ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 04

 

ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ರಾಜೇಶ್ ನಾಯಕ್  ಪ್ರಾಯ: 31 ತಂದೆ: ಸದಾಶಿವಾ ನಾಯಕ್ ವಾಸ: 3/10 ಕಾನಲ್ ಮನೆ, ಇರುವೈಲು ಗ್ರಾಮ , ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ:16.11.2022 ರಂದು ತನ್ನ ಬಾಬ್ತು KA-51-X-3466 ನೇ ಮೋಟರ್ ಸೈಕಲ್ ನಲ್ಲಿ ತನ್ನ ತಾಯಿಯವರಾದ ಗೀತಾ @ ನರ್ಮದಾ ರವರನ್ನು ಸಹಸವಾರಿಣಿಯಾಗಿ ಕುಳ್ಳಿರಿಸಿಕೊಂಡು ಮೂಡಬಿದ್ರೆಯಿಂದ ಹೊರಟು ಬಂಟ್ವಾಳ- ಮೂಡಬಿದ್ರೆ ರಸ್ತೆಯಲ್ಲಿ ಬಂಟ್ವಾಳಕ್ಕೆ ಬರುತ್ತಾ ಸಮಯ 12.30 ಗಂಟೆಗೆ  ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮದ ಕೆರೆಬಳಿ ಮಸೀದಿ ಬಳಿಗೆ ತಲುಪುತ್ತಿದ್ದಂತೆ ಬಂಟ್ವಾಳ ಕಡೆಯಿಂದ  KA 18 B 7719 ನೇ ಪಿಕಪ್ ವಾಹನವನ್ನು ಅದರ ಚಾಲಕ ಅಬ್ದುಲ್ ಅಜೀಜ್ ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಬರುತ್ತಿದ್ದ  ಮೋಟರ್ ಸೈಕಲ್ ಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ  ಸವಾರ  ಹಾಗೂ ಸಹಸವಾರಿಣಿ ರಸ್ತೆಗೆ  ಎಸೆಯಲ್ಪಟ್ಟು  ಬಿದ್ದರು.  ಈ ಅಪಘಾತದಲ್ಲಿ ರಾಜೇಶ್ ನಾಯಕ್ ರವರಿಗೆ ಎಡ ಕೈ ಬೆರಳುಗಳಿಗೆ ರಕ್ತಗಾಯ, ಎಡಕಾಲಿಗೆ ಗುದ್ದಿದ ಹಾಗೂ ರಕ್ತಗಾಯವಾಗಿದ್ದು, ಹಣೆಗೆ ತರಚಿದ ಗಾಯವಾಗಿದ್ದು, ಸಹಸವಾರಿಣಿ ಗೀತಾ @ ನರ್ಮದಾ ರವರ ಕಾಲಿನ ಮೊಣಗಂಟಿಗೆ ಹಾಗೂ ಕೈಗಳಿಗೆ ಗುದ್ದಿದ ಹಾಗೂ ತರಚಿದ ಗಾಯವಾಗಿರುತ್ತದೆ. ಸವಾರ ಹಾಗೂ ಸಹಸವಾರಿಣಿ ರವರು ಮೂಡಬಿದ್ರೆ ಸರಕಾರಿ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ , ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ  ಎಜೆ ಆಸ್ಪತ್ರೆಯಲ್ಲಿ  ಸವಾರ ರಾಜೇಶ್ ನಾಯಕ್ ರವರನ್ನು ವೈದ್ಯರು ಪರೀಕ್ಷಿಸಿ  ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 142/2022 ಕಲಂ:279,337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವಿಟ್ಲ ಪೊಲೀಸ್‌ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಪಂಕಜ್‌ @ ನರೇಂದ್ರ ಪ್ರಾಯ 26 ವರ್ಷ ತಂದೆ:ಗೋಪಾಲ್‌ ಸಿಂಗ್‌ ಹಾಲಿವಾಸ:ಕಂಬಳಬೆಟ್ಟು ಮಸೀದಿಯ ಬಳಿ ಬಾಲಕೃಷ್ಣರವರ ಬಾಡಿಗೆ ಮನೆ,ವಿಟ್ಲ ಮುಡ್ನೂರು ಗ್ರಾಮ ಬಂಟ್ವಾಳ ತಾಲೂಕು, ಖಾಯಂವಾಸ:ಗೋಖಲೆ ನಗರ ,ಸುರಖ್‌ ಭರತ್‌ಪುರ್‌ ,ರಾಜಸ್ಥಾನ ಎಂಬವರ ದೂರಿನಂತೆ ಪಿರ್ಯಾಧಿದಾರರು ಸುಮಾರು 08 ವರ್ಷಗಳಿಂದ ಕಂಬಳಬೆಟ್ಟುವಿನಲ್ಲಿ ಟೈಲ್ಸ ಕೆಲಸ ಮಾಡಿಕೊಂಡಿದ್ದು. ದಿನಾಂಕ:16-11-2022 ರಂದು ಬೆಳಿಗ್ಗೆ 09.00 ಗಂಟೆಯ ಸಮಯಕ್ಕೆ ಪಿರ್ಯಾಧಿ ಹಾಗೂ ಆತನ ಗೆಳೆಯ ಮಾಧವ ಸಿಂಗ್ ರವರು ಒಂದು ದ್ವಿಚಕ್ರ ವಾಹನದಲ್ಲಿ ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಎಂಪೈರ್ ಮಹಲ್ ಬಳಿ ಬಂದು ವಾಹನ ನಿಲ್ಲಿಸಿ ಪಿರ್ಯಾಧಿ ವಿಟ್ಲ ಖಾಸಗಿ ಬಸ್ಸು ನಿಲ್ದಾಣದ ಕಡೆಗೆ ನಡೆದುಕೊಂಡು ಬರುವಾಗ ಪುತ್ತೂರು ರಸ್ತೆಯಿಂದ ಕೆಎ-19-ಎಸಿ-2091ನೇ ಪಿಕಪ್ ವಾಹನವನ್ನು ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾಧಿಯ ಬಲಕಾಲು ಪಿಕಪ್ ವಾಹನದ ಎಡಬದಿಯ ಚಕ್ರಕ್ಕೆ ಸಿಲುಕಿಕೊಂಡು ರಕ್ತಗಾಯವಾಗಿರುತ್ತದೆ. ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬಿ ಸಿ ರೋಡ್ ಸೋಮಯಾಜಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 177/2022  ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ರಮೇಶ್‌ ಶೆಟ್ಟಿ(48)ತಂದೆ: ಬಾಬು ಶೆಟ್ಟಿ ವಾಸ:ಜಂತಿಗೋಳಿ   ಮನೆ,ಕೊಕ್ರಾಡಿ  ಗ್ರಾಮ ಮತ್ತು ಅಂಚೆ  ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ,  ದಿನಾಂಕ 16-11-2022 ರಂದು ಮದ್ಯಾಹ್ನ 12:00 ಗಂಟೆಗೆ ಬೆಳ್ತಂಗಡಿ ತಾಲೂಕು ಕೊಕ್ರಾಡಿ ಗ್ರಾಮದ  ಕುಂಟಾಲಕಟ್ಟೆ ಎಂಬಲ್ಲಿ ವೇಣೂರು–ನಾರಾವಿ ಸಾರ್ವಜನಿಕ ರಸ್ತೆಯಲ್ಲಿ ದ್ವಿ ಚಕ್ರ ವಾಹನ  ನಂಬ್ರ KA 21 W  6889   ನೇದನ್ನು ಅದರ ಸವಾರ  ನಾರಾವಿ ಕಡೆಯಿಂದ ದುಡುಕುತನ ಮತ್ತು ನಿರ್ಲಕ್ಷತನದಿಂದ  ಮುಖ್ಯ  ರಸ್ತೆಯಿಂದ ಯಾವುದೇ  ಸೂಚನೆ ನೀಡದೆ  ಎಕಾಏಕಿ ಕೊಕ್ರಾಡಿ ರಸ್ತೆ ಕಡೆಗೆ ತಿರುಗಿಸುವ  ಸಮಯ  ಪಿರ್ಯಾದಿದಾರರ ದ್ವಿಚಕ್ರ ವಾಹನ   ನಂ  KA 19 HB 1356  ನೇ ದಕ್ಕೆ  ರಭಸದಿಂದ  ಡಿಕ್ಕಿ ಹೊಡೆದ ಪರಿಣಾಮ  ದ್ವಿಚಕ್ರ ವಾಹನ ಸವಾರರುಗಳಿಗೂ  ದ್ವಿಚಕ್ರವಾಹನದೊಂದಿಗೆ ರಸ್ತೆಗೆ ಬಿದ್ದು ವಾಹನಗಳು  ಜಖಂಗೊಂಡು ಪಿರ್ಯಾದಿದಾರರಿಗೆ   ಎಡಬದಿ  ಕೆನ್ನೆಗೆ ಎಡಕೈಗೆ, ಬಲಕೈಗೆ,  ಉಂಗುರ ಬೆರಳಿಗೆ  ತರಚಿದ  ಹಾಗೂ  ರಕ್ತ ಗಾಯವಾಗಿದ್ದು  ,ಪಿರ್ಯಾದಿದಾರರ  ಹೆಂಡತಿ ಶ್ರೀಮತಿ  ಶ್ಯಾಮಲರವರಿಗೆ  ಎಡಕಾಲಿನ  ಹಿಮ್ಮಡಿ  ಬಳಿ  ಗಾಯಗಳಾಗಿ,    ಕಾರ್ಕಳ  ಸ್ಪಂದನ   ಆಸ್ಪತ್ರೆಗೆ  ಚಿಕಿತ್ಸೆ  ಬಗ್ಗೆ   ದಾಖಲಾಗಿರುವುದಾಗಿದೆ.  ಈ ಬಗ್ಗೆ ವೇಣೂರು ಪೊಲೀಸ್  ಠಾಣಾ ಅ.ಕ್ರ: 71/2022 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ವೇಣೂರು ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸ್ಪೂರ್ತಿ (17)ತಂದೆ: ಉಮೇಶ್‌   ಪೂಜಾರಿ  ವಾಸ:ನಾಡೇಲು ಮನೆ,ನಿಟ್ಟಡೆ ಗ್ರಾಮ ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ 17-11-2022 ರಂದು ಬೆಳಿಗ್ಗೆ  ಸುಮಾರು 08:15 ಗಂಟೆಗೆ ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ  ವೇಣೂರು  ಮೇಲಿನ ಪೇಟೆ ನಮನ ಪೆಟ್ರೋಲ್‌ ಪಂಪ್‌ ಬಳಿ ವೇಣೂರು–ಬೆಳ್ತಂಗಡಿ ಸಾರ್ವಜನಿಕ ರಸ್ತೆಯಲ್ಲಿ ಟಿಪ್ಪರ್‌  ಲಾರಿ   ನಂಬ್ರ KL 17 A 3763 ನೇದನ್ನು ಅದರ ಚಾಲಕ  ವೇಣೂರು   ಕಡೆಯಿಂದ ದುಡುಕುತನ ಮತ್ತು ನಿರ್ಲಕ್ಷತನದಿಂದ  ಮುಖ್ಯ  ರಸ್ತೆಯಿಂದ ಯಾವುದೇ  ಸೂಚನೆ ನೀಡದೇ  ಒಮ್ಮೆಲೇ   ಪೆಟ್ರೋಲ್‌  ಪಂಪು  ಒಳಗಡೆ  ಚಲಾಯಿಸಿ  ಗುರುವಾಯನಕೆರೆ ಕಡೆಯಿಂದ  ಬರುತ್ತಿದ್ದ ಪಿರ್ಯಾದಿದಾರರ  ಅಣ್ಣನ   ಬಾಬ್ತು ದ್ವಿಚಕ್ರ ವಾಹನ   ನಂ  KA 50 U 3003   ನೇ ದಕ್ಕೆ  ರಭಸದಿಂದ  ಡಿಕ್ಕಿ ಹೊಡೆದ ಪರಿಣಾಮ  ದ್ವಿಚಕ್ರ ವಾಹನ ಸವಾರರು ದ್ವಿಚಕ್ರವಾಹನದೊಂದಿಗೆ ರಸ್ತೆಗೆ ಬಿದ್ದು  ಸಹ ಸವಾರಿಣಿ ಪಿರ್ಯಾದಿದಾರರಿಗೆ ಎಡ  ಕೈ  ತಟ್ಟಿಗೆ, ಎಡ ಕಾಲಿನ ಮೊಣಗಂಟಿಗೆ  , ಬಲ ಕೈ  ಮೊಣಗಂಟಿನ  ಬಳಿ,  ಹಾಗೂ  ತಲೆಗೆ   ಗುದ್ದಿದ  ಮತ್ತು  ತರಚಿದ   ಗಾಯವಾಗಿದ್ದು  ,ಸವಾರ  ಶೇಯಸ್‌ ಗೆ  ಮುಖಕ್ಕೆ , ಕೈಕಾಲುಗಳಿಗೆ ತರಚಿದ  ಗಾಯ  ಉಂಟಾಗಿ  ಉಜಿರೆ  ಎಸ್‌  ಡಿ  ಎಂ  ಆಸ್ಪತ್ರೆಗೆ   ಚಿಕಿತ್ಸೆಗೆ   ದಾಖಲಾಗಿದ್ದು , ಆ ಪೈಕಿ  ತೀವ್ರ  ಗಾಯಗೊಂಡ  ಶ್ರೇಯಸ್‌ ರವರನ್ನು   ವೈದ್ಯರ  ಸಲಹೆಯಂತೆ  ಮಂಗಳೂರು ಎ ಜೆ  ಆಸ್ಪತ್ರೆಗೆ  ಚಿಕಿತ್ಸೆ  ಬಗ್ಗೆ  ದಾಖಲಾಗಿರುವುದಾಗಿದೆ. ಈ ಬಗ್ಗೆ ವೇಣೂರು ಪೊಲೀಸ್  ಠಾಣಾ ಅ.ಕ್ರ: 72/2022 ಕಲಂ: 279, 337, ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಇತರೆ ಪ್ರಕರಣ: 03

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಎಮ್ ಆರ್ ಸ್ವಾಮಿ (52) ಮುಖ್ಯಾಧಿಕಾರಿಗಳು ಪುರಸಭೆ ಬಂಟ್ವಾ ಳ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಫಿರ್ಯಾದಿದಾರರು ಬಿ ಮೂಡ ಗ್ರಾಮದ ಮಿನಿ ವಿಧಾನಸೌಧದ ಹತ್ತಿರ ಅಮೃತ ನಿರ್ಮಲ್ ನಗರ ಯೋಜನೆಯಡಿಯಲ್ಲಿ ಮಂಜೂರಾದ ಪಿಂಕ್ ಶೌಚಾಲಯದ ಗುತ್ತಿಗೆದಾರರಾಗಿ ಶ್ರೀ ಭವಾನಿ ಶಂಕರ್ ಬಂಟ್ವಾಳ ರವರು ಸದ್ರಿ ಸ್ಥಳದಲ್ಲಿ ಪಿಂಕ್ ಶೌಚಾಲಯದ ಕಾಮಗಾರಿ ನಡೆಸುತ್ತಿದ್ದು ಕಾಮಗಾರಿ ಪ್ರಗತಿ ಹಂತದಲ್ಲಿರುತ್ತದೆ. ಗುತ್ತಿಗೆದಾರರು ದಿನಾಂಕ 15-11-2022 ರಂದು ಕಾಮಗಾರಿ ನಡೆಯುವ ಸ್ಥಳದಲ್ಲಿ ಕಲ್ಲು ಹಾಗೂ ಮರಗಳನ್ನು ಶೇಖರಿಸಿದ್ದು, ಸದ್ರಿ ಸ್ಥಳದಲ್ಲಿ ಯಾರೋ ಮಾಂತ್ರಿಕರ ಮೂಲಕ ವಾಮಾಚಾರ ಕೃತ್ಯ ನಡೆಸಿರುವುದು ದಿನಾಂಕ 16-11-2022 ರಂದು ಬೆಳಿಗ್ಗೆ 9.45 ಗಂಟೆಗೆ ಕಂಡು ಬಂದಿರುತ್ತದೆ. ಈ ಬಗ್ಗೆ ಬಂಟ್ವಾಳನಗರ ಠಾಣಾ ಅ.