ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ: ೦1

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ:  ಪಿರ್ಯಾದಿದಾರರಾದ ಶ್ರೀ ಆದಂ ಪ್ರಾಯ: 40 ವರ್ಷ ತಂದೆ: ಅಬೂಬ್ಬಕರ್   ವಾಸ: ನಂದಿ ಬೆಟ್ಟ ಮನೆ, ಗರ್ಡಾಡಿ ಗ್ರಾಮ&ಅಂಚೆ,  ಬೆಳ್ತಂಗಡಿ  ತಾಲೂಕು ಎಂಬವರ ದೂರಿನಂತೆ ದಿನಾಂಕ: 18-03-2022 ರಂದು ಕೆಎ 19 ಎಚ್‌ಎಚ್‌ 4157 ನೇ ದ್ವಿಚಕ್ರ ವಾಹನವನ್ನು ಅದರ ಸವಾರರು ವೇಣೂರು ಕಡೆಯಿಂದ ಗುರುವಾಯನಕೆರೆ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ಸಂಜೆ 4.45 ಗಂಟೆಗೆ ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ನಂದಿಬೆಟ್ಟ ಗುಂಡದ ಬಸ್ತಿ ಎಂಬಲ್ಲಿಗೆ ತಲುಪುತ್ತಿದ್ದಂತೆ ವಿರುದ್ದ ಧಿಕ್ಕಿನಿಂದ ಅಂದರೆ ಗುರುವಾಯನಕೆರೆ ಕಡೆಯಿಂದ ವೇಣೂರು ಕಡೆಗೆ ಕೆಎ 19 ಎಫ್‌ 3459 ನೇ ಕೆಎಸ್‌ಆರ್‌ಟಿಸಿ ಬಸ್‌ನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿ ದ್ವಿಚಕ್ರ ವಾಹನದಲ್ಲಿ ಸವಾರರುಗಳು ಬರುತ್ತಿರುವುದನ್ನು ಕಂಡರೂ ಗಮನಿಸದೇ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸಮೇತಾ ತಳ್ಳಿಕೊಂಡು ರಸ್ತೆಯ ಬಲಬದಿಯ ರಸ್ತೆ ಮಾರ್ಜಿನ್‌ ಪ್ರದೇಶಕ್ಕೆ ಹೋದ ಪರಿಣಾಮ ದ್ವಿಚಕ್ರ ವಾಹನದ ಸವಾರರು ಬಸ್‌ನಡಿಗೆ ಸಿಲುಕಿಕೊಂಡ ಪರಿಣಾಮ ಸವಾರರಾದ ಕುತುಬುದ್ದೀನ್‌ ಸಾಧೀಕ್‌ ಮತ್ತು ಹಮ್ಮಬ್ಬ ಸಿರಾಜುದ್ದೀನ್‌ರವರುಗಳಿಗೆ ತಲೆಗೆ ಕೈಕಾಲುಗಳಿಗೆ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರ ರಕ್ತಗಾಯಗೊಂಡವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದಲ್ಲಿ ಇಲ್ಲಿನ ವೈದ್ಯರು ಪರೀಕ್ಷಿಸಿ ಇಬ್ಬರು ಗಾಯಾಳುಗಳು ಆಸ್ಪತ್ರೆಗೆ ಸಾಗಿಸುವಾಗ್ಯೆ ದಾರಿ ಮದ್ಯೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರ  ಠಾಣಾ ಅ.ಕ್ರ: 45/2022 ಕಲಂ; 279,304 (ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

 

ಕಳವು ಪ್ರಕರಣ: ೦2

ಬಂಟ್ವಾಳ ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಹೇಮಲತಾ ಪ್ರಾಯ: 48 ವರ್ಷ ಗಂಡ: ಸತೀಶ್ ನಾಯಕ್ ವಾಸ: ಲಕ್ಷ್ಮೀ ಕೃಪಾ ಮನೆ,ಮಾರ್ನಬೈಲು ಕ್ವಾರ್ಟಸ್ ಸಜಿಪಮುನ್ನೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ದಿನಾಂಕ:06-02-2022 ರಂದು ಮಗಳ ಮದುವೆಯು  ಇದ್ದು, ಈ ಮದುವೆಗೆ ನೆಂಟರಿಷ್ಟರು ಮುಂಚಿತವಾಗಿ ಬಂದು ಪಿರ್ಯಾದಿದಾರರ ಮನೆಯಲ್ಲಿ ಉಳಕೊಂಡಿದ್ದರು. ಮದುವೆಯ ಬಳಿಕ ದಿನಾಂಕ:13-02-2022 ರಂದು  ಪಿರ್ಯಾದಿದಾರರ ಮನೆಯಲ್ಲಿ ಪೂಜಾ ಕಾರ್ಯಕ್ರಮವಿದ್ದುದ್ದರಿಂದ ಪಿರ್ಯಾದಿದಾರರ ಚಿಕ್ಕಮ್ಮ ಭಾರತಿ, ಅವರ ಮಗ ಹರ್ಷಾನಂದ ಮತ್ತು ಆತನ ಹೆಂಡತಿ ಗಾಯತ್ರಿ ಮನೆಯಲ್ಲಿಯೇ ಉಳಕೊಂಡಿದ್ದರು. ಹೀಗಿರುವಾಗ ಮದುವೆ ಮುಗಿಸಿ ಪಿರ್ಯಾದಿದಾರರು ಧರಿಸಿದ್ದ ಚಿನ್ನದ ಒಡವೆಗಳನ್ನು ಮನೆಯ ಬೆಡ್ ರೂಮಿನಲ್ಲಿರುವ ದಿವಾನದಲ್ಲಿ ಒಳಗೆ ಒಂದು ಪೆಟ್ಟಿಗೆಯಲ್ಲಿ ಕಳಚಿ ಇಟ್ಟಿರುತ್ತಾರೆ ಹಾಗೂ ಅವರ ಚಿಕ್ಕಮ್ಮ ಭಾರತಿ, ಅವರ  ಮಗನಾದ ಹರ್ಷಾನಂದ ಮದುವೆಗೆ ಧರಿಸಿಕೊಂಡು ಬಂದಿದ್ದ ಚಿನ್ನಾಭರಣಗಳನ್ನು ಇನ್ನೊಂದು ಬೆಡ್ ರೂಮಿನಲ್ಲಿ ಅವರ ಬ್ಯಾಗ್ ನಲ್ಲಿ ಕಳಚಿ ಇಟ್ಟಿದ್ದರು. ಹೀಗಿರುತ್ತಾ ದಿನಾಂಕ:13-02-2022 ರಂದು ನೋಡುವಾಗ ಪಿರ್ಯಾದಿದಾರರು ದಿವಾನ ಪೆಟ್ಟಿಗೆಯಲ್ಲಿಟ್ಟಿದ್ದ ಚಿನ್ನಾಭರಣಗಳ ಪೈಕಿ ಹವಳ ಮತ್ತು ಮುತ್ತುಗಳಿರುವ 2 ½ ಪವನ್ (20) ಗ್ರಾಂ) ಚಿನ್ನದ ಸರ ಮತ್ತು 4 ಗ್ರಾಂ ತೂಕದ ಚಿನ್ನದ ಒಂದು ಜುಂಕ ಕಾಣೆಯಾಗಿತ್ತು. ಹಾಗೇಯೇ ಪಿರ್ಯಾದಿದಾರರ ಚಿಕ್ಕಮ್ಮ ಮತ್ತು ಅವರ ಮಗ ಹರ್ಷಾನಂದರವರು ಇನ್ನೊಂದು ಬೆಡ್ ರೂಮ್ ನಲ್ಲಿ ಬ್ಯಾಗಿನೊಳಗೆ ಇರಿಸಿದ್ದ ಪಿರ್ಯಾದಿದಾರರ ಚಿಕ್ಕಮ್ಮನ ಅಂದಾಜು ಐದು ಪವನ್ ತೂಕದ ಲಕ್ಷ್ಮೀ ಪೆಂಡೆಂಟ್ ಇರುವ ಚಿನ್ನದ ಸರ ಮತ್ತು ಅವರ ಮಗ ಹರ್ಷಾನಂದನ ಬಾಬ್ತು 1½ ಪವನ್ ತೂಕದ ಬ್ರಾಸ್ ಲೇಟ್ ಮತ್ತು 4 ಗ್ರಾಂ ತೂಕದ ಉಂಗುರ ಕಾಣೆಯಾಗಿರುತ್ತದೆ. ಕಾಣೆಯಾದ ಚಿನ್ನಾಭರಣಗಳನ್ನು ದಿನಾಂಕ:06-02-2022 ರಂದು 6.00 ಗಂಟೆಯಿಂದ 13-02-2022 ರಂದು ರಂದು ರಾತ್ರಿ 8.30 ಗಂಟೆಯ ಮಧ್ಯೆ ಯಾರೋ ಕಳ್ಳರು ಕಳವು ಮಾಡಿರುತ್ತಾರೆ. ಈ ಚಿನ್ನಾಭರಣಗಳ ಅಂದಾಜು ಮೌಲ್ಯ 3,50,000/- ಆಗಬಹುದು. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ. 32/2022  ಕಲಂ: 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಳ್ಯ ಪೊಲೀಸ್ ಠಾಣೆ : ದಿನಾಂಕ: 18.03.2022 ರಂದು ಸುಳ್ಯ  ಪೊಲೀಸ್ ವೃತ್ತ ನಿರೀಕ್ಷಕರಿಗೆ  ಭಾತ್ಮಿದಾರರೊಬ್ಬರಿಂದ ಸುಳ್ಯ ತಾಲೂಕು ಅರಂತೋಡು ಗ್ರಾಮದ ಮಲ್ಲಡ್ಕ ಎಂಬಲ್ಲಿ ಹಾದು ಹೋಗುವ ಪಯಶ್ವಿನಿ ನದಿಯಿಂದ ಆರೋಪಿಗಳಾದ ವಿನೋದ್ ಮತ್ತು ಯಶ್ವಂತ್ ಹಣಮಾಡುವ ಉದ್ದೇಶದಿಂದ ಅಕ್ರಮವಾಗಿ ನದಿಯಿಂದ ಮರಳನ್ನು ಕಳವುಮಾಡಿ ದಡದಲ್ಲಿ ಸಂಗ್ರಹಿಸಿರುತ್ತಾರೆ ಎಂಬಂತೆ ಬಂದ ಖಚಿತ ಮಾಹಿತಿಯಂತೆ ಪಿರ್ಯಾದುದಾರರು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ಸಮಯ ಸುಮಾರು 01:45 ಗಂಟೆಗೆ ಹೋಗಿ ನೋಡಿದಾಗ ಮರಳನ್ನು ಕಾರ್ಮಿಕರು ರಾಶಿ ಮಾಡುತ್ತಿರುವುದು ಕಂಡು ಬಂದಿದ್ದು, ಸಮವಸ್ತ್ರದಲ್ಲಿದ್ದವರನ್ನು ಕಂಡು ಆರೋಪಿಗಳು ಓಡಿ ಹೋಗಿದ್ದು, ನಂತರ ಸದ್ರಿ ಸ್ಥಳಕ್ಕೆ ಪಂಚರುಗಳಾದ ಮೋಹನ್ ಎ,ಪಿ ಮತ್ತು ಸುರೇಶ್ ಯು, ಕೆ ಎಂಬವರನ್ನು  ಬರಮಾಡಿಕೊಂಡು ಸ್ಥಳದಲ್ಲಿದ್ದ 1 ರಾಶಿ ಸುಮಾರು 3 ಯುನಿಟ್ ನಷ್ಡು ಮರಳು ಅಂದಾಜು ಮೌಲ್ಯ 8000/- ಮತ್ತು ಕೆಂಪು,ಕಪ್ಪು ಬಣ್ಣದ ನೀಲಿ ಬುಟ್ಟಿಗಳು-11 ಇದರ ಅಂದಾಜು ಮೌಲ್ಯ 1100/-, ಹಾಗೂ ಹಾರೆಗಳು 3 ಅಂದಾಜು ಮೌಲ್ಯ 300/- ಗಳನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅಕ್ರ  33/2022  ಕಲಂ:  379 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ

 

 

ಅಸ್ವಾಭಾವಿಕ ಮರಣ ಪ್ರಕರಣ: ೦3

ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಬಾಲಕೃಷ್ಣ ಪ್ರಾಯ 52 ವರ್ಷ ತಂದೆ ದಿ|| ಜಾನು ನಾಯ್ಕ ವಾಸ ಉಜಿರೆ ಮಾರು ಮನೆ ವಿಟ್ಲ ಮುಡ್ನೂರು ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಅವರ ಮಗ ದೀಪಕ್ ಕುಮರ್ ಪ್ರಾಯ 20 ವರ್ಷ ದವನು ಹತ್ತನೇ ತರಗತಿವರೆಗೆ ವಿಧ್ಯಾಭ್ಯಾಸ ಮಾಡಿ ನಂತರ ಆತನು ಸಾರಣೆ ಕೆಲಸ ಮಾಡಿಕೊಂಡಿದ್ದನು ಆತನು ದಿನಾಲು ಬೆಳಗ್ಗೆ ಸಾರಣೆ ಕೆಸಕ್ಕೆ ಹೋಗಿ ಸಂಜೆ ವೇಳೆಗೆ ಮನೆಗೆ ಬರುತ್ತಿದ್ದನು ದಿನಾಂಕ: 17.03.2022 ರಂದು 17.30  ಗಂಟೆಯಿಂದ 22.15 ಗಂಟೆಯ ಅವಧಿಯಲ್ಲಿ ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಉಜಿರೆ ಮಾರು  ಎಂಬಲ್ಲಿ  ಪಿರ್ಯಾದಿದಾರರ ಮನೆಯ ಎದುರುಗಡೆ ಇರುವ ಗೇರು ಮರದ ಕೊಂಬೆಗೆ ನೈಲನ್ ಹಗ್ಗವನ್ನು ಸುತ್ತಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ವಿಟ್ಲ ಠಾಣಾ ಯು ಡಿ ಅರ್ ನಂಬ್ರ 06/2022  ಕಲಂ 174   ಸಿ ಅರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಶ್ರೀಮತಿ ಶಶಿಕಲಾ ಪ್ರಾಯ 50 ವರ್ಷ ಶಿವಾಜಿನಗರ ಮನೆ ಬೆಂಜನಪದವು ಅಮ್ಮುಂಜೆ ಗ್ರಾಮ ಬಂಟ್ವಾಳ ತಾಲೂಕು ಎಂಬವರ ದೂರಿನಂತೆ ಪಿರ್ಯಾದುದಾರರು ಸಂಸಾರದ ಜೊತೆಯಲ್ಲಿ ವಾಸವಾಗಿದ್ದು ಪಿರ್ಯಾದುದಾರರ ತಮ್ಮ ಕೃಷ್ಣ ಬೆಳ್ಚಾಡ  (ಪ್ರಾಯ 47 ವರ್ಷ  )ರವರು ವಾಸವಾಗಿದ್ದು ,ಪ್ರತೀ ದಿನ ಮನೆಯಿಂದ ಬೆಳಿಗ್ಗೆ 6.00 ಗಂಟೆಗೆ  ಬಾಡಿಗೆಗೆ ಕಲ್ಪನೆ ಜಂಕ್ಷನ್ ಆಟೋ ಬಾಡಿಗೆಗೆ ಹೋಗಿ ರಾತ್ರಿ 9.00 ಗಂಟೆಗೆ ಮನೆಗೆ ಬರುತ್ತಿದ್ದು ,ಮನೆಗೆ ಬರುವ ಸಮಯ ವಿಪರೀತ ಮಧ್ಯ ಸೇವನೆ ಮಾಡಿಕೊಂಡು ಬರುತ್ತಿರುವುದಾಗಿದೆ.ಸುಮಾರು 3 ದಿನಗಳಿಂದ  ಮಧ್ಯಪಾನ ಮಾಡುವುದನ್ನು ಬಿಟ್ಟು ಕೆಲಸಕ್ಕೆ ಹೋಗದೇ ಇದ್ದು  ಮನೆಯಲ್ಲಿಯೇ ಊಟವನ್ನು ಮಾಡದೇ ಮಲಗಿಕೊಂಡಿದ್ದವರು ದಿನಾಂಕ 17.03.2022 ರಂದು ಬೆಳಿಗ್ಗೆ ಮನೆಯಿಂದ ಆಟೋರಿಕ್ಷಾವನ್ನು ಮನೆಯಲ್ಲಿಟ್ಟು ನಡೆದುಕೊಂಡು ಹೋದವರು  ರಾತ್ರಿ 8.00 ಗಂಟೆಯಾದರು ವಾಪಸ್ಸು ಮನೆಗೆ ಬಾರದೇ ಇದ್ದು ,ಪಿರ್ಯಾದುದಾರರು ಮತ್ತು ಮನೆಯವರೆಲ್ಲರು  ಕೃಷ್ಬ ಬೆಳ್ಚಾಡರವರು ಕೆಲಸ ಮಾಡುತ್ತಿದ್ದ ಕಡೆಯಲ್ಲಿ ಕೇಳಿ ವಿಚಾರಿಸಿ  ಹುಡುಕಾಡಿದರು