ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 1

ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮಹಮ್ಮದ್‌ ಫಾರೂಕ್‌, ಪ್ರಾಯ 35 ವರ್ಷ, ತಂದೆ: ಪಿ.ಕೆ. ಅಬ್ಬಾಸ್‌, ವಾಸ: ಪೆರ್ನೆ ಮನೆ,  ಬಿಳಿಯೂರು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ 17-02-2021 ರಂದು 16-45 ಗಂಟೆಗೆ ಆರೋಪಿ ಲಾರಿ ಚಾಲಕ ರಾಘವೇಂದ್ರ ಎಂಬವರು KA-16-D-4800 ನೇ ನೋಂದಣಿ ನಂಬ್ರದ ಸಿಮೆಂಟ್‌ ಬಲ್ಕರ್‌ ಲಾರಿಯನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಮೈರಕಟ್ಟೆ ಎಂಬಲ್ಲಿ  ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಾಂಗ್‌ ಸೈಡ್‌ನಲ್ಲಿ ಚಲಾಯಿಸಿದ ಪರಿಣಾಮ, ಅಬ್ದುಲ್‌ ನಿಸಾರ್‌ ಎಂಬವರು ಉಪ್ಪಿನಂಗಡಿ ಕಡೆಯಿಂದ ಪೆರ್ನೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA-21-U-5307 ನೇ ನೋಂದಣಿ ನಂಬ್ರದ ಮೋಟಾರು ಸೈಕಲಿಗೆ ಅಪಘಾತವಾಗಿ ಮೋಟಾರ್‌ ಸೈಕಲ್‌ ಸವಾರ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಕಾಲಿಗೆ ಗಾಯಗಳಾಗಿ, ಗಾಯಾಳುವನ್ನು ಉಪ್ಪಿನಂಗಡಿಗೆ ಕರೆದುಕೊಂಡು ಹೋಗಿ, ನಂತರ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  34/2021 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಾಣೆ ಪ್ರಕರಣ: 1

ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶ್ರೀಮತಿ ರಹಮತ್ ಗಂಡ ; ಸಂಶುದ್ದೀನ್ ವಾಸ ;ಆತೂರು ಕೆ ಸಿ ಫರ್ಮ್ ಕೊಯಿಲಾ  ಮನೆ ಕೊಯಿಲಾ ಗ್ರಾಮ ಕಡಬ ಎಂಬವರ ದೂರಿನಂತೆ ಪಿರ್ಯಾದಿಯ ಗಂಡ ಸಂಶುದ್ದೀನ್ ಪ್ರಾಯ 27 ವರ್ಷ ಇವರು  ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ ಅವರು ದಿನಾಂಕ 13-02-2021 ರಂದು ಬೆಳ್ಳಿಗ್ಗೆ 11-00 ಗಂಟೆಗೆ  ಅವರ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೋದವರು ವಾಪಸ್ಸು ಮನೆಗೆ ಬಾರದೇ ಇರುವುದಾಗಿ ತಿಳಿಸಿದ್ದು ಈ ಬಗ್ಗೆ  ನೆರೆಕರೆ ಹಾಗೂ  ಸಂಬಂದಿಕರವರಲ್ಲಿಯು  ವಿಚಾರಿಸಿದರೂ ಎಲ್ಲಿಯೂ ಪತ್ತೆಯಾಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿರುತ್ತದೆ.

 

 

