ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

  • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ ದಿನಾಂಕ:16-09-2022 ರಂದು ಕೆಎ 70 H 4577 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರಳಾದ ಸುಮಿತ್ರಾ ಎಂಬವರು ಉಜಿರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ಸಂಜೆ 5.50 ಗಂಟೆಗೆ ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಕಾಶಿಬೆಟ್ಟು ಎಂಬಲ್ಲಿಗೆ ತಲುಪುತ್ತಿದ್ದಂತೆ ದ್ವಿ ಚಕ್ರ ವಾಹನದ ಹಿಂದಿನಿಂದ ಅಂದರೆ ಉಜಿರೆ ಕಡೆಯಿಂದ ಬೆಳ್ತಂಗಡಿ ಕಡೆಗೆ ಒಂದು ಅಪರಿಚಿತ ಆಟೋ ರಿಕ್ಷಾವನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ದ್ವಿ ಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿ ಚಕ್ರ ವಾಹನ ಸವಾರಳಾದ ಸುಮಿತ್ರಾ ರವರು ದ್ವಿ ಚಕ್ರ ವಾಹನದೊಂದಿಗೆ ರಸ್ತೆಗೆ ಬಿದ್ದು ಬಲ ಭಾಗದ ಸೊಂಟಕ್ಕೆ ಗುದ್ದಿದ ಗಾಯಗೊಂಡು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ.  ಸುಮಿತ್ರಳು ಗರ್ಬಿಣಿಯಾಗಿದ್ದು ಅಪಘಾತ ನಡೆಸಿದ ಅಪರಿಚಿತ ಆಟೋ ರಿಕ್ಷಾವನ್ನು ಅದರ ಚಾಲಕ ಅಪಘಾತದ ಬಳಿಕ ನಿಲ್ಲಿಸದೇ ಗಾಯಾಳುವನ್ನು ಉಪಚರಿಸದೇ, ಪೊಲೀಸರಿಗೆ ಮಾಹಿತಿ ನೀಡದೇ ಆಟೋ ರಿಕ್ಷಾ ಸಮೇತ ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 113/2022 ಕಲಂ; 279,337 ಭಾದಂಸಂ. ಮತ್ತು ಕಲಂ:134 (ಎ&ಬಿ) R/W 187 ಐಎಮ್‌ ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ನಾಗವ್ವ ಮಾದರ ( 34) ಗಂಡ: ಯಮನಪ್ಪ ಮಾದರ ವಾಸ: ಬೆನಕಟ್ಟಿ ಬಾಗಲಕೋಟೆ ಎಂಬವರ ದೂರಿನಂತೆ ಪಿರ್ಯಾದಿದಾರರು ಮಗ ಮತ್ತು ಗಂಡನೊಂದಿಗೆ ಬಂಟ್ವಾಳ ತಾಲೂಕು ಸಜಿಪಮೂಡ ಗ್ರಾಮದ ಬೊಳ್ಳಾಯಿ ಎಂಬಲ್ಲಿ ಸಂಜೀವ ಪೂಜಾರಿಯವರ ಬಾಬ್ತು ಬಿಡಾರದಲ್ಲಿ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರರ ಗಂಡ ಯಮನಪ್ಪನವರು ಬಿರ್ವ ಸೆಂಟರ್ ನಲ್ಲಿ ಸೆಕ್ಯೂರಿಟಿ ಆಗಿ ಕೆಲಸ ಮಾಡಕೊಂಡಿದ್ದರು. ಪಿರ್ಯಾದಿದಾರರ ಗಂಡ ಪಿರ್ಯಾದಿದಾರರಿಗೆ ತಿಳಿಸದೇ ಊರಿಗೆ ಹೋಗುತ್ತಿದ್ದು, ಹೋದ 2 ದಿನಗಳ ಬಳಿಕ ಕರೆ ಮಾಡಿ ತಿಳಿಸುತ್ತಿದ್ದರು. ಆದರೆ ದಿನಾಂಕ:10-09-2022 ರಂದು 9.15 ಗಂಟೆಗೆ ಬಿಡಾರದಿಂದ ಕೆಲಸಕ್ಕೆಂದು ಮೆಲ್ಕಾರ್ ಗೆ ಹೋದವರು ಬಿಡಾರಕ್ಕೂ ಬಾರದೇ, ಬಾಗಲಕೋಟೆಗೆ ಹೋಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ:89/2022 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಜೀವ ಬೆದರಿಕೆ ಪ್ರಕರಣ: 1

  • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಅಬ್ದುಲ ರಝಾಕ್‌ ಪ್ರಾಯ:45 ತಂದೆ:ಪಿ ಹುಸೈನ್‌  ವಾಸ:ಆಡ್ಕಾಡಿ ಮನೆ ಕುಟ್ರುಪ್ಪಾಡಿ ಗ್ರಾಮ ಕಡಬ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರಾದ ಅಬ್ದುಲ್ ರಜಾಕ್ ಎಂಬವರು ದಿನಾಂಕ:16.09.2022 ರಂದು ತನ್ನ ಬಾಬ್ತು KA-21 W-2405 ನೇ ಮೋಟಾರ್‌ ಸೈಕಲ್‌ನಲ್ಲಿ ಸಹ ಸವಾರಳಾಗಿ ತನ್ನ ಪತ್ನಿಯಾದ ಮಮ್ತಾಜ್ ಎಂಬವಳನ್ನು ಕುಳ್ಳಿರಿಸಿಕೊಂಡು ಅಗತ್ಯದ ಕೆಲಸದ ನಿಮಿತ್ತ ಕಡಬ ಪೇಟೆಗೆ ಬಂದು ನಂತರ ತನ್ನ ಮನೆಗೆ ಹೋಗುವರೇ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ  ಸಮಯ ಮದ್ಯಾಹ್ನ 03.30 ಗಂಟೆಗೆ ಕಡಬ ತಾಲೂಕು ಕಡಬ ತಾಲೂಕು ಕಛೇರಿ ಬಳಿ ತಲುಪಿದಾಗ ಅದೇ ಸಮಯಕ್ಕೆ ಹಿಂದುಗಡೆಯಿಂದ ಆರೋಪಿತನಾದ KA-21 Y-3797 ನೇ ಮೊಟಾರ್ ಸೈಕಲ್‌ ಸವಾರನಾದ ಆರೋಪಿತನು  ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯ ತನದಿಂದ ಮೋಟಾರ್‌ ಸೈಕಲ್‌ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಮೋಟಾರ್ ಸೈಕಲ್‌ಗೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಮೊಟಾರ್‌ ಸೈಕಲ್‌ ಸವಾರನಾದ ಪಿರ್ಯಾದುದಾರರು ಮತ್ತು ಸಹ ಸವಾರಳಾದ ಪತ್ನಿ ಮುಮ್ತಾಜ್‌ ಎಂಬವರು ರಸ್ತೆಗೆ ಬಿದ್ದಿರುತ್ತಾರೆ  ಕೂಡಲೇ ಸ್ಥಳದಲ್ಲಿದ್ದ ಸದ್ದಾಂ ಮತ್ತು ಪಾರೂಕ್‌ ಎಂಬವರು ಉಪಚರಿಸಿ ನೋಡಲಾಗಿ ಮಮ್ತಾಜ್‌ ರವರಿಗೆ ಬಲಕಾಲಿಗೆ,ಮಣಿಗಂಟಿಗೆ ಗುದ್ದಿದ ನೋವಾಗಿರುತ್ತದೆ ನಂತರ ಕಾರು ವಾಹನದಲ್ಲಿ ಗಾಯಾಳುಗಳನ್ನು ಕಡಬ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೀಸಿ  ಪ್ರಥಮ ಚಿಕಿತ್ಸೆ ಮಾಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಓಳರೋಗಿಯಾಗಿ ದಾಖಲಿಸಿರುವುದಾಗಿರುತ್ತದೆ.ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 80/2022 ಕಲಂ:279.337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 2

  • ಸುಳ್ಯ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಕೊಟ್ರು ಗೌಡ (38) ತಂದೆ: ಹೊನ್ನಪ್ಪ ಗೌಡ ವಾಸ: ಮುಂಡವಾಡ ಗ್ರಾಮ, ಮತ್ತು ಪೊಸ್ಟ್, ಮುಂಡರಗಿ ತಾಲೂಕು,ಗದಗ ಜಿಲ್ಲೆ ಎಂಬವರ ದೂರಿನಂತೆ ಪಿರ್ಯಾದುದಾರರು ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಜಟ್ಟಿಪಳ್ಳ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಸೆಂಟ್ರಿಂಗ್ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದುದಾರರ ಜೊತೆಯಲ್ಲಿ ಮೃತ ಲಾಲ್ ಸಾಬ್ ಆನೆಹೊಸರ (26) ಎಂಬಾತನು ಸಹ ಇದ್ದು, ಆತನು ಬೇರೆ ಕಡೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಕಳೆದ 12 ದಿನಗಳ ಹಿಂದೆ ಕೂಲಿ ಕೆಲಸಕ್ಕೆಂದು ಬೆಳಿಗ್ಗೆ ಹೋದವನು ರೂಮಿಗೆ ಬಂದಿರುವುದಿಲ್ಲ, ಪಿರ್ಯಾದುದಾರರು ಆತನು ಊರಿಗೆ ಹೋಗಿರಬಹುದೆಂದು ಭಾವಿಸಿ ಆತನ ಮೊಬೈಲ್ ಪೋನ್ ಗೆ ಕರೆ ಮಾಡಿದಾಗ ಪೋನ್ ಸ್ವೀಚ್ ಆಫ್ ಆಗಿದ್ದು, ಆತನ ಬಗ್ಗೆ ಕೆಲವರಲ್ಲಿ ವಿಚಾರಸಿದಾಗ ತಿಳಿದು ಬಂದಿರುವುದಿಲ್ಲ, ದಿನಾಂಕ: 17.09.2022 ರಂದು  ಪಿರ್ಯಾದುದಾರರು ಸುಳ್ಯ ಪೇಟೆಯಲ್ಲಿ ಕೂಲಿ ಕೆಲಸಕ್ಕೆ  ತೆರಳಿದಾಗ ಸಮಯ ಸುಮಾರು 16:00 ಗಂಟೆಗೆ ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಅಡ್ಕ ಸೇತುವೆ ಬಳಿ ಮೃತ ದೇಹವೊಂದು ಮರದ ಗೆಲ್ಲಿಗೆ ಸಿಕ್ಕಿ ತೇಲಾಡುತ್ತಿರುವ ಬಗ್ಗೆ ಬಂದ ಮಾಹಿತಿ ಪ್ರಕಾರ ಪಿರ್ಯಾದುದಾರರು ಸದ್ರಿ ಸ್ಥಳಕ್ಕೆ ಹೋದಾಗ ಮೃತ ದೇಹದವನ್ನು ಪೊಲೀಸರು ಪರೀಶಿಲನೆ ಮಾಡುತ್ತಿರುವಾಗ ಆತನ ಪ್ಯಾಂಟ್ ಹಿಂಬದಿ ಕಿಸೆಯಲ್ಲಿ ಲಾಲ್ ಸಾಬ್ ನ ಆಧಾರ್ ಕಾರ್ಟ್ ದೊರೆತ್ತಿದ್ದು, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು  ಉಸಿರುಗಟ್ಟಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಅರ್ ನಂಬ್ರ 40/2022 ಕಲಂ 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸುಬ್ರಹ್ಮಣ್ಯ ಉಪಾಧ್ಯಾಯ (60)  ತಂದೆ:ದಿಂ|| ಶಿವರಾಮ ಉಪಾಧ್ಯಾಯ  ವಾಸ:ಬಿಳಿವರ್ಗ (ನಗ್ರಿ) ಮನೆ ಆಲಂಕಾರು ಗ್ರಾಮ ಕಡಬ ತಾಲೂಕು  ಎಂಬವರ ದೂರಿನಂತೆ ಪಿರ್ಯಾದಿ ತಮ್ಮನಾದ ಸೂರ್ಯನಾರಾಯಣ ಉಪಾದ್ಯಾಯ ಎಂಬವರು ತನ್ನ ಮಗಳು ಮತ್ತು ಹೆಂಡತಿಯೊಂದಿಗೆ ವಾಸವಾಗಿರುತ್ತಾರೆ.ಸೂರ್ಯನಾರಾಯಣ ಉಪಾದ್ಯಾಯರಿಗೆ ಸುಮಾರು 15 ವರ್ಷಗಳಿಂದ ಮಾನಸಿಕ ಖಾಯಿಲೆ ಇದ್ದು ಈ ಬಗ್ಗೆ ಚಿಕಿತ್ಸೆ ಕೊಡಲಾಗಿದೆ. ಅಲ್ಲದೇ ಅವರ ಹೆಂಡತಿ ಕೂಡ ಮಾನಸಿಕ ಅಸ್ವಸ್ಥೆಯಾಗಿದ್ದು ನೆರೆಕೆರೆಯಲ್ಲಿ ಅವರೊಂದಿಗೆ ಯಾರೂ ಸಂಪರ್ಕದಲ್ಲಿರುವುದಿಲ್ಲ ದಿನಾಂಕ:16.09.022 ರಂದು ಸಂಜೆ 6 ಗಂಟೆಯ ಸಮಯಕ್ಕೆ  ನೋಡಿದಾಗ ಶ್ವಾಸ ಮಾತ್ರ ಇದ್ದಂತೆ ಕಂಡಿರುತ್ತದೆ ದಿನಾಂಕ:17.09.2022 ರಂದು ಬೆಳಗ್ಗೆ 07.30 ಕ್ಕೆ ಪಿರ್ಯಾದಿ ಮತ್ತು ಅವರ ಹೆಂಡತಿ ಹೋಗಿ ನೋಡಿದಾಗ ಪಿರ್ಯಾದಿಯ ತಮ್ಮ ಸೂರ್ಯನಾರಾಯಣ ಉಪಾದ್ಯಾಯ ಮೃತಪಟ್ಟಿರುವುದು ಧೃಡಪಟ್ಟಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಯು ಡಿ ಆರ್‌ 29/2022 ಕಲಂ:174  ಸಿ ಆರ್‌ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-09-2022 10:51 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080