ಪತ್ತೆಯಾಗಿರುವುದಿಲ್ಲ. ದಿನಾಂಕ 18.03.2022 ರಂದು ಪಿರ್ಯಾದುದಾರರು ಮತ್ತು ಆಟೋ ರಿಕ್ಷಾ ಚಾಲಕರು ಮನೆ ಹಾಗು ಅಕ್ಕಪಕ್ಕದ ಗುಡ್ಡ ಜಾಗದಲ್ಲಿ ಹುಡುಕಾಡುತ್ತಿದ್ದ ಸಮಯ 10.00 ಗಂಟೆಗೆ  ಕಲ್ಲಕೆರೆ ಗುಡ್ಡದ ಬದಿಯ ಪೊದೆಯ ಬಳಿ ಮೃತ ಕೃಷ್ಣ ರವರು ಬಿದ್ದುಕೊಂಡಿರುವ ಸ್ಥಿತಿಯಲ್ಲಿದ್ದು ಪಿರ್ಯಾದುದಾರರು  ನೋಡಲಾಗಿ ಕೃಷ್ಣ ಬೆಳ್ಚಾಡ ರವರು  ಮೃತಪಟ್ಟಿರುವುದು ಕಂಡು ಬಂದಿರುತ್ತದೆ.  ಯಾವುದೋ ವಿಷ ಪದಾರ್ಥ ಸೇವಿಸಿಯೋ  ಅಥವಾ ಇನ್ನಾವುದೊ ಕಾರಣದಿಂದ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಯುಡಿಆರ್ ನಂ 15/2022  ಕಲಂ 174  ಸಿ ಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಸುಬ್ರಮಣ್ಯ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಜಯಶ್ರೀ,   ಪ್ರಾಯ:  26 ವರ್ಷ, ತಂದೆ: ವೆಂಕಟ್ರಮಣ ಗೌಡ,   ವಾಸ: ಪರಮಲೆ  ಮನೆ, ಏನೆಕಲ್ಲು    ಗ್ರಾಮ,  ಕಡಬ ತಾಲೂಕು, ದ.ಕ ಜಿಲ್ಲೆ ಎಂಬವರ ದೂರಿನಂತೆ ಪಿರ್ಯಾದಿದಾರರು ಕಡಬ ತಾಲೂಕು ಏನೆಕಲ್ಲು ಗ್ರಾಮದ ಪರಮಲೆ ಮನೆ ಎಂಬಲ್ಲಿ ವಾಸವಾಗಿದ್ದು, ನಿಂತಿಕಲ್ಲಿನಲ್ಲಿ ಕೆ ಎಸ್ ಗೌಡ ಪಿ ಯು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿಕೊಂಡಿರುವುದಾಗಿದೆ. ಎಂದಿನಂತೆ ಪಿರ್ಯಾದಿದಾರರು ಕಾಲೇಜಿಗೆ ಹೋದಾಗ ದಿನಾಂಕ: 18-03-2022 ರಂದು ಬೆಳಿಗ್ಗೆ ಪಿರ್ಯಾದಿದಾರರ ತಂದೆ ವೆಂಕಟ್ರಮಣ ಗೌಡ, ಪ್ರಾಯ: 73 ವರ್ಷ ಎಂಬವರು ಬೆಳಿಗ್ಗೆ ಸುಮಾರು 08:00 ಗಂಟೆಗೆ ಕೆಲಸಕ್ಕೆಂದು ತೋಟಕ್ಕೆ ಹೋದವರು 10:00 ಗಂಟೆ ತನಕ ಬಾರದೇ ಇದ್ದುದ್ದನ್ನು ನೋಡಿ ಪಿರ್ಯಾದಿದಾರರ ತಮ್ಮ ಶಿವಪ್ರಸಾದ್ ನು ತಂದೆಯವರನ್ನು ಹುಡುಕಿಕೊಂಡು ಹೋದಾಗ ಮನೆಯ ಹತ್ತಿರವಿರುವ ರಬ್ಬರ್ ತೋಟದಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿ ಪಿರ್ಯಾದಿದಾರರಿಗೆ ದೂರವಾಣಿ ಮುಖಾಂತರ ತಿಳಿಸಿರುವುದಾಗಿದೆ. ಈ ಬಗ್ಗೆ ಸುಬ್ರಮಣ್ಯ ಪೋಲೀಸ್ ಠಾಣೆ ಯುಡಿಆರ್  ನಂಬ್ರ  : 05-2022 ಕಲಂ:   174 ಸಿಆರ್ ಪಿಸಿ     ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-03-2022 11:23 AM ಅನುಮೋದಕರು: Dakshina Kannada District Police


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080