ಕ್ರ: 110/2022 ಕಲಂ: 3  ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ  ಪ್ರತಿಬಂಧ ಮತ್ತು ನಿರ್ಮೂಲನೆ ವಿಧೇಯಕ-2017 ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬೆಳ್ತಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶಾಹಿದಾ ಬೇಗಂ, ಪ್ರಾಯ:  ಗಂಡ:  ಮಹಮ್ಮದ್ ಅಬ್ಬಾಸ್, ವಾಸ:  ಆದರ್ಶ ನಗರ ಮನೆ,  ಲಾಯಿಲ ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರ ದೂರಿನಂತೆ ದಿನಾಂಕ:12-11-2022 ರಂದು ತನ್ನ ತಾಯಿ ಮನೆಗೆ ಹೋಗಿದ್ದು, ವಾಪಾಸು ಅದೇ ದಿನ ರಾತ್ರಿ 10-30 ಗಂಟೆಗೆ ಮನೆಗೆ ವಾಪಾಸು ಬಂದಾಗ ಮನೆಗೆ ಬೀಗ ಹಾಕಿದ್ದು, ನೆರೆಯವರಲ್ಲಿ ವಿಚಾರಿಸಲಾಗಿ  ಪಿರ್ಯಾದಿದಾರ ಗಂಡ ರಾತ್ರಿ 09-00 ಗಂಟೆಗೆ ಮನೆಗೆ ಬೀಗ ಹಾಕಿ ಹೋಗಿರುವುದಾಗಿ ತಿಳಿದು ಬಂದಿದ್ದು, ಪಿರ್ಯಾದಿದಾರರ ಗಂಡ  ಮನೆಗೆ ಬೀಗ ಹಾಕಿಕೊಂಡು ಕೀಯನ್ನು ಅಲ್ಲಿಯೇ ಇಟ್ಟು ಮನೆಯಿಂದ ಯಾರಿಗೂ ಹೇಳದೇ ಹೋದವರು ವಾಪಾಸು ಇದುವರೆಗೆ ಮನೆಗೆ ಬಾರದೇ ಸಂಬಂದಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಠಾಣಾ ಅ.ಕ್ರ : 64/2022 ಕಲಂ ಗಂಡಸು  ಕಾಣೆ   ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಹರೀಶ್ ಕೆ (30) ವಾಸ: ಕೀಲಾರು ಮೂಲೆ ಮನೆ ಸಂಪಾಜೆ ಗ್ರಾಮ ಮತ್ತು ಅಂಚೆ ಸುಳ್ಯ ತಾಲೂಕು ಎಂಬವರ ದೂರಿನಂತೆ ದಿನಾಂಕ 21.10.2022  ರಂದು ಕೆಲಸದ ನಿಮಿತ್ತ ಸಮಯ ಸುಮಾರು 07:30 ಗಂಟೆಗೆ ತಮ್ಮ ಮನೆಯಾದ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕೀಲಾರು ಮೂಲೆ ಎಂಬಲ್ಲಿಂದ ಗಾಳಿಬೀಡು ಎಂಬಲ್ಲಿಗೆ ಹೋಗಿರುವ ಸಮಯ ಪಿರ್ಯಾದುದಾರರ ಹೆಂಡತಿ ನಾಗವೇಣಿ (28) ವರ್ಷ ಎಂಬವಳು ಮತ್ತು ಮಕ್ಕಳು ಮನೆಯಲ್ಲೇ ಇದ್ದು, ಪಿರ್ಯಾದುದಾರರು 19:00 ಗಂಟೆಗೆ ವಾಪಾಸ್ ಮನೆಗೆ ಬಂದಾಗ ನಾಗವೇಣಿ  ಮನೆಯಲ್ಲಿಲ್ಲದೆಯಿದ್ದು,ಮಕ್ಕಳಲ್ಲಿ ವಿಚಾರಿಸಿದಾಗ ನಾಗವೇಣಿ ಆಧಾರ್ ಕಾರ್ಡ್ ನ್ನು ಸರಿಪಡಿಸಲು ಅರಂತೋಡು ಪೋಸ್ಟ್ ಆಫೀಸಿಗೆ ಹೋಗಿ ಬರುವುದಾಗಿ  ಮಕ್ಕಳಲ್ಲಿ ಹಾಗೂ ನೆರೆಮನೆಯವಲ್ಲಿ ಹೇಳಿ ಹೋಗಿರುವುದಾಗಿ ತಿಳಿಸಿದ್ದು, ರಾತ್ರಿಯಾದರೂ ನಾಗವೇಣಿ ಮನೆಗೆ ಬಾರದೇ ಇದ್ದುದರಿಂದ ಸಂಬಂಧಿಕರಲ್ಲಿ ಹಾಗೂ ಪರಿಚಯಸ್ಥರಲ್ಲಿ ವಿಚಾರಿಸಿದಾಗ ನಾಗವೇಣಿ ಬಗ್ಗೆ ತಿಳಿದು ಬಾರದೇ ಇದ್ದು, ಆಕೆಯಲ್ಲಿದ್ದ ಮೊಬೈಲ್ ಕರೆಮಾಡಿದಾಗ ಸ್ವೀಚ್ ಆಫ್ ಆಗಿರುತ್ತದೆ. ಈ ಬಗ್ಗೆ ಸುಳ್ಯ ಪೊಲೀಸ್‌ ಠಾಣಾ  ಅ,ಕ್ರ  ನಂ: 137/2022  ಕಲಂ: ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ: 01

 

ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಗಾಯತ್ರಿ ಪ್ರಾಯ: 40 ವರ್ಷ ಗಂಡ: ಗೋಪಾಲಕೃಷ್ಣ ಚೌಟ ವಾಸ:ತಲಪಾಡಿ ಗುತ್ತು  ಮನೆ ತಲಪಾಡಿ  ಗ್ರಾಮ ಮಂಗಳೂರು ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರ ತಾಯಿ ಸುಮಾರು 6 ವರ್ಷಗಳ ಹಿಂದೆ ತೀರಿಕೊಂಡಿದ್ದು  ತಂದೆಯವರಾದ ಸದಾಶಿವ ಶೆಟ್ಟಿ (70) ರವರು ತನ್ನ ಹೆಣ್ಣು ಮಕ್ಕಳ ಮನೆಗೆ ಆಗಾಗ ಹೋಗಿ ವಾಸ್ತವ್ಯವಿರುತ್ತಾರೆ. ಸದಾಶಿವಶೆಟ್ಟಿರವರ ಭಾವ ವಿಶ್ವನಾಥ ಶೆಟ್ಟಿ ಎಂಬವರು ಅನಾರೋಗ್ಯದಲ್ಲಿದುದರಿಂದ ಅವರನ್ನು ನೊಡಿಕೊಳ್ಳುವರೇ ಸದಾಶಿವಶೆಟ್ಟಿ ರವರು ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ನಂದಗುರಿ ಎಂಬಲ್ಲಿಗೆ ಬಂದು ವಾಸ್ತವ್ಯವಿರುತ್ತಾರೆ. ಸದಾಶಿವಶೆಟ್ಟಿರವರು ದಿನಾಂಕ 17-11-2022 ರಂದು ಮನೆಯಲ್ಲಿ ನೈಲಾನ್ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಸದಾಶಿಟ್ಟಿ ಶೆಟ್ಟಿರವರು ಸುಮಾರು 5 ವರ್ಷಗಳಿಂದ ಮಾನಸಿಕ ಖಿನ್ನತೆ ಖಾಯಿಲೆಯಿಂದ ಬಳಲುತ್ತಿದ್ದು. ಈ ಮೊದಲೂ ಕೂಡಾ ಆತ್ಮಹತ್ಯೆಗೆ ಪ್ರಯತ್ನಿಸಿರುತ್ತಾರೆ. ಸದಾಶಿವಶೆಟ್ಟಿರವರು ಮನೆಯಲ್ಲಿ ಮಾನಸಿಕ ಖಿನ್ನತೆಯಿಂದ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಕೋಣೆಯ ಒಳಗೆ ಇರುವ ಮರದ ಅಡ್ಡಕ್ಕೂ ಹಾಗೂ ಕುತ್ತಿಗೆಗೂ ನೈಲಾನ್ ಹಗ್ಗದ ಸಹಾಯದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಯು ಡಿ ಆರ್‌ 33/2022 ಕಲಂ:174  ಸಿ ಆರ್‌ ಪಿ ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 18-11-2022 05:32 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080