ಕೊಲೆ ಬೆದರಿಕೆ ಪ್ರಕರಣ: 2

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಮುತ್ತಪ್ಪ ಪೂಜಾರಿ ತಂದೆ: ಚೆನ್ನಪ್ಪ ಪೂಜಾರಿ ವಾಸ; ಕೋರ್ಯ ಹೊಸ ಮನೆ ಬಾಳ್ತಿಲ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ತಮ್ಮ ಜಮೀನಿನಲ್ಲಿ ಭತ್ತದ ಪೈರು ಬೆಳೆದಿದ್ದು, ಭತ್ತದ ಪೈರು ತಿನ್ನಲು ಬರುವ ನವಿಲು ಹಾಗೂ ಪಕ್ಷಿಗಳನ್ನು ಓಡಿಸಲು ದಿನಾಂಕ 14-02-2021 ರಂದು ಸಂಜೆ 5.30 ಗಂಟೆಗೆ ಜಮೀನಿನ ಕಡೆಗೆ ಪಿರ್ಯಾದಿದಾರರು ಹೋಗುತ್ತಿರುವಾಗ ಕೋರ್ಯದ ಯಾದವ ಎಂಬಾತನು ಏಕಾಏಕಿಯಾಗಿ ಪಿರ್ಯಾಧಿದಾರರ ಮೇಲೆ ಕಲ್ಲು ಎಸೆದು ಪರಿಣಾಮ ಪಿರ್ಯಧಿದಾರರಿಗೆ ಎರಡು ಮೊಣಕಾಲು, ಎಡಭುಜ, ಸೊಂಟದ ಭಾಗಗಳಿಗೆ ಕಲ್ಲಿನ ಏಟು ಬಿದ್ದಿರುತ್ತದೆ, ಆಗ ಆರೋಪಿತನು ಪಿರ್ಯಾಧಿದಾರರನ್ನು ಉದ್ದೇಶಿಸಿ ನನ್ನ ಮೇಲೆ ದೂರು ನೀಡುತ್ತೀಯಾ ನಿನನ್ನು ಸಾಯಿಸದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ನಂತರ ದಿನಾಂಕ 15-02-2021 ರಂದು ಬೆಳಿಗ್ಗೆ ಚಿಕಿತ್ಸೆಗಾಗಿ ಬಂಟ್ವಾಳ ಆಸ್ವತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆ ಅ.ಕ್ರ ನಂ: 19-2021 ಕಲಂ: 324,  506ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಯಾದವ ಪ್ರಾಯ 53 ವರ್ಷ ತಂದೆ: ದಿ.ವೆಂಕಪ್ಪ ಪೂಜಾರಿ ವಾಸ; ಕೋರ್ಯ ಮನೆ ಬಾಳ್ತಿಲ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರು ತಮ್ಮ ಜಮೀನಿನಲ್ಲಿ  ದಿನಾಂಕ 14-02-2021 ರಂದು ಸಂಜೆ 4.30 ಗಂಟೆಗೆ  ಅಡಿಕೆ ಸಸಿ ನೆಡಲು ಗುಂಡಿ ತೆಗೆಯುವ ಸಮಯ ನೆರೆಯ ಮುತ್ತಪ್ಪ ಎಂಬುವರು ಏಕಾಏಕಿ ಪಿರ್ಯಾಧಿದಾರರ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿ, ಅಲ್ಲೆ ಕೆಳಗೆ ಇದ್ದ ಕಪ್ಪು ಕಲ್ಲು ತುಂಡುಗಳನ್ನು ಎಸೆದು ಹಲ್ಲೆ ಮಾಡಿರುತ್ತಾನೆ. ಹಲ್ಲೆ ಮಾಡಿದ ಪರಿಣಾಮ ಪಿರ್ಯಾಧಿದಾರರಿಗೆ ಕುತ್ತಿಗೆ ಹಿಂಭಾಗ ಮತ್ತು ಬೆನ್ನಿಗೆ ತಾಗಿ ರಕ್ತಗಾಯವುಂಟಾಗಿರುತ್ತದೆ. ನಂತರ ಚಿಕಿತ್ಸೆಗಾಗಿ ಪಿರ್ಯಾಧಿದಾರರು ಬಂಟ್ವಾಳ ಆಸ್ವತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆ ಅ.ಕ್ರ ನಂ: 20-2021 ಕಲಂ: 447, 504, 506, 324 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: 2

ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರಿಯಾ ಮರಿಟಾ ಪಿಂಟೋ ಪ್ರಾಯ: 26 ವರ್ಷ ಗಂಡ: ಗ್ರೆಮೆಕ್ಸ್ ಫೆರ್ನಾಂಡಿಸ್ , ವಾಸ: ಬನ್ನೆಂಗಳ ಮನೆ, ಇಳಂತಿಲ ಗ್ರಾಮ ಬೆಳ್ತಂಗಡಿ ಎಂಬವರ ದೂರಿನಂತೆ ಪಿರ್ಯಾದಿದಾರರ ತಾಯಿ ರೋಸಲಿನ್ ಪಿಂಟೋ ಪ್ರಾಯ: 58 ವರ್ಷ ಎಂಬವರು ಪಿರ್ಯಾದಿದಾರರೊಂದಿಗೆ  ವಾಸ್ತವ್ಯವಿದ್ದು ,ಪಿರ್ಯಾದಿದಾರರ ತಾಯಿಯವರು ಸುಮಾರು 9 ತಿಂಗಳಿನಿಂದ ಖಾಯಿಲೆಯಿಂದ ಬಳಲುತ್ತಿದ್ದು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆ ಜ್ಯೋತಿ ಎಂಬಲ್ಲಿಂದ  ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಸದ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ದಿನಾಂಕ 06.02.2021 ರಂದು ವಾಪಾಸು ಮನೆಗೆ ಕರೆದುಕೊಂಡು ಬಂದಿರುವುದಾಗಿದೆ. ದಿನಾಂಕ 18.02.2021 ರಂದು ತೀವೃ ಅಸ್ವಸ್ತಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಯು.ಡಿ.ಆರ್ ನಂಬ್ರ : 07/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪಿ ಹಝಾ ಪ್ರಾಯ 52 ವರ್ಷ ತಂದೆ: ಬಿ ಮೊಹಮ್ಮದ್ ವಾಸ: ಕಲ್ಲು ಮನೆ ಪರ್ಲಿಯಾ ಬಿ ಮೂಡ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾದಿದಾರರ ತಮ್ಮನಾದ ಬಿ ಅಬ್ದುಲ್ ರಹಿಮಾನ ಟೈಲರಿಂಗ್ ಕೆಲಸ ಮಾಡಿಕೊಂಡಿದ್ದು, ಕೆಲವು ವರ್ಷಗಳಿಂದ ಹಿಂದೆ ಅಪಘಾತಕೊಳ್ಳಗಾಗಿ ಕಾಲಿನ ಚಿಕಿತ್ಸೆ ಪಡೆಯುತ್ತಿದ್ದು, ಆಬಳಿಕವೂ ಅನಾರೋಗ್ಯದಿಂದ ಬಳಲುತ್ತಿದ್ದವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 18-02-2021 ರಂದು ಬೆಳಿಗ್ಗೆ 6.00 ಗಂಟೆಯಿಂದ 10.25 ಗಂಟೆಯ ಮಧ್ಯದಲ್ಲಿ ಟೈಲರಿಂಗ ಮಾಡಿಕೊಂಡಿದ್ದ ಅಂಗಡಿಯ ಪ್ಯಾನ ಹೂಕಿಗೆ ಕೆಂಪು ಬಣ್ಣದ ವೇಲ್ ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣಾ ಯುಡಿಆರ್ 08-2021 ಕಲಂ  174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-02-2021 10:49 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080