ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

 • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಎ ವಸಂತ ಮೂಲ್ಯ ಪ್ರಾಯ:55 ವರ್ಷ ತಂದೆ: ದಿ|| ರಾಮ ಮೂಲ್ಯ. ವಾಸ: ಹಳೇಗೇಟ್ ಜಂಕ್ಷನ್ ಮನೆ ನಾವೂರು ಗ್ರಾಮ ಮತ್ತು ಅಂಚೆ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ದಿನಾಂಕ 17-10-2022 ರಂದು KA-19-EB-2253 ನೇ ಮೋಟಾರ್ ಸೈಕಲ್ ನಲ್ಲಿ ಬಂಟ್ವಾಳ ಪೇಟೆಗೆ ಹೋಗಿ ವಾಪಾಸ್ಸು ಮನೆ ಕಡೆಗೆ ಬಿ.ಸಿ.ರೋಡು-ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಾ ಸಮಯ ಸುಮಾರು ಮಧ್ಯಾಹ್ನ 12:30 ಗಂಟೆಗೆ ಬಂಟ್ವಾಳ ತಾಲೂಕು ನಾವೂರು ಗ್ರಾಮದ ಹಳೇಗೇಟು ಎಂಬಲ್ಲಿ ಬಲ ಭಾಗದ ಸೂಚನೆ ನೀಡಿ ಬಲಕ್ಕೆ ತಿರುಗುವ ವೇಳೆ ಬಿ.ಸಿ.ರೋಡು ಕಡೆಯಿಂದ  KA-21-P-8815 ನೇ ಕಾರನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ಎಸೆಯಲ್ಪಟ್ಟು ರಸ್ತೆಗೆ ಬಿದ್ದು ಬಲ ಕೈಗೆ ತರಚಿದ ಗಾಯ ಹಾಗೂ ಎಡ ಭುಜಕ್ಕೆ ಗುದ್ದಿದ ಗಾಯಗೊಂಡವರು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುದಾಗಿದೆ..ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 120/2022 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಶಂಕರ್‌ ಶೆಟ್ಟಿ ಪ್ರಾಯ 52 ವರ್ಷ ತಂದೆ: ಪದ್ಮನಾಭ ಶೆಟ್ಟಿ ವಾಸ: ನಂಬ್ರ 137/ಬಿ  ದೇವಿಕೃಪಾ ಮನೆ, ರಾಮನಗರ ಪಿಲಾತ್ತಬೆಟ್ಟು ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ದಿನಾಂಕ: 17.10.2022 ರಂದು ಸಂಜೆ ಸುಮಾರು 4.00 ಗಂಟೆಗೆ ಪಿರ್ಯಾದಿದಾರರು ತನ್ನ ಬಾಬ್ತು ಪ್ರಗತಿ ಹಾರ್ಡ್‌ ವೇರ್‌ ಅಂಗಡಿ ಎದುರಿನಲ್ಲಿ ನಿಂತುಕೊಂಡಿರುವ ಸಮಯ ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಟ್ವಾಳ ಕಡೆಯಿಂದ ಬೆಳ್ತಂಗಡಿ ಕಡೆಗೆ KA19AA4987 ನೇ ಲಾರಿಯನ್ನು  ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರ ಬಲಬದಿಗೆ ಚಲಾಯಿಸಿ ಬೆಳ್ತಂಗಡಿ ಕಡೆಯಿಂದ ಬಂಟ್ವಾಳ ಕಡೆಗೆ ಹೋಗುತ್ತಿದ್ದ KA19D5549 ನೇ ಪಿಕಪ್‌ ವಾಹನಕ್ಕೆ ರಭಸವಾಗಿ  ಡಿಕ್ಕಿ ಹೊಡೆದು, ಲಾರಿ ಪಿರ್ಯಾದಿದಾರರ ಬಾಬ್ತು ಹಾರ್ಡ್‌ ವೇರ್‌  ಅಂಗಡಿಯ ಕಂಪೌಂಡ್‌  ಗೆ ಡಿಕ್ಕಿ ಹೊಡೆದು ನಿಂತುಕೊಂಡಿದ್ದು, ಪಿರ್ಯಾದಿದಾರರು ಹಾಗೂ ಅಲ್ಲಿದ್ದ ಇತರರು ಅಪಘಾತ ನಡೆದ ಸ್ಥಳಕ್ಕೆ ಓಡಿ ಹೋಗಿ ಅಪಘಾತದಿಂದ ಪಿಕಪ್‌ ನ ಚಾಲಕ ಮತ್ತು ವಾಹನದೊಳಗೆ ಇದ್ದ ಇನ್ನೊಬ್ಬ ವ್ಯಕ್ತಿಗೆ ತಲೆಗೆ ಕೈಗೆ ಕಾಲಿಗೆ ಗಂಭೀರ ರೀತಿಯ ಗಾಯವಾಗಿದ್ದು, ಅಲ್ಲದೇ ಲಾರಿ ಚಾಲಕ ಹಾಗೂ ನಿರ್ವಾಹಕನಿಗೆ  ಕೈಗೆ ಕಾಲಿಗೆ ಗಾಯವಾಗಿದ್ದು, ಗಾಯಗೊಂಡವರನ್ನು ಪಿರ್ಯಾದಿದಾರರು ಹಾಗೂ ಇತರರು ಸೇರಿ ಆರೈಕೆ ಮಾಡಿ ಚಿಕಿತ್ಸೆಯ ಬಗ್ಗೆ ಆಂಬ್ಯುಲೆನ್ಸ್‌ ನಲ್ಲಿ ಮಂಗಳೂರಿಗೆ  ಕಳುಹಿಸಿಕೊಟ್ಟಿರುತ್ತಾರೆ ಲಾರಿ ಪಿಕಪ್ ಗೆ ಡಿಕ್ಕಿ ಹೊಡೆದು ಪಿರ್ಯಾದಿದಾರರ ಅಂಗಡಿಯ ಕಂಫೌಂಡ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಅಂಗಡಿಯ ಕಂಪೌಂಡ್ ಕೂಡಾ ಜಖಂಗೊಂಡು ಕಂಪೌಂಡ್ ಒಳಗೆ ಇದ್ದ ಕಡಪ, ಗ್ರನೈಟ್, ಕಂಪೌಂಡ್ ಮೆಸ್ ತುಂಡಾಗಿ ಪಿರ್ಯಾದಿದಾರರಿಗೆ ಸುಮಾರು 6,00,000/- ರಷ್ಟು ನಷ್ಟವುಂಟಾಗಿರುತ್ತದೆ. ಈ ರಸ್ತೆ  ಅಪಘಾತದಿಂದ ಪಿಕಪ್ ವಾಹನ ಮುಂಬಾಗ ಭಾಗಶಃ ಜಖಂಗೊಂಡು  ಹಿಂಭಾಗದ ಬಾಡಿ ವಾಹನದಿಂದ ಪ್ರತ್ಯೇಕಗೊಂಡು ಜಖಂಗೊಂಡಿದ್ದು, ಲಾರಿಯು ಮುಂಬಾಗ  ಕೂಡಾ ಜಖಂಗೊಂಡಿರುತ್ತದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 81/2022 ಕಲಂ: 279, 337, 338, 427 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಬೆಳ್ತಂಗಡಿ ಸಂಚಾರ  ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಬೇಬಿ (48) ಗಂಡ: ವಿಠಲ ಕುಂಬಾರ, ವಾಸ: ಪಾಂಡಿಬೆಟ್ಟು ಮನೆ, ನಾವೂರು ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು     ಎಂಬವರ ದೂರಿನಂತೆ ದಿನಾಂಕ: 16-10-2022 ರಂದು ಪಿರ್ಯಾದಿದಾರರು ಅವರ ಮಗ ವಸಂತ, ಸೋಸೆ ತೇಜಶ್ರೀ, ನೆರೆಕರೆಯ ನಾರಾಯಣ ಮತ್ತು ಅವರ ಪತ್ನಿ ವೇದಾವತಿ ರವರೊಂದಿಗೆ  ಕೆಎ 12 ಎನ್‌ 6329 ನೇ ಕಾರಿನಲ್ಲಿ ಸಹಪ್ರಯಾಣಿಕರಾಗಿ ಕುಳಿತುಕೊಂಡು ಕಾರನ್ನು ಅದರ ಚಾಲಕ ನಾರಾಯಣರವರು ಧರ್ಮಸ್ಥಳ ಉಜಿರೆ ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದು ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ, ಉಜಿರೆ ಪೇಟೆಯಲ್ಲಿರುವ ತ್ರಿಶೂಲ್‌ ಎಲೆಕ್ಟ್ರಾನಿಕ್ಸ್‌ ಅಂಗಡಿ ಬಳಿ ಕಾರನ್ನು ನಿಲ್ಲಿಸಿ ಕಾರಿನಿಂದ ವಸಂತ ಹಾಗೂ ತೇಜಶ್ರಿರವರು ಬಟ್ಟೆ ಖರಿದಿಸಲು ಇಳಿದಿದ್ದು ಪಿರ್ಯಾದಿದಾರರು, ವೇದಾವತಿ, ನಾರಾಯಣರವರು ಕಾರಿನಲ್ಲಿ ಕುಳಿತಿರುವಾಗ ಸಮಯ ಸುಮಾರು ಮದ್ಯಾಹ್ನ 3.30 ಗಂಟೆಗೆ ಧರ್ಮಸ್ಥಳ ಕಡೆಯಿಂದ ಉಜಿರೆ ಕಡೆಗೆ ಕೆಎ 70 ಎಮ್‌ 3835 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಕುಳಿತಿದ್ದ ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಕುತ್ತಿಗೆಗೆ ಗುದ್ದಿದ ಗಾಯ, ವೇದಾವತಿಯವರಿಗೆ ಕುತ್ತಿಗೆಗೆ ಗುದ್ದಿದ ಗಾಯವಾಗಿದ್ದು ಗಾಯಳುಗಳು  ಚಿಕಿತ್ಸೆ ಬಗ್ಗೆ ಉಜಿರೆ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 126/2022 ಕಲಂ; 279,  338 ಭಾದಂಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 2

 • ಬಂಟ್ವಾಳ ನಗರ ಪೊಲೀಸ್ ಠಾಣೆ : ದಿನಾಂಕ 17.10.2022 ರಂದು ಅವಿನಾಶ್ ಗೌಡ ,  ಪಿಎಸ್ಐ(ಕಾ& ಸು) ಬಂಟ್ವಾಳ ನಗರ ಪೊಲೀಸ್ ಠಾಣೆರವರು ಬಿಮೂಡ ಗ್ರಾಮದ ಪರ್ಲಿಯ ಮದ್ದ ಜಂಕ್ಷನ್  ಎಂಬಲ್ಲಿ 10.30 ಗಂಟೆಗೆ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದ ಇಬ್ಬರನ್ನು ವಿಚಾರಿಸಿದಾಗ ಅವರು ಸಮರ್ಪಕವಾದ ಉತ್ತರವನ್ನು ನೀಡಲು ಅಸಮರ್ಥರಾಗಿದ್ದು ಯಾವುದೋ ಅಮಲು ಪದಾರ್ಥ ಸೇವಿಸಿದ ಘಾಟು ವಾಸನೆ ಬಂದಿರುತ್ತದೆ. ಇದರಿಂದ ಸಂಶಯಗೊಂಡು ಅವರನ್ನು ಇನ್ನಷ್ಟು ವಿಚಾರಿಸಿದಾಗ ಮಾದಕ ದ್ರವ್ಯ ಸೇವಿಸಿದ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಸದ್ರಿ ವ್ಯಕ್ತಿಗಳು ಅಮಲು ಪದಾರ್ಥ ಸೇವಿಸಿರುತ್ತಾರೆಯೇ ಎಂದು ಖಚಿತ ಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಮಂಗಳೂರಿನ ಕೆ ಎಸ್ ಹೆಗ್ಢೆ ಆಸ್ಪತ್ರೆಗೆ ಕೋರಿಕೆ ಪತ್ರದೊಂದಿಗೆ  ಕಳುಹಿಸಿಕೊಟ್ಟಿದ್ದು, ವೈದ್ಯಕೀಯ ಪರೀಕ್ಷೆಯ ಬಳಿಕ ಆರೋಪಿಗಳು ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ:95/2022 