ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: 3

  • ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಮೂರ್ತಿ  ಪ್ರಾಯ: 40 ವರ್ಷ ಪೊಲೀಸ್ ಉಪನಿರೀಕ್ಷಕರು  ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಎಂಬವರ ದೂರಿನಂತೆ ದಿನಾಂಕ 12-02-2023 ರಂದು ಸಮಯ ಸುಮಾರು ಮಧ್ಯಾಹ್ನ 3:00 ಗಂಟೆಗೆ ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ಕಲ್ಪನೆ ಎಂಬಲ್ಲಿ ಕೈಕಂಬ ಬಿ ಸಿ ರೋಡು -  ಪೊಳಲಿ ಸಾರ್ವಜನಿಕ ರಾಜ್ಯ ಹೆದ್ದಾರಿಯಲ್ಲಿ  ಕಲ್ಪನೆ ಕಡೆಯಿಂದ ಬಿ ಸಿ ರೋಡು ಕಡೆಗೆ KA-19-HJ-3780 ನೇ ಮೋಟಾರ್ ಸೈಕಲನ್ನು ಅದರ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಹಾಗೂ ಬಿ ಸಿ ರೋಡು ಕಡೆಯಿಂದ ಕಲ್ಪನೆ ಕಡೆಗೆ KA-19-MF-5369 ನೇ ಕಾರನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಪರಸ್ಪರ ಎರಡು ವಾಹನದವರು ಮುಖಾಮುಖಿ ರಸ್ತೆಯ ಮದ್ಯದಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಅಪಘಾತ ಉಂಟಾಗಿದ್ದು ಪರಿಣಾಮ ಎರಡು ವಾಹನಗಳು ಜಖಂ ಆಗಿರುತ್ತವೆ. ಯಾರಿಗೂ ಯಾವುದೇ ಗಾಯ ನೋವುಗಳಾಗಿರುವುದಿಲ್ಲ..ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ 33/2023  ಕಲಂ: 279 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ವಿಟ್ಲ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜಗದೀಶ್‌ ಪ್ರಾಯ 48 ವರ್ಷ ತಂದೆ:ಸದಾಶಿವ ಆಚಾರ್ಯ ವಾಸ:ಮೇಗಿನ ಪೇಟೆ, ವಿಟ್ಲ ಕಸಬ ಗ್ರಾಮ ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರು ನಿನ್ನೆ ದಿನಾಂಕ:17-02-2023 ರಂದು ತನ್ನ ಬಾಬ್ತು ಕಾರನ್ನು ಚಲಾಯಿಸಿಕೊಂಡು ವಿಟ್ಲದಿಂದ ಪುತ್ತೂರು ಕಡೆಗೆ ಹೊಗುತ್ತಿರುವಾಗ ಸಮಯ ಸುಮಾರು ಮದ್ಯಾಹ್ನ 2.00 ಗಂಟೆಗೆ ಬಂಟ್ವಾಳ ತಾಲೂಕು ವಿಟ್ಲ ಸಮೀಪದ ಬದನಾಜೆ ಎಂಬಲ್ಲಿಗೆ ತಲುಪಿದಾಗ ಪಿರ್ಯಾಧಿದಾರರ ಮುಂದಿನಿಂದ ವಿಟ್ಲ-ಪುತ್ತೂರು ರಸ್ತೆಯಲ್ಲಿ KA-19-EG-4223ನೇ ಮೋಟಾರ್‌ ಸೈಕಲ್‌ನ್ನು ಅದರ ಸವಾರ ಶಶಿಧರ ಸವಾರಿ ಮಾಡಿಕೊಂಡು ಹೊಗುತ್ತಿದ್ದಾಗ ಪುತ್ತೂರು ಕಡೆಯಿಂದ ವಿಟ್ಲ ಕಡೆಗೆ KA-01-Z-8014ನೇ ಮಾರುತಿ 800 ಕಾರನ್ನು ಅದರ ಚಾಲಕ ಅಜಾಗರೂಕತೆ ಹಾಗೂ ದುಡುಕುತನದಿಂದ ರಸ್ತೆಯ ತೀರಾ ತಪ್ಪುಬದಿಗೆ ಚಲಾಯಿಸಿ ಮೋಟಾರ್‌ ಸೈಕಲ್‌ಗೆ ಅಪಘಾತಪಡಿಸಿದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದ ಪರಿಣಾಮ ಶಶಿಧರ ವಿ ರವರ ತಲೆಗೆ ತೀವೃತರಹದ ರಕ್ತಗಾಯ ಹಾಗೂ ದೇಹದ ಇತರ ಭಾಗಗಳಿಗೆ ಗುದ್ದಿದ ನೋವಾಗಿದ್ದು ಕೂಡಲೇ ಗಾಯಾಳುವನ್ನು ಪಿರ್ಯಾಧಿ ಅಲ್ಲಿ ಸೇರಿದ ಸಾರ್ವಜನಿಕರು ವಾಹನ ಒಂದರಲ್ಲಿ ವಿಟ್ಲ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಅಂಬುಲೆನ್ಸನಲ್ಲಿ ಮಂಗಳೂರು ದೇರಳಕಟ್ಟೆಯ ಕೆ.ಎಸ್‌ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯಾಧಿಕಾರಿಯವರು ಗಾಯಾಳುವನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಕಾರಿನ ಚಾಲಕ ಗಾಯಾಳುವನ್ನು ಉಪಚರಿಸಿದೆ ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾನೆ..ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ 22/2023  ಕಲಂ: 279,338 ಬಾಧಂಸಂ  ಮತ್ತು ಕಲಂ: 134 (ಬಿ) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

  • ಕಡಬ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಜೈ ಪ್ರಸಾದ್ ಪ್ರಾಯ: 27 ವರ್ಷ  ತಂದೆ: ಜಗನ್ನಾಥ ಗೌಡ ವಾಸ: ಕುಂಡಡ್ಕ ಮನೆ ಕುಂತೂರು ಗ್ರಾಮ ಕಡಬ ಎಂಬವರ ದೂರಿನಂತೆ ಪಿರ್ಯಾದುದಾರರು ದಿನಾಂಕ:17.02.2023 ರಂದು ಸಂಜೆ ತನ್ನ ಮೋಟಾರ್‌ ಸೈಕಲ್‌ನಲ್ಲಿ ಮನೆಯಿಂದ ಹೊರಟು ಪದವು ಕಡೆಯಿಂದ ಆಲಂಕಾರು ಕಡೆಗೆ ಹೋಗುತ್ತಿರುವಾಗ ಸಮಯ ಸಂಜೆ 05.15 ಗಂಟೆಗೆ ಕಡಬ ತಾಲೂಕು ಕುಂತೂರು ಗ್ರಾಮದ ಅನ್ನಡ್ಕ  ಚರ್ಚ್ ಬಳಿ  ಪಿರ್ಯಾದುದಾರರ ಎದುರು  ಹೋಗುತಿದ್ದ KA-21 S 2844 ಮೋಟಾರ್‌ ಸೈಕಲ್‌ಗೆ ಉಪ್ಪಿನಂಗಡಿ ಕಡೆಯಿಂದ  ಬರುತಿದ್ದ KA-19 MA-5044ನೇ ಕಾರು ವಾಹನದ ಚಾಲಕನಾದ ಆರೋಪಿತನು ಕಾರನ್ನು ತೀರಾ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ  ಬಲಬದಿಗೆ ಬಂದು ಪಿರ್ಯಾದುದಾರರ ಎದುರು ಹೋಗುತ್ತಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಬೈಕ್  ಸವಾರನು ಬೈಕ್ ಸಮೇತಾ ರಸ್ತೆ ಬದಿಯ ಕಾಡಿಗೆ ಎಸೆಯಲ್ಪಟ್ಟಿರುತ್ತಾನೆ. ಅಲ್ಲದೇ ಅಪಘಾತವನ್ನುಂಟು ಮಾಡಿದ ಕಾರು ಕೂಡ ರಸ್ತೆಯಿಂದ ಹೊರಗೆ ಹೋಗಿರುತ್ತದೆ  ನಂತರ ಪಿರ್ಯಾದುದಾರರು  ಹಾಗೂ ಅಲ್ಲಿಯೇ ಹೋಗುತ್ತಿದ್ದ ಇತರರು ಅಪಘಾತವಾದ ಮೊಟಾರ್‌ ಸೈಕಲ್‌ ಹತ್ತಿರ ಹೋಗಿ ಬೈಕ್ ಸವಾರನನ್ನು ಉಪಚರಿಸಿ ನೋಡಲಾಗಿ ಆತನ ಬಲಕಾಲು, ಕೋಲು ಕಾಲು, ಬಲಕಾಲು ಪಾದಕ್ಕೆ ಹಾಗೂ ಮೊಣಗಂಟಿಗೆ ರಕ್ತಗಾಯಗಳಾಗಿರುತ್ತದೆ  ಕೂಡಲೇ 108 ವಾಹನಕ್ಕೆ ಕರೆಮಾಡಿ ಸ್ಥಳಕ್ಕೆ ಬಂದ 108 ಅಂಬ್ಯುಲೆನ್ಸ್  ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಕಳುಹಿಸಿಕೊಟ್ಟಿರುತ್ತಾರೆ  ಗಾಯಾಳುವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು A.J ಆಸ್ಪತ್ರೆಗೆ  ಕರೆದುಕೊಂಡು ಹೊಗಿ ಓಳರೋಗಿಯಾಗಿ ದಾಖಲು ಮಾಡಿರುವುದಾಗಿರುತ್ತದೆ. ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 15/2023 ಕಲಂ:279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕೊಲೆಯತ್ನ ಪ್ರಕರಣ: 1

  • ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಸುಲೇಮಾನ್ (32) ತಂದೆ: ಅಬೂಬಕ್ಕರ್ ವಾಸ: ಜೈನರಪೇಟೆ ಮನೆ, ಪಾಣೆಮಂಗಳೂರು ಗ್ರಾಮ, ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ಪತ್ನಿ ಮನೆಯಾದ ವಿಟ್ಲದಲ್ಲಿ ಗ್ಲಾಸ್ ಜಖಂ ಆದ ಡೈನಿಂಗ್ ಟೇಬಲ್ ಇದ್ದು, ಅದನ್ನು ಪಿತ್ತಲಗುಡ್ಡೆಯ ಫಾತಿಮತ್ ಜೊಹರಾರವರಿಗೆ ನೀಡಬೇಕೆಂದು ತೀರ್ಮಾನಿಸಿ ದಿನಾಂಕ:18-02-2023 ರಂದು ಮಧ್ಯಾಹ್ನ 1.15 ಗಂಟೆಗೆ ಪಿರ್ಯಾದಿದಾರರು ಪಿತ್ತಲಗುಡ್ಡೆಗೆ ಹೋಗಿ ಫಾತಿಮತ್ ಜೊಹರಾರವರಲ್ಲಿ “ ನನ್ನ ಪತ್ನಿ ಮನೆಯಾದ ವಿಟ್ಲದಲ್ಲಿ ಡೈನಿಂಗ್ ಟೇಬಲ್ ಇದ್ದು, ಅದನ್ನು ಬಾಡಿಗೆ ವಾಹನ ಮಾಡಿಕೊಂಡು ನೀವು ಮನೆಗೆ ತೆಗೆದುಕೊಂಡು ಬನ್ನಿ. ಬಿಸಿರೋಡ್ ನಿಂದ ವಾಹನ ಮಾಡಿಕೊಂಡು ಹೋದಲ್ಲಿ ಬಾಡಿಗೆ ಜಾಸ್ತಿಯಾಗುತ್ತದೆ. ಅದಕ್ಕೆ ವಿಟ್ಲದಿಂದಲೇ ವಾಹನ ಬಾಡಿಗೆ ಮಾಡಿಕೊಂಡು ಡೈನಿಂಗ್ ಟೇಬಲ್ ತನ್ನಿ” ಎಂದು ಹೇಳಿದಾಗ ಮನೆಯಲ್ಲಿದ್ದ ಫಾತಿಮತ್ ಜೊಹರಾರವರ ಅಳಿಯ ನಿಸಾರ್ ನು ಅವ್ಯಾಚವಾಗಿ ಬೈದನು. ಆಗ ಪಿರ್ಯಾದಿದಾರರು ನೀನ್ಯಾಕೆ ಬೈಯ್ಯುತ್ತಿಯಾ ಎಂದು ಕೇಳಿದ್ದಕ್ಕೆ ನಿಸಾರ್ ನು ಒಂದು ಚೂರಿಯನ್ನು