಿಲ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-L-4192 ನೇ ನಂಬ್ರದ ಮೋಟಾರ್ ಸೈಕಲಿಗೆ ಅಪಘಾತವಾಗಿ, ಪಿರ್ಯಾದುದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಎಡಕೈಯ ಕಿರುಬೆರಳಿಗೆ, ತಲೆಗೆ, ಎಡಕಾಲಿನ ಮೊಣಕಾಲಿಗೆ ಗುದ್ದಿದ ಹಾಗೂ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  115/2021  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ರಂಜಿತ್ ಶೆಟ್ಟಿ ಪ್ರಾಯ: 25 ವರ್ಷ ತಂದೆ:ರಾಜು ಶೆಟ್ಟಿ ವಾಸ:ಶಬರೀಶ ನಗರ, ರಿಪ್ಪನ್ ಪೇಟೆ ಗ್ರಾಮ ಮತ್ತು ಅಂಚೆ, ಹೊಸ ನಗರ ತಅಲೂಕು, ಶಿವಮೊಗ್ಗ ಜಿಲ್ಲೆ ಎಂಬವರ ದೂರಿನಂತೆ ದಿನಾಂಕ: 16-09-2021 ರಂದು ಕೆ ಎ 15 ಎ 5029 ನೇ ಕಾರಿನಲ್ಲಿ ಜಾನಕಮ್ಮ ಮತ್ತು ಸುಧೀಂದ್ರ ಎಂಬವರನ್ನು ಕುಳ್ಳಿರಿಸಿಕೊಂಡು ಧರ್ಮಸ್ಥಳ – ಉಜಿರೆ ರಸ್ತೆಯಲ್ಲಿ ಉಜಿರೆ ಕಡೆಗೆ ಹೋಗುತ್ತಿರುವ ಸಮಯ ಸುಮಾರು ಸಂಜೆ 7:00 ಗಂಟೆಗೆ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಸಿದ್ದವನ ಎಂಬಲ್ಲಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ವಿರುದ್ದ ದಿಕ್ಕಿನಿಂದ ಅಂದರೆ ಉಜಿರೆಯಿಂದ ಧರ್ಮಸ್ಥಳ ಕಡೆಗೆ ಕೆ ಎ 19 ಎಂ ಎ 1977 ನೇ ಕಾರನ್ನು ಅದರ ಚಾಲಕ ದುಡುಕು ತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದನು. ಪರಿಣಾಮ ಪಿರ್ಯಾದಿದಾರರ ಕಾರಿನಲ್ಲಿದ್ದ ಜಾನಕಮ್ಮನವರಿಗೆ ಗಲ್ಲಕ್ಕೆ, ಸುಧೀಂದ್ರರವ ರಿಗೆ ಎದೆಯ ಬಲ ಭಾಗಕ್ಕೆ ಗುದ್ದಿದ ಗಾಯವಾಗಿರುತ್ತದೆ. ಹಾಗೂ ಡಿಕ್ಕಿ ಹೊಡೆದ ಕಾರಿನಲ್ಲಿದ್ದ ವಿಶ್ವಾಸ್‌ ಎಂಬವರಿಗೆ ಹಣೆಯ ಬಲ ಭಾಗಕ್ಕೆ , ತುಟಿಗೆ, ಎಡ ಕಾಲಿನ ಮೊಣ ಗಂಟಿಗೆ ತರಚಿದ ಗಾಯವಾಗಿದ್ದು, ಮನೋಜ್‌ ರವರಿಗೆ ಹಣೆಯ ಬಲ ಭಾಗಕ್ಕೆ, ಎಡಭುಜಕ್ಕೆ ತರಚಿದ ಗಾಯವಾಗಿರುತ್ತದೆ. ಮಿಥುನ್‌ ರವರಿಗೆ ಬಲ ಕಣ್ಣಿನ ಬಳಿ ಹಾಗೂ ಎಡ ಭುಜಕ್ಕೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳುಗಳು ಚಿಕಿತ್ಸೆ ಬಗ್ಗೆ ಉಜಿರೆ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 70/2021, ಕಲಂ; 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರೆ ಪ್ರಕರಣ: 1

ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ: 17-09-2021 ರಂದು ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಸಬರಬೈಲು ಎಂಬಲ್ಲಿ, ನಂದ ಕುಮಾರ್ ಎಂ.ಎಂ,  ಪೊಲೀಸ್ ಉಪ ನಿರೀಕ್ಷಕರು ಬೆಳ್ತಂಗಡಿ ಪೊಲೀಸ್ ಠಾಣೆ ರವರು  ಸಿಬ್ಬಂದಿಯವರೊಂದಿಗೆ ವಾಹನ ತಪಾಸನೆ ನಡೆಸುತ್ತಿರುವ ಸಮಯ 16-30 ಗಂಟೆಗೆ  ಪುಂಜಾಲಕಟ್ಟೆ ಕಡೆಯಿಂದ ಗುರುವಾಯನಕೆರೆ ಕಡೆಗೆ ಬರುತ್ತಿರುವ  ಕೆಎ-20-ಇಪಿ-1929 ನೇ  ಟಿವಿಎಸ್ ವೇಗೋ  ಮೋಟಾರ್ ಸೈಕಲ್ ನ್ನು ನಿಲ್ಲಿಸಿ ಪರಿಶೀಲನೆ ಮಾಡಿದಾಗ ಆರೋಪಿಗಳಾದ ಮಹಮ್ಮದ್ ರಫೀಕ್ ಹಾಗೂ ನೌಪಾಲ್ ಎಂಬವರುಗಳು ಯಾವುದೇ ಪರವಾನಿಗೆ ಇಲ್ಲದೇ  ಗಾಂಜಾ  ಸಾಗಾಟ ಮಾಡುತ್ತಿರುವ ಸಂಶಯ ಕಂಡು ಬಂದಿರುವುದರಿಂದ  ಕೂಡಲೇ ದೂರವಾಣಿ ಮೂಲಕ ಮೇಲಾಧಿಕಾರಿಯವರ ಅನುಮತಿ ಪಡೆದುಕೊಂಡು ಪತ್ರಾಂಕಿತ ಅಧಿಕಾರಿ ಹಾಗೂ ಪಂಚರ ಸಮಕ್ಷಮದಲ್ಲಿ ಆರೋಪಿಗಳ ವಶದಲ್ಲಿದ್ದ ಸುಮಾರು 45,850/- ರೂ ಮೌಲ್ಯದ ಒಟ್ಟು 1310 ಗ್ರಾಂ ಗಾಂಜಾವನ್ನು ಹಾಗೂ  ಸಾಗಾಟಕ್ಕೆ ಬಳಸಿದ ಮೋಟಾರ್ ಸೈಕಲ್ ನ್ನು  ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ವರದಿ ತಯಾರಿಸಿ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ 71-2021, ಕಲಂ:8 (ಸಿ),  ಜೊತೆಗೆ  20 (ಬಿ)(ii) NDPS Act 1985ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

 

ಬೆಳ್ಳಾರೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಗೀತಾ, 38 ವರ್ಷ, ಕೊಂ: ವಿಶ್ವನಾಥ, ವಾಸ: ಬೇರಿಕೆ ಮನೆ, ಸವಣೂರು ಗ್ರಾಮ, ಕಡಬ ತಾಲೂಕು. ಎಂಬವರ ದೂರಿನಂತೆ ಕಡಬ ತಾಲೂಕು ಸವಣೂರು ಗ್ರಾಮದ ಬೇರಿಕೆ ಎಂಬಲ್ಲಿನ ವಾಸಿ ವಿಶ್ವನಾಥ ಪ್ರಾಯ 40 ವರ್ಷ, ತಂದೆ: ಕಳಲ ಎಂಬವರು ದಿನಾಂಕ 16-09-2021 ರಂದು ರಾತ್ರಿ ಮನೆಯಲ್ಲಿ ಮಲಗಿದ್ದವರು ದಿನಾಂಕ 17-09-2021 ರಂದು 04-00 ಗಂಟೆಯಿಂದ 06-00 ಗಂಟೆಯ ಮಧ್ಯೆ ಅವಧಿಯಲ್ಲಿ ಎದ್ದು ನೆರೆಮನೆಯ ಕುಸುಮಾವತಿ ಎಂಬವರ ಬಾಬ್ತು ಗುಡ್ಡ ಜಮೀನಿನಲ್ಲಿರುವ ಗೇರು ಮರಕ್ಕೆ ಲುಂಗಿಯನ್ನು ಕುಣಿಕೆಯನ್ನಾಗಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯುಡಿ ಆರ್ ಸಂಖ್ಯೆ 20/2021 ಕಲಂ 174 ಸಿ.ಆರ್.ಪಿ.ಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಅರುಣ್ ಪ್ರಾಯ 34 ವರ್ಷ ತಂದೆ ನಾರಾಯಣ ವಾಸ ಮೈಪಡ್ಕ  ಮನೆ ಬಡಗಬೆಳ್ಳೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ  ಸೆಂಟ್ರಿಂಗ್ ಕೆಲಸ ಮಾಡಿಕೊಂಡಿಕೊಂಡು ಬರುತ್ತಿದ್ದು ಪಿರ್ಯಾದುದಾರರ  ತಮ್ಮ ನವೀನನು  ದಿನಾಂಕ 15-09-2021 ರಂದು   ಸಾಯಂಕಾಲ  ಮನೆಯಿಂದ ಹೋದವನು  ಕಾಣೆಯಾಗಿದ್ದು ನಂತರ ಕಾಣೆಯಾದ ನವೀನನ್ನು  ಹುಡುಕುತ್ತಿದ್ದು,   ಮದ್ಯಾಹ್ನ  ಪಿರ್ಯಾದುದಾರರ  ತಾಯಿ, ದೊಡ್ಡಮ್ಮ   ಕಿನ್ನಿ, ರವರು ಹುಡುಕುತ್ತಿದ್ದ ಸಮಯ  ತಮ್ಮ  ನವೀನನ  ಮೃತ ದೇಹ   ಕಲಾಕುಂಜ -ಏಚಿಲ್ ಎಂಬಲ್ಲಿ  ನೀರು ಹರಿಯುವ ತೋಡಿನಲ್ಲಿ  ಬಿದ್ದುಕೊಂಡಿರುವುದು ಮದ್ಯಾಹ್ನ  3.00 ಗಂಟೆಗೆ  ಕಂಡು ಬಂದಿರುವುದಾಗಿ ತಿಳಿಸಿದ್ದು, ಕೂಡಲೇ  ಪಿರ್ಯಾದುದಾರರು ಹೋಗಿ ನೋಡಿದಾಗ   ತಮ್ಮ ನವೀನ   ಮೃತ ದೇಹ  ತೋಡಿನಲ್ಲಿ  ಹರಿಯುವ ನೀರಿನಲ್ಲಿ ಬಿದ್ದುಕೊಂಡಿರುತ್ತದೆ . ತಮ್ಮ ನವೀನನು  ದಿನಾಂಕ 15-09-2021 ರಂದು  ಕೂಲಿ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದು  ಸಾಯಂಕಾಲ 4.00 ಗಂಟೆಗೆ ಮನೆಯಿಂದ  ಕೊಳತ್ತಮಜಲು  ಎಂಬಲ್ಲಿಗೆ  ಹೋಗುವರೇ   ಮೈಪಡ್ಕ   ತೋಡನ್ನು ದಾಟಿ ಹೋಗುತ್ತಿದ್ದ ಸಮಯ ಆಕಸ್ಮಿಕವಾಗಿ ನೀರಿಗೆ ಬಿದ್ದು ನೀರಿನಲ್ಲಿ  ಕೊಚ್ಚಿಕೊಂಡು ಹೋಗಿ    ಏಚಿಲ್- ಕಲಾಕುಂಜ  ಎಂಬಲ್ಲಿಯ ತೋಡಿನಲ್ಲಿ  ಮೃತ ದೇಹ ದೊರಕಿದ್ದು ಜಲಚರಗಳು ಅಲ್ಲಲ್ಲಿ ತಿಂದಿರುವುದು  ಕಂಡು ಬರುತ್ತದೆ.  ಪಿರ್ಯಾದುದಾರರ ತಮ್ಮ ನವೀನು ದಿನಾಂಕ 15-09-2021 ರಂದು ಸಂಜೆ 4.00 ಗಂಟೆಯಿಂದ 17-09-2021 ರಂದು  ಮದ್ಯಾಹ್ನ 3.00 ಗಂಟೆಯ ಮದ್ಯೆ   ಮನೆಯಿಂದ ಕೊಳತ್ತಮಜಲು  ಪೇಟೆಗೆಂದು ಹೋದವನು ವಿಪರೀತ ಮಳೆಯಿಂದಾಗಿ ತೋಡಿನಲ್ಲಿ ನೀರು ತುಂಬಿ ಹರಿಯುತ್ತಿದ್ದು  ಸಮಯ ತೋಡು ದಾಟುತ್ತಿದ್ದ  ಸಮಯ  ಆಕಸ್ಮಿಕವಾಗಿ  ಬಿದ್ದು   ನೀರಿನಲ್ಲಿ  ಕೊಚ್ಚಿಕೊಂಡು ಹೋಗಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಯು ಡಿ ಆರ್ ನಂ 36/2021 ಕಲಂ 174 ಸಿ ಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-09-2021 11:49 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080