ಕಲಂ: 27(b) NDPS Act ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ಧರ್ಮಸ್ಥಳ ಪೊಲೀಸ್ ಠಾಣೆ : ದಿನಾಂಕ;17.10.2022 ರಂದು ಸಮಯ 14.00 ಗಂಟೆಗೆ  ಅನಿಲಕುಮಾರ ಡಿ ಪೊಲೀಸ್‌ ಉಪ ನಿರೀಕ್ಷಕರು (ಕಾ&ಸು) ಧರ್ಮಸ್ಥಳ ಪೊಲೀಸ್ ಠಾಣೆ ರವರಿಗೆ ಬೆಳ್ತಂಗಡಿ  ತಾಲೂಕು ಶಿಶಿಲ ಗ್ರಾಮದ ಕಂಚಿನಡ್ಕ ಎಂಬಲ್ಲಿ ಸರಕಾರಿ ಗುಡ್ಡ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟ್‌ ಜುಗಾರಿ ಆಟ ಆಡುತ್ತಿದ್ದಾರೆಂಬುದಾಗಿ ದೊರೆತ ಖಚಿತ ಮಾಹಿತಿಯ ಪ್ರಕಾರ ಠಾಣಾ ಸಿಬ್ಬಂದಿಗಳನ್ನು ಕರೆದುಕೊಂಡು 15.15  ಗಂಟೆಗೆ ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮದ ಕಂಚಿನಡ್ಡ ಎಂಬಲ್ಲಿಗೆ ಹೋಗಿ ಸರಕಾರಿ ಗುಡ್ಡ ಪ್ರದೇಶದಲ್ಲಿ  ನೆಲಕ್ಕೆ ನೀಲಿ ಟರ್ಪಾಲು ಹಾಸಿ ಅದರ ಮೇಲೆ 9 ಜನರು ಸುತ್ತುವರಿದು ಕುಳಿತು ಇಸ್ಪೀಟ್‌ ಎಲೆಗಳನ್ನು ಉಪಯೋಗಿಸಿ ಅಂದರ್‌ಬಾಹರ್‌ ಎಂದು ಹೇಳುತ್ತಾ ಇಸ್ಫೀಟ್‌ ಎಲೆಗಳನ್ನು ಹಾಕುತ್ತಾ ಹಣವನ್ನು ಪಣವಾಗಿ ಇಟ್ಟುಕೊಂಡು ಇಸ್ಫೀಟ್ ಆಟವಾಡುತ್ತಿದ್ದ ಆಪಾದಿತರುಗಳನ್ನು ಸುತ್ತವರೆದು ಹಿಡಿದುಕೊಂಡು ವಿಚಾರಿಸಿ ಟಾರ್ಪಲ್ ನಲ್ಲಿ ಹಾಕಿದ್ದ 52 ವಿವಿಧ ಜಾತಿಯ ಇಸ್ಪೀಟ್ ಎಲೆಗಳನ್ನು ಹಾಗೂ ಹಣವನ್ನು ಪಣವಾಗಿಟ್ಟ ನಗದು ರೂ 11,270/- ಹಾಗೂ ದ್ವಿಚಕ್ರ ವಾಹನ ನಂಬ್ರ:ಕೆಎ 21 ಇಸಿ 0671 ಮತ್ತು ಮಾರುತಿ ಓಮಿನಿ ಕಾರು ನಂಬ್ರ ಕೆಎ 21 ಬಿ 9944 ನ್ನು ವಶಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣಾ 72/2022 ಕಲಂ:87  ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 2

 • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಎಸ್.‌ ಗಂಗಾಧರ ಆಚಾರ್ಯ (55)ತಂದೆ:  ದಿ.ಬ್ರಹ್ಮಯ್ಯ ಆಚಾರ್ಯ ವಾಸ:  ಸುರುಳಿ ಮನೆ, ಪೆರಾಬೆ ಗ್ರಾಮ ,ಆಲಂಕಾರು ಅಂಚೆ ಕಡಬ ಎಂಬವರ ದೂರಿನಂತೆ ಪಿರ್ಯಾಧಿದಾರರ ತಮ್ಮ ಕೇಶವ ಆಚಾರ್ಯ ಪ್ರಾಯ 48 ವರ್ಷ ರವರು ಸುಮಾರು 20 ವರ್ಷಗಳಿಂದ ವಿಪರೀತ ಮದ್ಯ ಸೇವನೆ ಮಾಡಿಕೊಂಡಿದ್ದವನು, ಕೆಲಸಕ್ಕೂ ಹೋಗದೇ ಮನೆಯಲ್ಲಿಯೇ ಇದ್ದು, ಆಗಾಗ್ಗೆ ಮೂರ್ಚೆ ಹೋಗುವ ಸಮಸ್ಯೆಯನ್ನು ಹೊಂದಿದ್ದವರು, ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಹೊಂದಿ ದಿನಾಂಕ:16.10.2022 ರಂದು ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 8:00 ಗಂಟೆಯ ನಡುವೆ  ಬಂಟ್ವಾಳ ತಾಲೂಕು ಕೇಪು ಗ್ರಾಮದ ಕುದ್ದುಪದವು ಎಂಬಲ್ಲಿರುವ ತನ್ನ ಮನೆಯ ಚಾವಡಿಯ ಮೇಲ್ಬಾಗಕ್ಕೆ ಅಳವಡಿಸಲಾದ ಮರದ ಅಡ್ಡಕ್ಕೆ ಬಿಳಿ ಪಂಚೆಯ ಒಂದು ತುದಿಯನ್ನು ಕಟ್ಟಿ, ಅದರ ಇನ್ನೊಂದು ತುದಿಯನ್ನು ನೇಣು ಕುಣಿಕೆಯನ್ನಾಗಿ ಮಾಡಿಕೊಂಡು, ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 40/2022  ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 • ವಿಟ್ಲ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರಸಾಂತ್‌ ಪಿ (30)ತಂದೆ:ಆನಂದ ಬೆಳ್ಚಾಡ ವಾಸ:ಪಡಿಬಾಗಿಲು ಮನೆ, ಸತ್ಯಸಾಯಿ ವಿಹಾರ ,ಅಳಿಕೆ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಫಿರ್ಯಾದಿದಾರರಾದ ಪ್ರಶಾಂತ ಪಿ ಪ್ರಾಯ-30 ವರ್ಷ ತಂದೆ-ಆನಂದ ಬೆಳ್ಚಡ, ವಾಸ-ಪಡಿಬಾಗಿಲು ಮನೆ, ಸತ್ಯಸಾಯಿ ವಿಹಾರ ಅಂಚೆ, ಅಳಿಕೆ ಗ್ರಾಮ, ಬಂಟ್ವಾಳ ತಾಲೂಕುರರ ತಂದೆ ಆನಂದ ಬೆಳ್ಚಡ (ಪ್ರಾಯ-77 ವರ್ಷ)ರವರು ಸುಮಾರು 4 ವರ್ಷದ ಹಿಂದೆ ಕಿಡ್ನಿ ಸ್ಟೋನ್‌ ಬಗ್ಗೆ ನಾಲ್ಕು ಶಸ್ತ್ರ ಚಿಕಿತ್ಸೆಯನ್ನು ಮಾಡಿಕೊಂಡಿದ್ದು, ಅಲ್ಲದೇ ಬಿ ಪಿ ಮತ್ತು ಶುಗರ್‌ ಖಾಯಿಲೆಯಿಂದ ಬಳಲುತ್ತಿದ್ದವರಿಗೆ ಸತ್ಯಸಾಯಿ ಆಸ್ಪತ್ರೆಯಿಂದ ಔಷಧಿಯನ್ನು ಮಾಡಿದ್ದರೂ ಕೂಡಾ ಗುಣಮುಖರಾಗದೇ ಇದ್ದುದರಿಂದ ಇದೇ ಚಿಂತೆಯಲ್ಲಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 17-10-2022 ರಂದು ಬೆಳಿಗ್ಗೆ 10-30 ಗಂಟೆಯಿಂದ 17-30 ಗಂಟೆಯ ಮಧ್ಯೆ ಫಿರ್ಯಾದಿದಾರರ ವಾಸದ ಮನೆಯ ಹಾಲ್‌ನಲ್ಲಿರುವ ಪಕ್ಕಾಸಿಗೆ ನೈಲಾನ್‌ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 41/2022  ಕಲಂ 174 ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-10-2022 11:42 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080