ತೆಗೆದುಕೊಂಡು ಬಂದು ತಿವಿಯಲು ಪ್ರಯತ್ನಿಸಿದಾಗ ಫಾತಿಮತ್ ಜೊಹರಾ ಮತ್ತು ಇತರರು ಚೂರಿಯನ್ನು ತೆಗೆದುಕೊಂಡಿದ್ದು, ಆಗ ನಿಸಾರ್ ನು ಒಂದು ಕತ್ತರಿಯನ್ನು ತೆಗೆದುಕೊಂಡು ನಿನ್ನನ್ನು ಇದೇ ಕತ್ತರಿಯಿಂದ ತಿವಿದು ಕೊಲ್ಲುತ್ತೇನೆ ಎಂದು ಹೇಳಿ ಕತ್ತರಿಯಿಂದ ಪಿರ್ಯಾದಿದಾರರ ಬಲಬದಿ ಕುತ್ತಿಗೆಯ ಬಳಿ ಭುಜದ ಬಳಿ ತಿವಿದನು. ಆಗ ಪಿರ್ಯಾದಿದಾರರು ನೆಲಕ್ಕೆ ಬಿದ್ದರು. ಆಗ ನಿಸಾರ್ ನು ನಿನ್ನನ್ನು ಸಾಯಿಸದೇ ಬಿಡುವುದಿಲ್ಲವೆಂದು ಹೇಳಿ ಕತ್ತರಿಯನ್ನು ಅಲ್ಲಿಯೇ ಬಿಸಾಡಿ ಹೋಗಿರುತ್ತಾನೆ. ಬಳಿಕ ರಿಯಾಜ್ ರವರು ಚಿಕಿತ್ಸೆಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ ನಂ:12/2023 ಕಲಂ :504, 307, 506 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಅಸ್ವಾಭಾವಿಕ ಮರಣ ಪ್ರಕರಣ: 1

  • ವಿಟ್ಲ ಠಾಣೆ : ಪಿರ್ಯಾಧಿದಾರರಾದ ವೆಂಕಪ್ಪ ಮೂಲ್ಯ  ಪ್ರಾಯ:60  ವರ್ಷ ತಂದೆ:  ಮುಂಡಪ್ಪ ಮೂಲ್ಯ ವಾಸ: ಮಡಿಯಾಲ ಮನೆ,ಬೈರಿಕಟ್ಟೆ, ಅಳಿಕೆ ಗ್ರಾಮ , ಬಂಟ್ವಾಳ ಎಂಬವರ ದೂರಿನಂತೆ ಪಿರ್ಯಾಧಿದಾರರ ಹಿರಿಯ ಮಗ  ದಿನೇಶ ಕುಮಾರ್‌ ಎಂ(32) ಎಂಬಾತನು ದಿನಾಂಕ:18.02.2023 ರಂದು ಬೆಳ್ಳಂ ಬೆಳಿಗ್ಗೆ 1:30 ಗಂಟೆ ಸಮಯಕ್ಕೆ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಮಡಿಯಾಳ ಎಂಬಲ್ಲಿರುವ ಪಿರ್ಯಾಧಿಯ ಮನೆಯ ಕೋಣೆಯ ಸೀಲಿಂಗ್‌ ಗೆ ಅಳವಡಿಸಲಾಗಿದ್ದ ಕಬ್ಬಿಣದ ಹುಕ್‌ ಗೆ ನೈಲಾನ್‌ ಹಗ್ಗವನ್ನು ಕಟ್ಟಿ ಅದರ ಇನ್ನೊಂದು ತುದಿಯನ್ನು ನೇಣುಕುಣಿಕೆಯನ್ನಾಗಿಸಿ ಕುತ್ತಿಗೆಗೆ ಬಿಗಿದುಕೊಂಡು ನೇತಾಡಿಕೊಂಡು ,ಅಲುಗಾಟ ಆಗುತಿದ್ದವನನ್ನು ಕಂಡು ಹಗ್ಗವನ್ನು ಅರ್ಧಲ್ಲಿ ತುಂಡು ಮಾಡಿ ಉಸಿರಾಡುತ್ತಿದ್ದವನನ್ನು ಒಂದು ಕಾರಿನಲ್ಲಿ ದಿನೇಶಕುಮಾರ್‌ನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬೆಳಿಗ್ಗೆ ಸಮಯ 2.30 ಗಂಟೆಗೆ ಹೋದಾಗ ಅಲ್ಲಿನ ವೈದ್ಯರು ಪರಿಕ್ಷೀಸಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಯು ಡಿ ಅರ್ ನಂಬ್ರ 08/2023ಕಲಂ 174 ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-02-2023 01:21 PM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080